ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾಂ ಪಂಚಾಯ್ತಿಯಲ್ಲಿ ಹೌಸ್ ಸೈಟ್ ವಿತರಣೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸೈಟ್ ಕೊಡದೆ ಅನರ್ಹರಿಗೆ ಸೈಟ್ ಕೊಟ್ಟ ವಾಸನೆ ಎದ್ದಿದೆ. ಈ ಬಗ್ಗೆ ಪಿಡಿಒ ಸಾಹೇಬ್ರಲ್ಲಿ ಕೇಳಿದರೆ ಅನರ್ಹರ ಲಿಸ್ಟ್ ಕಳಿಸಿ ಸರಿ ಮಾಡಿ ಕೊಡುತ್ತೇವೆ ಅಂದಿದ್ದಾರೆ. ಅನರ್ಹರ ಲಿಸ್ಟ್ ಎಲ್ಲಿ ಬೆದ್ರ ಬಸ್ ನಿಲ್ದಾಣದಲ್ಲಿ ಸಿಗುತ್ತಾ? ಪಂಚಾಯ್ತಿಯಲ್ಲೇ ಇದೆ ತಾನೇ. ವಾಪಾಸ್ ಒಮ್ಮೆ ಸ್ಕ್ಯಾನ್ ಮಾಡಿ ನೋಡಲಿ ಪಿಡಿಒ.
ಅಲ್ಲಿ ಮೂಡುಬಿದಿರೆ ತಾಲೂಕಿನ ಕಟ್ಟಕಡೇಯ ಪಂಚಾಯಿತಿ ದರೆಗುಡ್ಡೆಯಲ್ಲಿ ದೇಶಭಕ್ತರದ್ದೇ ಕಾರುಬಾರು. ಇಲ್ಲಿ ದೇಶಭಕ್ತರು ಆಡಿದ್ದೇ ಆಟ, ಓಡಿದ್ದೇ ಓಟ, ಮಾಡಿದ್ದೇ ಊಟ. ಇಲ್ಲಿ ಬಡವರಿಗೆ, ನಿವೇಶನ ರಹಿತರಿಗೆ, ಸಮಾಜದ ಕಟ್ಟಕಡೇಯ ವ್ಯಕ್ತಿಗಳಿಗೆ ಅಂತ ಹೌಸ್ ಸೈಟ್ ವಿತರಣೆ ಮಾಡಿ ಈಗ ನೋಡಿದರೆ ಲೋಕಲ್ ಅಂಬಾನಿಗಳಿಗೆ, ಅದಾನಿಗಳಿಗೆ ಸೈಟ್ ವಿತರಣೆ ಆಗಿರುವ ಬಗ್ಗೆ ದರೆಗುಡ್ಡೆ ತುಂಬಾ ಗುಸುಗುಸುಗುಸು ಎದ್ದಿದೆ. ದರೆಗುಡ್ಡೆಯ ಬಡವ ಪದ್ನೆಯಿನ್, ಇರ್ವ ವರ್ಷಗಳ ಹಿಂದೆ ಕೊಟ್ಟ ಅರ್ಜಿಯನ್ನು ಉದಲ್ ಪಾಲು ಮಾಡಿ ಇದೀಗ ಫ್ರೆಶ್ ಅರ್ಜಿಗಳಿಗೆ ಹೌಸ್ ಸೈಟ್ ವಿತರಣೆ ಮಾಡಲಾಗಿದೆ ಎಂದು ಒಂದು ದೂರು. ಎರಡನೇ ಕೇಸ್ ಏನೆಂದರೆ ಮನೆ ಇದ್ದವರಿಗೆ ಕೂಡ ಹೌಸ್ ಸೈಟ್ ವಿತರಣೆ ಮಾಡಲಾಗಿದೆ ಎಂಬ ದೂರಿದೆ. ಒಂದು ಮನೆ ಇದ್ದರೆ ಅದರ ಮಲ್ಲ ಮಗನಿಗೆ, ಹದಾ ಮಗನಿಗೆ, ಎಲ್ಯ ಮಗನಿಗೆ, ಪಲ್ದಿಗ್, ತಂಗಡಿಗ್ ಹಾಗೆ ಸೈಟ್ ವಿತರಣೆ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ. ಪಿಡಿಒ ಅಂಥವರ ಅರ್ಜಿಯನ್ನೆಲ್ಲ ಒಮ್ಮೆ ಸ್ಕ್ಯಾನ್ ಮಾಡಲೇ ಬೇಕು.

ಇನ್ನು ದರೆಗುಡ್ಡೆ ಪಂಚಾಯ್ತಿಯ ಹೌಸ್ ಸೈಟ್ ವಿತರಣೆಯಲ್ಲಿ ಪಂಚಾಯ್ತಿ ಸದಸ್ಯರ ಮನೆಯವರಿಗೆ ಒಂದು ಪೀಸ್ ಸೈಟ್ ಕೊಡಲಾಗಿದೆ. ಇನ್ನು ಭಾರೀ ಅಪಾಯಕಾರಿ ಬೆಳವಣಿಗೆ ಅಂದರೆ RTCಯಲ್ಲಿ ಹೆಸರಿರುವ ಲೋಕಲ್ ಅಂಬಾನಿ ಫ್ಯಾಮಿಲಿ ಮೆಂಬರ್ ಗೂ ಸೈಟ್ ಸ್ಯಾಂಕ್ಷನ್ ಆಗಿದೆಯಂತೆ. ಇನ್ನು ರೀಸೆಂಟ್ ಆಗಿ ಡೀಸೆಂಟ್ ಆಗಿ ಮದುವೆ ಆದವರಿಗೂ ಮದುವೆ ಗಿಫ್ಟ್ ಅಂತ ಒಂದು ಚಿಕ್ಕ ಪೀಸ್ ಕೊಡಲಾಗಿದೆ. ಹೀಗೆ ಒಟ್ಟು ಮೂವತ್ತನಾಲ್ಕು ಸೈಟ್ ಡಿಸ್ಟ್ರಿಬ್ಯೂಷನ್ ಆಗಿದ್ದು ಅರ್ಹರನ್ನು ಮತ್ತೇ ರೈಲು ಹತ್ತಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಿಡಿಒ ಸಾಹೇಬ್ರಲ್ಲಿ ಕೇಳಿದರೆ ಅನರ್ಹರ ಲಿಸ್ಟ್ ತಂದು ಕೊಡಿ, ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ತಾನು ಚಾರ್ಜಲ್ಲಿ ಇರುವ ಪಂಚಾಯ್ತಿಯಲ್ಲಿ ಅರ್ಹರು ಯಾರು, ಅನರ್ಹರು ಯಾರು ಎಂದು ಸಾರ್ವಜನಿಕರು ಲಿಸ್ಟ್ ತೆಗೆದು ಕೊಡಬೇಕೆಂದದಾದರೆ ಮತ್ತೆ ಆ ಪಂಚಾಯಿತಿಗೆ ಪಿಡಿಒ ಯಾಕೆ ಅಂತಲೇ ಗೊತ್ತಾಗುತ್ತಿಲ್ಲ. ಚಾರ್ಜ್ ಸರಿ ಕೊಟ್ಟಿಲ್ವಾ?