ಸಂಗೀತಾ ಮೊಬೈಲ್ ಹೆಸರಿನಲ್ಲಿ ವಂಚನೆ

Pattler News

Bureau Report

ಸಂಗೀತಾ ಮೊಬೈಲ್ ಹೆಸರಿನಲ್ಲಿ ಇಂಪಾದ ಧ್ವನಿಯೊಂದು ಮೊಬೈಲ್ ಕೊಡುತ್ತೇನೆ ಎಂದು ಹೇಳಿ ಕೇವಲ ಪೊಟ್ಟು ಸ್ಪೀಕರ್ ಕೊಟ್ಟು ವಂಚಿಸಿದ ಘಟನೆ ನಡೆದಿದೆ. ಇಂಪಾದ ಧ್ವನಿ ಬೆಂಗಳೂರಿನಿಂದ ತೇಲಿ ಬಂದಿತ್ತು.
“ಹಲೋ ನಾನು ಸ್ವಾತಿ, ಸಂಗೀತಾ ಮೊಬೈಲ್ ನಿಂದ ಮಾತಾಡ್ತಾ ಇರೋದು. ನಮ್ಮಲ್ಲಿ ಹೊಸ ವರ್ಷದ ಹೊಸ ಹೊಸ ಆಫರ್ ಗಳಿದ್ದು ನೀವು ಕೇವಲ ಸಾವಿರದ ಒಂಬೈನೂರು ಪೇ ಮಾಡಿದರೆ ನಿಮಗೆ ಒಂದು ಮೊಬೈಲ್ ಸೆಟ್ ವಿದ್ ಬ್ಲೂಟೂತ್ ಮತ್ತು ಒಂದು ಪವರ್ ಬ್ಯಾಂಕ್ ಕೊಡಲಾಗುವುದು” ಎಂದು 7625004793 ನಂಬರಿನಿಂದ ಒಂದು ಕಾಲ್ ಬರುತ್ತದೆ. ಹೊಸ ವರ್ಷದ ಸಡಗರದಲ್ಲಿದ್ದ ಕಡಬ ತಾಲೂಕು ಬೆಳಂದೂರು ಗ್ರಾಮದ ಗಿರೀಶ್ ಸ್ವಾತಿಯ ಕಾಲ್ ರಿಸೀವ್ ಮಾಡಿ “ಆಫರ್ ಒಳ್ಳೆದಿದೆ” ಎಂದು ತನ್ನ ಅಡ್ರೆಸ್ ಕೊಟ್ಟು ಬಿಡುತ್ತಾನೆ. ಅಷ್ಟೇ! ಸಾವಿರದ ಒಂಬೈನೂರು ಎಲ್ಲಿ ಹೋಗಿದೆ , ಹೇಗೆ ಹೋಗಿದೆ ಅಂತಲೇ ಅಷ್ಟಮಂಗಲದಲ್ಲೂ ಸಿಗಲ್ಲ.

ಭಕ್ತಿ ಗೀತೆ ಕೇಳುವ ಸ್ಪೀಕರ್ 👆
ಆಫರ್ ನಲ್ಲಿ ತೋರಿಸಿರುವ ವಸ್ತುಗಳು👆


ಹಾಗೆ ಸಂಗೀತಾ ಮೊಬೈಲ್ ನಿಂದ ಮಾತಾಡಿದ ಸ್ವಾತಿ ನಾವು ನಿಮಗೆ ಪೋಸ್ಟಲ್ ಪಾರ್ಸೆಲ್ ಕಳಿಸ್ತೇವೆ, ಅದು ಒಂದು ಮೊಬೈಲ್ ಸೆಟ್, ಬ್ಲೂಟೂತ್ ಮತ್ತು ಪವರ್ ಬ್ಯಾಂಕ್ ಒಳಗೊಂಡಿರುತ್ತದೆ. ನೀವು ಪೋಸ್ಟ್ ಮ್ಯಾನ್ ಗೆ ಪೇ ಮಾಡಿ ಪಾರ್ಸೆಲ್ ತಗೊಳ್ಳಿ ಎಂದು ಗಿರೀಶ್ ಗೆ ಹೇಳಿರುತ್ತಾಳೆ. ಅದರಂತೆ ಸಂಗೀತಾ ಮೊಬೈಲ್ ನವರ ವಿಶೇಷ ಆಫರನ್ನು ಕಾದು ಕುಳಿತಿದ್ದ ಗಿರೀಶ್ ಮನೆಗೆ ರೊಯ್ಯೆಂದು ಪೋಸ್ಟ್ ಮ್ಯಾನ್ ಬಂದಿಳಿದಿದ್ದಾನೆ. ಪೋಸ್ಟ್ ಮ್ಯಾನ್ ಕೈಯಲ್ಲಿದ್ದ ಪಾರ್ಸೆಲ್ ನೋಡಿ ಗಿರೀಶ್ ಗೆ ಖುಷಿಯಾಗಿದೆ. ಆದರೆ ಒಂದು ಕಂಡೀಷನ್. ಪಾರ್ಸೆಲ್ ಓಪನ್ ಮಾಡುವ ಮೊದಲೇ ದುಡ್ಡು ಕೊಡಬೇಕು ಮತ್ತು ದುಡ್ಡು ಕೊಡದೆ ಪೋಸ್ಟ್ ಮ್ಯಾನ್ ಪಾರ್ಸೆಲ್ ಕೊಡುವ ಹಾಗಿಲ್ಲ. ‘ಯೆಸ್’ ಎಂದು ಗಿರೀಶ ಪೋಸ್ಟ್ ಮ್ಯಾನ್ ಗೆ ಸಾವಿರದ ಒಂಬೈನೂರು ಪೇ ಮಾಡಿ ಪಾರ್ಸೆಲ್ ತಗೊಂಡಿದ್ದಾನೆ. ದುಡ್ಡು ತಗೊಂಡು ಪಾರ್ಸೆಲ್ ಕೊಟ್ಟು ಪೋಸ್ಟ್ ಮ್ಯಾನ್ “ಪೋಸ್ಟ್, ಪೋಸ್ಟ್” ಅಂತ ಹೊರಟು ಹೋಗಿದ್ದಾನೆ. ಇತ್ತ ಮಾರ್ಸೆಲ್ ತಗೊಂಡ ಗಿರೀಶ್ ಉಲಾಯಿದ ರೂಂಗೆ ಹೋಗಿ ಪರಪರಪರ ಅಂತ ಪಾರ್ಸೆಲ್ ಓಪನ್ ಮಾಡಿದ್ದಾನೆ. ಮೊದಲ ಕಟ್ಟಿ ನಲ್ಲೇ ಒಂದು ಪೊಟ್ಟು ಸ್ಪೀಕರ್ ಸಿಗುತ್ತದೆ ಗಿರೀಶನಿಗೆ. ಓಹ್… ಸ್ಪೀಕರ್ ಕೂಡ ಕಳಿಸಿದ್ದಾರೆ ಎಂದು ಖುಷಿಯಾಗುತ್ತಾನೆ ಹುಡುಗ. ಆದರೆ ನಂತರ ಎಷ್ಟು ಪರಪರಪರ ಮಾಡಿದರೂ ಮೊಬೈಲೂ ಇಲ್ಲ, ಮೊಬೈಲ್ ನ ಚಿತ್ರವೂ ಇಲ್ಲ. ಬ್ಲೂಟೂತ್ ನ ಬಿತ್ತ್ ಕೂಡ ಇಲ್ಲ, ಪವರ್ ಬ್ಯಾಂಕ್ ನ ವಯರ್ ಕೂಡ ಇಲ್ಲ. ಸಿಕ್ಕಿದ್ದು ಬೇಗಡೆ ಮಾತ್ರ. ಆಗ ತಾನು ಮೋಸ ಹೋದ ವಿಷಯ ಹುಡುಗನಿಗೆ ಗೊತ್ತಾಗಿದೆ. ಕೂಡಲೇ ಸ್ವಾತಿಗೆ ಕಾಲ್ ಮಾಡಿದರೆ “ಬಂದಿಲ್ವಾ, ನೋಡುತ್ತೇನೆ, ಚೆಕ್ ಮಾಡಿ ಹೇಳುತ್ತೇನೆ”ಎಂದು ಹೇಳಿದಳು ನಂತರ ಕಾಲ್ ರಿಸೀವ್ ಮಾಡುತ್ತಿಲ್ಲ. ಎಲ್ಲಿಯಾದರೂ ಸತ್ತಳಾ ಅಂತಾ?
ಹಾಗೆ ಸಂಗೀತಾ ಮೊಬೈಲ್ ಹೆಸರಿನಲ್ಲಿ ರೆಡ್ ಮಿ ಮೊಬೈಲ್, ಬ್ಲೂಟೂತ್, ಪವರ್ ಬ್ಯಾಂಕ್ ಕೊಡುತ್ತೇನೆ ಎಂದು 7625004793 ನಂಬರಿನಿಂದ ಕಾಲ್ ಮಾಡಿ ಅಮಾಯಕ ಹುಡುಗನನ್ನು ವಂಚಿಸಿದ ಸ್ವಾತಿ ಎಂಬ ಕಂಡ್ರೆ ಕುಟ್ಟಿ ಇಲ್ಲಿ ತನಕ ಕಾಲ್ ರಿಸೀವ್ ಮಾಡಿಲ್ಲ. ಪುತ್ತೂರಿನ ಸಂಗೀತಾ ಶೋರೂಂ ಕಡೆ ಹೋಗಿ ವಿಚಾರಿಸಿದರೆ “ನಮ್ಗೆ ಗೊತ್ತೇ ಇಲ್ಲ”ಎಂದು ಉತ್ತರ ಬಂದಿದೆ. ಹಾಗಾದರೆ ಸ್ವಾತಿ ಯಾರು? ಅವಳ ಅಪ್ಪ ಯಾರು? ರೆಡ್ ಮಿ ಮೊಬೈಲ್, ಬ್ಲೂಟೂತ್, ಪವರ್ ಬ್ಯಾಂಕ್ ಕಳಿಸ್ತೇನೆ ಎಂದು ಇನ್ನೂರು ರೂಪಾಯಿ ಬೆಲೆಯ ಭಕ್ತಿ ಗೀತೆ ಕೇಳುವ ಒಂದು ಪೊಟ್ಟು ಸ್ಪೀಕರ್ ಕಳಿಸಿರುವ ಇವರು ಕರ್ನಾಟಕದಲ್ಲಿ ಇನ್ನೂ ಎಷ್ಟು ಮಂದಿ ಅಮಾಯಕರಿಗೆ ರೆಡ್ ಮಿ ಟೋಪಿ ಹಾಕಿರಬಹುದು. ಬೆಂಗಳೂರಿನ ಕೋರಮಂಗಲದಿಂದ ಪೋಸ್ಟ್ ಆಗಿರುವ ಪಾರ್ಸೆಲ್ ನಲ್ಲಿ ಸರಿಯಾದ ಅಡ್ರೆಸ್ ಇಲ್ಲ.
ಹಾಗೆ ಆನ್ ಲೈನ್ ಮೂಲಕ ವಂಚಿಸುವ ವಂಚಕರ ಸಂಖ್ಯೆ ಜಾಸ್ತಿ ಆಗುತ್ತಿದ್ದು ಇದಕ್ಕೆ ಒಳ್ಳೆ ಉಪಾಯ ಅಂದರೆ ನಾವು ಅವರನ್ನೇ ವಂಚಿಸುವುದು. ನಾವು ಪ್ರೋಡಕ್ಟ್ ಬುಕ್ ಮಾಡಬೇಕು. ಅವರು ಹಾರಿ ಬಿದ್ದು ಒಂದು ಮಿಕ ಸಿಕ್ಕಿತು ಎಂದು ಪ್ರೋಡಕ್ಟ್ ಕಳಿಸುತ್ತಾರೆ. ಆದರೆ ಇಲ್ಲಿ ನಾವು ಪಾರ್ಸೆಲ್ ರಿಸೀವ್ ಮಾಡಬಾರದು. ಬ್ಯಾಂಡ್ ವಾಲಗದಲ್ಲಿ ವಾಪಸ್ ಕಳಿಸಿ ಬಿಡಬೇಕು. ಒಂದು ಸಾವಿರ ಮಂದಿ, ಹತ್ತು ಸಾವಿರ ಮಂದಿ, ಒಂದು ಲಕ್ಷ ಮಂದಿ ಹೀಗೆ ವಂಚಕರನ್ನು ಕುಣಿಸಿದಾಗ ಅವರಿಗೇ ಬೊಡಿಯುತ್ತದೆ. ಅವರ ಪ್ರೋಡಕ್ಟ್ ಅವರಿಗೇ ಇರಲಿ. ಆಫೀಸು ಟೂ ಪೋಸ್ಟ್ ಆಫೀಸ್, ಪೋಸ್ಟ್ ಆಫೀಸ್ ಟೂ ಆಫೀಸ್ ಕುಣಿಸುತ್ತಾ ಇರಬೇಕು ಕಂಡ್ರೆಕುಟ್ಟಿಗಳನ್ನು. ನೀವೂ ಈ 7625004793 ನಂಬರಿಗೆ ಕಾಲ್ ಮಾಡಿ ಆಫರ್ ಬುಕ್ ಮಾಡಿ. ಬಂದರೆ ವಾಪಾಸು ಮಾಡಿ ಬಿಡಿ. ವಂಚಕ ನನ್ಮಕ್ಕಳಿಗೆ ಹಾಗಾದರೂ ಬುದ್ಧಿ ಬರಲಿ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top