ಸುಳ್ಯದಲ್ಲಿ ಕಾಕಜಿಗಳಿಲ್ಲದ ಅಂಬುಲೆನ್ಸ್ ಗಳು

Pattler News

Bureau Report

ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಅಂಬುಲೆನ್ಸ್ ಗಳು ಯಾವುದೇ ಸರಿಕಟ್ಟಾದ ಡಾಕ್ಯುಮೆಂಟ್ ಗಳಿಲ್ಲದೆ ಸೈರನ್ ಮಾಡಿಕೊಂಡು ಅಂದರ ಕತ್ತಲೆಯಲ್ಲಿ ಓಡಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಎಲ್ಲಿಯಾದರೂ, ಏನಾದರೂ ಹೆಚ್ಚು ಕಡಿಮೆಯಾದರೆ ಮತ್ತೊಂದು ಅಂಬುಲೆನ್ಸೇ ಗತಿ.

ಹಾಗೆಂದು ಸುಳ್ಯ ದಕ್ಷಿಣ ಕನ್ನಡದ ಒಂದು ಕೋಡಿಯಲ್ಲಿರುವ ತಾಲೂಕು. DC ಜೊತೆ, SP ಜೊತೆ ಮಾತಾಡಲು ಹೋಗ ಬೇಕಾದರೆ ಮೂರು ಕುಟ್ಟಿ, ನಾಲ್ಕು ಕುಟ್ಟಿ ಇಂಧನ ಬೇಕು. ಇನ್ನು ಕುರುಂಜಿಯಲ್ಲಿ ಎಲ್ಲಿಯಾದರೂ “ಇಲ್ಲಿ ಆದುಲೆ, ಮಂಗಳೂರಿಗೆ ಹೋಕು” ಅಂದರೆ ಮುಗಿಯಿತು ಕತೆ. ಆಕ್ಸಿಲರೇಟರನ್ನು ಪಾತಾಳ ತನಕ ತುಳಿದು ಎಂಬತ್ತು ಕಿಲೋಮೀಟರ್ ಸೈರನಲ್ಲಿ ಓಡಬೇಕು.ಇದು ಸುಳ್ಯದವರ ಕತೆ. ಇಂಥ ಎಮರ್ಜೆನ್ಸಿ ಸುಳ್ಯದಲ್ಲಿ ಕೆಲವು ಅಂಬುಲೆನ್ಸ್ ಗಳು ಯಾವುದೇ ಕಾಕಜಿ ಪತ್ರಗಳಿಲ್ಲದೆ ಓಡುತ್ತಿದೆ. ಒಂದು ಅಂಬುಲೆನ್ಸ್ ಅಂದರೆ ಅದಕ್ಕೆ ಬಾಕಿ ಗಾಡಿಗಳಿಗಿಂತ ಜಾಸ್ತಿ ಒತ್ತು ಕೊಡಲಾಗುತ್ತದೆ ಮತ್ತು ಗಾಡಿ ಬಾಡಿ ಫಿಟ್ನೆಸ್ ಜಾಸ್ತಿ ಇರಬೇಕಾಗುತ್ತದೆ. ಆದರೆ ಸರ್ಕಾರಿ ಬಸ್ಸಿಗಿಂತಲೂ ಗತಿಕೆಟ್ಟಿನ ಅಂಬುಲೆನ್ಸ್ ಗಳು ಸುಳ್ಯದಲ್ಲಿವೆ. ಇಂಥ ಪ್ರಗತಿ ಕಾಣದ ಅಂಬುಲೆನ್ಸ್ ಗಳಲ್ಲಿ ರೋಗಿಗಳನ್ನು ಮಂಗಳೂರಿಗೆ ಕೊಂಡೋಗುವುದಾದರೂ ಹೇಗೆ ಮಾರಾಯ್ರೆ?

ಹಾಗೆಂದು ಸುಳ್ಯದಲ್ಲಿ ಕೆಲವು ಅಂಬುಲೆನ್ಸ್ ಗಳು ಸುಮ್ಮನೆ ವೇಸ್ಟ್ ಯಾಕೆ ಅಂತ ಇನ್ಸೂರೆನ್ಸ್ ಕಟ್ಟುವುದೇ ಇಲ್ಲ. ಹೇಗೂ ಮಗುಚಿ ಬೀಳಲ್ಲ, ಪಲ್ಟಿ ಹೊಡೆಯಲ್ಲ, ಮತ್ತೆ ಸುಮ್ಮನೆ ಯಾಕೆ ಇನ್ಸೂರು ಅಂತ ಇನ್ಸೂರೆನ್ಸೇ ಕಟ್ಟಲ್ಲ ಮಾರಾಯ್ರೆ.ಪುಣತ್ತೊಟ್ಟಿಗೆ ಇದ್ದವರೂ ಪುಣ ಆದರೆ ಯಾರು ಹೊಣೆ? ಇನ್ನು ಇಂಥ ಅಂಬುಲೆನ್ಸ್ ಗಳು FC ಮಾಡದೆ ಓಬಿರಾಯನ ಕಾಲ ಆಗಿದೆ. ಯಾಕೆಂದರೆ ಅಂಬುಲೆನ್ಸ್ ಗಳನ್ನು ಪೋಲಿಸ್ ಸಮೇತ ಯಾರೂ ನಿಲ್ಲಿಸಲ್ಲ. ಇನ್ನು RTOಗಳು ರೋಡಲ್ಲಿ ಸಿಗಲ್ಲ ಅಂತ ಅಂಬುಲೆನ್ಸ್ ಮಾಲೀಕರಿಗೆ ಗೋತ್ತೇ ಇದೆ. ಹಾಗಾಗಿ ಗಾಡಿ ಫಿಟ್ನೆಸ್ ಇದ್ದರೇನು, ಇಲ್ಲದಿದ್ದರೇನು. ಇನ್ನು ಕೆಲವು ಅಂಬುಲೆನ್ಸ್ ಗಳ ಹಿಂದೆ ಸೂಂಟಾನ್ ಗೆ ಸೂ ಹಾಕಿದಂತೆ ಹೊಗೆ ಏಳುತ್ತಾ ಇರುತ್ತದೆ. ಯಾಕೆಂದರೆ ಅವರು ಪುಗೆ ಚೆಕ್ ಮಾಡಿಸಿಯೇ ಇರಲ್ಲ. ಇನ್ನು ಅಂಬುಲೆನ್ಸ್ ಪೈಲೆಟ್ ಗೆ ಅಂಬುಲೆನ್ಸ್ ಹಾರಿಸಲು ಲೈಸೆನ್ಸ್ ಇದೆಯೇ ಎಂದು ಕೂಡ ನೋಡುವವರು, ಕೇಳುವವರು ಯಾರೂ ಇಲ್ಲ. ಹಾಗಾಗಿ RTO ಇಲ್ಲದ ಸುಳ್ಯದಲ್ಲಿ ಪೋಲಿಸರಾದರೂ ಒಮ್ಮೆ ಎಲ್ಲಾ ಅಂಬುಲೆನ್ಸ್ ಗಳ ರೆಕಾರ್ಡ್ಸ್ ಚೆಕ್ ಮಾಡೋದು ಒಳ್ಳೇದು. ಇಲ್ಲದಿದ್ದರೆ ಏನಾದರೂ ಹೆಚ್ಚು ಕಡಿಮೆಯಾದರೆ ಅಚ್ಚುವೇ ಗತಿ. ಪ್ರಗತಿ ಇಲ್ಲದ ಅಂಬುಲೆನ್ಸ್ ಗಳನ್ನು ಕೂಡಲೇ ಬೇಲಿಗೆ ಇಟ್ಟು ಸುಳ್ಯ ಪೋಲಿಸರು ಪುಣ್ಯ ಕಟ್ಟಿಕೊಳ್ಳುವುದು ಇತ್ಯಾದಿ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top