
ಸುಳ್ಯ ಸಂಪಾಜೆಯ ಕಲ್ಲುಗುಂಡಿ ಮೀನ್ ಮಾರುಕಟ್ಟೆಯಲ್ಲಿ ಗುಜುರಿ ಅಂಗಡಿಯೊಂದು ಟೆಂಟ್ ಹಾಕಿರುವ ಬಗ್ಗೆ ಮಾಹಿತಿ ಬಂದಿದ್ದು ಸ್ವಚ್ಛ ಗ್ರಾಮದಲ್ಲಿ ಈ ಬೆಳವಣಿಗೆ ಸರಿಯಾ ಸರಿತಾ ಎಂಬ ಅಸಮಾಧಾನ ಸಂಪಾಜೆ ತುಂಬಾ ಎದ್ದಿದೆ.

ಹಾಗೆಂದು ಕೊಡಗು ಸಂಪಾಜೆ ದೇಶಭಕ್ತರ ಭದ್ರ ಕೋಟೆಯಾದರೆ, ಸುಳ್ಯ ಸಂಪಾಜೆ ಕೈಗಳ ಚಿತ್ರದುರ್ಗದ ಕಲ್ಲಿನ ಕೋಟೆ. ಸುಳ್ಯ ಸಂಪಾಜೆ ಗ್ರಾಮ ಪಂಚಾಯಿತಿ ಕೆಲಸದಲ್ಲಿ ವೀರ,ಧೀರ,ಶೂರ. ಸಂಪಾಜೆ ಪಂಚಾಯ್ತಿ ಮೂರು ಸಲ ಸ್ವಚ್ಛ ಗ್ರಾಮ ಪುರಸ್ಕಾರ ಪಡೆದು ಬೀಗಿದೆ, ಹಿರಿ ಹಿರಿ ಹಿಗ್ಗಿದೆ. ಅಜಾತ ಶತ್ರುಗಳು, ಯುವ ನಾಯಕರು, ಜಾತ್ಯತೀತ ಜಾಣರು, ಕಾಂಗ್ರೇಸ್ ಕಲಿಗಳೇ ತುಂಬಿರುವ ಪಂಚಾಯ್ತಿ ಸಾಧಿಸಿದ್ದು ಅನೇಕ. ಸದ್ರಿ ಪಂಚಾಯ್ತಿಯ ಕೆಲಸಗಳನ್ನು ಬಣ್ಣಿಸಲು, ಹಾಡಿ ಹೊಗಳಲು ಅಸಾಧ್ಯ. ಆದರೆ ಇದೀಗ ಪಂಚಾಯ್ತಿ ವ್ಯಾಪ್ತಿಯ ಮೀನು ಮಾರುಕಟ್ಟೆಯಲ್ಲಿ ಗುಜಿರಿ ಇಟ್ಟು ಒಂದು ಮಿಸ್ಟಿಂಗ್ ಮಾಡಿದ್ದಾರೆ. ಮೀನಿಗೆ ಡಿಸ್ಟರ್ಬ್ ಆಗಲ್ವಾ?

ಅಲ್ಲಿ ಸಂಪಾಜೆ ಪಂಚಾಯ್ತಿಯ ಕಲ್ಲುಗುಂಡಿ ಫಿಶ್ ಮಾರ್ಕೆಟ್ ವಾರ್ಷಿಕ ಎಲ್ಡು ಲಕ್ಷ ನಲವತ್ತು ಸಾವ್ರ ಪಂಚಾಯ್ತಿಗೆ ಇನ್ ಕಮ್ ತಂದು ಕೊಡುತ್ತದೆ. ಮಾರ್ಕೆಟಿನಲ್ಲಿ ಆರು ಅಂಗ್ಡಿಗಳಿದ್ದು ಅದರಲ್ಲಿ ನಾಲ್ಕರಲ್ಲಿ ಫಿಶ್ಶೇ ಇದೆ. ಉಳಿದ ಎರಡನ್ನು ಎಂಥ ಮಾಡುವುದು, ಎಂಥ ಮಾಡುವುದು ಎಂದು ಯೋಚಿಸಲಾಗಿ ಗುಜರಿ ಅಂಗಡಿಗೆ ಇದು ಬೆಸ್ಟ್ ಸ್ಪಾಟ್ ಎಂದು ಗುಜುರಿಗೆ ಕೊಡಲಾಗಿದೆ. ಇದರಿಂದ ಪಂಚಾಯ್ತಿಗೆ ಆದಾಯ ಬರುತ್ತದಾ ಅಥವಾ ಮೀನು ಸಾವುಕರ್ರೇ ಈ ಅಂಗಡಿ ಕೋಣೆಗಳನ್ನು ಅಂಡರ್ ರೆಂಟ್ ಕೊಟ್ಟಿದ್ದಾರಾ ಎಂಬುದು ಗೊತ್ತಿಲ್ಲ. ಆದರೆ ಮೀನು ಮಾರುಕಟ್ಟೆಯ ಬರಿಟ್ಟ್ ಗುಜರಿ ರಾಶಿ ಬಿದ್ದಿವೆ. ಇವರ ಗುಜರಿಯಿಂದಾಗಿ ಕಲ್ಲುಗುಂಡಿಯಲ್ಲಿ ಅರ್ಜೆಂಟ್ ಸೂಸು ಮತ್ತು ಅರ್ಜೆಂಟ್ ಕಕ್ಕ ಬಂದರೆ ಕಲ್ಲುಗುಂಡಿ ತೋಡೇ ಗತಿ ಆಗಿದ್ದು ಯಾಕೆಂದರೆ ಫಿಶ್ ಮಾರ್ಕೆಟ್ ಬಳಿ ಇರುವ ಪಬ್ಲಿಕ್ ಟಾಯ್ಲೆಟ್ ಗೆ ಹೋಗುವ ಸಾದಿಯನ್ನೂ ಗುಜುರಿ ಬಂದ್ ಮಾಡಿದೆ.

ಹಾಗೆಂದು ಈ ಫಿಶ್ ಮಾರ್ಕೆಟನ್ನೇ ಪಿಡಬ್ಲ್ಯೂಡಿ ಕುಮ್ಕಿಯಲ್ಲಿ ಕಟ್ಟಿದ್ದು ಅದೇ ಅಕ್ರಮ ಅಂತ ಜನ ಹೇಳುತ್ತಿರುವಾಗ ಇದು ಅಕ್ರಮದೊಳಗೆ ಅಕ್ರಮ ಎಂದು ಜನ ಗೊಳ್ಳೆಂದು ನಗುತ್ತಿದ್ದಾರೆ. ಒಬ್ಬ ಪಾಪದವನು ಪರಮೋಸದಿಂದ ಒಂದು ತೊಟ್ಟೆ ಕಜವು ಬಿಸಾಡಿದರೂ ಅದಕ್ಕೆ ಕ್ರಿಮಿನಲ್ಲು ಕೇಸು, ದಂಡ, ಅದು ಇದು ಎಂದು ಹಾರಾಡುವ ಪಂಚಾಯ್ತಿಗಳು ಫಿಶ್ ಮಾರ್ಕೆಟನ್ನು ಫಿಶ್ ಇರುವಾಗಲೇ ಗುಜಿರಿಗೆ ಕೊಟ್ಟಿದ್ದು ವಿಪರ್ಯಾಸವೇ ಸರಿ. ಇದು ಸರಿನಾ ಸರಿತಾ?
