ಐತ್ತೂರಿನ ಕೈಕುರೆ ಮನೆಗೆ ಮೋಹಿನಿ ಕಾಟ? ಬಲ್ಕಾಡಿ ಬಾನರ್ ಏನು ಸಂಬಂಧ?

Pattler News

Bureau Report

ಅಲ್ಲಿ ಕಡಬ ತಾಲೂಕು ಐತ್ತೂರು ಗ್ರಾಮದ ಕೈಕುರೆ ಎಂಬಲ್ಲಿ ಮನೆಯೊಂದಕ್ಕೆ ಬೊಲೆರೋ ವಾಹನದಲ್ಲಿ ಬಂದ ಅಪರಿಚಿತರು ಮತ್ತು ಮನೆಯ ಮಗಳು ಸೇರಿಕ್ಕೊಂಡು ಮನೆ ಸೊಸೆಗೇ ಕೊಲೆ ಬೆದರಿಕೆ ಹಾಕಿ ಬಲವಂತವಾಗಿ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಏರಿ ಬಂದವರ ಮೇಲೆ ಎಫ್ಐಆರ್ ಆಗಿದ್ದು ಮೇಲಿನ ಕೋರ್ಟಿನಲ್ಲಿ ಸಿವಿಲ್ ಕೇಸ್ ನಡೆಯುತ್ತಿರುವಾಗಲೇ ಈ ಗಲಾಟೆ ನಡೆದಿದ್ದು ಕೋರ್ಟ್ ಕಡೆಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟ ಹಾಗೆ ಕಾಣಿಸುತ್ತಿಲ್ಲ.

ಹಾಗೆಂದು ಕಡಬ ತಾಲೂಕು ಐತ್ತೂರು ಗ್ರಾಮದ ಕೈಕುರೆ ನಾಗಣ್ಣ ಗೌಡರಿಗೆ ಒಂದು ಗಂಡು ಐದು ಹೆಣ್ಣು ಮಕ್ಕಳು. ಕೈಕುರೆ ಅವರ ಕುಟುಂಬದ ಆದಿ ಮನೆ. ಮಂಚ ತುಂಬಾ ಭೂತ ಅದು ಇದೆಲ್ಲ ಇದೆ. ಆದಿ ಮನೆಗೆ ಇಪ್ಪತ್ತಾರು ಎಕರೆಗಳಷ್ಟು ಕೃಷಿ ಭೂಮಿ ಇದ್ದು ನಾಗಣ್ಣ ಗೌಡರ ಪಿತ್ರಾರ್ಜಿತ ಮತ್ತು ಪರ್ಚೇಸ್ ಲ್ಯಾಂಡುಗಳೂ ಇದರಲ್ಲಿ ಸೇರಿದೆ. ಹೀಗಿರುತ್ತಾ ನಾಗಣ್ಣ ಗೌಡರು ತೀರಿ ಹೋಗುತ್ತಾರೆ. ಅವರು ತೀರಿ ಹೋಗುತ್ತಿದ್ದಂತೆ ಆ ಇಪ್ಪತ್ತಾರು ಎಕರೆಗಳ ಪಹಣಿಯಲ್ಲೂ ನಾಗಣ್ಣ ಗೌಡರ ಬುಡೆದಿ ಡೀಕಮ್ಮ, ಮಗ ಪವನ್ ಕುಮಾರ್, ಮಗಳಾದ ಕೀರ್ತಿ, ಮೋಹಿನಿ ಮತ್ತು ಇತರೇ ಮೂವರು ಹೆಣ್ಣು ಮಕ್ಕಳ ಹೆಸರುಗಳು ಎಂಟ್ರಿ ಆಗಿ ಬಿಡುತ್ತದೆ. ಹಾಗೆ ನಾಗಣ್ಣ ಗೌಡರು ತೀರಿಕೊಂಡ ಮೇಲೆ ಅವರ ಮಗ ಪವನ್ ಕುಮಾರ್ ಕೃಷಿ ಚಟುವಟಿಕೆಗಳನ್ನು ಮುಂದುವರೆಸಿದ್ದರು. ನಾಗಣ್ಣ ಗೌಡರು ಇರುವಾಗ ಕೇವಲ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದು ಉಳಿದ ಮೂವರಿಗೆ ಪವನ್ ಮದುವೆ ಮಾಡಿದ್ದರು. ಎಲ್ಲವೂ ಸರಿ ಇರುವಾಗಲೇ ಹೆಣ್ಣು ಮಕ್ಕಳಲ್ಲಿ ಮೂವರು ಆಸ್ತಿಯಲ್ಲಿ ಸಮಪಾಲು ಬೇಕೆಂದು ಕೋರ್ಟಿಗೆ ಹೋಗಿದ್ದಾರೆ. ಕೋರ್ಟು ಕೇಸು ಡಿಕ್ರಿ ಮೇಲೆ ಮೇಲಿನ ಕೋರ್ಟಿನಲ್ಲಿ ಅಪೀಲಿನಲ್ಲಿದೆ. ಸಿವಿಲ್ ಇರುವಾಗ ಕ್ರಿಮಿನಲ್ ಎಂಟ್ರಿ ಈ ದೇಶದ ಕಾನೂನಿನಲ್ಲಿ ಇಲ್ಲ. ಪೋಲಿಸರೂ ಎಂಟ್ರಿ ಆಗಲ್ಲ.

ಹಾಗೆ ಕೋರ್ಟ್ ಕೇಸ್, ಸಿಸ್ಟರ್ಸ್ ಜೊತೆ ಮನಸ್ತಾಪದಿಂದ ನೊಂದ ಪವನ್ ಡಿಪ್ರೆಶನ್ ಗೆ ಹೋಗಿ ಆರು ತಿಂಗಳ ಹಿಂದೆ ತೀರಿಕೊಳ್ಳುತ್ತಾರೆ. ನಂತರ ಕೋರ್ಟಿಗೆ ಹೋದ ಹೆಣ್ಣು ಮಕ್ಕಳ ಗಲಾಟೆ ಜೋರಾಗಿದ್ದು ಬಲಾತ್ಕಾರವಾಗಿ ಜಾಗ ಸ್ವಾಧೀನ, ಅಡಿಕೆ ತೆಗೆಯುವುದು, ಮದ್ದು ಬಿಡುವುದು ಮುಂತಾದ ಕ್ರಿಮಿನಲ್ ಚಟುವಟಿಕೆಗಳಿಗೆ ಇಳಿದು ಬಿಟ್ಟಿದ್ದರು. ಈ ಬಗ್ಗೆ ತುಂಬಾ ಸಲ ಪಂಚಾಯ್ತಿ ನಡೆಸಿದರೂ ಒಮ್ಮತಕ್ಕೆ ಬರದೆ ಗಲಾಟೆ ಮುಂದುವರೆದಿತ್ತು. ಸೊಸೈಟಿ ಲೋನ್ ಹನ್ನೊಂದು ಲಕ್ಷ, ಗೋಲ್ಡ್ ಲೋನ್ ಏಳೆಂಟು ಲಕ್ಷ, ಕಾರು ಲೋನ್ ಮುಂತಾದ ಎಲ್ಲಾ ಲೋನ್ ಗಳಿಗೂ ಪವನ್ ವೈಫು ರಶ್ಮಿಯೇ ಜವಾಬ್ದಾರಳು, ನಮ್ಮ ಪಾಲಿನ ಅಡಿಕೆ ನಮಗೆ ಕೊಡಬೇಕು ಎಂಬುದು ವಿರೋಧಿ ಬಣದ ಮೋಹಿನಿ ಮ್ಯಾಡಂ ಒತ್ತಾಯ. ಇಲ್ಲ ಸೊಸೈಟಿ ಸಾಲ ಮನೆಗೆ ಹಾಕಿದ್ದಾರೆ ಪವನ್, ಗೋಲ್ಡ್ ಲೋನ್ ಕೂಡ ಮನೆಯ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲಾಗಿದೆ, ಪವನ್ ಕಾರು ಲೋನ್ ಕಂತು ಕೂಡ ಕಟ್ಟಬೇಕಾಗಿದೆ ಮತ್ತು ಚಿಕ್ಕ ಮಕ್ಕಳ ಆರೈಕೆ ಹೀಗೆ ಎಲ್ಲವೂ ಕಷ್ಟ ಕಷ್ಟ ಎಂಬುದು ರಶ್ಮಿ ವಾದ. ಓ ಮೊನ್ನೆ ರಶ್ಮಿ ಮನೆಯಲ್ಲಿ ಇಲ್ಲದ ದಿನ ಮೂರನೇ ಕೊಯ್ಲು ಅಡಿಕೆಯನ್ನು ಬಂದು ಮೋಹಿನಿ ಬಣ ಪಿಕಪ್ ತುಂಬಾ ಲೋಡ್ ಮಾಡಿ ಕೊಂಡೋಗಿದೆ. ಸೊಸೈಟಿ ಲೋನ್ ಬಾಕಿ.

ರೌಡಿ ಸೆಟ್ ಬಂದ ಬೊಲೆರೋ

ಹಾಗೆ ಮೂರನೇ ಕೊಯ್ಲಿನ ಅಡಿಕೆ ಹೋದಗಲೂ ಸುಮ್ಮನಿದ್ದ ರಶ್ಮಿ ಇನ್ನು ನಮಗೆ ಹೆದರಿಕೊಂಡಳು ಎಂದು ಕ್ಯಾಲ್ಕುಲೇಸನ್ ಹಾಕಿದ ಮೋಹಿನಿ ಟೀಮ್ ಮತ್ತೇ ಜೂನ್ 19 ರಂದು ಬಲ್ಕಾಡಿಯ ಪೆಟ್ಟಿಸ್ಟ್ ಗ್ಯಾಂಗಿನೊಂದಿಗೆ ವಾಪಾಸ್ ಕೈಕುರೆ ಮನೆಗೆ ಬಂದು ಲ್ಯಾಂಡ್ ಆಗಿ ಗಲಾಟೆ ಮಾಡಿದ್ದಾಳೆ. ರಶ್ಮಿಯನ್ನು ಬೆಡ್ ರೂಮಿನಲ್ಲಿ ಕೂಡಿ ಹಾಕಿ ಕೊಲೆ ಬೆದರಿಕೆ ಹಾಕಲಾಗಿದೆ. ರಶ್ಮಿಯನ್ನು ಘಟ್ಟ ಹತ್ತಿಸುವುದಾಗಿ ಬೊಬ್ಬೆ ಹೊಡೆಯಲಾಗಿದೆ. ಬಲ್ಕಾಡಿ ಗ್ಯಾಂಗ್ ಮಾಮಿ ಮನೆ ಎಂಬಂತೆ ಇಡೀ ಮನೆ ಠಳಾಯಿಸಿದೆ. ರಶ್ಮಿ ಬೆಡ್ ರೂಮ್ ವರೆಗೂ ಬಂದು ಬೆದರಿಕೆ ಹಾಕಿದೆ. ಈ ರೌಡಿ ಸೆಟ್ಟಿಂಗ್ ಗೆ ಹೆದರಿದ ರಶ್ಮಿ ಮರುದಿನವೇ ಹೋಗಿ ಕಡಬ ಪೊಲೀಸರಿಗೆ ಕಂಪ್ಲೈಂಟ್ ಕೊಟ್ಟಿದ್ದರು. ಮೋಹಿನಿ ಗೌಡ ಮತ್ತು ಅವರ ರೌಡಿ ಗ್ಯಾಂಗ್ ಮೇಲೆ ಕಡಬ ಪೊಲೀಸರು FIR ದಾಖಲು ಮಾಡಿದ್ದರು. ಅದರ ವೆರಿ ನೆಕ್ಸ್ಟ್ ಡೇ ರಶ್ಮಿ ಜೊತೆಗಿದ್ದ ಅತ್ತೆಯೇ ಮೋಹಿನಿ ಪ್ರೇರೇಪಣೆ ಮೇಲೆ ರಶ್ಮಿ ಹಾಗೆ ಮಾಡಿದಳು, ಹೀಗೆ ಮಾಡಿದಳು ಎಂದು ಪೊಕ್ಕಡೆ ಪೊಕ್ಕಡೆ ಕಂಪ್ಲೈಂಟ್ ಕೊಟ್ಟಿದ್ದರು.

ಸದ್ರಿ ಕೇಸಿನಲ್ಲಿ ಸಾರ್ವಜನಿಕರ ಮಧ್ಯೆ ಕೆಲವು ಪ್ರಶ್ನೆಗಳು ಎದ್ದಿದ್ದು ಅವು ಇಂತಿವೆ. 1) ಸಿವಿಲ್ ಕೇಸ್ ಜಿಲ್ಲಾ ನ್ಯಾಯಾಲಯದಲ್ಲಿ ಅಪೀಲ್ ಸ್ಟೇಜಲ್ಲಿ ಇರುವಾಗ ಕ್ರಿಮಿನಲ್ ಚಟುವಟಿಕೆ ನಡೆಸಿದ್ದು contempt of court ಆಗುವುದಿಲ್ಲವೇ? 2) ಸದ್ರಿ ಕೇಸಲ್ಲಿ ಇರುವ A1 ಆರೋಪಿ ಮೋಹಿನಿ ಗೌಡ್ರಿಗೂ A2 ಆರೋಪಿ ಸುನಿಲ್ ರೈ ಎಂಬವರಿಗೂ ಇರುವ ಸಂಬಂಧ ಏನು? 3) ಒಂದು ಫ್ಯಾಮಿಲಿ ಮ್ಯಾಟರಲ್ಲಿ ನೋಟಿಸ್ ಇಲ್ಲದೆ ಹಾಜರಾಗಿರುವ ರೌಡಿ ಸೆಟ್ ಗೆ ಮೋಹಿನಿ ಗೌಡ್ರು ಏನಾದರೂ ಕಾಂಟ್ರಾಕ್ಟ್ ಕೊಟ್ಟಿದ್ದಾರಾ? ಕಾಂಟ್ರಾಕ್ಟ್ ಅಗ್ರಿಮೆಂಟ್ ಏನಾಗಿರಬಹುದು? ಅಥವಾ ಕೇವಲ ಎಡ್ಡೆಪ್ಪು ಮಾತ್ರಾನಾ? 4) ಗೌಡ್ರ ಗದ್ದಲದಲ್ಲಿ ಶೆಟ್ರಿಗೆ ಏನು ಕೆಲಸ? ಒಬ್ಬ ಒಕ್ಕಲಿಗ ಹೆಣ್ಣು ಮಗಳ ಬೆಡ್ ರೂಮ್ ತನಕವೂ ಬಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದರೆ ಕಡಬದಲ್ಲಿ ಒಕ್ಕಲಿಗ ಸಂಘ ಯಾಕೆ ಸುಮ್ಮನೆ ಕುಂತಿದೆ? ಸಂಘ ಏನು ಮಾಡುತ್ತಿದೆ? 5) ಗೌಡ್ರ ಕೌಟುಂಬಿಕ ಕಟ್ಟುಕಟ್ಟಳೆಗಳಲ್ಲಿ ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ. ಮದುವೆ ಆಗಿ ಹೋಗುವಾಗ ಅಟ್ಟಕ್ಕೆ ಅಕ್ಕಿ ಬಿಸಾಡಿ ಹೋಗುವ ಕ್ರಮ. ಕಾನೂನು ಏನೇ ಹೇಳಿದರೂ ಈಗಲೂ ಗೌಡ್ರ ಮನೆಯ ಹುಡುಗಿಗೆ ತವರಿನಲ್ಲಿ ಪಾಲಿಲ್ಲ. ಪ್ರೀತಿಯಿಂದ ಏನಾದರೂ ಕೊಟ್ಟರೆ ಮುಗಿಯಿತು. ಮೋಹಿನಿ ಗೌಡ್ರ ಗಲಾಟೆ ಗೌಡ್ರ ರೀತಿ ರಿವಾಜುಗಳನ್ನು ಗಾಳಿಗೆ ತೂರಿದಂತೆ 6) ತನ್ನದೇ ತವರಿಗೆ ನುಗ್ಗಿ ಅಣ್ಣನ ಹೆಂಡ್ತಿಗೆ ಪೊಟ್ಟು ರೌಡಿ ಹುಡುಗರ ಕೈಯಲ್ಲಿ ಕೊಲೆ ಬೆದರಿಕೆ ಹಾಕಿಸಿದ್ದು ಯಾವ ನ್ಯಾಯ? ಅಣ್ಣನ ಎರಡು ಪುಟ್ಟ ಅವಳಿ ಜವಳಿ ಮಕ್ಕಳು ಹೆದರಿಕೊಂಡಾರು ಎಂಬ ಪಾಪ ಪ್ರಜ್ಞೆಯೂ ಮೋಹಿನಿ ಗೌಡ್ರಿಗೆ ಇರಲಿಲ್ಲವೇ? 7) ಎಪ್ಪತ್ತು ವರ್ಷದ ತನ್ನ ತಾಯಿ ಡೀಕಮ್ಮನವರನ್ನು ಈ ವಯಸ್ಸಿನಲ್ಲಿ ಪೋಲಿಸ್ ಠಾಣೆ ಮೆಟ್ಟಿಲೇರಿಸಿದ್ದು ಮೋಹಿನಿ ಗೌಡ್ರ ಅತಿರೇಕ ಅಲ್ಲವೇ? 8) ಸಮಾನ ಪಾಲು ಬೇಕು, ಸಮಾನ ಪಾಲು ಬೇಕು ಎಂದು ಗಲಾಟೆ ಮಾಡುತ್ತಿರುವ ಮೋಹಿನಿ ಗೌಡ್ರ ಟೀಮ್ ಅಲ್ಲಿ ಆದಿಮನೆಯ ಚಾವಡಿಯ ಮಂಚದಲ್ಲಿ ಇರುವ ಕುಟುಂಬ ದೈವಗಳತ್ತ ಒಂದು ಸಲವೂ ನೋಡಿಲ್ವಾ? ದೈವಗಳ ಸೇವೆ, ನೇಮ ನಡಾವಳಿ ನಡೆಸುವವರು ಯಾರು?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೂ ಸಾರ್ವಜನಿಕರ ನಡುವೆ ಇದೆ. ಗೌಡ್ರ ಗಲಾಟೆಯಲ್ಲಿ ಶೆಟ್ರು ಯಾಕೆ ಬಂದರು ಅಂತಲೂ ಗೊತ್ತಿದೆ, ಇವರೆಲ್ಲರ ಜಾತಕವೂ ಊರಿಡೀ ವೈರಲ್ ಆಗಿದೆ. ಇಷ್ಟಕ್ಕೂ ಕಡಬದ ಒಕ್ಕಲಿಗ ಸಂಘ ತನ್ನ ಸ್ವಜಾತಿಯ ಹೆಣ್ಣು ಮಗಳ ಮೇಲೆ ಇಷ್ಟೆಲ್ಲಾ ದೌರ್ಜನ್ಯ ನಡೆದರೂ ಯಾಕೆ ಸುಮ್ಮನೆ ಕುಳಿತಿದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top