ಕನಕ ಮಜಲಿನಲ್ಲಿ ಅವಧಿ ಮೀರಿದ (Expired) ಔಷಧಿ ನೀಡಿದ ಕ್ಲಿನಿಕ್! ರೋಗಿ ಅಸ್ವಸ್ಥೆ !

Pattler News

Bureau Report


ಅಲ್ಲಿ ಕನಕಮಜಲಿನ ನಿವಾಸಿ ಬಾತಿಷಾ ಎಂಬವರ ಪತ್ನಿ ಸರಪುನ್ನಿಸ ಎಂಬವರು ಜ್ವರ ಹಾಗೂ ಚೆಮ್ಮಕ್ಕೆ ಜಾಲ್ಸೂರಿನ ಅನಿಷ್ಟ ಕ್ಲಿನಿಕ್ ಒಂದಕ್ಕೆ ಭೇಟಿ ನೀಡಿ ಔಷಧಿ ಪಡೆದು ಸೇವಿಸಿದ ನಂತರ, ಮತ್ತಷ್ಟು ಅಸ್ವಸ್ಥಗೊಂಡ ಬಗ್ಗೆ ವರದಿಯಾಗಿದೆ. ಇದ್ ಎಂದೆ ಇಂಗಣೆ ಆಯೆದ್ ಎಂದು ರೋಗಿಯು ನಂತರ ಔಷಧಿಯ ಬಾಟಲಿಯನ್ನು ಪರಿಶೀಲಿಸಿದಾಗ, ದಿನಾಂಕ ನಮೂದಿಸಿರುವ ಜಾಗವನ್ನು ಮಾರ್ಕರ್ ಪೆನ್ನಿನಿಂದ ಗೀಚಿ, ಅವಧಿ ಮುಕ್ತಾಯದ (Expiry) ದಿನಾಂಕ ಕಾಣದಂತೆ ಮಾಡಿರುವುದು ಗಮನಕ್ಕೆ ಬಂತು. “ಮಾರ್ಕರ್ ಗೀಚಿದ್ದನ್ನು ಸ್ಪ್ರೇ ಹಾಕಿ ಪರಿಶೀಲಿಸಿದಾಗ ಸುಮಾರು ಒಂದೂವರೆ ತಿಂಗಳ ಹಿಂದೆ ಅವಧಿ ಮೀರಿದ್ದ ಪುಳಿ ಪುಳಿ ಔಷಧಿಯನ್ನು ವೈದ್ಯರು ನೀಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಈಗಾಗಲೇ ರೋಗಿಯ ಕಡೆಯವರು ತಾಲೂಕು ಆರೋಗ್ಯಾಧಿಕಾರಿಗೆ ಹಾಗು ಜಿಲ್ಲಾ ಆರೋಗ್ಯಾಧಿಕಾರಿಗೂ ದೂರನ್ನು ನೀಡಿರುವ ಬಗ್ಗೆ ವರದಿ ಯಾಗಿದೆ…
ಇಂತಹ ಗ್ರಾಮೀಣ ಪ್ರದೇಶದ ಜನರು ವೈದ್ಯರ ಮೇಲೆ ನಂಬಿಕೆ ಇಟ್ಟುಕೊಂಡಿರುವ ಸಂದರ್ಭದಲ್ಲಿ, ಈ ರೀತಿಯ ನಿರ್ಲಕ್ಷ್ಯ ಅಥವಾ ತಪ್ಪು ನಡೆ ಜನರ ಜೀವಕ್ಕೆ ಅಪಾಯ ಉಂಟುಮಾಡಿದರೆ ಅದರ ಹೊಣೆ ಯಾರು ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣ ವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ಸದ್ರಿ “ಡಾಕ್ಟರ್ ಕೆರ್ಪೆರ್ ” ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೋಗಿ ಯ ಕಡೆಯವರು ಹಾಗು ಸಾರ್ವಜನಿಕರ ಒತ್ತಾಯವಾಗಿದೆ ಇತ್ಯಾದಿ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top