ಬೀಜದಕಟ್ಟೆ ಕಲ್ಚರಲ್ ಫೌಂಡೇಶನ್, ಬೆಂಗಳೂರು (ನೋಂ) ವತಿಯಿಂದ ಸಾಯಿ ಕೃಪಾ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ವಿವಿಧ ಕೊಡುಗೆಗಳ ಹಸ್ತಾಂತರ

Pattler News

Bureau Report

ಬೀಜದಕಟ್ಟೆ ಕಲ್ಚರಲ್ ಫೌಂಡೇಶನ್, ಬೆಂಗಳೂರು (ನೋಂ) ವತಿಯಿಂದ ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ಶ್ರೀ ಸಾಯಿ ಕೃಪಾ ಟ್ರಸ್ಟ್‌ನ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಿವಿಧ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮವು ಜೂನ್ 18 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಬಿಸಿಎಫ್ ವತಿಯಿಂದ ಮಕ್ಕಳಿಗೆ ನೋಟ್‌ಬುಕ್‌ಗಳು, ಪೆನ್ಸಿಲ್‌ಗಳು, ರಬ್ಬರ್‌ಗಳು, ಶಾರ್ಪನರ್‌ಗಳು, ಪೆನ್‌ಗಳು, ಫ್ರೂಟಿ ಜ್ಯೂಸ್, ಬಿಸ್ಕೆಟ್ ಪ್ಯಾಕೆಟ್‌ಗಳು ಹಾಗೂ ಅಕ್ಕಿ ಚೀಲವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮದ ನಿವಾಸಿಗಳಿಗೆ ಪ್ಯಾಂಟ್‌, ಶರ್ಟ್‌ ಹಾಗೂ ಟಿ-ಶರ್ಟ್‌ಗಳನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಇನೋವಿ ಮೊಬಿಲಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಆಹಾರ ಸಾಮಗ್ರಿಗಳು, ಯೂನಿಫಾರ್ಮ್‌ಗಳು ಹಾಗೂ ಮಕ್ಕಳ ಆಟಿಕೆಗಳನ್ನು ಸಹ ವಿತರಿಸಲಾಯಿತು. ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾದ ವಾಸು ಶೆಟ್ರಕಟ್ಟೆ, ಕುಂದಾಪುರ ಅವರು ಈ ವಸ್ತುಗಳನ್ನು ಹಸ್ತಾಂತರಿಸಿದರು. ಸಂಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಸದಸ್ಯರಾದ ಸುಮಿತ, ಶರತ್ ಹಾಗೂ ರಿತೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೀಜದಕಟ್ಟೆ ಕಲ್ಚರಲ್ ಫೌಂಡೇಶನ್ (ನೋಂ) ಸಂಸ್ಥಾಪಕ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ, ಬಿಸಿಎಫ್ (ನೋಂ) ಬೆಂಗಳೂರು ಘಟಕದ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ್ ಹಿರಿಯೂರು ಹಾಗೂ ಮೊಹಮ್ಮದ್ ಮರ್ಝೂಕ್ ಉಪಸ್ಥಿತರಿದ್ದರು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top