ಕಲ್ಮಕಾರಿನಲ್ಲಿ ಗಾಂಜಾ ಘಾಟು! ಆರು ಜನ ಬಂಧಿಖಾನೆಗೆ?

Pattler News

Bureau Report

ಮಡಿಕೇರಿ ತಾಲ್ಲೂಕು ಗಾಳಿಬೀಡು ಪಂಚಾಯ್ತಿ ವ್ಯಾಪ್ತಿಯ ಕಡಮ್ಮಕಲ್ಲು ಎಸ್ಟೇಟ್ ಸೈಡಿನ ಶೀರಡ್ಕ ಬಳಿ ಗಾಂಜಾ ಪತ್ತೆಯಾಗಿದ್ದು ಪೋಲಿಸರು ಬಂದು ಆರು ಜನರನ್ನು ಎತ್ತಿದ್ದಾರೆ ಎಂದು ಸುದ್ದಿ. ಉಳಿದ ಬೊಗ್ಗುಗಳು ತಲೆಮರೆಸಿಕೊಂಡಿದ್ದು ಪೋಲಿಸರು ಅಟ್ಟ ಅಟ್ಟ ಹತ್ತಿ ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಶೀರಡ್ಕ ಅಂದ್ರೆ ಇಲ್ಲೇ ಕಲ್ಮಕಾರ್ ಹತ್ತಿರ, ಕೊಲ್ಲಮೊಗ್ರದಿಂದ ಒಂತೆ.

Call: 7022107042..8105742473

ಹಾಗೆಂದು ಕಲ್ಮಕಾರು, ಕೊಲ್ಲಮೊಗ್ರಗಳಲ್ಲಿ ಗಾಂಜಾ ಹೊಗೆ ರೀಸೆಂಟ್ ಆಗಿ ಶುರುವಾದದ್ದು. ಬೆಂದ್ರ್ ಸೂ ಹಾಕಿದ ಹಾಗೆ ಏನೂ ಪುಗೆ ಏಳುತ್ತಿರಲಿಲ್ಲ. ಆದರೆ ನಿನ್ನೆ ಮೊನ್ನೆಯಿಂದ ಕಲ್ಮಕಾರ್, ಕೊಲ್ಲಮೊಗ್ರಗಳಲ್ಲಿ ಟೀಶರ್ಟ್ ಪೋಲಿಸರು ಅಲ್ಲಲ್ಲಿ ಬಂದು ಅಟ್ಟಕ್ಕೆ ಹತ್ತುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದೇ ಬೆನ್ನ ಹಿಂದೆ ಸೊಂಟದಲ್ಲಿ ಪಿಸ್ತೂಲು ಇಟ್ಟುಕೊಂಡಿರುವ ಸಿಸಿಬಿ ಪೋಲಿಸ್ ಅಂತ ಕೆಲವರು ಹೇಳಿದ್ರೆ ಇನ್ನು ಕೆಲವರು ಮುಲ್ಕಿ ಪೋಲಿಸರು ಅಂತ ಗುರ್ತ ಹಿಡಿದಿದ್ದಾರೆ.ಆದರೆ ಯಾವ ಪೋಲೀಸು ಅಂತ ಗೊತ್ತಿಲ್ಲ, ಯಾರನ್ನೆಲ್ಲ ಎತ್ತಲಿದ್ದಾರೆ, ಬಂಧಿಖಾನೆಗೆ ಎಷ್ಟು, ಚಡ್ಡಿಯಲ್ಲಿ ಕೂರಲು ಎಷ್ಟು, ಪೊಕ್ಕಡೆ ಒಳಗೆ ಎಷ್ಟು ಎಂಬ ಅಂಕಿ ಅಂಶಗಳು ಇನ್ನು ಸಿಗಬೇಕಷ್ಟೆ. ಬಂದಿದ್ದು ಸುಬ್ರಹ್ಮಣ್ಯ ಪೋಲಿಸರು ಮಾತ್ರ ಅಲ್ಲವೇ ಅಲ್ಲ ಅಂತ ಮರಿಯ ಮಂಡೆ ಮೇಲೆ ಬೇಕಾದರೂ ಕೈಯಿಟ್ಟು ಹೇಳಬಹುದು.

ಹಾಗೆಂದು ಈ ಕಲ್ಮಕಾರ್ ಸೌತ್ ಕೆನರಾದ ಲಾಸ್ಟ್ ಸ್ಟಾಪ್. ಅಲ್ಲಿ ತನಕ ಸೌತ್ ಕೆನರಾ ಡಾಂಬರ್ ಹಾಕಿದೆ.ನಂತರ ರೋಡಿಲ್ಲ, ಕಡಮ್ಮಕಲ್ಲು ಎಸ್ಟೇಟ್ ಬರುತ್ತದೆ ಅಲ್ಲಿಗೆ ಕೊಡಗು ಬಂದಾಯ್ತು. ಈ ಕಡಮ್ಮಕಲ್ಲು ಎಸ್ಟೇಟಿನ ಒಂದು ಕೋಂಟಿನಲ್ಲಿ ಶೀರಡ್ಕ ಅಂತ ಒಂದು ಚಿಕ್ಕ ಕೊಡಗಿನ ತುಂಡು ಬರುತ್ತದೆ. ಈ ಶೀರಡ್ಕದಲ್ಲಿ ಕೆಲವು ಬೊಗ್ಗು ಪಟಾಲಂ ಇದ್ದು ಪೋಲಿಸರಿಂದ ತುಂಬಾ ದೂರ ಇರುವ ಕಾರಣ ಇವರು ಸ್ವಲ್ಪ ಪೊತ್ತುನ ಜಾಸ್ತಿಯೇ ಇತ್ತು. ಅದೂ ಅಲ್ಲದೆ ಮೇಲೆ ಎಸ್ಟೇಟೂ ಇರುವ ಕಾರಣ ತುಂಬಾ ಜನ ಅಡ್ರೆಸ್ ಇಲ್ಲದ ಬ್ಯಾಡ್ ಬಾಯ್ಸ್ ಇದೇ ಶೀರಡ್ಕದಲ್ಲಿ ಬಂದು ಪಡರಿ ಬೀಳುವುದು ವಾಡಿಕೆ. ಹಾಗೆ ಈ ಲೋಕಲ್ ಬೊಗ್ಗುಗಳು ಮತ್ತು ಅಡ್ರೆಸ್ ಇಲ್ಲದ ಬ್ಯಾಡ್ ಬಾಯ್ಸ್ ಗಳಿಗೆ ಗ್ಲಾಸ್ ಮೆಟ್ ಸಂಬಂಧ. ಹಾಗೆ ಇವರೆಲ್ಲರಿಗೆ ಕುಡಿಯಲು, ತಿನ್ನಲು, ಎಳೆಯಲು ವ್ಯವಸ್ಥೆ ಆಗಬೇಕಲ್ಲ. ಅದರ ಜವಾಬ್ದಾರಿ ವಹಿಸಿಕೊಂಡಿದ್ದು ಇದೇ ಶೀರಡ್ಕದ ಒಬ್ಬ ಲೋಕಲ್ ಬೊಗ್ಗು. ಶೀರಡ್ಕದಲ್ಲಿ ಕೋಳಿ ಫಾರಂ ಎಲ್ಲಾ ಉಂಟು ಇವನಿಗೆ.

ಹಿಂದೊಮ್ಮೆ ಇವನು ಕೊಲ್ಲಮೊಗ್ರ ಬಾರಿನಿಂದ ಇವರಿಗೆಲ್ಲ ಕುಡಿಯುವ ವಸ್ತು ಲೋಡ್ ಮಾಡಿಕೊಂಡು ಇನ್ನೋವಾದಲ್ಲಿ ಹೋಗುತ್ತಿದ್ದಾಗ ಟೀಶರ್ಟ್ ಪೋಲಿಸರು ಇವನನ್ನು ಹಿಡಿದು ಇನ್ನೋವಾ ಒಳಗಿಟ್ಟು ಕುಂಬು ಮಾಡಿದ್ದರು. ನಂತರ ಯಾರದ್ದೂ ಸುದ್ದಿ ಇರಲಿಲ್ಲ. ಈಗ ನೋಡಿದರೆ ಮತ್ತೇ ಟೀಶರ್ಟ್ ಪೋಲಿಸರು ಬಂದಿದ್ದಾರೆ. ಮಾಹಿತಿ ಪ್ರಕಾರ ಈ ಲೋಕಲ್ ಬೊಗ್ಗು ಒಡೆತನದ ಕೋಳಿ ಫಾರಂನಲ್ಲಿ ಗಾಂಜಾ ಸಿಕ್ಕಿದೆ ಎಂದೂ, ಅವನು ಎಸ್ಕೇಪ್ ಆಗಿ ಘಟ್ಟದಲ್ಲಿ ಹೋಗಿ ಅಟ್ಟದಲ್ಲಿ ಕುಂತಿದ್ದಾನೆ ಎಂದೂ, ಕೋಳಿಗಳಿಗೆ ಡ್ರಿಂಕ್ ಕೊಡುತ್ತಿದ್ದ ಅವನ ಬಡಪಾಯಿ ತಮ್ಮನನ್ನು ಟೀಶರ್ಟ್ ಪೋಲಿಸರು ಲಿಫ್ಟ್ ಮಾಡಿದ್ದಾರೆಂದೂ, ಅವನ ಜೊತೆಗೆ ಹೊಗೆ ಬಿಡುತ್ತಿದ್ದ ಇನ್ನೂ ಮೂರ್ನಾಲ್ಕು ಮಂದಿಯನ್ನು ಎತ್ತಿದ್ದಾರೆಂದು ಗುಸು ಗುಸು. ಅದೂ ಅಲ್ಲದೆ ಪೋಲಿಸರು ಇತ್ಲಗೆ ಕಲ್ಮಕಾರು, ಕೊಲ್ಲಮೊಗ್ರ ತನಕವೂ ನಾಡಿಕೊಂಡು, ನಾಡಿಕೊಂಡು ಬಂದಿದ್ದು ಕೊಲ್ಲಮೊಗ್ರದಲ್ಲಿ ಹೊಗೆ ಬಿಡುವವರೂ ಕೂಡ ಅಟ್ಟಹತ್ತಿದ್ದಾರೆ ಎಂದು ತಿಳಿದುಬಂದಿದೆ. ಬೇಟೆ ಮುಂದುವರೆದಿದೆ.

ಹಾಗೆಂದು ಕಲ್ಮಕಾರಿನಿಂದ – ಮಡಿಕೇರಿಯ ಗಾಳಿ ಬೀಡಿಗೆ ವಾಕಿಂಗ್ ಡಿಸ್ಟೆನ್ಸ್. ಬರೇ ಏಳು ಕಿ.ಮೀ ಅಷ್ಟೇ. ಆದರೆ ರೋಡಿಲ್ಲ. ರೋಡ್ ಆದರೆ ನಾಗರೀಕತೆ ಶುರುವಾಗುವ ಅಪಾಯಗಳಿರುವ ಕಾರಣ ಯಾವುದೋ ಕಾಣದ ಕೈಗಳು ರೋಡ್ ಆಗದಂತೆ ಅಡ್ಡಗಾಲು ಇಟ್ಟಿರುವ ಶಂಕೆಗಳಿವೆ. ಇಲ್ಲಿ ಎಲ್ಲಿಯಾದರೂ, ಯಾರಾದರೂ ಗಾಂಜಾ ಕೃಷಿಕರು ಇರುವ ಬಗ್ಗೆ ಡೌಟುಗಳಿವೆ. ಇಲ್ಲದಿದ್ದರೆ ಈ ಭಾಗದಲ್ಲಿ ಇಷ್ಟೊಂದು ಹೊಗೆ ಏಳುತ್ತಿರಲಿಲ್ಲ ಮತ್ತು ಟೀಶರ್ಟ್ ಪೋಲಿಸರು ಹೊಗೆ ಕಂಡು ಓಡೋಡಿ ಬರುತ್ತಿರಲಿಲ್ಲ. ಏನೋ ಆಗಿದೆ ಇಲ್ಲಿ, ಏನೋ ನಡೆಯುತ್ತಿದೆ ಇಲ್ಲಿ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top