ಎಲ್ಲಿದ್ದರೂ ಮನೆಗೆ ಬಾ

Pattler News

Bureau Report

ಅಲ್ಲಿ ಬೆಳ್ಳಾರೆ ಕೊಳಂಬಳ ಮಹಾಲಕ್ಷ್ಮಿ ಸ್ಟೋರ್ ಮಂಜಣ್ಣನ ಫ್ರೆಂಚ್ ಪರ್ಷಿಯನ್ ಪುಚ್ಚೆ ಬಿಲ್ಲಿ ನಿನ್ನೆಯಿಂದ ಕಾಣೆಯಾಗಿದೆ. ಮಂಜಣ್ಣ ಭಾರೀ ಪ್ರೀತಿಯಿಂದ ಸಾಕಿದ್ದ ಬಿಲ್ಲಿ ಕಾಣೆಯಾದಾಗಿನಿಂದ ಮಂಜಣ್ಣ ಭಾರೀ ಬೇಜಾರದಲ್ಲಿದ್ದು ಊಟ ತಿಂಡಿ ನಿದ್ದೆ ಯಾವುದೂ ಸರಿ ಆಗಿಲ್ಲ. ಈ ಬಗ್ಗೆ ಮಂಜಣ್ಣ ಕಲ್ಲೇರಿ ಗುಳ್ಳಿಗ್ಗನಿಗೆ ಹರಿಕೆ ಹೊತ್ತಿದ್ದು ಬಿಲ್ಲಿ ಸೇಫಾಗಿ ವಾಪಾಸ್ ಮನೆಗೆ ಬಂದರೆ ಗುಳಿಗ್ಗನಿಗೆ ಡಬ್ಬಲ್ ಕೋರಿ ಒಂದು ಲೀ ಕಲಿ ಕೊಡುವುದಾಗಿ ಘೋಷಿಸಿದ್ದಾರೆ. ಆದ್ದರಿಂದ ಯಾರಾದರೂ ಪುಚ್ಚೆ ಕಳ್ಳರು ಪರಮೋಸದಿಂದ ಬಿಲ್ಲಿಯ ಸೌಂದರ್ಯಕ್ಕೆ, ಬೆಡಗು ಬಿನ್ನಾಣಕ್ಕೆ ಮರ್ಲ್ ಕಟ್ಟಿ ಆಕೆಯನ್ನು ಕಂಡಿದ್ದರೆ ಈ ಕೂಡಲೇ ಅವಳನ್ನು ಮಂಜಣ್ಣನ ವಶಕ್ಕೆ ಒಪ್ಪಿಸುವುದು ಇತ್ಯಾದಿ. ಎಲ್ಲಿಯಾದರೂ ಪುಚ್ಚೆ ಕಳ್ಳರು ಪುಚ್ಚೆ ಇಟ್ಟುಕ್ಕೊಂಡು ಆಟ ಆಡಿದರೆ ಕಲ್ಲೇರಿ ಗುಳ್ಳಿಗ್ಗ ಸುಮ್ಮನೆ ಬಿಡಲ್ಲ ಎಂಬ ಎಚ್ಚರಿಕೆ ಸಹ ಇದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top