ಕಡಬ ಮೀನು ಮಾರುಕಟ್ಟೆಗೆ ಕುರ್ದಿ ನೀರು ಸಿಂಪಡಣೆ?

Pattler News

Bureau Report

ಕಡಬ ಸಿಟಿಯ ಫಿಶ್ ಮಾರ್ಕೆಟಿಗೆ ಓ ಮೊನ್ನೆ ನೈಟ್ ಬಂಗುಡೆ ಭೂತಾಯಿಗಳ ಆತ್ಮಕ್ಕೆ ಚಿರಶಾಂತಿ ಕೋರಿ ಕುರ್ದಿ ನೀರು ಮತ್ತು ಪುಣ್ಯನೀರು ಸಿಂಪಡಿಸಿದ ಬಗ್ಗೆ ಸಿಸಿ ಮಾಹಿತಿ ಕೊಟ್ಟಿದೆ. ಮಾಹಿತಿಗಳ ಪ್ರಕಾರ ಇದೊಂದು ವೃತ್ತಿ ವೈಷಮ್ಯದ ಕಾರಣಕ್ಕೆ ಮಾಡಿದ ಮಾಟ ಮಂತ್ರ ತಂತ್ರ ಎಂದು ತಿಳಿದುಬಂದಿದೆ.

ಹಾಗೆಂದು ಕಡಬ ಫಿಶ್ ಮಾರ್ಕೆಟ್ ಅಂದರೆ ಮುಂಬೈ ಸ್ಟಾಕ್ ಎಕ್ಸ್ ಚೇಂಜ್ ಇದ್ದ ಹಾಗೆ. ಬ್ಯುಸಿ ಅಂದರೆ ಬಿಸಿ ಬಿಸಿ. ಇಲ್ಲಿನ ಸ್ಟಾಲ್ ಗಳ ಏಲಂನಲ್ಲೂ ರಣರೋಚಕ ಸ್ಪರ್ಧೆಗಳಿವೆ. ಕಳೆದ ಆರು ತಿಂಗಳ ಹಿಂದೆ ಇಲ್ಲಿ ಸಾಜು ಎಂಬವರು ಒಂದು ಸ್ಟಾಲ್ ಏಲಂನಲ್ಲಿ ಪಡಕ್ಕೊಂಡಿದ್ದು ಸದ್ರಿಯವರು ಇನ್ನೂ ಅನೇಕ ಕಡೆಗಳಲ್ಲಿ ಸ್ಟಾಲ್ ಪಡಕೊಂಡಿದ್ದಾರೆ. ಆದರೆ ಈ ಫಿಶ್ ಮರ್ಚೆಂಟ್ ದೊಡ್ಡ ಮಾಟ ಮಂತ್ರದ ಭಕ್ತನಾಗಿದ್ದು ಕಡಬ ಫಿಶ್ ಮಾರ್ಕೆಟಿನ ಇತರೇ ಫಿಶ್ ಮರ್ಚೆಂಟ್ ಗಳನ್ನ ಲಡಾಡಿ ತೆಗೆಯಲು ಅದೇನೋ ಮಂತ್ರಿಸಿ, ತಂತ್ರಿಸಿ ಬಿಸಿನೆಸ್ ಎಳೆಯಲು ಪ್ರಯತ್ನಿಸಿದ ಬಗ್ಗೆ ಸುದ್ದಿ ಇದೆ. ಇದಕ್ಕಾಗಿ ಸದ್ರಿ ಸಾಜು ಎಲ್ಲೋ ಅಂಡಿಗುಂಡಿ ಮಂತ್ರವಾದಿಯ ಮೊರೆ ಹೋಗಿದ್ದ. ಕಳೆದ ಕಾರ್ತೆಲ್ ನಟ್ಟ ಅಮಾವಾಸ್ಯೆಯ ದಿನ ಸಾಜುವನ್ನು ಮಂಡಳದೊಳಗೆ ಹಾಕಿ, ಕಳೆದು, ಕೂಡಿಸಿ, ಭಾಗಿಸಿ, ಗುಣುಗುಣು ಗುಣಿಸುತ್ತಾ ಆ ಮಂತ್ರವಾದಿ ಕಸ್ಟಮರ್ ಗಳನ್ನು ವಶೀಕರಣ ಮಾಡಲು ಸಾಜುಗೆ ವ್ಯವಸ್ಥೆ ಮಾಡಿದ್ದ. ಹಾಗೆಯೇ ಸಾಜುನ ಮೈನ್ ಬಿಸಿನೆಸ್ ರೈವಲ್ರಿ ಆದಮಿಚ್ಚನ ಬಿಸಿನೆಸ್ ಲಗಾಡಿ ತೆಗೆಯಲು ಸಾಜುವನ್ನು ಇನ್ನೊಂದು ಮಂಡಳದಲ್ಲಿ ಕೂರಿಸಿ ಬಂಗುಡೆ ಭೂತಾಯಿಯಲ್ಲಿ ಕಳೆಯಲಾಗಿತ್ತು.

ಹಾಗೆ ಅಂಡಿಗುಂಡಿ ಮಂತ್ರವಾದಿ ಕಳೆದು ಕೊಟ್ಟ ಕುರ್ದಿ ವಾಟರ್ ಮತ್ತು ಪುಣ್ಯ ವಾಟರನ್ನು ತಂದು ಆದಮಿಚ್ಚನ ಅಂಗಡಿಯ ಶಟರ್ ಗೆ ಸಿಂಪಡಣೆ ಮಾಡಬೇಕಿತ್ತು. ಅದಕ್ಕಾಗಿ ಮೊನ್ನೆ 26, 27 ತಾರೀಖಿನ ಮಿಡ್ ನೈಟ್ ಲೋಕಲ್ ಪೊಣ್ಣು ಕುಲೆ ಮತ್ತು ಸಿಟಿ ಬ್ರಹ್ಮರಕ್ಕಸನ ಮಿಲನ ಸುಸಂದರ್ಭದಲ್ಲಿ ಸಾಜು ಕುರ್ದಿ ನೀರು ತಂದು ಶಟರ್ ಗೆ ಸಿಂಪಡಿಸಿದ ಬಗ್ಗೆ ಅಲ್ಲೇ ಇದ್ದ ಸಿಸಿ ರೆಕಾರ್ಡ್ ಮಾಡಿಕೊಂಡಿದೆ. (ವೀಡಿಯೋ ನೋಡಿ) ಈ ಒಂದು ವೀಡಿಯೋದಲ್ಲಿ ಕಂಡುಬಂದಂತೆ ಸುಮ್ಮನೆ ಯಾರಾದರೂ ಅಪರಾತ್ರಿ ಬಂದು ಶಟರ್ ತೊಳೆಯುತ್ತಾರ ಅಥವಾ ಶಟರ್ ಗೆ ನೀರು ಸಿಂಪಡಿಸುತ್ತಾರ ಎಂಬುದೇ ಭೂತ ಪ್ರಶ್ನೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top