
ಪುತ್ತೂರಿನ ಹಾರ್ಟ್ ಆಫ್ ದಿ ಸಿಟಿಯ ಕಾಣಿಯೂರು ಟೂರಿಸ್ಟ್ ಕಾರು ನಿಲ್ದಾಣದ ಬಳಿಯ ಬೇಕರಿಯೊಂದಕ್ಕೆ ಬಂದಿದ್ದ ನಾಗಾ ಸಾಧು ವೇಷಧಾರಿಯೊಬ್ಬ ಬೇಕರಿ ಸ್ಟಾಫ್ ನ ಉಂಗುರ ಲಪಟಾಯಿಸಿ ಪರಾರಿಯಾದ ಘಟನೆ ನಡೆದಿದೆ. “ನನ ಬರಡ್” ಅಂತ ಕಾಯಿಸಿ ಇಡ್ಲಿಕ್ಕೆ ಹೋಳಿಗೆ ಸಟ್ಟುಗ ರೆಡಿ ಮಾಡಿ ಇಟ್ಟಿದ್ದಾರೆ.

ಹಾಗೆಂದು ಹಿಂದೆಲ್ಲ ನಾಗಾ ಸಾಧುಗಳು ಕುಂಭಮೇಳದ ಟೈಮಲ್ಲಿ ಮಾತ್ರ ಕಾಣ್ಲಿಕ್ಕೆ ಸಿಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಾಗ ಸಾಧುಗಳು ಮೊಗಸಟ್ಟಿ ಹೋಗಿದ್ದಾರೆ. ಅವರೀಗ ಎಲ್ಲಿ ಬೇಕಾದರೂ ಸಿಗುತ್ತಿದ್ದಾರೆ. ಈಗ ನಾಗಸಾಧು ಬಿಸಿನೆಸ್ ಶುರುವಾಗಿದ್ದು ಇಲ್ಲಿನ ಕೆಲವು ಲೋಕಲ್ ಕಳ್ವ ಸಾಧುಗಳೂ ತಮ್ಮ ಬಾಡಿಗೆ ಸಿಲ್ವರ್ ಬೂದಿ ಪೈಂಟಿಂಗ್ ಮಾಡಿಸ್ಕೊಂಡು ನಾಗಾ ಸಾಧು ಗೆಟಪ್ಪಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೈಟೆಕ್ ಕಾರುಗಳಲ್ಲಿ ಬಂದಿಳಿಯುವ ಈ ಸಾಧುಗಳು ಆ ಪೂಜೆ, E ಪೂಜೆ ಎಂದು ಜನರನ್ನು ಮಂಗ ಮಾಡಿ ಬರ್ನ್ ಮಾಡುತ್ತಿದ್ದಾರೆ.

ಹಾಗೆಂದು ಈ ಕಳ್ಳ ಸಾಧುಗಳು ಪೂಜೆ ಗೀಜೆ ಏನಾದರೂ ಮಾಡಿಕೊಂಡಿರಲಿ ಅದಕ್ಕೆ NOC ಕೊಡಬಹುದು. ಯಾಕೆಂದರೆ ಜನ ಮಂಗ ಆಗುವಷ್ಟು ದಿನ ಅವರನ್ನು ಮಂಗ ಮಾಡುತ್ತಲೇ ಇರುತ್ತಾರೆ. ಆದರೆ ಕಾವಿ ಗೆಟಪ್ಪಲ್ಲಿ, ಬೂದಿಯ ನೆಪದಲ್ಲಿ, ನಾಗಸಾಧುವಿನ ವೇಷದಲ್ಲಿ ಜನರನ್ನು ವಂಚಿಸಿದರೆ ಮಾತ್ರ ಜನ ಮದ್ದು ಅರೆದು ಕುಡಿಸಿ ಬಿಡುತ್ತಾರೆ. ಓ ಮೊನ್ನೆ ಪುತ್ತೂರು ಬಸ್ ನಿಲ್ದಾಣದ ಬದಿಯ ಕಾಣಿಯೂರು ಟೂರಿಸ್ಟ್ ಕಾರು ನಿಲ್ದಾಣದ ಬಳಿಯ ಬೇಕರಿಯೊಂದಕ್ಕೆ ಗಡದ್ದಾಗಿ ಲಕ್ಸುರಿ ಕಾರಲ್ಲಿ ಬಂದಿಳಿದ ನಾಗಾ ಸಾಧು ರೈಲು ಬಿಟ್ಟು ಬೇಕರಿ ಸ್ಟಾಫ್ ಒಬ್ಬರ ಉಂಗುರ ಲಪಟಾಯಿಸಿ ಪರಾರಿಯಾಗಿದ್ದಾನೆ. ಓ ಮೊನ್ನೆ ನಟ್ಟ ನಡು ಹಗಲಿನಲ್ಲಿ ಬೇಕರಿ ಮುಂದೆ ಬಂದು ನಿಂತ ಲಕ್ಸುರಿ ಕಾರೊಂದರಿಂದ ಇಳಿದು ಬಂದ ಸಾಧು ಬೇಕರಿ ಸ್ಟಾಫ್ ಒಬ್ಬರ ಜೊತೆ ಪಟ್ಟಾಂಗ ಶುರು ಮಾಡಿದ್ದಾನೆ. ಬೇಕರಿ ಧನಿಗಳು ಹೊರಗಡೆ ಹೋಗಿದ್ದ ಕಾರಣ ಬೇಕರಿ ಹುಡುಗ ಪುರುಸೊತ್ತಲ್ಲಿದ್ದ. ಅದು ಇದು ಮಾತಾಡಿದ ನಾಗಾ ಸಾಧು ಹುಡುಗನಿಗೆ ಗಾಳಿ ಹಾಕಲು ಶುರು ಮಾಡಿದ್ದಾನೆ. “ನೀನು ಬೇಕರಿ ಉದ್ಯಮದಲ್ಲಿ ದೊಡ್ಡ ಹಲ್ದಿರಾಮ ಆಗುತ್ತೀಯಾ, ಸ್ವೀಟ್ ಸಾಮ್ರಾಜ್ಯದ ಅಧಿಪತಿ ಆಗುವ ಎಲ್ಲಾ ಲಕ್ಷಣಗಳು ನಿನ್ನ ಮುಖದಲ್ಲಿ ಇದೆ” ಎಂದು ಹುಡುಗನ್ನ ಅಟ್ಟ ಹತ್ತಿಸಿದ್ದಾನೆ ಸಾಧು. ನಂತರ “ನಿನ್ನ ಆ ಉಂಗುರ ಕೊಡು ಮಂತ್ರಿಸಿ, ಭಸ್ಮ ಹಾಕಿ ಕೊಡುತ್ತೇನೆ, ಅದನ್ನು ಬೆರಳಿಗೆ ಇಟ್ಟುಕೊಂಡರೆ ಈಗಿನಿಂದಲೇ ಹಲ್ದಿರಾಮ ಆಗಲು ಶುರು” ಎಂದು ಹುಡುಗನ ಬೆರಳಿನಲ್ಲಿ ಇದ್ದ ಉಂಗುರ ತೆಗೆಸಿ, ಉಂಗುರ ಕೈಗೆ ತಗೊಂಡಿದ್ದಾನೆ. ಅಷ್ಟೇ! ಬಂದ ಕಾರು ಸ್ಟಾರ್ಟ್ ಆಗಿದೆ. ಹುಡುಗ ಕಣ್ಣಾರೆ ನೋಡ ನೋಡುತ್ತಿದ್ದಂತೆ ” ಕಾರಲ್ಲಿ ಮಂತ್ರಿಸಿ ತರುತ್ತೇನೆ” ಎಂದ ಸಾಧು ಬೇಕರಿ ಇಳಿದು ಕಾರಿಗೆ ಹತ್ತಿದ್ದಾನೆ ಮತ್ತು ಕಾರು ಸೀದಾ ಹೋಗಿದೆ. ಅಷ್ಟೇ! ಒಂದು ಪವನ್ ಉಂಗುರ ನಾಗಾ ಸಾಧು ಡಬ್ಬಿಗೆ.