
ಸುಳ್ಯ ತಾಲೂಕು ಕೊಲ್ಲಮೊಗ್ರದಲ್ಲಿ ಮೊನ್ನೆ ಒಂದು ಲೋಕಲ್ ಹೊಡೆದಾಟ ಬಡಿದಾಟ ನಡೆದಿದ್ದು ಸುಬ್ರಹ್ಮಣ್ಯ ಪೋಲಿಸರು ಕೇಸು ದಾಖಲಿಸಿದ್ದಾರೆ. ಪಾರ್ಟಿಗಳು ಆಸ್ಪತ್ರೆಯಲ್ಲಿ ಮಲಗಿ ಪೊಕ್ಕಡೆ ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆಂದು ಕೊಲ್ಲಮೊಗ್ರದಲ್ಲಿ ಬಾಲ್ಕತ್ತಿ ಬಾಲ ಯಾನೆ ಮಡಿಕೇರಿ ಬಾಲನ ಆಟಾಟೋಪ ಸ್ವಲ್ಪ ಗೌಜಿಯಲ್ಲೇ ಇದೆ. ಅದ್ಯಾರೋ ಆಂಟಿ ಜೊತೆ ಪುಂಡಿ ಗಿಂಡಿ ಸಂಬಂಧ ಹೊಂದಿರುವ ಈತ ಅತ್ತ ಆಂಟಿ ಗಂಡನಿಗೂ ಹೊಡೆಯುತ್ತಾ,ಬಡಿಯುತ್ತಾ, ಚಿತ್ರಹಿಂಸೆ ಕೊಡುತ್ತಾ ಅಲ್ಲಿ ಪೆಟ್ಟು ಖಾಲಿಯಾದ ಕೂಡಲೇ ಇತ್ತ ಮನೆಗೆ ಬಂದು ತನ್ನ ಧರ್ಮಪತ್ನಿಗೆ ದನಕ್ಕೆ ಬಡಿದಂಗೆ ಬಡಿಯುತ್ತಾ ಇರುವ ಮೊಹೆಂಜೋದಾರೋ ಮನುಷ್ಯ. ಮಡಿಕೇರಿಯಿಂದ ಘಟ್ಟ ಇಳಿದು ಬಂದ ಹತ್ತು ಹಲವು ಪೀಡೆ ಪಿಚಾಚಿಗಳಲ್ಲಿ ಇವನೂ ಒಬ್ಬನಾಗಿದ್ದು ಸೀದಾ ಬಂದು ನೆಲೆಯಾದದ್ದು ಕೊಲ್ಲಮೊಗ್ರದಲ್ಲಿ. ಸದಾ ತನ್ನ ಜೊತೆ ಬಾಲ್ ಕತ್ತಿ ಇಟ್ಟುಕೊಂಡು ತಿರುಗಾಡುತ್ತಾ, ಅದರ ಪ್ರದರ್ಶನ ಮಾಡುತ್ತಾ, ಅದನ್ನು ಝಳಪಿಸುತ್ತಾ ಇರುವುದಕ್ಕೆ ಇವನಿಗೆ ಬಾಲ್ಕತ್ತಿ ಬಾಲಣ್ಣ ಅಂತಲೂ, ಮಡಿಕೇರಿಯಿಂದ ಇಳಿದು ಬಂದ ಕಾರಣ ಇವನಿಗೆ ಮಡಿಕೇರಿ ಬಾಲಣ್ಣ ಅಂತಲೂ ಹೆಸರಿಟ್ಟು ಕೊಲ್ಲಮೊಗ್ರ ಜನ ತೊಟ್ಟಿಲು ತೂಗಿದ್ದಾರೆ. ಮೊನ್ನೆ ಗಲಾಟೆ. ಬಾಲ್ಕತ್ತಿ ಬದುಕಿದ್ದೇ ಮಲ್ಲೆ.

ಓ ಮೊನ್ನೆ ಕೊಲ್ಲಮೊಗ್ರದಲ್ಲಿ ಅದೇನೋ ಬಾಲ್ಕತ್ತಿ ಬಾಲಣ್ಣನ ಗಲಾಟೆ. ಮೂಲತಃ ಅದೇ ಆಂಟಿಗೆ ಸಂಬಂಧ ಪಟ್ಟ ಗಲಾಟೆ. ದೂರಿಗೆ ಮಾತ್ರ ಮರದ ಗೆಲ್ಲು ಕಡಿದ ಕಾರಣ. ಬಾಲ್ಕತ್ತಿಗೆ ವಿಪರೀತ ತಗಡ್ ಬೆಚ್ಚ ಆಗಿ ತನ್ನ ನೇಬರ್ ಮೇಲೆ ಎಟ್ಯಾಕ್ ಮಾಡಿದ್ದಾನೆ. ಉರ್ಡಪತ್ತ ಉರ್ಡಪತ್ತ ಆಗಿದೆ. ಇಬ್ಬರೂ ಹೊಡೆದಾಡಿ ಬಡಿದಾಡಿಕೊಂಡಿದ್ದಾರೆ. ಇಬ್ಬರೂ ಕಂತಮುಟ್ಟೆ, ಕರ್ನಕುತ್ತ ಆಗಿದ್ದಾರೆ.ಕೊನೆಗೆ ಡಿಶುಂ ಡಿಶುಂ ಡಿಶುಂ ಜೋರಾಗಿ ಬಾಲ್ಕತ್ತಿ ಬಾಲ ತನ್ನ ನೇಬರನ್ನು ಅಡಿಗೆ ಹಾಕಿ ಅವನ ಮೇಲೆ ಕುಂತು ಕ್ರೌರ್ಯ ಮೆರೆದಿದ್ದಾನೆ. ಅಷ್ಟರಲ್ಲಿ ಸ್ಲಿಪ್ಪಲ್ಲಿ ಜಗಳ ನೋಡುತ್ತಾ ನಿಂತಿದ್ದ ನೇಬರನ ಬುಡೆದಿ ಒಂದು ಸಾಧಾರಣ ಕಲ್ಲು ಹೆಕ್ಕಿಕ್ಕೊಂಡು ಗುರಿಯಿಟ್ಟು ಜಡೇಜಾ ಬಿಸಾಡಿದ ಹಾಗೆ ಬಾಲ್ಕತ್ತಿ ಬಾಲಣ್ಣನ ಮಂಡೇಗೇ ಬಿಸಾಡಿದ್ದಾಳೆ. ಅಷ್ಟೇ! ಬಾಲ್ಕತ್ತಿ ಮಂಡೆಗೆ ಕತ್ತಿಯ ಅಲಗಿನಂತಹ ಏಟು ಬಿದ್ದಿದೆ. ಪೆಟ್ಟು ತಿಂದ ಬಾಲಣ್ಣ ನೆತ್ತೆರಿನ ಏರ್ತೆಗೆ ಹೆದರಿ ಓಡಿ ಹೋಗಿದ್ದಾನೆ.

ಹಾಗೆ ಸ್ಲಿಪ್ಪಲ್ಲಿ ನಿಂತು ಕಲ್ಲು ಬಿಸಾಡಿ ಜಗಳ ಫಿನಿಶ್ ಮಾಡಿದ ಬಾಲಣ್ಣನ ನೇಬರನ ಹೆಂಡ್ತಿ ಗಂಡನನ್ನು ಕರಕ್ಕೊಂಡು ಮನೆಗೆ ಹೋಗಿದ್ದಾಳೆ. ಪಾಪ ಅವರು ಮುಗ್ಧರು, ಮನೆಗೆ ಹೋಗಿ ಸುಮ್ಮನಾಗಿದ್ದಾರೆ. ಆದರೆ ಬಾಲ್ಕತ್ತಿ ಬಾಲಣ್ಣ ಸುಬ್ರಹ್ಮಣ್ಯಕ್ಕೆ ಬಂದು ಬ್ಯಾಂಡೇಜ್ ಕಟ್ಟಿಕ್ಕೊಂಡು ಪೋಲಿಸ್ ಠಾಣೆಗೆ ಹೋಗಿ ಕಂಪ್ಲೈಂಟ್ ಕೊಟ್ಟಿದ್ದಾನೆ. ಪಾಪ ಪೋಲಿಸರೂ ಬಾಲ್ಕತ್ತಿ ಬಾಲಣ್ಣನ ರೈಲೇ ಸತ್ಯ ಎಂದು ನಂಬಿ ಅವನ ನೇಬರ್ ಮೇಲೆ ಕೇಸ್ ಜಡಿದಿದ್ದಾರೆ. ನಂತರ ಅವರ ಕಡೆಯಿಂದಲೂ ಜನ ಸೇರಿ ಅವರನ್ನೂ ಸುಳ್ಯಕ್ಕೆ ಕೊಂಡುಹೋಗಿ ಅಡ್ಮಿಟ್ ಮಾಡಿಸಿದ್ದಾರೆ ಎಂದು ಸುದ್ದಿ. ಈ ಬಗ್ಗೆ FIR ಆಗಿದ್ದು CRPC 157 ಮತ್ತು BNSS 176 ಸೆಕ್ಷನ್ ಹಾಕಲಾಗಿದೆ ಎಂದು ತಿಳಿದುಬಂದಿದೆ.
ತಿದ್ದುಪಡಿ
ಆಗಿನ ಕಲ್ಮಕಾರು ಗಾಂಜಾ ಘಾಟು ವರದಿಯಲ್ಲಿ ಗಾಂಜಾ ಗಿರಾಕಿಗಳು ಕೊಲ್ಲಮೊಗ್ರ ಬಾರಿನಿಂದ ಮದ್ಯ ಕೊಂಡೋಗುವಾಗ ಸಿಕ್ಕಿಬಿದ್ದು ಗಾಡಿ ಸೀಜ್ ಆಗಿತ್ತು ಎಂದು ಬರೆದಿದ್ದೆವು. ಆದರೆ ಅವರು ಸುಳ್ಯದ ಯಾವುದೋ ಬಾರಿನಿಂದ ಲೋಡ್ ಕೊಂಡೋಗುವಾಗ ಸಿಕ್ಕಿಬಿದ್ದು ಗಾಡಿ ಸೀಜ್ ಆದದ್ದಂತೆ. ತಪ್ಪಿಗಾಗಿ ವಿಷಾದಿಸುತ್ತೇನೆ.

ON LINE CLASS
ನಾನು ಅನನ್ಯ ಹೆಚ್ ಸುಬ್ರಹ್ಮಣ್ಯ
ನಾಳೆಯಿಂದ ಅಂದರೆ 27-06-2026 ರಿಂದ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಕವನ ಬೆರೆಯುವುದು ಹೇಗೆ ಎನ್ನುವ ವಿಷಯದಲ್ಲಿ ಆನ್ಲೈನ್ ತರಗತಿ ನಡೆಸಲಾಗುತ್ತದೆ. ವಾರದಲ್ಲಿ ಎರಡು ದಿವಸ ಶನಿವಾರ ಮತ್ತು ಆದಿತ್ಯವಾರ ಸಂಜೆ 4 ರಿಂದ 5 ಗಂಟೆಯವರೆಗೆ ಗೂಗಲ್ ಮೀಟ್ ನಲ್ಲಿ ನಡೆಯುತ್ತದೆ. ಆಸಕ್ತಿ ಇರುವವರು ಇಂದೇ ಹೆಸರು ನೋಂದಾಯಿಸಿ
ಸಂಪರ್ಕ ಸಂಖ್ಯೆ:
8762439474
