ಕಡಬದ ವಿವಾದಾತ್ಮಕ ಪತ್ರಿಕಾ ಗೋಷ್ಠಿ ಬ್ಲಾಕ್ ಗಮನಕ್ಕೆ ಇಲ್ಲ?

Pattler News

Bureau Report

ಕಡಬದಲ್ಲಿ ಮೊನ್ನೆ ನಡೆದ ವಿವಾದಾತ್ಮಕ ಕಾಂಗ್ರೇಸ್ ಪತ್ರಿಕಾಗೋಷ್ಠಿ ಬಗ್ಗೆ ನಮಗೇನೂ ಮಾಹಿತಿ ಇಲ್ಲ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಹೇಳಿಕೊಂಡಿದೆ ಎಂದು ಗುಸುಗುಸು ಇದೆ. ಗೋಷ್ಠಿಯಲ್ಲಿ ಕಾಂಗ್ರೇಸ್ ಸೀನಿಯರ್ ಲೀಡರನ್ನು ಪತ್ರಕರ್ತರು ತರಾಟೆಗೆತ್ತಿಕೊಂಡದ್ದು, ಇತರೇ ನಾಯಕರು ಸಮಾಧಾನ ಮಾಡಿದ್ದು ಇತ್ಯಾದಿ ಇತ್ಯಾದಿ. ಆ ಗೋಷ್ಠಿ!

ಅಲ್ಲಿ ಕಡಬ ಸೈಡಿನ ಕೊರಿಯಾರ್ ಸಂಕಕ್ಕೆ ಶಾಸಕರು ಮೂವತ್ತು ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಬಿಡುಗಡೆ ಆದದ್ದು ಮೂವತ್ತಲ್ಲ, ಮೂವತ್ತಾರು ಎಂದು ಹೇಳಲು ಕಡಬ ಕಾಂಗ್ರೇಸ್ ನಾಯಕರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಮತ್ತು ಕಡಬ ಕಾಂಗ್ರೇಸ್ ಸೀನಿಯರ್ ಲೀಡರ್ ಬಾಲಕೃಷ್ಣ ಬಳ್ಳೇರಿ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದಿತ್ತು. ನಂತರ ಗೋಷ್ಠಿಯಲ್ಲಿ ಹಾಜರಿದ್ದ ಕೃಷ್ಣಪ್ಪ ರಾಮಕುಂಜ, ವರ್ಗೀಸ್ ಮುಂತಾದ ಲೀಡರ್ಸ್ ಪತ್ರಕರ್ತರನ್ನು ಮತ್ತು ಬಳ್ಳೇರಿಯನ್ನು ಸಮಾಧಾನ ಪಡಿಸಿದ್ದರು. ಆದರೆ ಈ ಗೋಷ್ಠಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಕಡಬ ಬ್ಲಾಕ್ ಕಾಂಗ್ರೆಸಿನ ಪದಾಧಿಕಾರಿಗಳ ಗೈರು ಮಸ್ಕ್ ಮಸ್ಕಾಗಿ ಕಂಡುಬಂದಿತ್ತು. “ಇದರಲ್ಲಿ ಏನೋ ಆಗಿದೆ” ಎಂಬ ಸಂಶಯ ಎಲ್ಲರಿಗೂ ಬರುವಂತದ್ದೇ. ಎಲ್ಲಿಯಾದರೂ ಮದ್ದು ಗಿದ್ದು ಬಿಡುವ ಅರ್ಜೆಂಟಲ್ಲಿ ಬ್ಲಾಕ್ ನಾಯಕರು ಬಿದ್ದಿದ್ದಾರೆಯಾ ಎಂದು ಮೊದಲಿಗೆ ಒಂದು ಡೌಟ್ ಕ್ರಿಯೇಟ್ ಆಗಿತ್ತು. ಆದರೆ ನಮ್ಮ ಕಡಬದ ಮೊಸದ್ ಕೊಟ್ಟ ಮಾಹಿತಿ ಪ್ರಕಾರ ಮೊನ್ನೆ ನಡೆದ ಪತ್ರಿಕಾ ಗೋಷ್ಠಿ ಬಗ್ಗೆ ಕಡಬ ಬ್ಲಾಕ್ ಕಾಂಗ್ರೆಸ್ ಗೆ ಯಾವುದೇ ಮಾಹಿತಿ ಇರಲಿಲ್ಲವಂತೆ. ಹಾಗಾಗಿ ಬ್ಲಾಕ್ ಕಾಂಗ್ರೆಸ್ ನ ಶರ್ಮಾ,ಗಿಲ್, ಕೋಹ್ಲಿ ಮುಂತಾದ ಟಾಪೆಂಡ್ ಟಾಪ್ ಗಳು ಗೋಷ್ಠಿಯಲ್ಲಿ ಭಾಗವಹಿಸಲಿಲ್ಲವಂತೆ. ಇದು ಎಂಥ ಅಂತ ಅರ್ಥ ಆಗ್ತಿಲ್ಲ.

ಹಾಗೆಂದು ಯಾವುದೇ ರಾಜಕೀಯ ಪಕ್ಷಗಳು ಒಂದು ಬ್ಲಾಕ್ ಮಟ್ಟದಲ್ಲಿ, ಕ್ಷೇತ್ರ ಮಟ್ಟದಲ್ಲಿ ಪ್ರೆಸ್ ಮೀಟ್ ಮಾಡುವಾಗ ಅಲ್ಲಿ ಲೋಕಲ್ ಕಮಿಟಿಯ ಪದಾಧಿಕಾರಿಗಳ ಹಾಜರಾತಿ ಇರಲೇ ಬೇಕು, ಇರುತ್ತದೆ ಸಹ. ಇಲ್ಲದಿದ್ದರೆ ಕಡೇ ಪಕ್ಷ ಅವರ ಗಮನಕ್ಕೆ ತಂದಾದರೂ, ವಿದ್ ಅವರ ಪರ್ಮಿಷನ್ ಮೇಲೆ ಗೋಷ್ಠಿ ಮಾಡ ತಕ್ಕದ್ದು. ಯಾರೋ ಬಂದು ಪೊಂಕ್ರ, ಚಿಂಕ್ರ, ಸಂಕ್ರ ಬಂದು ಪಕ್ಷದ ಹೆಸರಿನಲ್ಲಿ ಗೋಷ್ಠಿ ನಡೆಸುವ ಕ್ರಮ ಕಟ್ಟಳೆ ಇಲ್ಲ. ಅದು ಪಕ್ಷದ ಅಧ್ಯಕ್ಷರು ಬಂದು ಕಡಬದಲ್ಲಿ ಗೋಷ್ಠಿ ನಡೆಸುವುದಿದ್ದರೂ ಬ್ಲಾಕ್ ಸಮಿತಿಗೆ ಒಂದು ಕೂಕುಲಾದರೂ ಹಾಕಲೇ ಬೇಕು. ಇದು ಇಲ್ಲವಂತೆ. ಮೊನ್ನೆ ನಡೆದ ಪತ್ರಿಕಾ ಗೋಷ್ಠಿ ಬಗ್ಗೆ ಕಡಬ ಬ್ಲಾಕ್ ಕಾಂಗ್ರೆಸ್ ತನಗೇನು ಆ ಬಗ್ಗೆ ಮಾಹಿತಿ ಇರಲಿಲ್ಲ ಅಂತ ನಮ್ಮ ಮೊಸದ್ ಬಳಿ ಹೇಳಿಕೊಂಡಿದೆಯಂತೆ. ಹಾಗೆಲ್ಲ ಮಾಡ್ಲಿಕ್ಕೆ ಆಗುತ್ತಾ? ನಾಳೆ ಯಾರೋ ಒಬ್ಬ ಪಕ್ಷದ ಪೋಸ್ಟರ್ ಅಂಟಿಸುವವನು ಮತ್ತು ಬ್ಯಾನರ್ ಕಟ್ಟುವಾಗ ಏಣಿ ಹಿಡಿದುಕೊಳ್ಳುವವನು ಕಡಬದಲ್ಲಿ ಬಂದು ಸುದ್ದಿ ಗೋಷ್ಠಿ ಕರೆದು ಕೊರಿಯಾರ್ ಸಂಕಕ್ಕೆ ಒಂದು ಕೋಟಿ ಅಂತ ಹೇಳಿದರೆ ಏರೆನ್ ನಂಬುನ, ಏರೆನ್ ಬುಡ್ಪುನ?

ಹಾಗಾದರೆ ಕಡಬ ಕಾಂಗ್ರೇಸ್ ನಲ್ಲಿ ಗ್ರೂಪಿಸಂ ಇದೆಯಾ? ಜ್ಯೂನಿಯರ್ಸ್ ವರ್ಸಸ್ ಸೀನಿಯರ್ಸ್? ಕೃಷ್ಣಪ್ಪ ರಾಮಕುಂಜ ಬಣ ವರ್ಸಸ್ ನಂದ ಕುಮಾರ್ ಬಣ? ಪರಬ್ಬೆರ್ ವರ್ಸಸ್ ಜವನೆರ್ ? ಎಂಥದೋ ಒಂದು ಕತೆ ಇದೆ. ಬೂದಿಯೊಳಗೆ ಉರಿಯುತ್ತಾ ಇದೆ. ಯಾವಾಗ ಸೂ ಹತ್ತಿಕೊಳ್ಳುತ್ತೆ ಹೇಳಕ್ಕೇ ಆಗಲ್ಲ.


ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾ|ಘಟಕದ ಪದಾಧಿಕಾರಿಗಳ ಪದಪ್ರಧಾನ- ಸಾಧಕರಿಗೆ ಸನ್ಮಾನ


ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನೆಲ್ಲಿಕಟ್ಟೆಯ ಮಾತೃಛಾಯಾ ಸಭಾಭವನದಲ್ಲಿ ಜು.21ರಂದು ನಡೆಯಿತು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top