ಸಂಪಾಜೆಯಲ್ಲಿ ಸಿಕ್ಕಿ ಬಿದ್ದ ಕಾಟಿ ಕಿಲ್ಲರ್ಸ್!

Pattler News

Bureau Report

ಸುಳ್ಯ ಅರಣ್ಯ ಸರಹದ್ದಿನ ಕಾಡುಪಂಜದಲ್ಲಿ ಕಾಟಿ ಯೊಂದನ್ನು ಶೂಟ್ ಮಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಕಾಡುಪಂಜದ ರಣ ಬೇಟೆಗಾರರಿಬ್ಬರನ್ನು ಮಡಿಕೇರಿ ಸಂಪಾಜೆ ಅರಣ್ಯ ಇಲಾಖೆಯವರು ಹಿಡಿದು ಎತ್ತ್ಹಾಕಿಕೊಂಡು ಹೋಗಿದ್ದಾರೆ ಎಂದು ಸುದ್ದಿ. ಒಬ್ಬ ಬೋಂಟೆಗಾರ ಎಸ್ಕೇಪ್, ಬೆಡಿ ಸೀಜ್, ಮಾರಾಟಕ್ಕೆ ಬಳಸಿದ ಇಕೋ ಕಾರ್ ಸೀಝ್.

ಅಲ್ಲಿ ಸುಳ್ಯ ಅರಣ್ಯ ಇಲಾಖೆ ಅಂಡರಲ್ಲಿ ಬರುವ ಕಾಡುಪಂಜ ಕಾಡಿನಲ್ಲಿ ನಿನ್ನೆ ಒಂದು ಶೂಟೌಟ್ ನಡೆದಿದ್ದು ಭರ್ಜರಿ ಕಾಟಿಯೊಂದು ಬೇಟೆಗಾರರ ಗುಂಡಿಗೆ ಮಲಗಿತ್ತು. ಅದರ ಮುಂದಿನ ಕಾರ್ಯಗಳ ಸಲುವಾಗಿ ಕಾಟಿಯನ್ನು ಸಜ್ಜಿ ಮಾಡಿ ಹೆಲ್ದಿ ಹೆಲ್ದಿ, ಟೇಸ್ಟಿ ಟೇಸ್ಟಿ ಮಾಂಸವನ್ನು ಕಾಡಿನಲ್ಲಿಯೇ ರೆಡಿ ಮಾಡಲಾಗುತ್ತಿತ್ತು. ಪ್ರೊಡಕ್ಷನ್ ಮತ್ತು ಡಿಸ್ಟ್ರಿಬ್ಯೂಷನ್ ಒಮ್ಮೆಲೇ ಆದರೆ ತಾಜಾ ಮಾಂಸವೇ ಮಾರ್ಕೆಟಿಗೆ ಬೀಳುತ್ತದೆ ಎಂದು ವ್ಯಾಪಾರಿ ಮೈಂಡ್ ಉಪಯೋಗಿಸಿದ ಬೇಟೆಗಾರರು ಒಂದು ಇಕೋ ಕಾರಲ್ಲಿ “ಕಾಟಿ ಮಾಂಸ ಬೇಕಾ, ಕಾಟಿ ಮಾಂಸ ಬೇಕಾ”ಎಂದು ಬಂಗುಡೆ ಭೂತಾಯಿ ಮಾರಿದಂತೆ ಲೈನ್ ಸೇಲ್ ಗೆ ಇಳಿದು ಬಿಟ್ಟರು. ಜನ ಬಿಡುತ್ತಾರಾ? ಮಡಿಕೇರಿ ಸಂಪಾಜೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಂದು ಫೋನ್ ತಿರುಗಿಸಿ ಚಾಡಿ ಹೇಳಿದ್ದಾರೆ. ಅಷ್ಟೇ! ರೊಯ್ಯನೆ ಬಂದಿದ್ದಾರೆ ಅರಣ್ಯ ಇಲಾಖೆಯವರು. ಎಲ್ಲಿದ್ದಾರೆ.. ಎಲ್ಲಿದ್ದಾರೆ ಎಂದು ಹುಡುಕಲಾಗಿ ಕೈಪಡ್ಕ ಬಳಿ ಇವರು ಕಾಟಿ ಮಾಂಸ ಲೈನ್ ಸೇಲ್ ಮಾಡುವ ವಿಷಯ ಗೊತ್ತಾಗಿದೆ. ರಪಕ್ಕನೆ ಹೋಗಿ ಹಿಡಕ್ಕೊಂಡಿದ್ದಾರೆ. ಆಗ ಕಾರಿನಲ್ಲಿದ್ದದ್ದು ಕೇವಲ ಎಂಟು ಕಿಲೋ ಮಾಂಸ. ಉಳಿದದ್ದು ಸೇಲಾಗಿತ್ತು,ಬಾಕಿದ್ದು ಕಾಡುಪಂಜದ ಕಾಡಿನಲ್ಲಿ ರೆಡಿಯಾಗುತ್ತಿತ್ತು.

ಹಾಗೆ ಕಾಡುಪಂಜದ ಕಾಡಿನಲ್ಲಿ ಕಾಟಿ ಕೊಂದು ಅರಣ್ಯ ಇಲಾಖೆಯವರ ಮರದ ಕೈಗಳಿಗೆ ಸಿಕ್ಕಿ ಬಿದ್ದ ಇಬ್ಬರು ಪೊಡಿ ಜವನೆರನ್ನು ಅರಣ್ಯ ಇಲಾಖೆಯವರು ಪೊಡಿ ಮಾಡಿ ಬಾಯಿ ಬಿಡಿಸಿದ್ದಾರೆ. ಬೇಟೆಗಾರರ ಬೆಡಿಯನ್ನೂ ಸೀಜ್ ಮಾಡಿದ್ದಾರೆ. ಲೈನ್ ಸೇಲ್ ಮಾಡುತ್ತಿದ್ದ ಇಕೋ ಕಾರ್ ಕೂಡ ಸೀಜ್ ಮಾಡಲಾಗಿದೆ. ಹಾಗೆ ಲೈನ್ ಸೇಲ್ ಗೆ ಹೋದವರು ಒಳಗೆ ಬಿದ್ದಿದ್ದಾರೆ ಎಂದು ಗೊತ್ತಾಗುತ್ತಲೇ ಅತ್ತ ಕಾಡುಪಂಜದ ಕಾಡಿನಲ್ಲಿ ಮಾಂಸ ಸಜ್ಜಿ ಮಾಡುತ್ತಿದ್ದವರು ಕಾಟಿ ಪುಣ ಬಿಟ್ಟು ಪದ್ರಾಡ್ ಮಾಡಿದ್ದಾರೆ. ಮೂಲದ ಪ್ರಕಾರ ಇನ್ನೂ ಮೂರು ಬೇಟೆಗಾರರ ಅರೆಸ್ಟ್ ಆಗಬೇಕಿದ್ದು ಅರಣ್ಯ ಇಲಾಖೆ ಅವರಿಗೆ ಮುಂಚಿಯ ಪಜೆ ರೆಡಿ ಮಾಡಿ ಹುಡುಕುತ್ತಿದೆ ಎಂದು ತಿಳಿದುಬಂದಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top