ಮರ್ಧಾಳ ಕುಂಡಡ್ಕ ಫಾಲ್ಸ್ ನಲ್ಲಿ ಅನೈತಿಕ ಪೋಲಿಸರು!

Pattler News

Bureau Report

ಕಡಬ ತಾಲೂಕ ಮರ್ಧಾಳ ಸಮೀಪದ ಕುಂಡಡ್ಕ ಫಾಲ್ಸ್ ನಲ್ಲಿ ಹೈಸ್ಕೂಲ್ ಮಕ್ಕಳ ಮೇಲೆ ಅನೈತಿಕ ಪೋಲಿಸರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ ಕಡಬದ ಒರ್ಜಿನಲ್ ಪೋಲಿಸರಿಗೆ ವಿಷಯ ಹೋಗಿಲ್ಲ ಅಂತ ಅನ್ಸುತ್ತೆ. ವಿಷಯ ಗೊತ್ತಾದರೆ ಪೋಲಿಸರು ಹಲ್ಲೆ ನಡೆಸಿದ ಮರ್ಧಾಳದವರ ಪೀ ಮರ್ಧಾಳ ಮಾಡಿಯಾರು. ಸದ್ಯಕ್ಕೆ ಹಲ್ಲೆಕೋರರು ಸೇಫ್.

ಹಾಗೆಂದು ಮರ್ಧಾಳ ಸಮೀಪದ ಕುಂಡಡ್ಕ ಫಾಲ್ಸ್ ನಲ್ಲಿ ನಿರುದ್ಯೋಗಿ ಅನೈತಿಕ ಪೋಲಿಸರ ಉಪಟಳ ಇಂದು ನಿನ್ನೆಯದಲ್ಲ. ಇವರಿಗೆ ಫಾಲ್ಸ್ ಕಾಯೋದೇ ಕೆಲಸ. ಓ ಮೊನ್ನೆ ಕೂಡ ಮರ್ಧಾಳ ಹೈಸ್ಕೂಲಿನ ಒಬ್ಬಳು ಲೋಕಲ್ ಹುಡುಗಿ ಮತ್ತು ಮೂವರು ಬ್ಯಾಡ್ ಬಾಯ್ಸ್ ನೀರಾಟ ಆಡಲು ಫಾಲ್ಸ್ ಗೆ ಬಂದಿದ್ದಾರೆ. ಇದನ್ನು ಅನೈತಿಕ ಪೋಲಿಸರ ಮಾಹಿತಿದಾರ ಇರ್ಬಾಯಿ ನೋಡಿ ಮಾಹಿತಿ ರವಾನಿಸಿದ್ದಾನೆ. ಕೂಡಲೇ ಫಾಲ್ಸ್ ಗೆ ಧಾವಿಸಿ ಬಂದ ಅನೈತಿಕ ಪೋಲಿಸರ ಇನ್ಸ್ ಪೆಕ್ಟರ್ KK ಮತ್ತು ಹೆಡ್ ಕಾನ್ಸ್ ಟೇಬಲ್ ರೋಹಿ ಮಕ್ಕಳ ನೀರಾಟದ ವಿಡಿಯೋ ಮಾಡಿ ಹುಡುಗಿ ತಂದೆಗೆ ಸೆಂಡ್ ಮಾಡಿದ್ದಾರೆ. ವಿಡಿಯೋ ನೋಡಿ ಕೆಂಡಾಮಂಡಲ ಆದ ಹುಡುಗಿ ತಂದೆ ಅನೈತಿಕ ಪೋಲಿಸರ ಡಿಎಸ್ಪಿ ಉಮೇಸನಿಗೆ ವೀಡಿಯೋ ಕಳಿಸಿ ಕ್ರಮ ಕೈಗೊಳ್ಳಬೇಕು ಎಂದು ಬೊಬ್ಬೆ ಹಾಕಿದ್ದಾನೆ. ಕೂಡಲೇ ಫಾಲ್ಸ್ ಗೆ ಓಡೋಡಿ ಬಂದ ಡಿಎಸ್ಪಿ ಉಮೇಸೆ, ಇನ್ಸ್ ಪೆಕ್ಟರ್ KK ಮತ್ತು ಹೆಡ್ ಕಾನ್ಸ್ ಟೇಬಲ್ ರೋಹಿ ಸೇರಿಕ್ಕೊಂಡು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಹುಡುಗಿ ತಂದೆಯೂ ಈ ಹಲ್ಲೆಯಲ್ಲಿ ಸೇರಿಕೊಂಡಿದ್ದು ನಾಲ್ವರೂ ಮಕ್ಕಳಿಗೆ ತಾರಮಾರ ಹೊಡೆದು ಪೊಡಿ ಮಾಡಿ ಚಂಡಿ ಕುಂಟಿನಲ್ಲೇ ಓಡಿಸಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆಂದ ಈ ಹಲ್ಲೆ ಬಗ್ಗೆ ಕಡಬ ಪೋಲಿಸರಿಗೆ ವಿಷಯ ಹೋಗಿಲ್ಲ ಎಂದು ಭಾವಿಸಲಾಗಿದೆ. ವಿಷಯನ್ನು ಅಲ್ಲಿಂದಲ್ಲಿಗೆ ಅಲ್ಲೇ ಮುಗಿಸಲಾಗಿದೆ. ಇನ್ನು ಈ ಅನೈತಿಕ ಪೋಲಿಸರ ಆಟಾಟೋಪ ಮರ್ಧಾಳದಲ್ಲಿ ಮೇರೆ ಮೀರಿದ್ದು ಕಡಬ ಪೊಲೀಸರು ಒಂದು ಸರ್ತಿ ಇವರ ಬೆಂಡ್ ತೆಗೆದರೆ ಒಳ್ಳೆಯದಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ. ಅದರಲ್ಲೂ ಆ ಸ್ವಾಮಿಯಾನ ಉಮೇಸೆ ಕೋಳಿ ಕಟ್ಟಗಳ ಮಾಸ್ಟರ್ ಆಗಿದ್ದು ಆ ಭಾಗದ ಅಷ್ಟೂ ಕೋಳಿ ಕಟ್ಟಗಳ ಪ್ರೊಡ್ಯೂಸರ್ ಮತ್ತು ಡೈರೆಕ್ಟರ್ ಆಗಿದ್ದಾನೆ. ಕೆಲವು ದಿನಗಳ ಹಿಂದೆ ಇವನ ಕೋಳಿಕಟ್ಟಕ್ಕೆ ಧಾಳಿ ಕೂಡ ನಡೆದಿದ್ದು ಪೋಲಿಸರು ಜೀಪು ತುಂಬಾ ಫೈಟರ್ ಕೋಳಿಗಳಾದ ಪೆರಡಿಂಗೆ, ಮೈಪೆ,ಬೊಳ್ಳೆ ,ಕರ್ಬೊಳ್ಳೆ, ಕೆಮ್ಮೈರೆ,ಪಂಚೊಣಿ,ಗಿಡಿಯೇ, ಕೆಂಚಿ ಗಿಡಿಯೇ, ಶಾಸ್ತ್ರ ಬೊಳ್ಳೆ, ಉರಿಯೇ, ನೀಲಿ ಮೈಪೆ ಮುಂತಾ ಕೊ..ಕ್ಕೋಗಳ ಲೋಡ್ ತಂದಿದ್ದರು. ಇಂಥವನಿಂದ ಮಕ್ಕಳಿಗೆ ನೀತಿ ಪಾಠ. ಭೂತದ ಬಾಯಲ್ಲಿ ಭಗವದ್ಗೀತೆ ಅಂದರೆ ಇದೇ. ಇನ್ನು ನಮ್ಮ ಇನ್ಸ್ ಪೆಕ್ಟರ್ KK ಪೂರ್ಣಾವಧಿ ನಿರುದ್ಯೋಗಿ ಮತ್ತು ಅನೈತಿಕ ಪೋಲಿಸ್. ಇಡೀ ಮರ್ಧಾಳವನ್ನು ಭೂತ ಸೂಟೆ ಹಿಡ್ಕೊಂಡು ಕಾದ ಹಾಗೇ ಕಾಯೋದೇ ಕೆಲಸ. ಮತ್ತೆ ಆ ಬಲ್ಲೆ ಕ್ಲೀನರ್ ರೋಹಿ ಕೂಡ ಬಲ್ಲೆಯಲ್ಲಿ ಸಿಕ್ಕಿಬಿದ್ದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಕಡಬ ಪೊಲೀಸರು ಒಂದು ಘಳಿಗೆ ಈ ನಾಲ್ವರನ್ನು ಠಾಣೆಗೆ ಕರೆಸಿ “ವಿಚಾರಣೆ” ನಡೆಸಿದರೆ ಒಳ್ಳೆಯದಿತ್ತು. ಜಂಬೂ ರಾಜ್ ಮಹಾರಾಜರು ಗಮನಿಸ ಬೇಕು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top