ಕಲ್ಲುಗುಂಡಿಗೆ ಕೌ ಡಾಕ್ಟರ್ ಇಲ್ಲ!

Pattler News

Bureau Report

ಅಲ್ಲಿ ಸುಳ್ಯ ಸಂಪಾಜೆಯ ಕ್ಯಾಪಿಟಲ್ ಕಲ್ಲುಗುಂಡಿಗೆ ಮತ್ತು ಇಡೀ ಸುಳ್ಯ ಸಂಪಾಜೆಗೆ ಕೌ ಡಾಕ್ಟರ್ ಇಲ್ಲದ ಬಗ್ಗೆ ಮಾಹಿತಿ ಬಂದಿದೆ. ಸುಳ್ಯ ಸಂಪಾಜೆ ಅರಂತೋಡು ಕೌ ಡಾಕ್ಟರ್ ವ್ಯಾಪ್ತಿಯಲ್ಲಿ ಬರುತ್ತಿದ್ದು ಅರಂತೋಡಿಗೇ ಡಾಕ್ಟರ್ ಇಲ್ಲದೆ ತುಂಬಾ ದಿನಗಳಾಗಿವೆ ಎಂದು ತಿಳಿದುಬಂದಿದೆ.

ಅಲ್ಲಿ ಸುಳ್ಯ ಸಂಪಾಜೆ ಕೂಡ ದೊಡ್ಡ ಗ್ರಾಮ. ಇಲ್ಲಿ ಹೈನುಗಾರಿಕೆಯೂ ದೊಡ್ಡ ಮಟ್ಟದಲ್ಲಿ ಇದೆ. ಆದರೆ ಸಂಪಾಜೆ ಜನರಿಗೆ ಪಶು ವೈದ್ಯಕೀಯ ಕೇಂದ್ರದ ಅಗತ್ಯ ಬಿದ್ದರೆ ಅವರು ಒಂದೋ ಅರಂತೋಡಿಗೆ ಬರಬೇಕು, ಇಲ್ಲದಿದ್ದರೆ ಕೊಡಗು ಸಂಪಾಜೆಗೆ ಹೋಗಬೇಕು. ಅಲ್ಲಿ ಅರಂತೋಡು ಪಶುವೈದ್ಯಕೀಯ ಕೇಂದ್ರದಲ್ಲಿ ಸದ್ಯಕ್ಕೆ ಕೌ ಡಾಕ್ಟರ್ ಇಲ್ಲ. ಹಾಗಾಗಿ ಸುಳ್ಯ ಸಂಪಾಜೆಯಲ್ಲಿ ನಾಲ್ಕು ಕಾಲಿನ ಯಾವುದೇ ಪ್ರಾಣಿಗೆ ಏನೇ ಮಂಡೆಸೀಕ್ ಬಂದರೂ ಧುತ್ತೆಂದು ಪೆನಾಲ್ಟಿ ಶೂಟೌಟ್ ಹೊಡೆಯಲು ಬರುವುದು ರೊನಾಲ್ಡೀನೊ ಎಂಬ ಪೊಕ್ಕಡೆ ಡಾಕ್ಟರ್‌. ಪಸುಮಿತ್ರನೂ ಆಗಿರುವ ಸನ್ಮಾನ್ಯರು ಕೃತಕ ಗರ್ಭಧಾರಣೆ ವಿಭಾಗದಲ್ಲಿ ಅದೇನೋ ಐದು ದಿನಗಳ ಅಂಡಿಗುಂಡಿ ಕೋರ್ಸ್ ಮಾಡಿರುವ ರೊನಾಲ್ಡೀನೊ ಈಗ ಸದ್ಯಕ್ಕೆ ಫುಲ್ ಟೈಂ ಕೌ ಡಾಕ್ಟರ್. ಕೌ ಗಳಿಗೆ ಅದೇನು ದೂಜಿ ಕೊಡುತ್ತಾರೋ ದೇವರಿಗೇ ಗೊತ್ತು. ಒಂದು ಕೂಡ ಪಾಸ್ ಆಗುತ್ತಿಲ್ಲ ಎಂದು ಮಾಹಿತಿ ಇದೆ.

ಹಾಗೆಂದು ಈ ಬುಡೇಲ್ ಕೌ ಡಾಕ್ಟ್ರಿಗೆ ಇಂತಿಷ್ಟೇ ಫೀಸು ಎಂದಿಲ್ಲ. “ಕೊರ್ನವು” ಅಷ್ಟೇ. ಆದರೆ ಪರಿಣಾಮವೂ ಏನಿಲ್ಲ. ಓ ಮೊನ್ನೆ ಕಲ್ಲುಗುಂಡಿಯಲ್ಲಿ ರೇರ್ ಬ್ರೀಡ್ ಲ್ಯಾಬ್ ಡಾಗಿಗೆ ಏನೋ ಹುಷಾರಿಲ್ಲದಿತ್ತು. ಡಾಗ್ ತುಂಬು ಗರ್ಭಿಣಿ ಸಹ. ಈ ಬಗ್ಗೆ ಕೌ ಡಾಕ್ಟರ್ ರೋನಾಲ್ಡಿನೋಗೆ ಹೇಳಲಾಗಿದೆ. ಕೂಡಲೇ ಧಾವಿಸಿ ಬಂದ ಡಾಕ್ಟರ್ ರೊನಾಲ್ಡೀನೋ ಡಾಗಿಗೆ ಇಂಜೆಕ್ಷನ್ ಚುಚ್ಚಿದ್ದಾರೆ. ಡಾಗ್ ಪಡ್ಚ. ಜೊತೆಗೆ ಕಿನ್ನಿಗಳೂ ಹೊಟ್ಟೆಯಲ್ಲೇ ಪಡ್ಚ. ಇದರಿಂದ ರೊಚ್ಚಿಗೆದ್ದ ಜನ ಡಾಕ್ಟರ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೇವಲ ಐದು ದಿನಗಳ ಒಂದು ಪೊಟ್ಟು ಕೋರ್ಸ್ ಮಾಡಿರುವ ಈ ಕೌ ಡಾಕ್ಟರ್ ಇನ್ನು ಡಾಗಿಗೆ ಕೌ ಇಂಜೆಕ್ಷನ್, ಕೌವ್ವಿಗೆ ಡಾಗ್ ಇಂಜೆಕ್ಷನ್ ಕೊಟ್ಟು ಡಾಗ್ ಹೊಟ್ಟೆಯಲ್ಲಿ ಅಂಬಾ.. ಮತ್ತು ಕೌ ಹೊಟ್ಟೆಯಲ್ಲಿ ಬೌ..ಬೌ.. ಜನ್ಮ ತಾಳುವ ಮುನ್ನ ಇವರ ಕೈಯಿಂದ ಇಂಜೆಕ್ಷನ್ ಸಿರಿಂಜ್ ಎಳ್ದು ತೆಗೆದು ಅರಂತೋಡು ಪಶುವೈದ್ಯಕೀಯ ಕೇಂದ್ರಕ್ಕೆ ಬೀಗ ಹಾಕೋದು ಒಳ್ಳೇದು. ಇಲ್ಲದಿದ್ದರೆ ಒಂಜೆಕ್ ಒಂಜರೆ ಆಗುವ ಅಪಾಯಗಳಿವೆ.

P ಪಂಜಿ

ಇನ್ನು ಅಲ್ಲಿ ಕಲ್ಲುಗುಂಡಿಯಲ್ಲಿ ಪೋರ್ಕ್ ಮಾಂಸದ ರಿಡಕ್ಷನ್ ಸೇಲ್ ಇದೆ. ಇಲ್ಲಿ ಕೆ.ಜಿ ಒಂದಕ್ಕೆ ಇನ್ನೂರು ಮಾತ್ರ. ಆದರೆ ಈ ಮಾಂಸ ಘಟ್ಟದ ಹಂದಿದ್ದು. ಘಟ್ಟದಲ್ಲಿ ಹೇಗೆ ಅಂದರೆ ಕೆಲವು ನಗರ ಪಂಚಾಯಿತಿಗಳು, ಪಟ್ಟಣ ಪಂಚಾಯಿತಿಗಳೇ ನಗರವನ್ನು P ಫ್ರೀ ಮಾಡಲು ಹಂದಿ ಮರಿಗಳನ್ನು ನಗರದೊಳಗೆ ಆಲ್ ಇಂಡಿಯಾ ಪರ್ಮಿಟ್ ಕೊಟ್ಟು ಬಿಟ್ಟು ಬಿಡುತ್ತದೆ. ಹಾಗೆ ಹಂದಿ ಮರಿಗಳು ನಗರ ತುಂಬಾ ಓಡಾಡಿ ಅನಾಗರಿಕರ P ತಿಂದು ತಿಂದು ನಗರವನ್ನು P ಫ್ರೀ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಡೆಗೆ ಒಂದು ದಿನ ನಗರ ಪಂಚಾಯಿತಿಗಳೇ ಟೆಂಡರ್ ಕರೆದು ಅವುಗಳನ್ನು ಸೇಲ್ ಮಾಡಿ ಬಿಡುತ್ತದೆ. ಅಂಥ ಹಂದಿಗಳಿಗೆ ಇಲ್ಲದ ಸೀಕುಗಳು ಇದ್ದು ಇದೀಗ ಆಫ್ರಿಕನ್ ಫಿವರ್ ಕೂಡ ಶುರುವಾಗಿದೆ. ಈ ಆಫ್ರಿಕನ್ ಫಿವರ್ ಲಕ್ಷಣ ಏನೆಂದರೆ ಅದು ಸೋಂಕಾದ ಯಾವುದೇ ಹಂದಿ ಒಂದು ವಾರ ತನಕ ನೆಟ್ಟಗೆ ಸ್ಟ್ಯಾಂಡಿಂಗ್ ಇದ್ದು ವಾರದ ಮರುದಿನ ಪಡ್ಚ. ಹಾಗೆ ಆಫ್ರಿಕನ್ ಫಿವರ್ ಇದ್ದ, ನಗರಗಳನ್ನು P ಫ್ರೀ ಮಾಡಿದ, ಕುರ್ತೆಲ್ ಹಂದಿಗಳ ಮಾಂಸವನ್ನು ಘಟ್ಟದ ಕೆಳಗೆ ತಂದು ಕೆ.ಜಿಗೆ ಇನ್ನೂರಕ್ಕೆ ಮಾರಲಾಗುತ್ತಿದೆ. ಜೊತೆಗೆ ಆಫ್ರಿಕನ್ ಫಿವರ್, ಡೆನ್ಮಾರ್ಕ್ ಕೆಮ್ಮು, ಚೈನೀಸ್ ನೆಗಡಿ, ಅಮೇರಿಕನ್ ಗ್ಯಾಸ್ಟ್ರಿಕ್ ಕೂಡ ಫ್ರೀಯಾಗಿ ಹಂಚಲಾಗುತ್ತಿದೆ. ಹಾಗೆಂದು ಹಂದಿಗಳಲ್ಲಿ ಮೂರು ವಿಧ. 1) P ಪಂಜಿ 2) ಗೂಡು ಪಂಜಿ 3) ಕಾಡು ಪಂಜಿ. ಇಲ್ಲಿ P ಪಂಜಿಗೆ ಕೆ.ಜಿಗೆ ಇನ್ನೂರು, ಗೂಡು ಪಂಜಿಗೆ ಕೆ.ಜಿಗೆ ಮುನ್ನೂರೈವತ್ತು ಮತ್ತು ಕಾಡು ಪಂಜಿಗೆ ಕೆ.ಜಿಗೆ ಡಿಮ್ಯಾಂಡ್ ಮೇಲೆ ಏಳ್ನೂರು ದಾಟಿಯೂ ಹೋಗುತ್ತದೆ. ಹಾಗೆ ಕಲ್ಲುಗುಂಡಿಯಲ್ಲಿ ಈ Pಪಂಜಿ ವಹಿವಾಟು ಜೋರಾಗಿದ್ದು ಜನ ಕಡಿಮೆಗೆ ಸಿಗುತ್ತದೆ ಎಂದು ಜಾಸ್ತಿ ಜಾಸ್ತಿ ತಿನ್ನುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇದು ಆರೋಗ್ಯಕ್ಕೆ ಹಾನಿಕರ. ಗೂಡಿನ ಪಂಜಿ ಆರೋಗ್ಯಕ್ಕೆ ಒಳ್ಳೆಯದು. ಇನ್ನು ರೇಂಜೆರ್, ಫಾರೆಸ್ಟರ್ ಸಿಗದಿದ್ದರೆ ಕಾಡು ಪಂಜಿಯೂ ಆರೋಗ್ಯಕ್ಕೆ ಅತ್ಯುತ್ತಮ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top