ಸುಬ್ರಹ್ಮಣ್ಯದಲ್ಲಿ ಅಪಘಾತದ ಪ್ರಸಾದ!

Pattler News

Bureau Report

ಸುಬ್ರಹ್ಮಣ್ಯದಲ್ಲಿ ಪ್ರಾಬ್ಲಂಗಳು ಕಿನ್ನಿ ಇಡುತ್ತಾ ಹೋಗುತ್ತಿದ್ದು ಇದೀಗ ಅಪಘಾತಗಳ ಪ್ರಸಾದ ವಿತರಣೆ ಆಗುವ ಅಪಾಯಗಳಿವೆ. ಅಲ್ಲಿ ಸುಬ್ರಹ್ಮಣ್ಯ ಪೇಟೆಯ ಬಿಲದ್ದಾರದ ಜಂಕ್ಷನ್ ಬಳಿ ಕಳೆದ ಆರು ತಿಂಗಳ ಹಿಂದೆಯೇ ಪೊಯ್ಯೆ ಬಂದು ಮಾರ್ಗಕ್ಕೆ ಬಿದ್ದಿತ್ತು. ನಮ್ಮ ಮಾಹಿತಿದಾರ ಈ ಸಮಸ್ಯೆ ಬಗ್ಗೆ ಫೋಟೋ ತೆಗೆದು ಸಂಬಂಧ ಪಟ್ಟ ಕುರುಡರಿಗೆ ಮತ್ತು ಪೊಟ್ಟರಿಗೆ ತಿಳಿಯುವಂತೆ ವರದಿ ಮಾಡಿ ಅಂದಿದ್ದ‌. ಸಿಲ್ಲಿ ನ್ಯೂಸ್ ಅಂತ ನಾನೂ ಬದಿಗೆ ಇಟ್ಟಿದ್ದೆ. ಇವತ್ತು ಬೆಳಿಗ್ಗೆ ಅದೇ ಸ್ಪಾಟಲ್ಲಿ ಒಂದು ಅಪಘಾತ ನಡೆದಿದೆ. ಆ ಸ್ಪಾಟಿಗೆ ಅಪ್ಪ ಯಾರಾದರೂ ಇದ್ದರೆ ಈ ಕೂಡಲೇ ಮಾರ್ಗಕ್ಕೆ ಬಿದ್ದ ಪೊಯ್ಯೆ ತೆಗೆಸಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲದಿದ್ದರೆ ಇನ್ನೂ ಇನ್ನೂ ಇಲ್ಲಿ ಅಪಘಾತಗಳು ನಡೆಯುವ ಅಪಾಯಗಳಿವೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top