ಅಪ್ರಾಪ್ತ ಹುಡುಗಿಯ ಜೊತೆ ಮುಕ್ತರಾಕ. ಕಾಪಿನಬಾಗಿಲಿನಲ್ಲಿ ಪೆಟ್ಟಿನ ಬರ್ಸ!

Pattler News

Bureau Report

ಕೊಕ್ಕಡ ಬಳಿಯ ಕಾಪಿನ ಬಾಗಿಲು ಜಂಕ್ಷನ್ ನಲ್ಲಿ ಅಪರಾತ್ರಿಯಲ್ಲಿ ಅಪ್ರಾಪ್ತ ಹುಡುಗಿಯ ಜೊತೆ ಘಟ್ಟ ಹತ್ತಲು ಪ್ರಯಾಣಿಸುತ್ತಿದ್ದ ಕಾಕಮಾರ್ ಒಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಡಿ ಮಾಡಿ ಬೆಂಡ್ ತೆಗೆಯಲು ಉಪ್ಪಿನಂಗಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಸಾಹೇಬ್ರು ಪರಿಚಯಸ್ಥ ಹುಡುಗಿ ಅಂತ ಪೋಲಿಸರ ಮುಂದೆ ರೈಲು ಬಿಟ್ಟಿದ್ದಾರೆ. ಇತ್ತ ಹುಡುಗಿ ತಾಯಿ ಬಂದು ಬಲಾತ್ಕಾರವಾಗಿ ಮಗಳನ್ನು ಹೊತ್ತುಕ್ಕೊಂಡು ಹೋಗಿದ್ದಾನೆ ಅಂತ ಕಂಪ್ಲೈಂಟ್ ಕೊಟ್ಟಿದ್ದಾಳೆ.

ಕಾರ್ಕಳ ಸಮೀಪದ ಈದು ಭಾಗದಿಂದ ಅಪ್ರಾಪ್ತ ಹುಡುಗಿಯೊಬ್ಬಳನ್ನು ಹೊತ್ಕೊಂಡು ಈದು ಮುಕ್ತರಾಕ ಎಂಬವನು ಕೊಕ್ಕಡ ಮಾರ್ಗವಾಗಿ ಬರುತ್ತಿದ್ದಾನೆ, ಮುಂದೆ ಹುಡುಗಿ ಜೊತೆ ಘಟ್ಟ ಹತ್ತುವವನಿದ್ದಾನೆ ಎಂಬ ಮೆಸೇಜ್ ನೈಟ್ ಕಾಪಿನಬಾಗಿಲಿಗೆ ಸಾಹೇಬ್ರ ಕಾರಿಗಿಂತ ಮುಂಚೆ ಬಂದು ಮುಟ್ಟಿದೆ. ಹಾಗೆ ಕಾಪಿನ ಬಾಗಿಲಿನ ಪ್ರಜ್ಞಾವಂತ ನಾಗರೀಕರು ಕಕ್ಕೆಗಳ ಹಾಗೆ ಸೇರಿ ಬಿಸಿನೀರು ಕಾಯಿಸಿ ಸಾಹೇಬ್ರ ಆಗಮನಕ್ಕೆ ಕಾದು ಕುಂತಿದ್ದಾರೆ. ಸರಿಯಾಗಿ, ಕರೆಕ್ಟ್ ಟೈಮಿಗೆ ಸಾಹೇಬ್ರ ಕಾರು ಕಾಪಿನಬಾಗಿಲು ಮುಟ್ಟಿದೆ. “ಉಂತಡ್… ಉಂತಡ್… ಓಡೆಗ್ ಪೋಪಿನ ಭಂಡಾರ “? ಎಂದು ಸಾರ್ವಜನಿಕರು ಕಾರು ನಿಲ್ಲಿಸಿ ಸಾಹೇಬ್ರನ್ನು ಇಳಿಸಿಕೊಂಡಿದ್ದಾರೆ. ಕಾರಿಳಿದ ಸಾಹೇಬ್ರು ಹಾಸನ, ಸಕಲೇಶ್ಪುರ ಅಂತ ಬ್ಬೆ….ಬ್ಬೆ… ಆಗಿದ್ದಾರೆ ಅಷ್ಟೇ. ಸಮಾ…. ಬಿದ್ದಿದೆ. ಕೂಡಲೇ ಉಪ್ಪಿನಂಗಡಿ ಪೋಲಿಸರಿಗೂ ಮಾಹಿತಿ ಕೊಟ್ಟಿದ್ದು ಪೋಲಿಸರು ಬರುವ ಮುಂಚೆಯೇ ಸಾರ್ವಜನಿಕರು ಸಾಹೇಬ್ರ ಏಳೇಳು ಜನ್ಮದ ಶನಿ ಬಿಡಿಸಿ ಅಲ್ಲೇ ಕಾಪಿನ ಬಾಗಿಲು ತೋಡಿನಲ್ಲಿ ವಿಸರ್ಜನೆ ಮಾಡಿದ್ದಾರೆ. ನಂತರ ಸಾಹೇಬ್ರ ಬೆನ್ನು ಉಪ್ಪಿನಂಗಡಿ ಪೋಲಿಸರು ತಗೊಂಡಿದ್ದಾರೆ.

ಹಾಗೆ ಕಾಪಿನಬಾಗಿಲಿನಲ್ಲಿ ಅಪ್ರಾಪ್ತ ಹುಡುಗಿಯ ಜೊತೆ ನೈಟ್ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಸಾಹೇಬ್ರನ್ನು ಉಪ್ಪಿನಂಗಡಿ ಪೋಲಿಸರು ಠಾಣೆಗೆ ಹೊತ್ತುಕ್ಕೊಂಡು ಬಂದಿದ್ದು ನಂತರದ ಬೆಳವಣಿಗೆಯಲ್ಲಿ ಒಂದೈದು ಸಾರ್ವಜನಿಕರ ಮೇಲೆ ಸಾಹೇಬ್ರು ಹಲ್ಲೆ ಕೇಸ್ ಕೊಟ್ಟಿದ್ದರು. ಈದು ಗ್ರಾಮದ ಸಾಹೇಬ್ರು ಅಷ್ಟು ಸಲೀಸಾಗಿ ಕೊಕ್ಕಡ ಗ್ರಾಮದ ಕಾಪಿನಬಾಗಿಲು ಬಳಿ ತಮ್ಮ ಮೇಲೆ ಹಲ್ಲೆ ನಡೆಸಿದವರ ಹೆಸರು ಹೇಳಿ ಕಂಪ್ಲೈಂಟ್ ಕೊಡುತ್ತಾರೆಂದರೆ ಅವರ ನೆಟ್ವರ್ಕ್ ಮೆಚ್ಚುವಂತದ್ದೇ. ಅತ್ತ ಕಡೆ ನೈಟ್ ಮನೆಯಲ್ಲಿ ಅಪ್ರಾಪ್ತ ಮಗಳು ಕಾಣಿಸುತ್ತಿಲ್ಲ ಎಂದು ಗಾಢವಾಗಿ ನಿದ್ರಿಸುತ್ತಿದ್ದ ತಾಯಿ ಒಮ್ಮೆಗೇ ಎಚ್ಚರವಾಗಿ ಅವರು ಸೀದಾ ಬಂದು ಉಪ್ಪಿನಂಗಡಿ ಪೋಲಿಸರಿಗೆ ನನ್ನ ಮಗಳನ್ನು ಬಲಾತ್ಕಾರವಾಗಿ ಸಾಹೇಬ್ರು ಅಪಹರಣ ಮಾಡಿದ್ದಾರೆ ಎಂದು ಕಂಪ್ಲೈಂಟ್ ಕೊಟ್ಟಿದ್ದೂ ಕೂಡ ಕಲಿಯುಗದ ಸೋಜಿಗವೇ. ಸಾಹೇಬ್ರೇ ತನ್ನ ಮಗಳನ್ನು ಅಪಹರಿಸಿದ್ದು, ಅದಕ್ಕೆ ಉಪ್ಪಿನಂಗಡಿ ಠಾಣೆಗೇ ಬಂದು ಕಂಪ್ಲೈಂಟ್ ಕೊಡಬೇಕು ಎಂಬ ಅವರ ದಿವ್ಯ ದೃಷ್ಟಿ ಕೂಡ ಕಲಿಯುಗದ ಸೋಜಿಗವೇ. ಇದೀಗ ಉಪ್ಪಿನಂಗಡಿ ಪೋಲಿಸರು ಕಾಪಿನ ಬಾಗಿಲು ಸಾರ್ವಜನಿಕರ ಮೇಲೆ BNS 106/2026 ಕೇಸ್ ಮತ್ತು ಸಾಹೇಬ್ರ ಮೇಲೆ BNS zero fir 03/2026 ಮತ್ತು ಇನ್ನೊಂದು BNS 137/2026 ಹಾಕಿ ಕೈಕಾಲು ತೊಳೆದುಕೊಂಡಿದ್ದಾರೆ.

ಇಷ್ಟಕ್ಕೂ ಈದು ಸಾಹೇಬ್ರು ಅಪರಾತ್ರಿಯಲ್ಲಿ ಅಪ್ರಾಪ್ತ ಹುಡುಗಿಯನ್ನು ಹೊತ್ಕೊಂಡು ಎಲ್ಲಿಗೆ ಹೊರಟಿದ್ದರು ಎಂಬ ಬಗ್ಗೆ ಉಪ್ಪಿನಂಗಡಿ ಪೋಲಿಸರು ಸಾಹೇಬ್ರನ್ನು ಎಕ್ಸ್ ಟ್ರಾ ಬೆಂಡ್ ತೆಗೆಯಲೇ ಬೇಕು. ಹುಡುಗಿ ಸಾಹೇಬ್ರ ಹೆಂಡ್ತಿ ಅಲ್ಲ,ಮಗಳಲ್ಲ, ಅಕ್ಕ ತಂಗಿಯೂ ಅಲ್ಲ. ಮರಿಮ್ಮೊಳು, ಮೈತಿದಿ ಕೂಡ ಅಲ್ಲ. ಕುಟುಂಬದ ಹುಡುಗಿ ಅಲ್ಲ, ಜಾತಿಯ ಹುಡುಗಿ ಅಲ್ಲ, ಧರ್ಮದ ಹುಡುಗಿಯೂ ಅಲ್ಲ. ಮೇಲಾಗಿ ಹುಡುಗಿ ಎಂಟನೇ ಕ್ಲಾಸ್ ಬೇರೆ. ಸಾಹೇಬ್ರಿಗೆ ನಾಡಿದ್ದು ಸೋಣಕ್ಕೆ ಐವತ್ತು ಕೂಡ ತುಂಬಲಿದೆ. ಹಾಗಾದರೆ ಇವರಿಬ್ಬರೇ ನೈಟ್ ಎಲ್ಲಿಗೆ ಹೊರಟಿದ್ದು? ಎಲ್ಲಿಗೆ? ಪೋಲಿಸರು ತನಿಖೆ ಮಾಡಲೇ ಬೇಕಾದ ಕೇಸ್ ಇದು. ಸಾಹೇಬ್ರಿಗೆ ಏನಾದರೂ ಮಾನವ ಕಳ್ಳಸಾಗಣೆ ಲಿಂಕ್ ಉಂಟಾ? ವೇಶ್ಯಾವಾಟಿಕೆ ವಹಿವಾಟು ಉಂಟಾ? ಸಾಹೇಬ್ರು ಮದುವೆ ಆಗುವ ಎಸ್ಟಿಮೇಟ್ ಏನಾದರೂ ಇತ್ತಾ? ಪೋಲಿಸರು ವಿಚಾರಿಸ ಬೇಕು. ಇನ್ನು ಅಪ್ರಾಪ್ತ ಹುಡುಗಿಯ ಮನೆಯವರನ್ನು ಕೂಡ ಒಂದು ರೌಂಡು ಪೋಲಿಸರು ಜಬರ್ದಸ್ತ್ ಮಾಡಬೇಕು. ಹುಟ್ಟಿಸಿದ ಕರ್ಮಕ್ಕೆ ಮಗಳನ್ನು ಮಾರುವುದಲ್ಲ ಬದಲಾಗಿ ಮದುವೆ ಮಾಡಬೇಕು ಎಂಬ ಬೆಚ್ಚ ಮುಟ್ಟಿಸಬೇಕು. ಇಲ್ಲದಿದ್ದರೆ ಇಂಥ ಕೇಸುಗಳು ದಿನಾ ಪೋಲಿಸರಿಗೆ ಬರುತ್ತಲೇ ಇರುತ್ತವೆ. ಕೊನೆಗೊಂದು ದಿನ ಅವರೂ ಆಕಳಿಸಿ ಬಿಡುತ್ತಾರೆ. ಅವತ್ತು ಕಸಾಯಿಗಳು ವಿಜೃಂಭಿಸಿ ಬಿಡುತ್ತಾರೆ ಮತ್ತು ಮನೆಗೆ ನುಗ್ಗಿ ಬಲಾತ್ಕಾರವಾಗಿ ಹೊತ್ತೊಯ್ಯುತ್ತಾರೆ. ಥೇಟ್ ದನ ಕೊಂಡು ಹೋದ ಹಾಗೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top