ಬೆಳ್ತಂಗಡಿ ಪೊಯ್ಯೆ ಅಡ್ಡೆಗೆ ಪೋಲಿಸ್ ಧಾಳಿ?

Pattler News

Bureau Report

ಅಲ್ಲಿ ಬೆಳ್ತಂಗಡಿ ತಾಲೂಕ ಇಂದಬೆಟ್ಟು ಕಡಿರುದ್ಯಾವರ ಗ್ರಾಮದ ಸುಧೆ ಬದಿಯ ಪೊಯ್ಯೆ ಅಡ್ಡೆಗೆ ಬೆಳ್ತಂಗಡಿ ಪೋಲಿಸರು ನಸುಕಿನ ಜಾವ ರೈಡ್ ಬಿದ್ದಿದ್ದಾರೆಂದು ತಿಳಿದುಬಂದಿದೆ. ಬಹಳ ದಿನಗಳಿಂದ ವೈವಾಟ್ ನಡೆಯುತ್ತಿತ್ತು ಎಂದು ಮಾಹಿತಿ.

ಹಾಗೆಂದು ಬೆಳ್ತಂಗಡಿಯಲ್ಲಿ ಕೂಡ ಅಕ್ರಮವಾಗಿ ಪೊಯ್ಯೆ ತೆಗೆಯುವ ದೊಡ್ಡ ದೊಡ್ಡ ಪೊಯ್ಯೆ ರೆಡ್ಡಿಗಳ ಗ್ಯಾಂಗೇ ಇದೆ. ಅಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು – ಕಡಿರುದ್ಯಾವರ ಗ್ರಾಮದ ಬೆಳ್ಳೂರು ಬೈಲ್ ಸಂಕದ ಬದಿಯಲ್ಲಿಯೇ ಕಂಬಳ ನಡೆಯುವ ಜಾಗದಲ್ಲಿ ಬಹಳ ದಿನಗಳಿಂದ ಕೆಲವು ಕಾಂಗ್ರೆಸ್ ಪೊಯ್ಯೆ ರೆಡ್ಡಿಗಳು ಅಕ್ರಮವಾಗಿ ಪೊಯ್ಯೆ ತೆಗೆಯುವ ಕೆಲಸ ಮಾಡುತ್ತಿದ್ದರು. ಇವರಿಗೆ ಆಡಳಿತ ಪಕ್ಷದ ಗುರಾಣಿ ಮತ್ತು ಬೆಳ್ತಂಗಡಿಯ ಯುವ ಕಾಂಗ್ರೆಸ್ ನಾಯಕನ ಅಭಯ ಹಸ್ತ ಇತ್ತು ಎಂದು ಮಾಹಿತಿ ಇದೆ. ಆದರೆ ಈ ಮಾ‌ಹಿತಿ ಬೆಳ್ತಂಗಡಿ ಪೋಲಿಸರಿಗೂ ಇದ್ದು ಅವರು ಕರೆಕ್ಟ್ ರಾಹುಕಾಲಕ್ಕೆ ಕಾಯುತ್ತಿದ್ದರು. ಆದರೆ ಜಾಣ ರೆಡ್ಡಿಗಳು ಪೋಲಿಸರನ್ನು ಪದೇ ಪದೇ ಕೋಣ ಮಾಡಿ ಪೊಯ್ಯೆ ಸಾಗಿಸುತ್ತಿದ್ದರು. ಯಾವಾಗ, ಎತ್ತ ಅಂತ ಪೋಲಿಸರಿಗೆ ಅರ್ಥವೇ ಆಗುತ್ತಿರಲಿಲ್ಲ. ಆದರೆ ನಿನ್ನೆ ಕರೆಕ್ಟ್ ಮಾಹಿತಿ ಬಂದಿದೆ. ಕಡಿರುದ್ಯಾವರ ಗ್ರಾಮದ ಬೆಳ್ಳೂರು ಬೈಲಿನ ಸಂಕದ ಅಡಿಯಲ್ಲಿ ನೈಟ್ ಪೋಲಿಸರು ಮಲಗಿದ ಮೇಲೆ ಪೊಯ್ಯೆ ತೆಗೆಯಲಾಗುತ್ತಿದೆ ಎಂಬ ಪಕ್ಕಾ ಮಾಹಿತಿ. ನಸುಕಿನ ಜಾವ ಎರಡು ಗಂಟೆಗೆ ಪೊಯ್ಯೆ ಕದಿಯಲು ಶುರು, ನಂತರ ಲೋಡಿಂಗ್, ಕರೆಕ್ಟ್ ಐದು ಗಂಟೆಗೆ ಪೋಲಿಸರ ಸಿಹಿ ನಿದ್ದೆಯ ನಡುವಿನಲ್ಲಿ ಮಾರ್ಕೆಟಿಂಗ್ ಎಂದು ಮಾಹಿತಿ ಬಂದಿತ್ತು. ಬೆಳ್ತಂಗಡಿ ಪೋಲಿಸರು ಬಿಡುತ್ತಾರಾ? ನಿನ್ನೆ ಒಂದು ಜಾಗರಣೆ ಮಾಡುವುದು ಅಂತ ಡಿಸೈಡ್ ಮಾಡಿ ಬಿಟ್ಟರು. ಹಾಗೆ ಕಣ್ಣಿಗೆ ಎಣ್ಣೆ ತಿಕ್ಕಿ ಬೆಳ್ಳೂರು ಬೈಲಿನ ಸಂಕದ ಅಡಿಯಲ್ಲಿ ಕೊಕ್ಕರ ಕುಂತು ಬಿಟ್ಟರು. ರಾವು ಗುಳಿಗ್ಗನ ವಿಸಿಲ್, ಮೋಹಿನಿ ಕಾಟ, ಜಲಕನ್ಯೆಗಳ ಓಡಾಟ ಯಾವುದನ್ನೂ ಕ್ಯಾರೇ ಮಾಡದೆ ಪೋಲಿಸರು ಉಮಿಲ್ ಕಚ್ಚಿಸಿಕೊಂಡು ಕಾದು ಕುಂತರು.

ಹಾಗೆ ಸರಿಯಾಗಿ ಎರಡು ಗಂಟೆ ನಸಕಿನ ಜಾವ ಪೊಯ್ಯೆ ಕಳ್ಳರು ಸಂಕದ ಅಡಿಗೆ ಬಂದಿದ್ದಾರೆ. ಮೂರು ಗಾಡಿ ಸಹ. ಪೋಲಿಸರು ಗಬಕ್ಕನೆ ಹೋಗಿ ಹಿಡಕ್ಕೊಂಡಿದ್ದಾರೆ ಎಂದು ಸುದ್ದಿ. ಮುಂದೆ ಏನು ಮಾಡುತ್ತಾರೆ ಎಂದು ಕರೆಕ್ಟ್ ಗೊತ್ತಿಲ್ಲ. ರೈಡಲ್ಲಿ ಪಂಪಾಪತಿ ಸರ್ ಇದ್ದರು ಎಂದು ಸುದ್ದಿ ಇದೆ. ಆದರೆ ಪೊಯ್ಯೆ ರೆಡ್ಡಿಗಳು ಕಾಂಗ್ರೆಸಿಗರು ಆಗಿರುವುದರಿಂದ ಒಂದು ಚಿಲ್ಲರೆ ಪಿಟ್ಟಿ ಕೇಸ್ ಆಗುವ ಅಪಾಯಗಳಿವೆ. ಪೊಯ್ಯೆ ರೆಡ್ಡಿ B.H ಅಡ್ಡೆಯಾ ಅದು?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top