
18.08.2026 ಬೆಳಿಗ್ಗೆನ ಜಾವ ಬೆಳ್ಳೂರು ಬೈಲು ಸೇತುವೆ ಬಳಿ ಹಲವು ದಿನಗಳಿಂದ ರಾತ್ರಿ ಹೊತ್ತು ನಡೆಯುತ್ತಿದ್ದ ಅಕ್ರಮ ಪೊಯ್ಯೆ ಅಡ್ಡೆಗೆ ಪೊಲೀಸ್ ದಾಳಿ ನಡೆಸಿದ್ದು 3 ಟಿಪ್ಪರ್ ವಾಹನ ಸಹಿತವಾಗಿ ಮರಳನ್ನು ವಶಕ್ಕೆ ಪಡೆಯಲಾಗಿದೆ, ಅಕ್ರಮ ಪೊಯ್ಯೆ ತೆಗೆಯುತ್ತಿದ್ದ ವ್ಯಕ್ತಿಗಳು ದಾರಿ ಕಾಣದೆ ಕರ್ಗತ್ತಲಲ್ಲಿ ಎಲ್ಲೆಂದರಲ್ಲಿ ಪದ್ರಡ್ ಆಗಿದ್ದಾರೆ. ವಾಹನ ಸಂಖ್ಯೆ KA 18 B 1236
KA 21 B 3670
KA 19 AA 2826 ವಾಹನಗಳನ್ನು ಮರಳು ಸಹಿತ ವಶಪಡಿಸಿಕೊಂಡಿದ್ದಾರೆ. ಎರಡು ವಾಹನ ಬಂಟ್ವಾಳ ಹಾಗೂ ಒಂದು ವಾಹನ ಪುದುವೆಟ್ಟು ಪೊಯ್ಯೆ ರೆಡ್ಡಿಗೆ ಸಂಬಂಧಿಸಿದ್ದು. ಇನ್ನು ಈ ಅಕ್ರಮ ಪೊಯ್ಯೆ ತೆಗೆಯುತ್ತಿದ್ದ ವ್ಯಕ್ತಿಗಳು ಇಂದಬೆಟ್ಟು ಹಾಗೂ ಕಡಿರುಧ್ಯಾವರ ಗ್ರಾಮದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಇವರೆಲ್ಲ ಪೊಲೀಸ್ ದಾಳಿ ಸಂದರ್ಭದಲ್ಲಿ “ಅಲೇ ಬುಡಿಯೆರ್” ಎಂದು ಪರಾರಿ ಆಗಿದ್ದಾರೆ. ಟಿಪ್ಪರ್ ವಾಹನಗಳು ಕೂಡ ಬೆಳ್ತಂಗಡಿ ಕಾಂಗ್ರೆಸ್ ನಾಯಕರದ್ದು ಎಂದು ತಿಳಿದು ಬಂದಿದೆ. ಈಗ ಬೆಳ್ತಂಗಡಿಯ ಅಮದು ನಾಯಕ ಈ ಕೇಸ್ ಗೆ ಎಂಟ್ರಿ ಕೊಟ್ಟಿದ್ದು ಅಕ್ರಮ ಮಾಡಿದವರ ಪರವಾಗಿ ಪೊಲೀಸ್ ಇಲಾಖೆಗೆ ಒತ್ತಡ ಹೇರುತ್ತಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿಗಳ ಆದೇಶವಿದ್ದರೂ, ಈ ವಿಪರೀತವಾಗಿ ಬರುತ್ತಿರುವ ಮಳೆಯ ನೀರಿಗೆ ನೇತ್ರಾವತಿ ನದಿಗೆ ಇಳಿದು ಹಲವು ದಿನಗಳಿಂದ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಏನಾದರೂ, ಯಾರಾದರೂ ಬೊಳ್ಳಕ್ಕೆ ಸಂಗಮ ಕಡೆ ಹೋದರೆ ಯಾರು ಜವಾಬ್ದಾರರು…..?

ಈ ಪ್ರದೇಶದಲ್ಲಿ ಸೇತುವೆ ಕೂಡ ಇದೆ, ಅದರ ಅಡಿಗೆ ಕೈಹಾಕಿ ಪೊಯ್ಯೆ ತೆಗೆಯುತ್ತಿದ್ದು ಇದಕ್ಕೆ ಹಾನಿಯಾದರೆ ಯಾರು ಹೊಣೆಗಾರರು ಎಂಬ ಪ್ರಶ್ನೆ ಎದ್ದಿದೆ. ಇಂತಹ ಆಕ್ರಮದ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

