
ಬುರುಡೆ ಬಿಲ್ಡಿಂಗ್
ಸುಳ್ಯ ಆಲೆಟ್ಟಿ ಕ್ರಾಸಿನ ಗುರುಂಪು ಬಳಿ ಇದ್ದ ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಇರುವ ಜಾಗವನ್ನು ಆಕ್ರಮಿಸಿಕೊಂಡು ಅಕ್ರಮ ಕಟ್ಟಡ ನಿರ್ಮಾಣ ಮಾಡಲು ಹೊರಟಿದ್ದ ನುಂಗಣ್ಣನೊಬ್ಬ ಸಿಕ್ಕಿಬಿದ್ದ ಘಟನೆ ನಡೆದಿದೆ. ನುಂಗಿದ್ದ ಜಾಗವನ್ನು ಇದೀಗ ಕಕ್ಕಿಸಲಾಗಿದೆ ಎಂದು ತಿಳಿದುಬಂದಿದೆ.

ಇದು ಸುಳ್ಯ. ದಕ್ಷಿಣ ಕನ್ನಡದ ಗಡಿ ತಾಲೂಕು ಗಡ. ಇಲ್ಲಿ ಸುಳ್ಯ ಪೇಂಟೆಯಲ್ಲಿ ಧರ್ಮಸ್ಥಳದ ಅನೇಕ ಜಾಗೆಗಳಿದ್ದು ಕೆಲವು ದಾನ ರೂಪದಲ್ಲಿ ಹೋದರೆ ಕೆಲವು ಲ್ಯಾಂಡ್ ರಿಫಾರ್ಮ್ಸ್ ಮೂಲಕ ಪರರ ಪಾಲಾಗಿತ್ತು. ಇದೀಗ ಅಲ್ಲಲ್ಲಿ ಕೆಲವೇ ಕೆಲವು ತುಂಡುಗಳು ಉಳಿದಿದ್ದು ಅದನ್ನು ಹುಡುಕುವುದೇ ದೊಡ್ಡ ಹುಡುಕಾಟ ಆಗಬಹುದು. ಇಂತಿರ್ಪ ಕಳೆದ ವರ್ಷ ಅದ್ದೂರಿಯಾಗಿ ನಡೆದ ಬುರುಡೆ ನಾಟಕದ ಗಡಿಬಿಡಿಯಲ್ಲಿ ಇಡೀ ಸ್ಟೇಟಿನ ಕಣ್ಣು ಟಿ.ವಿ ಮೇಲೆ ಇದ್ದಾಗ ಇತ್ತ ಸುಳ್ಯದಲ್ಲಿ ಸದ್ದಿಲ್ಲದೆ ಒಂದು ಜಾಗದಲ್ಲಿ ಬಸಳೆ ದೊಂಪ ಹಾಕಲಾಗಿತ್ತು. ಎಲ್ಲಿ ಎಂದು ವಿಚಾರಿಸಲಾಗಿ ಅಲ್ಲಿ ಆಲೆಟ್ಟಿ ಕ್ರಾಸ್ ಗುರುಂಪು ಬಳಿ ಧರ್ಮಸ್ಥಳಕ್ಕೆ ಸೇರಿದ್ದ ಸರ್ವೇ ನಂಬ್ರ 263-6 ರಲ್ಲಿ ಲೋಕಲ್ ಆಮಾದಾಕ ಎಂಬವರು ಸದ್ದಿಲ್ಲದೆ ಒಂದು ಬಿಲ್ಡಿಂಗ್ ಎಬ್ಬಿಸಿದ್ದರು. ಅತ್ತ ಅಲ್ಲಿ ಬುರುಡೆ ಗಲಾಟೆ ನಡೆಯುತ್ತಿರುವಾಗಲೇ ಇತ್ತ ಇವರು ಆಮಾದಾಕ ಕೇವಲ ಮೂನೇ ಮೂನು ದಿನದಲ್ಲಿ ಬಸಳೆ ದೊಂಪದಂತಹ ದೊಂಪ ಹಾಕಿ ಅದಕ್ಕೆ ಫಿಕ್ಸ್ ಗೋಡೆ ಕೂಡ ಹಾಕಿ ನಂತರ ಕಬ್ಬಿಣದ ಛಾವಣಿ ಮಾಡಿ ಬಾಡಿಗೆ ಬಿಡಲು ಸ್ಕೆಚ್ ಹಾಕಿದ್ದರು. ಇನ್ನು ಧರ್ಮಸ್ಥಳದವರ ಕತೆ ಕ್ಲೋಸ್ ಆಯ್ತು, ಇನ್ನು ಅವರು ಈಚೆ ಬರಲ್ಲ, ಅದಕ್ಕೆ ಮೊದಲು ಹೊಟ್ಟೆ ತುಂಬಾ ನುಂಗಿ ಬಿಡುವ ಸ್ಕೆಚ್ ಆಮಾದಾಕ ಹಾಕಿದ್ದರು. ಆದರೆ ಮಂಜುನಾಥ ಯಾವತ್ತಿಗೂ ದೊಡ್ಡವನೇ ಅಲ್ವಾ. ಯಾರೋ ಕ್ಷೇತ್ರದ ಭಕ್ತರು ಕರೆನ್ಸಿ ಹಾಕಿ ಧರ್ಮಸ್ಥಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. “ಹೌದಾ, ಹಾಗೆಲ್ಲ ಮಾಡಿದ್ದಾರಾ, ಬರ್ತೇವೆ” ಅಂತ ಧರ್ಮಸ್ಥಳದಿಂದ ಮಾಹಿತಿ ಬಂದಿದೆ ಮತ್ತು ಕೆಲವು ದಿನಗಳ ಹಿಂದೆ ಸುಳ್ಯದ ಆಲೆಟ್ಟಿ ಕ್ರಾಸಿಗೆ ವ್ಯವಸ್ಥಾಪಕರ ಬೊಲೇರೋ ರೊಯ್ಯನೆ ಬಂದಿದೆ ಸಹ.

ಬುರ್ಡೆ ಬಿಲ್ಡಿಂಗ್ ಈಗ👆
ಹಾಗೆ ಗುರುಂಪುಗೆ ಬಂದ ಧರ್ಮಸ್ಥಳ ವ್ಯವಸ್ಥಾಪಕರು ಯಾರ ಕೆಲಸ ಇದು ಎಂದು ವಿಚಾರಿಸಲಾಗಿ ಅದು ಆಮಾದಾಕಂಡೆ ಪಣಿ ಅಂತ ಗೊತ್ತಾಗಿದೆ. ಕೂಡಲೇ ಆಮಾದಾಕನನ್ನು ಸ್ಪಾಟಿಗೆ ಕರೆಸಿಕೊಂಡ ವ್ಯವಸ್ಥಾಪಕರು ಕಾಕನ ದೊಂಡೆ ಪಸೆ ಆಜಿಸಿದ್ದಾರೆ. “ಎಂಕುಲು ನನೊರ ಬನ್ನಗ ಒಂಜಿ ಚಟ್ಟಿ ಸಿಮೆಂಟ್ಲ ಈ ಜಾಗೆಡ್ ಇಪ್ಪರ ಬಲ್ಲಿ” ಎಂದು ಖಡಕ್ ವಾರ್ನಿಂಗ್ ಕೊಟ್ಟು ಹೋಗಿದ್ದಾರೆ. ಇದೀಗ “ಇದು ನಿಂಗೆ ಬೇಕಿತ್ತಾ ಮಗನೇ” ಎಂದು ಆಮಾದಾಕ ಕಂಬ ರಿಮೂವ್ ಮಾಡುವ ಕೆಲಸ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆ ಧರ್ಮಸ್ಥಳದವರು ಬಂದು ಹೋದ ಮೇಲೆ ಆಮಾದಾಕ ಅಕ್ರಮವಾಗಿ ಕಟ್ಟಿದ್ದ ಕೊಟ್ಯದ ಡಿಲೀಟ್ ಮಾಡಲಾಗುತ್ತಿದೆ. ಎಲ್ಲಿಯಾದರೂ ಸರ್ವೇಯರ್ ಬಂದು ಸಂಕೋಲೆ ಎಳೆದರೆ ವಾಲಗದವನಿಗೆ ಬೀಳುವಾಗ ಬ್ಯಾಂಡ್ ನವನಿಗೆ ಚಳಿ ಹಿಡಿಯಿತು ಎಂಬಂತೆ ಆಮಾದಾಕನ ಅಕ್ರಮ ಕೊಟ್ಯದ ಬದಿಯಲ್ಲಿರುವ ಫರ್ನಿಚರ್ ಮಾಡುವ ಒಂದು ಅಂಗಡಿಯವನೂ ಗಂಟುಮೂಟೆ ಕಟ್ಟುವ ಪರಿಸ್ಥಿತಿ ಬರಬಹುದು. ಯಾಕೆಂದರೆ ಆ ಹಳೇ ಮರದ ಅಂಗಡಿಯೂ ಧರ್ಮಸ್ಥಳದವರ ಸಂಕೋಲೆ ಒಳಗೆ ಬಂದೇ ಬರುವ ಸಾಧ್ಯತೆ ಇದೆ. ಹೀಗೆನಾದರೂ ಆದರೆ ಕಡ್ಲೆ ಜೊತೆ ಎಣ್ಮೆಯೂ ಕರೆಂಚಿದ ಹಾಗೆ ಆಗ ಬಹುದು ಸರ್ವಜ್ಞ.
ಇನ್ನು ಅಲ್ಲಿ ಗುರುಂಪು ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಯಾರಿಗಾದರೂ ದಾರಪೀರೆ ಬಲ್ಲ್ ಬಿಡಲು ಕಂಬ ಬೇಕಾದರೆ ಅಲ್ಲಿ ಸಿಗಬಹುದು. ಇನ್ನು ಬಸಳೆ ದೊಂಪ ಹಾಕಲು, ಬಚ್ಚಿರೆ ಬಿಡಲು, ಮಣೊಳಿ ದೊಂಪಕ್ಕೆ ಮತ್ತು ಸುಳ್ಯದಲ್ಲಿ ಯಾರಾದರೂ ಇನ್ನೊಂದು ಮೆಡಿಕಲ್ ಕಾಲೇಜು ಮಾಡುವುದಿದ್ದರೆ ಕಂಬ ಬೇಕಾದಲ್ಲಿ ಗುರುಂಪು ಬಳಿ ಕಂಬ ಸಿಗುತ್ತದೆ. ಕಮ್ಮಿಗೆ ಕೊಡಬಹುದು.