
ಅಲ್ಲಿ ಸುಬ್ರಹ್ಮಣ್ಯ ಸೈಡಿನ ಏನೆಕಲ್ಲು – ಕಡೆಂಬಿಲ ರಸ್ತೆಯ ಕತೆ ಕರುಣಾಜನಕವಾಗಿದ್ದು ಈ ರಸ್ತೆಯಲ್ಲಿ ದಿನಾಲೂ ಕೆಸರ್ಡ್ ಒಂಜಿ ದಿನ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಗ್ರಾಮಾಡಳಿತಕ್ಕೆ ರಾವಣನ ಪ್ರೀತಿಯ ತಮ್ಮನ ನಿದ್ದೆ. ಶೇಮ್… ಶೇಮ್!
ಹಾಗೆಂದು ಈ ನತದೃಷ್ಟ ರಸ್ತೆ ಏನೆಕಲ್ಲಿನಲ್ಲಿ ಜನ್ಮ ತಾಳಿ ಕಡೆಂಬಿಲ ಮೂಲಕ ಹರಿದು ಕರ್ನಾಜೆ ದಾಟಿ ಮುತ್ಲಾಜೆಯಲ್ಲಿ ಹೋಗಿ ಸಂಪನ್ನಗೊಳ್ಳುತ್ತದೆ. ಆದರೆ ಏನೆಕಲ್ಲಿನಲ್ಲಿ ಈ ರಸ್ತೆ ಶುರುವಾಗುವಾಗಲೇ ಅದಕ್ಕೆ ಸಾವಿರದೊಂದು ವಿಘ್ನ. ಅದರಲ್ಲೂ ಕಳೆದ ಎರಡು ತಿಂಗಳಿಂದ ರಸ್ತೆಯ ಶುಗರ್ ಲೆವೆಲ್ ಐನೂರು ದಾಟಿದೆ. ಕಳೆದ ಎರಡು ತಿಂಗಳಿಂದ ಈ ರಸ್ತೆ ಕೆಸರು ರಸ್ತೆಯಾಗಿ ಕನ್ವರ್ಟ್ ಆಗಿ ಈ ರಸ್ತೆಯ ನಿತ್ಯ ಸಂಚಾರಿಗಳು ಪಡ ಬಾರದ ಕಷ್ಟಗಳನ್ನೆಲ್ಲ ಪಟ್ಟಿದ್ದಾರೆ. ಈ ರಸ್ತೆಯಲ್ಲಿ ಈಗ ನಿತ್ಯ ಕೆಸರ್ಡೊಂಜಿ ದಿನ.

ಹಾಗೆಂದು ಈ ರಸ್ತೆಗೆ ಮೊದಲಿನಿಂದಲೂ ಏನಾದರೊಂದು ಸೀಕ್ ಇದ್ದೇ ಇರುತ್ತಿತ್ತು. ಅದೂ ಅಲ್ಲದೆ ಈ ರಸ್ತೆ ಮೇಲೆ ಅನೇಕ ಪ್ರಯೋಗಗಳೂ ನಡೆದು ರಸ್ತೆ ಪರಿಸ್ಥಿತಿ ಐಸಿಯೂನಲ್ಲೇ ಇತ್ತು. ಅದಕ್ಕೆ ಸರಿಯಾಗಿ ಮುಂಗಾರು ಮಳೆ ಬಂದು ಅನ್ ಲೋಡ್ ಆಗುತ್ತಿದ್ದಂತೆ ಯಾರೋ ಪುಣ್ಯಾತ್ಮರು ತಮ್ಮದ್ದೂ ಒಂದಿರ್ಲಿ ಎಂದು ಎರಡು ಲೋಡ್ ಮಣ್ಣು ತಂದು ಅನ್ ಲೋಡ್ ಮಾಡಿ ಬಿಟ್ಟರು. ಮಳೆಗಾಲದಲ್ಲಿ ರಸ್ತೆಗೆ ಮಣ್ಣು ಹಾಕಿದ್ರೆ ಪಾಯಸ ಕಲಸಿದ ಹಾಗೆ ಆಗಬಹುದು ಎಂದು ಹೇಳಿದರೆ “ಏನೂ ಆಗಲ್ಲ, ಅದು ಮುರ ಮಣ್ಣು” ಎಂದು ಸಬೂಬು ಹೇಳಲಾಯಿತು. ಇದರಿಂದಾಗಿ ರಸ್ತೆ ಪರಿಸ್ಥಿತಿ ಹೇಗಾಯಿತೆಂದರೆ ಅಳುಮುಂಜಿ ಒಬ್ಬನ ಹೆಂಡ್ತಿ ಸತ್ತಂಗೆ ಆಯ್ತು. ಐಸಿಯುನಲ್ಲಿ ಇದ್ದ ರಸ್ತೆ ವೆಂಟಿಲೇಟರ್ ಗೆ ಹೋಯ್ತು. ಈಗ ಮುರ ಮಣ್ಣು ಇಡೀ ರಸ್ತೆಯನ್ನೇ ಬಂದ್ ಮಾಡುವಲ್ಲಿ ತನಕ ಬಂದಿದೆ.
ಈ ರಸ್ತೆ ಏನೆಕಲ್ – ಕಡೆಂಬಿಲ – ಕರ್ನಾಜೆ – ಮುತ್ಲಾಜೆ ಕಡೆಗೆ ಲಿಂಕ್ ರೋಡ್ ಆಗಿದ್ದು ದಿನಾ ಶಾಲಾ ಮಕ್ಕಳು, ಹೈಸ್ಕೂಲ್ ಮಕ್ಕಳು ಇದೇ ರಸ್ತೆಯಲ್ಲಿ ಬರಬೇಕು. ಈ ರಸ್ತೆಯಲ್ಲಿ ಬಂದರೆ ಯಾರಿಗೂ ಬೂಟೂಸು ಬೇಡ. ಕಾಲಿಗೆ ಮಣ್ಣಿನ ಬೂಟೂಸೇ ಹಾಕಿದಂತಾಗುತ್ತದೆ. ಪಾಪ ಆ ವಿದ್ಯಾರ್ಥಿಗಳು ಮನೆಗೆ ಹೋಗಿ ಹೇಗೂ ಸ್ನಾನ ಮಾಡಬೇಕು ಈಗ ಶಾಲೆಗೆ ಬಂದೂ ಸ್ನಾನ ಮಾಡಿಯೇ ಕ್ಲಾಸಿಗೆ ಹೋಗುವಷ್ಟು ಕೆಸರುಮಯ ಆಗಿದೆ ಈ ರಸ್ತೆ. ಇನ್ನು ಪಾದಚಾರಿಗಳು, ರಾಮಾಚಾರಿಗಳ ಕತೆ ಹೇಳಿ ಸುಖವಿಲ್ಲ. ಮತ್ತೆ ದ್ವಿಚಕ್ರ ವಾಹನದವರ ಸ್ಥಿತಿ ಗಂಭೀರ. ಟೋಟಲಿಯಾಗಿ ಹೇಳುವುದಾದರೆ ಇದೊಂದು ಪಯಣಿಸಲು ಅಸಾಧ್ಯವಾದ ರಸ್ತೆ. ಆದರೆ ಬೇರೆ ದಾರಿ ಇಲ್ಲ. ಅವರಿಗೆ ಮತಿ ಇಲ್ಲ, ಜನರಿಗೆ ಗತಿ ಇಲ್ಲ ಎಂಬಂತಾಗಿದೆ. ಹಾಗೆಂದು ಈ ರಸ್ತೆ ಬಗ್ಗೆ ಎರಡು ತಿಂಗಳಿಂದ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ಕೊಡಲಾಗಿದೆ, ಸಮಸ್ಯೆ ಮನವರಿಕೆ ಮಾಡಿ ಕೊಡಲಾಗಿದೆ. ಆದರೆ ಪೊಟ್ಟ ಅಧಿಕಾರಿಗಳಿಗೆ ಕಿವಿ ಕೇಳಲ್ಲ, ಕಣ್ಣು ಕಾಣಲ್ಲ. ಕಚೇರಿಯಲ್ಲಿ ಕುಂತು ಕುಂಡೆ ಬಿಸಿ ಮಾಡುವುದು ಬಿಟ್ಟು ಬೇರೆನೂ ಮಾಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದಷ್ಟು ಕೆಂಪು ಕಲ್ಲು ಪೊಡಿ ತಂದು ಹಾಕಿದ್ರೂ ಸೋಣ, ನಿರ್ನಾಲ ನೂಕ ಬಹುದು. ಆದರೆ ತಂದು ಹಾಕುವವರು ಯಾರು ಮಾರಾಯ್ರೆ. ಪಂಚಾಯ್ತಿಯವರು ಆಟಿ ಕೂರಲು ಹೋದವರು ಇನ್ನೂ ಬಂದಿಲ್ಲ, ಲೋಕೋಪಯೋಗಿ ಇಲಾಖೆ ಉಪಯೋಗಿಯೇ ಅಲ್ಲ, ಇನ್ನು ಶಾಸಕರಿಗೆ ಸಂಗ್ತಿ ಗೊತ್ತಿಲ್ಲ. ಮತ್ತೆ ಯಾರಿಗೆ ಹೇಳೋಣ ಪ್ರಾಬ್ಲಂ? ದೇವರೇ ಗತಿ.

ದಿನಾಂಕ 20/8/26
ಆಂಧ್ರದ ಒಣಗಿದ ಶುದ್ಧ ಕುರಿ ಗೊಬ್ಬರ ( ಕಲ್ಲು ಮಣ್ಣು ರಹಿತ ) ನಾಳೆ ಕೊಕ್ಕಡ ನೆಲ್ಯಾಡಿ ಉಪ್ಪಿನಂಗಡಿ ಸವಣೂರು ಪುತ್ತೂರು ಕುಂಬ್ರಾ ಕಾವು ಭಾಗಕ್ಕೆ ಬರಲಿದೆ
50 ಕೆಜಿ ಮೈದಾ ಚೀಲ ದಲ್ಲಿ ಗೊಬ್ಬರ
ಗೋಣಿ ಒಂದರ ದರ
Rs. 230/-( ಫುಲ್ ಲೋಡ್ 600 ಚೀಲ )
(ಪಿಕಪ್ ಬೇಕಾದ್ರೆ ಅದರ ಬಾಡಿಗೆ ಎಕ್ಸ್ಟ್ರಾ )
ಗೊಬ್ಬರ ಬೇಕಾದವರು ಕರೆ ಮಾಡಿ
9686964639