
ಪಂಜ ಸಮೀಪದ ಕೇನ್ಯದಲ್ಲಿ ಒಬ್ಬ ಪಾತ್ರೆ ಕಳ್ಳನ ಚಲನವಲನಗಳಿದ್ದು ಮೊನ್ನೆ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ಕೈಗೆ ಸಿಕ್ಕಿದ್ದಕ್ಕೆ ಕೈ ಕೊಡುವುದು ಇವನ ಒಂದು ಕೆಟ್ಟ ಚಾಳಿ ಎಂದು ಊರಿನವರು ತಿಳಿಸಿದ್ದಾರೆ.

ಕದ್ದ ಪಾತ್ರೆಗಳು
ಹಾಗೆಂದು ಈ ಪಾತ್ರೆ ಕಳ್ಳ ಊರಿಗೆ ಒಂದು ಮಾರಿ ಇದ್ದ ಹಾಗೆ. ಸರ್ಕಾರಿ ಜಾಗಗಳನ್ನು ಕದಿಯುವುದು ಕೂಡ ಇವನ ಇನ್ನೊಂದು ದುರಾಭ್ಯಾಸ. ಕೇನ್ಯ ಆಸುಪಾಸಿನಲ್ಲಿ ಎಲ್ಲಿ ಒಂದು ಪೀಸ್ ಸರ್ಕಾರಿ ಜಾಗೆ ಕಂಡರೂ ಸಾಕು ಇವನು ಅದನ್ನು ಒತ್ತುವರಿ ಮಾಡುತ್ತಾನೆ ಎಂಬ ದೂರಿದೆ. ಇದಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬಡಿಸಿ ಜಾಗೆಗೆ ಬೇಲಿ ಬಿಡಿಸಿ ಬಿಡುತ್ತಾನೆ. ಹಾಗೆಂದು ಈತ ಈ ಜಾಗೆ ವಿಷಯದಲ್ಲಿ ಮೊದಲಿಗೆ ದಂಡೆತ್ತಿ ಹೋದದ್ದೇ ತನ್ನ ಸ್ವಂತ ಮಾವನ ಮೇಲೆ. ಅವರ ಜಾಗೆಯನ್ನು ಗುಳುಂ ಮಾಡಲು ಹೋಗಿ ಪೆಟ್ಟುಗುಟ್ಟಿಗೆ ರೆಡಿಯಾಗಿ, ಅವರಿಗೆ ಮನೆಗೆ ಹೋಗಲು ದಾರಿ ಬಿಡದೆ ಆ ಪ್ರಕರಣ ಪೋಲಿಸ್ ಠಾಣೆ ದಾರಿ ಹಿಡಿದಿತ್ತು. ನಂತರ ಈ ಪಾತ್ರೆ ಕಳ್ಳ ಅಲ್ಲಿಯೇ ಲೋಕಲ್ ಒಬ್ಬ ಅಂಗವಿಕಲರಿಗೆ “ನಾನು ನಿಮ್ಮ ಬ್ಯಾಂಕ್ ಲೋನ್ ತೀರಿಸುತ್ತೇನೆ, ನನಗೆ ಒಂದು ಎಂಟು ಸೆಂಟ್ ಜಾಗ ಕೊಡಿ”ಎಂದು ಗಾಳಿ ಹಾಕಿ ಅವರಿಂದ ಖಾಲಿ ಪೇಪರಿಗೆ ದಸ್ಕತ್ತ್ ಹಾಕಿಸಿ ಅವರ 0.42 ಸೆಂಟ್ಸ್ ಜಾಗಕ್ಕೆ ಬೇಲಿ ಬಿಡಿಸಿದ್ದ. ಈ ಬಗ್ಗೆ ಅವರಿಗೆ ಮೂರು ಲಕ್ಷ ದುಡ್ಡು ಕೊಟ್ಟ ಹಾಗೆ ಮಾಡಿ, ಬ್ಯಾಂಕಿಗೆ ಹಾಕಿದ ಹಾಗೆ ಮಾಡಿ, ನಂತರ ಅವರದೇ ಕೈಯಿಂದ ಚೆಕ್ ತಗೊಂಡು ಆ ಕ್ಯಾಷನ್ನು ಡ್ರಾ ಮಾಡಿ ಅಂಗವಿಕಲರ ಕೈಗೆ ಚಿಪ್ಪು ಕೊಟ್ಟು ವಂಚಿಸಿದ್ದಾನೆ.

ಹಾಗೆಂದು ಈ ಪಾತ್ರೆ ಕಳ್ಳ ತೊಕ್ಕೊಟ್ಟು ಕಡೆ ಕೂಡ ಹೀಗೆ ಮಾಡಿದ್ದಾನೆ ಎಂದು ಸುದ್ದಿ ಇದೆ. ಕೇನ್ಯ ಗ್ರಾಮದ ಕಣ್ಕಲ್ ಎಂಬಲ್ಲಿ ಕೂಡ ಈತ ಜಾಗೆ ನುಂಗಿ ಅವರು ಇವನಿಗೆ ಡಬ್ಬಲ್ ಪಂಜಿಯ ಪಟ್ಟ ಪರಕೆ ಇಟ್ಟಿದ್ದಾರೆ. ಇನ್ನು ಈತನಿಗೆ ಎರಡು ಮದುವೆ ಆಗಿದ್ದು maintenance ಕಷ್ಟ ಅಂತ ಹೀಗೆಲ್ಲ ಗುಳುಂ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಹೋದ ಬಂದ ಕಡೆಯಲ್ಲೆಲ್ಲ ಈತ ಕಿರಿಕ್ ಪಾರ್ಟಿ ಆಗಿದ್ದು ಹಿಂದೆ ಪಂಜದ ಬಾರೊಂದರಲ್ಲಿ ಟೈಟಾಗಿ ರಿಕ್ಷಾದವರ ಜೊತೆ ತಾಂಟ್ರೆ ಬಾ ತಾಂಟ್ ಎಂದು ಚಾಲೆಂಜ್ ಹಾಕಿದ್ದಕ್ಕೆ ಅವರು ಇವನ ಮುಸುಂಟು ಮಲ್ಲಿಗೆ ಮಾಡಿ ಕಳಿಸಿದ್ದರು. ಮತ್ತೆ ಅಲ್ಲಿ ನಿಂತಿಕಲ್ ಕಡೆ ಎಲ್ಲೋ ಮಹಿಳೆಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪರಿಣಾಮ ಅಲ್ಲೂ ಶಾಲು ಹೊದಿಸಿ ಫಲಪುಷ್ಪ ಕೊಟ್ಟಿದ್ದರು. ಇನ್ನು ಬೋರ್ವೆಲ್ ಏಜೆಂಟ್ ಒಬ್ಬನಿಗೆ ಒಂದು ಲಕ್ಷದ ಟೊಪ್ಪಿ ಕೊಟ್ಟಿದ್ದು ಕೂಡ ಸಮಾಜಮುಖಿ ಕೆಲಸಗಳಲ್ಲಿ ಒಂದು. ಇನ್ನು ಇವನ ಪ್ರಮುಖ ಪಾತ್ರ ಯಾವುದು ಅಂದರೆ ಕೃಷಿ ಪರಿಕರಗಳ ಕಳ್ಳತನ. ಪಾತ್ರೆ, ರಿಟೈರ್ಡ್ ಆದ ಪಾತ್ರೆಗಳು,ಬುಟ್ಟಿ, ಹಾರೆ,ಕೊಡಪಾನ,ನೀರಿನ ಪೈಪ್, ತೆಂಗಿನಕಾಯಿ ಹೀಗೆ ಕೈಗೆ ಯಾವುದೇ ವಸ್ತು ಸಿಕ್ಕರೂ ಅದಕ್ಕೆ ಕೈಕೊಡುವ ವಿಚಿತ್ರ ಕಾಯಿಲೆ ಈತನಿಗಿದೆ ಎಂದು ತಿಳಿದುಬಂದಿದೆ. ಓ ಮೊನ್ನೆ ಕದಿಯುವ ಭರದಲ್ಲಿ ತನ್ನದೇ ಮೊಬೈಲ್ ಬಿದ್ದು, ಅದು ಊರವರಿಗೆ ಸಿಕ್ಕಿ ಇದ್ದ ವನ್ ಪರ್ಸೆಂಟ್ ಮಾನ ಮರ್ಯಾದೆತನ್ನೂ ಕಳಕೊಂಡಿದ್ದಾನೆ. ತನ್ನದೇ ಊರಿನಲ್ಲಿ ಮರ್ಯಾದೆಯಿಂದ ಬದುಕುವುದು ಬಿಟ್ಟು ಪಾತ್ರೆ ಕದ್ದುಕೊಂಡು ಬದುಕುವುದು ಯಾಕೆ ಎಂದು ಊರವರು ಕ್ವಶ್ಚನ್ ಮಾರ್ಕ್ ಹಾಕಿದ್ದಾರೆ.

