ಒಬ್ಬನ ಹೆಂಡ್ತಿ ಇನ್ನೊಬ್ಬನ ಜೊತೆ (ಊಟಕ್ಕೆ) ಹೋದ ಪ್ರಕರಣ

Pattler News

Bureau Report

ಗುತ್ತಿಗಾರು ಸಮೀಪದ ನಡುಗಲ್ಲು ಗ್ರಾಮದಲ್ಲಿ ಒಬ್ಬನ ಹೆಂಡ್ತಿ ಇನ್ನೊಬ್ಬನ ಜೊತೆ ಹೋದ ಪ್ರಕರಣ ಒಂದು ನಡೆದಿದೆ ಎಂದು ತಿಳಿದುಬಂದಿದೆ. ಕಳೆದ ವಾರವಿಡೀ ಈ ಸುದ್ದಿ ಹೈ TRP ಯಲ್ಲಿ ಓಡಿದ ಬಗ್ಗೆ ಮಾಹಿತಿ ಬಂದಿದೆ. ಹೋದದ್ದು ಊಟಕ್ಕೆ ಆದರೂ ಈ ಬಗ್ಗೆ ಕಿಲ್ಲರ್ ಭೂತಗಳ ಮೇಲಾಣೆ, ಹರಿಕೆ ಕೋಲ, ದೇವರಾಣೆ, ಸತ್ಯಪ್ರಮಾಣ ಮುಂತಾದ ಅಣೆಪ್ರಮಾಣಗಳೂ ನಡೆದಿದ್ದವು. ಇನ್ನು ಈ ಪ್ರಕರಣದ ಬಗ್ಗೆ ಚರ್ಚೆಗಳು, ವಿಚಾರ ಸಂಕಿರಣಗಳು, ಗುಪ್ತ ಸಭೆಗಳು, ಕಾನ್ಫರೆನ್ಸ್ ಗಳು ನಡೆದ ಬಗ್ಗೆ ವರದಿಯಾಗಿದೆ.

ವಿಷಯ ಎಂಥ ಕೂಡ ಇಲ್ಲ. ಅಲ್ಲಿ ನಡುಗಲ್ಲು ಸಮೀಪದ ವಿವಾಹಿತೆಯೊಬ್ಬಳು ಸುಳ್ಯದಲ್ಲಿ ತನ್ನದೇ ಊರಿನ ಒಬ್ಬ ಪರಿಚಯಸ್ಥನೊಂದಿಗೆ ರಸಪಾಕ ಹೋಟ್ಲಿಗೆ ಊಟಕ್ಕೆ ಹೋದ ಪ್ರಕರಣ ದೊಡ್ಡ ಬ್ರೇಕಿಂಗ್ ನ್ಯೂಸ್ ಆಗಿದ್ದು ಈಗ ಸುಖಾಂತ್ಯ ಕಂಡಿದೆ. ವಿವಾಹಿತೆ ಅರಂಬೂರಿನ ರಬ್ಬರ್ ಖರೀದಿ ಕೇಂದ್ರದ ಬಳಿ ಕಪ್ಪು ಚೂಡಿ, ಬಿಳಿ ಶಾಲು ಡ್ರೆಸ್ಸಲ್ಲಿ ಜಿಗ್ಗಾಗಿ ವೈಟ್ ಕ್ರೇಟಾ ಕಾರಿಗೆ ಹತ್ತಿದ ಬ್ಯೂಟಿಫುಲ್ ಸೀನನ್ನು ಯಾರೋ ಶೂಟ್ ಮಾಡಿ ಸೇವ್ ಮಾಡಿ ಕೊಂಡಿದ್ದರು. ನಂತರ ಈ ವಿಷಯ, ವೀಡಿಯೋ ವೈರಲ್ ಆಗಿ ಗುತ್ತಿಗಾರು ಭಾಗದಲ್ಲಿ ಹೈಯೆಸ್ಟ್ TRPಯಲ್ಲಿ ಓಡಿತ್ತು.

ಈ ಬಗ್ಗೆ ಕ್ರೇಟಾ ಕಾರಿನ ಧಣಿ, ವಿವಾಹಿತೆಯನ್ನು ತುಂಬಿದ ಡಬ್ಬಲ್ ಶೂಟರ್ ನನ್ನು ವಿಚಾರಿಸಲಾಗಿ ಅವನು ತ್ರೇತಾಯುಗದಿಂದ ಕತೆ ಆರಂಭಿಸುತ್ತಾನೆ. ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ, ನಂತರ ದ್ವಾಪರದಲ್ಲಿ ಧರ್ಮರಾಯ, ಭೀಷ್ಮ, ಗಂಗೆ, ಅನಂತರ ಸತ್ಯಹರಿಶ್ಚಂದ್ರನ ಕತೆಗೆ ಬಂದು ನಂತರ ಬುದ್ಧ, ಗಾಂಧಿ, ರಾಮಕೃಷ್ಣ ಪರಮಹಂಸರ ಕತೆಯಲ್ಲಿ ಲ್ಯಾಂಡಿಂಗ್ ಮಾಡಿ ಸೀದಾ ಗುತ್ತಿಗಾರಿಗೆ ಬಂದು ಈ ಭಾಗದಲ್ಲಿ ನಾನು ಅವರ ಹಾಗೆ ಅಂತಾನೆ. “ಸುಳ್ಯಕ್ಕೆ ಹೋಗಿದ್ದೆ, ಕಾರ್ ಶೋರೂಂಗೆ. ಫಿಟ್ಟರ್ ಮತ್ತು ನಾನು ಊಟಕ್ಕೆ ಅಂತ ರಸಪಾಕ ಹೋಟ್ಲಿಗೆ ಹೊರಟಿದ್ವಿ, ದಾರಿಯಲ್ಲಿ ಇವರು ಸಿಕ್ಕಿದರು ಊರಿನವರು. ಊಟಕ್ಕೆ ಬರ್ತಿರಾ ಅಂತ ಕೇಳ್ದೆ, ಬಂದು ಕಾರಲ್ಲಿ ಕುಂತರು ಅಷ್ಟೇ. ಇದು ಇಷ್ಟು ಕತೆ” ಎಂದು ಫುಲ್ ಸ್ಟಾಪ್ ಹಾಕ್ತಾನೆ. ಅವನು ಹೇಳಿದ ಕತೆ ಕೂಡ ಕರೆಕ್ಟ್ ಆಗಿಯೇ ಇದೆ. ಮತ್ತೆ ಯಾಕೆ ಸಂಶಯವೇ ಸಂಕ ಪಾಶಾಣ. ಮುಂದೆ ಓದಿ.

ಹಾಗೆ ಈ ವಿಷಯ ವೈರಲ್ ಆಗುತ್ತಿದ್ದಂತೆ ನಡುಗಲ್ಲು ವಿವಾಹಿತೆ ನಡುಗಲು ಆರಂಭಿಸಿದ್ದಾಳೆ. ಗಂಡನಿಗೂ ವಿಷಯ ಹೋಗಿದೆ. ನಡುಗಲ್ಲು ಗಂಟನಿಗೂ ನಡುಗಲು ಶುರು ಆಗಿದೆ. ಎಲ್ಲರೂ ಸೇರಿ ವೀಡಿಯೋ ಮಾಡಿದ ರಸಿಕ ಯಾರೆಂದು ಪತ್ತೆಗೆ ಇಳಿದಿದ್ದಾರೆ. ಹಾಗೆ ಗುತ್ತಿಗಾರು, ನಡುಗಲ್ಲು ಭಾಗದ ಮೊಸಾದ್ ಗಳಿಗೆ ಕಡೆಗೂ ವೀಡಿಯೋ ಮಾಡಿದ್ದು ಯಾರೆಂದು ಗೊತ್ತಾಗಿದೆ. ಹಾಗೆ ಮೊನ್ನೆ ಸೊಸೈಟಿಯೊಂದರ ಹಾಲ್ ನಲ್ಲಿ, ಮಸ್ಕ್ ಮಸ್ಕ್ ಕತ್ತಲೆ ಕತ್ತಲೆ ಬೀಳುವಾಗ ವೀಡಿಯೋ ಮಾಡಿದ ವೀಡೀಯೋಗ್ರಾಫರ್ ನನ್ನು ಕಟಕಟೆಯಲ್ಲಿ ನಿಲ್ಲಿಸಿ ನಡುಗಲ್ಲಿನ ಪರಮ ಗ್ರಾಸ್ಥರು ಮೀಟಿಂಗ್ ನಡೆಸಿದ್ದರು. “ಪುಣ್ಯಕಾರ್ಯದ ವೀಡಿಯೋ ಯಾಕೆ ಮಾಡಿದೆ” ಎಂದು ವಿಚಾರಿಸಲಾಗಿ ವೀಡಿಯೋಗ್ರಾಫರ್ ಕೊಟ್ಟ ಕಾರಣಕ್ಕೆ ಗ್ರಾಸ್ಥರೇ ಬೆಚ್ಚಿ ಬಿದ್ದಿದ್ದರು. ಊಟಕ್ಕೆ ಹೋದ ವಿವಾಹಿತೆಯ ಗಂಡ ಈ ವಿಡಿಯೋಗ್ರಾಫರ್ ಹೆಂಡ್ತಿಗೆ ಅದೇನೋ ಕಿರಿಕ್ ಮಾಡಿದ್ದ ಕಾರಣ ಇವನು ತನ್ನ ಹೆಂಡ್ತಿಗೆ ಕಿರಿಕ್ ಮಾಡಿದವನ ಹೆಂಡ್ತಿಗೇ GPS ಅಳವಡಿಸಿದ್ದ. ಹಾಗೆ ಅವಳು ಎಲ್ಲಿಗೆ ಹೋಗುತ್ತಾಳೆ, ಏನು ಮಾಡುತ್ತಾಳೆ ಅಂತ ಅವಳ ಹಿಂದೆ ಮೊಸಾದ್ ಬಿಟ್ಟಿದ್ದ. ಮೊನ್ನೆ ಕರೆಕ್ಟ್ ಸಿಕ್ಕಿ ಬಿದ್ದಳು. ಅರಂಬೂರು ರಬ್ಬರ್ ಖರೀದಿ ಕೇಂದ್ರದ ಬಳಿ ಕಪ್ಪು ಚೂಡಿ, ಬಿಳಿ ಶಾಲು ಡ್ರೆಸ್ಸಲ್ಲಿ ಜಿಗ್ಗಾಗಿ ವೈಟ್ ಕ್ರೇಟಾ ಕಾರಿಗೆ ಹತ್ತುವ ಸೀನ್. ರೆಡಿ ವನ್ ಟೂ ತ್ರೀ. Action! ಟೇಕ್ ಓಕೆ ಆಗಿತ್ತು.

ಹಾಗೆಂದು ಈ ವಿಷಯದಲ್ಲಿ ಗುತ್ತಿಗಾರಿನ ಮತ್ತು ನಡುಗಲ್ಲಿನ ವಿಚಾರವಾದಿಗಳು ಮಂಡಿಸುವ ಪ್ರಬಂಧವೇ ಬೇರೆ. ಅರಂಬೂರು ರಬ್ಬರ್ ಖರೀದಿ ಕೇಂದ್ರದ ಬಳಿ ಯಾವುದೇ ತಟ್ಟಿ ಭವನ ಕೂಡ ಇಲ್ಲ. ಅಲ್ಲಿ ಒಂದು ಚಿಕ್ಕ ಗೂಡಂಗಡಿ ಮಾತ್ರ ಇರೋದು. ವಿವಾಹಿತೆ ಅಲ್ಲೇ ಕಾರಿಗೆ ಹತ್ತಿದ ವೀಡಿಯೋ ಇರುವಾಗ ಸಂಶಯ ಪಿಶಾಚಿ ಕಿಟಕಿಯಲ್ಲೂ ಬಂದೇ ಬರುತ್ತದೆ. ಅವಳು ಸುಳ್ಯದಲ್ಲಿಯೇ ಕಾರಿಗೆ ಹತ್ತಿದ್ದರೆ ಅರಂಬೂರು ರಬ್ಬರ್ ಖರೀದಿ ಕೇಂದ್ರದ ಬಳಿ ಯಾಕೆ ಕಾರಿಳಿದು ಪುನಃ ಹತ್ತಿದಳು. ಮೊದಲೇ ಹೋಗಿ ರಬ್ಬರ್ ಖರೀದಿ ಕೇಂದ್ರದ ಬಳಿ ನಿಂತಿದ್ದರೆ ಅಲ್ಲಿಗೆ ಯಾಕೆ ಹೋದಳು? ಯಾರನ್ನು ಕಾಯುತ್ತಿದ್ದಳು? ಊಟಕ್ಕೆಂದೇ ಹೋದಳಾ? ಇನ್ನೊಬ್ಬರ ಹೆಂಡ್ತಿಯನ್ನು ಊಟಕ್ಕೆ ಕರೆಯುವವನು ತನ್ನ ಹೆಂಡ್ತಿಯನ್ನು ಇನ್ನೊಬ್ಬರ ಜೊತೆ ಊಟಕ್ಕೆ, ಮದ್ದಿಗೆ,ಅದಕ್ಕೆ, ಇದಕ್ಕೆ ಅಂತ ಕಳಿಸ್ತಾನಾ? ವಿದ್ ಪರ್ಮಿಷನ್ ಊಟಕ್ಕೆ ಹೋಗಿದ್ರೆ ರಬ್ಬರ್ ಖರೀದಿ ಕೇಂದ್ರದ ಬಳಿ ಯಾಕೆ ಕಾರಿಳಿದು ಪುನಃ ಹತ್ತಿದ್ದು? ಗೂಡಂಗಡಿಯಿಂದ ಕೃಷ್ಣ ನಶ್ಯ ಏನಾದ್ರೂ ಪರ್ಚೇಸ್ ಇತ್ತಾ? ಊಟಕ್ಕೆ ಹೋಗುವುದು ಇದೇ ಮೊದಲಿನ ಸಲವಾ? ಹಾಗೇ ಸಿಕ್ಕಿ ಬಿದ್ದಿದ್ದಾ? ಊಟಕ್ಕೆ ಸುಳ್ಯದೊಳಗೆ ಅಷ್ಟೊಂದು ತ್ರೀ ಸ್ಟಾರ್, ಫೈವ್ ಸ್ಟಾರ್ ಗಳಿರುವಾಗ ಅರಂಬೂರಿನ ಸೆವೆನ್ ಸ್ಟಾರ್ ಗೇ ಯಾಕೆ ಊಟಕ್ಕೆ ಹೋದ್ದು? ಊಟ ಮಾಡಿ ಆಚೆ ಗೂನಡ್ಕ ಸೈಡ್ ಏನಾದರೂ ಅರ್ಜೆಂಟ್ ಇತ್ತಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ವಿಚಾರವಾದಿಗಳು ಉತ್ತರ ಹುಡುಕುತ್ತಿದ್ದಾರೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top