
ಬೆಳ್ತಂಗಡಿ ತಾಲೂಕ ಕಣಿಯೂರು ಗ್ರಾಮದ ಮಲೆಂಗಲ್ಲು ದೇವಸ್ಥಾನದ ಹೆಸರನ್ನು ಲಗಾಡಿ ತೆಗೆದ ದೇವಸ್ಥಾನದ ಸ್ವಯಂ ಘೋಷಿತ ಎಂ.ಡಿಯೊಬ್ಬನ ಕತೆ ಈಗ ವೈರಲ್ ಆಗಿದೆ. ರಕ್ಷಿತಾರಣ್ಯದಿಂದ ಕಲ್ಬಾಜಿ ಹಾಗೂ ಇತರೇ ಕಪ್ಪು, ಕೆಂಪು,ಹಳದಿ ಮರಗಳನ್ನು ಕದ್ದು ಕದ್ದು ಕದ್ದು ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದು ಒಂದು ಕತೆಯಾದರೆ ಇನ್ನೊಂದು ಕತೆ ಬೇರೆಯೇ ಇದೆ.
ಅಲ್ಲಿ ಕಣಿಯೂರು ಗ್ರಾಮದ ಮಲೆಂಗಲ್ಲು ದೇವಸ್ಥಾನದ ಆಡಳಿತದ ಕತೆ ಒಂದೆರಡಲ್ಲ. ಅಂದಾಜು ಕಳೆದ ಎರಡು ದಶಕಗಳಿಗೂ ಹಿಂದಿನಿಂದಲೇ ಇಲ್ಲಿ ಏನಾದರೊಂದು ನಡೆಯುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಮೂರು ಬಾರಿ ಅಂದರೆ 96ರಲ್ಲಿ, 2012ರಲ್ಲಿ ಮತ್ತು 2026ರಲ್ಲಿ ಜೀರ್ಣೋದ್ಧಾರ, ಬ್ರಹ್ಮ ಕಲಶಗಳು ನಡೆದಿದ್ದು ಮೂರರಲ್ಲೂ ಸರಿಕಟ್ಟಾಗಿ ಲೆಕ್ಕಪತ್ರ ಮಂಡನೆ ಆಗಿಲ್ಲ ಎಂಬ ಕೂಗು ಭಕ್ತ ಮಹಾಶಯರಲ್ಲಿದೆ. ಇಲ್ಲಿ 2012ರಲ್ಲಿ ನಡೆದ ಬ್ರಹ್ಮ ಕಲಶವನ್ನು ಇಲ್ಲಿನ ಲೋಕಲ್ ಪ್ರತಿಷ್ಠಿತ ಫ್ಯಾಮಿಲಿಯವರು ಚೆನ್ನಾಗಿ ನಡೆಸಿ ಕೊಟ್ಟರೆ ಜೀರ್ಣೋದ್ಧಾರದ ಲೆಕ್ಕಪತ್ರ ಟ್ಯಾಲಿ ಆಗಲೇ ಇಲ್ಲ. ಇನ್ನು 2026ರಲ್ಲಿ ಜೀರ್ಣೋದ್ಧಾರ ಸರಿ ಆಗಿದ್ದರೆ ಬ್ರಹ್ಮ ಕಲಶದ ಲೆಕ್ಕ ಅಂಚಿಂಚಿ ಆಗಿತ್ತು. ಕಳೆದ ಬ್ರಹ್ಮ ಕಲಶದ ಉಳಿಕೆ ಹಣ ಇಪ್ಪತ್ತೇಳು ಲಕ್ಷದ ತನಕ ಇದ್ದು ಅದು ಪದ್ಮುಂಜ ಸೊಸೈಟಿಯಲ್ಲಿ ಖಾಸಗೀ ಅಕೌಂಟಿನಲ್ಲಿ ಶರಶಯ್ಯೆಯಲ್ಲಿ ಇದ್ದು ದಕ್ಷಿಣಾಯನ ಬರಲು ಕಾಯುತ್ತಿದೆ. ಒಂದೊಮ್ಮೆ ದಕ್ಷಿಣಾಯನ ಬಂದು ಜನರಿಗೆ ಇಪ್ಪತ್ತೇಳು ಲಕ್ಷದ ಕತೆ ಮಸ್ಕ್ ಮಸ್ಕ್ ಆದ ದಿನ ಆ ದುಡ್ಡು ಅಕ್ರಮ ಸಕ್ರಮ ಆಗುವ ಅಪಾಯಗಳಿವೆ. ಆದ್ದರಿಂದ ಆದಷ್ಟು ಬೇಗ ಆ ದುಡ್ಡಿಗೆ ಒಂದು ವ್ಯವಸ್ಥೆ ಮಾಡೋದು ಒಳ್ಳೇದು.

ಹಾಗೆಂದು ಸದ್ರಿ ಮಲೆಂಗಲ್ಲು ದೇವಸ್ಥಾನದಲ್ಲಿ D.S ಅಂತ ಒಬ್ಬ ಸ್ವಯಂ ಘೋಷಿತ ಎಂ.ಡಿ ಇದ್ದಾನೆ. ಇಡೀ ದೇವಸ್ಥಾನದ ಹೆಸರು ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ರಾರಾಜಿಸಲು ಪ್ರಮುಖ ಕಾರಣ ಇವನೇ. ದೇವಸ್ಥಾನವನ್ನು ತನ್ನ ಡ್ಯಾಡೀಸ್ ಪ್ರಾಪರ್ಟಿ ಎಂದು ಮಿಸ್ ಮಾಡಿಕೊಂಡಿರುವ ಇವನಿಂದಾಗಿ ಇಲ್ಲಿ ಕೋತಿ ತಾನೂ ಕೆಟ್ಟಿತು,ವನವನ್ನೆಲ್ಲ ಕೆಡಿಸಿತು ಎಂಬ ಗಾದೆಯಂತಾಗಿದೆ ಇಲ್ಲಿನ ಪರಿಸ್ಥಿತಿ. ಇಲ್ಲಿ ಬ್ರಹ್ಮ ಕಲಶದ ಲೆಕ್ಕದಲ್ಲಿ ನಡೆದ ಸಂಧ್ಯಾ ಭಜನೆಯಲ್ಲೂ ಈ D.S ಅಂಡಿಗುಂಡಿ ಲೆಕ್ಕ ಕೊಟ್ಟ ಬಗ್ಗೆ ತಿಳಿದು ಬಂದಿದೆ. ಸಂಧ್ಯಾ ಭಜನೆಯ ಜವಾಬ್ದಾರಿ ಒಬ್ಬ ನಿಷ್ಠಾವಂತ ಭಕ್ತನಿಗೆ ವಹಿಸಿ ಕೊಡಲಾಗಿತ್ತು. ಅವರು ಭಜನೆ ಲೆಕ್ಕದಲ್ಲಿ ಎರಡು ಲಕ್ಷ ಅರ್ವತ್ತು ಸಾವ್ರ ಕಲೆಕ್ಷನ್ ಮಾಡಿ ಎರಡು ನಾಲಕ್ಕು ಮುಗಿಸಿ ಭಜನೆ ಯಶಸ್ವಿಗೊಳಿಸಿದ್ದರು. ಅಡಿಗೆ ಭಟ್ರಿಂದ ಹಿಡಿದು ಪಿಕಪ್ ಬಾಡಿಗೆ ಸಮೇತ ಎಲ್ಲಾನೂ ಫೋನ್ ಪೇ ಮಾಡಲಾಗಿತ್ತು. ಆ ಈ D.S ಮಾತ್ರ ಒಂದು ಲಕ್ಷದ ಐವತ್ತೇಳು ಸಾವ್ರ ಡಬ್ಬಿ ದುಡ್ಡನ್ನು ಕಿಸೆಗೆ ಹಾಕಿ ಸಂಧ್ಯಾ ಭಜನೆಯವರಿಗೆ ಮೂರೂವರೆ ಲಕ್ಷ ಕೊಟ್ಟಿದ್ದೇನೆ ಎಂದು ವಂದೇ ಭಾರತ್ ಬಿಟ್ಟಿದ್ದ. ಆದರೆ ಸಮಿತಿ ಲೆಕ್ಕ ತೋರಿಸುವಾಗ ನಲವತ್ತೆಂಟು ದಿವ್ಸಗಳ ಸಂಧ್ಯಾ ಭಜನೆಯವರಿಗೆ ನಲವತ್ತೆಂಟು ಸಾವ್ರ ಎಂದು ಪೊಕ್ಕಡೆ ಲೆಕ್ಕ ತೋರಿಸಿದೆ. ಹಾಗಾದರೆ ಆ ಕಾಣಿಕೆ ದುಡ್ಡಿನ ಲೆಕ್ಕ ಯಾವಾಗ ಚುಕ್ತಾ?

ಇನ್ನು ಇದೇ D ಗ್ಯಾಂಗ್ ದೇವಸ್ಥಾನಕ್ಕೆ ಒಬ್ಬಳು ಹೆಣ್ಣು ಮಗಳನ್ನು ಸ್ಟಾಫ್ ಆಗಿ ಸೇರಿಸಿದೆ. ಅಲ್ಲಾ ಮಾರಾಯ್ರೆ ಒಬ್ಬಳು ಹೆಣ್ಣು ಮಗಳನ್ನು ದೇವಸ್ಥಾನದ ಸ್ಟಾಫ್ ಆಗಿ ಎಲ್ಲಿಯಾದರೂ ನೇಮಕ ಮಾಡುವ ಕ್ರಮ ಉಂಟಾ ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ. ಅವಳಿಗೆ ತಿಂಗಳಿಗೆ ಎಂಟು ರಜೆ ಕೊಡಲಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಇಡೀ ಕಣಿಯೂರು ಗ್ರಾಮದಲ್ಲಿ ಒಬ್ಬೇ ಒಬ್ಬ ಗಂಡು ಮಗ ಸಿಕ್ಕಿಲ್ವಾ ಇವರಿಗೆ ಸ್ಟಾಪ್ ಕೆಲಸಕ್ಕೆ. ಇದೀಗ ಇಡೀ ಕಣಿಯೂರು ತುಂಬಾ ಪಜ್ಜಿಮರಿ – ಮೊರಂಟೆ ಕತೆ ವೈರಲ್ ಆಗುತ್ತಿದೆ. ಇನ್ನು ಇದೇ D ಗ್ಯಾಂಗ್ ದೇವಸ್ಥಾನದ ಜೀರ್ಣೋದ್ಧಾರ ಸಮಯದಲ್ಲಿ ಅದೇ ಮಲೆಂಗಲ್ಲು ಮೀಸಲು ರಕ್ಷಿತಾರಣ್ಯದಿಂದ ದೇವಸ್ಥಾನದ ಹೆಸರಿನಲ್ಲಿ ಮರ ಕಡಿಯಲು ಮತ್ತು ಕದಿಯಲು ಇಡೀ ಅರಣ್ಯವನ್ನೇ ಟಾರ್ಗೆಟ್ ಮಾಡಿತ್ತು. ರಾತ್ರಿ ಹಗಲು ಮರ ಖಾಲಿ ಮಾಡಿದ್ದ D ಗ್ಯಾಂಗ್ ಬಗ್ಗೆ ಕೊನೆಗೂ ಉಪ್ಪಿನಂಗಡಿ ಅರಣ್ಯ ಇಲಾಖೆಗೆ ಗೊತ್ತಾಗಿ D.S ಮತ್ತು ಇತರ ಮರಗಳ್ಳರನ್ನು ಜೀಪು ಹತ್ತಿಸಲಾಗಿತ್ತು.
ಹಾಗೆಂದು ಈ ದೇವಸ್ಥಾನ ಕಾನನದ ನಡುವೆ ಇದೆ. ಈ ದೇವಸ್ಥಾನಕ್ಕೆಂದೇ ಪ್ರಧಾನ ರಸ್ತೆ ಇದೆ. ಆದರೂ ಈ D ಗ್ಯಾಂಗ್ ಏನು ಮಾಡಿತು ಅಂದರೆ ದೇವಸ್ಥಾನದ ಹಿಂದೆ ಹಾದು ಹೋಗುವ ಪ್ರಧಾನ ರಸ್ತೆಗೆ ಬಿಡುಗಡೆಯಾಗಿದ್ದ ಹನ್ನೊಂದು ಲಕ್ಷಗಳ ಅನುದಾನವನ್ನು ರಕ್ಷಿತಾರಣ್ಯದೊಳಗೆ ದೇವಸ್ಥಾನಕ್ಕೆ ರಸ್ತೆ ಮಾಡಲು ಯಾರಿಗೋ ಗಾಳಿ ಹಾಕಿ ಅರಣ್ಯದೊಳಗೆ ಅಗೆದು ಜಲ್ಲಿ ಇಳಿಸುವಂತೆ ನೋಡಿಕೊಂಡಿದ್ದರು. ಈ ಬಗ್ಗೆ ಉಪ್ಪಿನಂಗಡಿ ಅರಣ್ಯ ಇಲಾಖೆಗೆ ಮತ್ತೇ ದೂರುಗಳು ಹೋಗಿದ್ದು ಸದ್ರಿ ರಸ್ತೆ ನಿರ್ಮಾಣಕ್ಕೆ ಇಲಾಖೆ ತಡೆ ನೀಡಿದ ಬಗ್ಗೆ ತಿಳಿದು ಬಂದಿದೆ. ಒಂದೊಮ್ಮೆ ಈ ರಸ್ತೆ ಏನಾದರೂ ಗಟ್ಟಿಮುಟ್ಟಾದರೆ D ಗ್ಯಾಂಗಿಗೆ ರಕ್ಷಿತಾರಣ್ಯದಿಂದ ಮರ ಕಡಿಯಲು ಮತ್ತು ಕದಿಯಲು ರಾಜ ಮಾರ್ಗ ಮಾಡಿ ಕೊಟ್ಟಾಂತಾಗುತ್ತದೆ. ಆದರೂ D ಗ್ಯಾಂಗ್ ಕಳೆದ ಹಲವು ವರ್ಷಗಳಲ್ಲಿ ಈ ಕಾಡಿನಿಂದ ಕಡಿದ ಮರಗಳ ಟೋಟಲ್ ಲೆಕ್ಕ ಹಾಕಿದರೆ ವೀರಪ್ಪನ್ ಗೂ ತಲೆ ಗಿರ್ ಗಿರ್ರ ಗಿರ್ರ ಆಗಬಹುದು. ದೇವಸ್ಥಾನ, ಕಾಣಿಗೆ ದುಡ್ಡು, ಡಬ್ಬಿ ದುಡ್ಡು, ಕಲೆಕ್ಷನ್ ದುಡ್ಡು, ದೇವಸ್ಥಾನದ ಸುತ್ತಲಿನ ಕಾಡು, ದೇವರ ಜಾಗ ಹೀಗೆ ಎಲ್ಲವನ್ನೂ ತಮ್ಮ ಡ್ಯಾಡಿ ಪ್ರಾಪರ್ಟಿ ಎಂಬಂತೆ ವರ್ತಿಸುತ್ತಿರುವ ಈ D ಗ್ಯಾಂಗ್ ಬಗ್ಗೆ ಕಣಿಯೂರು ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಒಂದು ದಿನ ದೇವಸ್ಥಾನ “ಇಜ್ಜಿ” ಎನ್ನುವಲ್ಲಿ ತನಕ ಪರಿಸ್ಥಿತಿ ಬರಬಹುದು. ಎಲ್ಲದಕ್ಕೂ ಮೊದಲು ಪದ್ಮುಂಜ ಸೊಸೈಟಿಯಲ್ಲಿ ಖಾಸಗೀ ಅಕೌಂಟಿನಲ್ಲಿ ಇರುವ ಇಪ್ಪತ್ತೇಳು ದೇವಸ್ಥಾನದ ಅಕೌಂಟಿಗೆ ಟ್ರಾನ್ಸ್ ಫರ್ ಆಗಬೇಕು ಮತ್ತು ಆ ಮಲೆಂಗಲ್ಲು ವೀರಪ್ಪನ್ D.S ನನ್ನು ದೇವಸ್ಥಾನದ ಎಲ್ಲಾ ಜವಾಬ್ದಾರಿಗಳಿಂದ ಉಚ್ಚಾಟನೆ ಮಾಡಿ ಕುಪ್ಪಿಯಲ್ಲಿ ತುಂಬಿಸಿ ವಿಸರ್ಜನೆ ಮಾಡಿದರೆ ದೇವಸ್ಥಾನಕ್ಕೂ ಒಳ್ಳೆದು ಊರಿಗೂ ನೆಮ್ಮದಿ.