
ಬೆಳ್ತಂಗಡಿ:ದ.ಕ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸ್ತವ್ಯವಿದ್ದು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಎಸ್‌ಸಿ ಕುಟುಂಬ ಒಂದರ ಸ್ವಾಧೀನದ ಜಾಗದಲ್ಲಿ ಆ ಎಸ್‌ಸಿ ಕುಟುಂಬಗಳು ಸಿಮೆಂಟು ಕಂಬ ಹಾಗೂ ತಂತಿ ಬೇಲಿಗಳನ್ನು ಹಾಕಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಆ ಜಾಗವನ್ನು ಕಬಳಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಸ್ಥಳೀಯ ನಿವಾಸಿ ಬಹುಮಾನ ಪಟ್ಟ ಹನೀಫ್ ಎಂಬ ವ್ಯಕ್ತಿ ಏಕಾಏಕಿ ಆ ಜಾಗಕ್ಕೆ ಅತಿಕ್ರಮಣ ಪ್ರವೇಶಿಸಿ ಅವಾಚ್ಯ ಮತ್ತು ಅಶ್ಲೀಲ ಪದಗಳನ್ನು ಬಳಸಿ ಆ ಬಡ sc ಕುಟುಂಬಗಳ ಜಾತಿಯನ್ನು ನಿಂದಿಸಿದ್ದಾನೆ ಎಂದು ತಿಳಿದುಬಂದಿದ.ಆ ಬಡ sc ಕುಟುಂಬಗಳು ಹಾಕಿದ್ದ ಸಿಮೆಂಟ್ ಬೇಲಿ ಕಂಬ ಹಾಗೂ ತಂತಿ ಬೇಲಿಗಳನ್ನು ಕಿತ್ತೆಸೆದು, ಅಡಿಕೆ ಹಾಗೂ ಬಾಳೆ ಗಿಡಗಳನ್ನು ಮುರಿದು ಆನೆ ಗೆಟಪ್ಪಿನಲ್ಲಿ ದಾಂಧಲೆ ನಡೆಸುತ್ತಾ, ಕೊಲೆ ಬೆದರಿಕೆ ಹಾಕಿದ್ದಾನೆ.
ಈ ವೇಳೆ ಕೆಲಸದಲ್ಲಿ ತೊಡಗಿದ್ದ ಆ sc ಕುಟುಂಬದ ಮಹಿಳೆಯರು ಆನೆ ದಾಂಧಲೆಯ ಘಟನಾವಳಿಯನ್ನು ತಮ್ಮ ಮೊಬೈಲ್ಗಳಲ್ಲಿ ಶೂಟ್ ಮಾಡುತ್ತಿದ್ದ ವೇಳೆ ದಾಂಧಲೆ ನಿರತ ಹನೀಫ್ ಮಹಿಳೆಯರ ಎದುರು ಬಂದು ತನ್ನ ಬಟ್ಟೆಯನ್ನು ಎತ್ತಿ ತನ್ನ ಗೇರ್ ಬಾಕ್ಸ್ ಹೊರಗೆ ತೋರಿಸುತ್ತಾ ಸಾರ್ವಜನಿಕವಾಗಿ ವಿಕೃತಿಯನ್ನು ಮೆರೆದು, ನಿಮ್ಮನ್ನು ಇದರಿಂದಲೇ ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಸಿ, ಹೆದರಿಸಿ, ಈ ಜಾಗ ನನ್ನದು, ಈ ಜಾಗ ಬಿಟ್ಟು ನೀವು ಹೋಗದಿದ್ದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ.
ಇದರಿಂದ ಭಯಗೊಂಡ ಆ ಬಡ sc ಕುಟುಂಬಗಳು ಸ್ಥಳೀಯ sc ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೇಣೂರು ಪೋಲಿಸ್ ಠಾಣೆಗೆ ತೆರಳಿ ವಿಡಿಯೋ ಚಿತ್ರೀಕರಣ ದೃಶ್ಯಾವಳಿಯ ಸಾಕ್ಷಾಧಾರಗಳನ್ನು ಇಟ್ಟು ದೂರು ನೀಡಿದ್ದರನ್ವಯ ವೇಣೂರು ಪೊಲೀಸರು ಕೇಸು ದಾಖಲಿಸಿಕೊಂಡು ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿದು ಬಂದಿದೆ.
. ಬಡ sc ಮಹಿಳೆಯರ ಮುಂದೆ ತಾನು ಉಟ್ಟಿದ ಬಟ್ಟೆಯನ್ನು ಎತ್ತಿ, ಒಳಉಡುಪನ್ನು ಜಾರಿಸಿ ತನ್ನ ಖಾಸಗಿ ಅಂಗವನ್ನು ತೋರಿಸುತ್ತಾ ವಿಕೃತಿ ಮೆರೆದ ಈ ವ್ಯಕ್ತಿಗೆ ಸ್ಥಳೀಯ sc ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟ ಮತ್ತು ಪ್ರಯತ್ನಗಳ ಫಲವಾಗಿ ಕೊನೆಗೂ ಕಾನೂನಿನ ತಕ್ಕ ಪಾಠ ಕಲಿಸಿದಂತಾಗಿದೆ. ಹೀಗಾಗಿ ಸ್ಥಳೀಯ sc ಮುಖಂಡರು ಹಾಗೂ ಕಾರ್ಯಕರ್ತರ ಈ ಸಂಘಟಿತ ಹೋರಾಟಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗತೊಡಗಿದೆ.