
ಎಡಮಂಗಲ ಸಮೀಪದ ಪರ್ಲ ಶಾಲಾ ವಠಾರದಲ್ಲಿ ನಡೆದ ಅಷ್ಟೆಮಿ ಆಟೋಟ ಕಾರ್ಯಕ್ರಮದಲ್ಲಿ AK ಹೆಸರಿನ ಒಂದು ಜರ್ಸಿ ಬಗ್ಗೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. AK ಅಂದರೆ ಏನು ಎಂದು ಕೆಲವು ಯುವಕರು ಸಂಘಟಕರನ್ನು ತಿರ್ತ್ ಮಿತ್ತ್ ಮಾಡಿದ್ದಾರೆ ಎಂದು ಸುದ್ದಿ.
ಅಲ್ಲಿ ಎಡಮಂಗಲ ಸಮೀಪದ ಪರ್ಲ ಶಾಲಾ ವಠಾರದಲ್ಲಿ ಮೊನ್ನೆ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕ್ರೀಡಾ ಕೂಟ ಆಯೋಜಿಸಲಾಗಿತ್ತು. ಹಲವು ಬಗ್ಗೆಯ ಗೊಬ್ಬುಗಳು ಕ್ರೀಡಾಕೂಟದಲ್ಲಿ ಇದ್ದು ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಆದರೆ ಅಷ್ಟರಲ್ಲಿ ಒಂದು ಕಿರಿಕ್ ಶುರುವಾಗಿ ಬಿಟ್ಟಿತು. ಅಲ್ಲಿ ಎಡಮಂಗಲ ಹೈಸ್ಕೂಲಿನ ಕಬಡ್ಡಿ ಟೀಂ ಒಂದು ಕ್ರೀಡಾಕೂಟಕ್ಕೆ ಬಂದಿದ್ದು ಟೀಮಿನ ಟೀಶರ್ಟಿನ ಬೆನ್ನಿನ ಮೇಲೆ ಮತ್ತು ಎದುರುಗಡೆ AK ಎಂದು ಬರೆದಿದ್ದು ಎಲ್ಲರ ಗಮನ ಸೆಳೆದಿತ್ತು. ಈ AK ಮೇಲೆ ಒಂದು ಭಗವಾಧ್ವಜದ ಚಿತ್ರ ಕೂಡ ಇದ್ದಿದ್ದು ಅವು ಎಂಚಿನಗೆ… ಎಂಚಿನಗೆ ಎಂದು ಗುಸುಗುಸು ಶುರುವಾಯಿತು. ಕಡೆಗೆ AK ಬಗ್ಗೆ ಕ್ಯೂರಿಯಾಸಿಟಿ ತಡೆಯಲಾಗದೆ ಒಬ್ಬ ಹುಡುಗನಲ್ಲಿ AK ಅಂದರೆ ಏನು ಅಂತ ಕೇಳಲಾಗಿದೆ. “ಅಪ್ಪೆ ಕಲ್ಲುರ್ಟಿ” ಅಂತ ಅವನು ಹೇಳಿದ್ದಾನೆ. ಅದು ಉತ್ತರ ಅಲ್ಲ ಅಂತ ಮತ್ತೊಬ್ಬ ಹುಡುಗನತ್ರ ಕೇಳಿದ್ರೆ ಅವನು “ಅಮ್ಮೆ ಕಲ್ಕುಡೆ” ಎಂಬ ಉತ್ತರ ಬಂದಿದೆ. ಅದೂ ಸರಿಯಾದ ಉತ್ತರ ಅಲ್ಲ ಸ್ಥಳೀಯ ಕೆಲವು ಯುವಕರ ಪಿತ್ತ ನೆತ್ತಿಗೇರಿದೆ.
ಹಾಗಾದರೆ ಎಡಮಂಗಲ ಹೈಸ್ಕೂಲಿನ ಕಬಡ್ಡಿ ಟೀಂ ಬನಿಯನ್ ಮೇಲೆ ಇರುವ AK ಅಂದರೆ ಏನು? ಸ್ಥಳೀಯ ಯುವಕರು ರೊಚ್ಚಿಗೆದ್ದು ಸಂಘಟಕರೊಂದಿಗೆ ಚರಿಪಿರಿ ಶುರು ಮಾಡಿದ್ದಾರೆ. ಒಂದೋ AK ಅಂದರೆ ಏನು ಅಂತ ಹೇಳಬೇಕು, ಅದರಲ್ಲಿರುವ ಭಗವಾಧ್ವಜದ ಚಿತ್ರ ತೆಗೆಯಬೇಕು, ಇಲ್ಲದಿದ್ದರೆ ಆ ಟೀಂ ಕಬಡ್ಡಿ ಕಬಡ್ಡಿ ಹೇಳಬಾರದು, ಕಬಡ್ಡಿ ಟೀಂ ಕೈಬಿಡಬೇಕು ಎಂದೆಲ್ಲಾ ಕಿರಿಕ್ ಶುರುವಾಗಿತ್ತು. ಹಾಗೆ ಕ್ರೀಡಾ ಕೂಟದಲ್ಲಿ ಕಿರಿಕ್ ನಡೆಯುತ್ತಿರುವಾಗಲೇ ಸ್ಥಳಕ್ಕೆ ಎಡಮಂಗಲ ಹೈಸ್ಕೂಲಿನ ABDUL KHADAR ಮಾಸ್ತರರು ಬಂದಿದ್ದಾರೆ. ಅವರು ಹೈಸ್ಕೂಲಿನ ಹೆಡ್ ಮಾಸ್ತರರ ಅಥವಾ ಪಿ.ಟಿ ಮಾಸ್ತರರ ಅಂತ ಗೊತ್ತಿಲ್ಲ. ಆದರೆ ಕ್ರೀಡಾ ಕೂಟಕ್ಕೆ ಬಂದಿದ್ದಾರೆ. ಕ್ರೀಡಾ ಕೂಟದಲ್ಲಿ ಸ್ವಲ್ಪ ಹೊತ್ತು ಇದ್ದ ಅವರು ಕಿರಿಕ್ ವಾಲ್ಯೂಮ್ ಜೋರಾಗುತ್ತಿದ್ದಂತೆ ಹೊರಟು ಹೋಗಿದ್ದಾರೆ. ಇತ್ತ ಇಲ್ಲಿ AK ಗಲಾಟೆ ಜೋರಾಯಿತು ಎಂದು ಸುದ್ದಿ ಇದೆ. ಕೊನೆಗೂ ಈ AK ಅಂದರೆ ಏನು, ABDUL KHADAR ಮಾಸ್ತರರು ಏಕೆ ಸೀದಾ ಹೋದರು, ಯುವಕರು ಕಿರಿಕ್ ಏಕೆ ಮಾಡಿದರು ಎಂಬ ವಿಷಯ ಹೊರಗೆ ಬರಲೇ ಇಲ್ಲ. ಆಮೇಲೆ ದೊಡ್ಡವರು ಬಂದು ಪಂಚಾಯ್ತಿ ನಡೆಸಿದ್ದಾರೆಂದು ಸುದ್ದಿ.