
ಅಮ್ಚಿನಡ್ಕ – ಪೆರ್ಲಂಪಾಡಿ ರೋಡಲ್ಲಿ ಕೆಲವು ಕೀರಾಲು ಬೋಗಿ ಮರಗಳು ಟಾಪ್ ಲೆಸ್ ಆಗಿ ಗೋಚರಿಸುತ್ತಿದ್ದು ಕೆಲವೇ ದಿನಗಳಲ್ಲಿ “ಕಾಣದಂತೆ ಮಾಯವಾದನು ನಮ್ಮ ಶಿವ” ಆಗುವ ಅಪಾಯಗಳಿವೆ ಎಂದು ತಿಳಿದುಬಂದಿದೆ. ಈ ವಿಷಯ ಅರಣ್ಯ ಇಲಾಖೆಯ ಗಮನಕ್ಕೆ ಬಹುಶಃ ಇಲ್ಲ ಅಂತ ಗೊತ್ತಾಗಿದೆ. ಮಾಪಿ ಪಾಸ್ ಮೂಲಕ ಗೇಟ್ ಪಾಸ್ ಮಾಡಲು ಸ್ಕೆಚ್ ರೆಡಿ ಆಗಿದೆಯಾ?
ಹಾಗೆಂದು ಮರಗಳ್ಳರು ಯಾವೆಲ್ಲ ಅವತಾರದಲ್ಲಿ ಬರುತ್ತಾರೆ ಎಂದೇ ಹೇಳಕ್ಕಾಗಲ್ಲ. ಅಲ್ಲಿ ಅಮ್ಚಿನಡ್ಕ – ಪೆರ್ಲಂಪಾಡಿ ರೋಡಲ್ಲಿ ಕೆಲವು ಕೀರಾಲು ಬೋಗಿ ಮರಗಳು ಟಾಪ್ ಕಳಕ್ಕೊಂಡು ಧರೆಗುರುಳಲು ರೆಡಿಯಾಗಿ ನಿಂತಿದೆ ಎಂದು ತಿಳಿದುಬಂದಿದೆ. ಇದೆಲ್ಲ ಮರಗಳ್ಳತನದಲ್ಲಿ ಇಂಟೆನ್ ಶಿಪ್ ಮಾಡುವ ಮರಗಳ್ಳನ ಕೆಲಸವಲ್ಲ. ಯಾರೋ ದೊಡ್ಡ ವೀರಪ್ಪನ್ ಕೋ ಬ್ರದರ್ ಕೆಲಸವೇ ಆಗಿರಬೇಕು. ಇಂಥ ಖಾಯಂ ಮರಗಳ್ಳರಿಗೆ ಎರಡು ಅಥವಾ ಒಂದು ಮರ ವರ್ಗದಲ್ಲಿ ಇದ್ದರೂ ಸಾಕು ಇಡೀ ಗ್ರಾಮವನ್ನೇ ಖಾಲಿ ಮಾಡಿ ಬಿಡುತ್ತಾರೆ. ವರ್ಗ ಜಾಗದಲ್ಲಿ ಇರುವ ಎರಡು ಮರಗಳಿಗೆ ಸಿಂಗಲ್ ಪರ್ಮಿಟ್ ಮಾಡಿ ಅದರ ಸುತ್ತಾ ಮುತ್ತಾ ಇರುವ ಕಂದಾಯ ಸಚಿವರ ಇಲಾಖೆಗೆ ಸೇರಿದ ಅಷ್ಟೂ ಮರಗಳನ್ನು ಲಾರಿ ಹತ್ತಿಸಿ ಬಿಡುತ್ತಾರೆ. ಹಾಗೆ ವರ್ಗದಿಂದ ಎರಡು ಮರ ಮತ್ತು ಕಂದಾಯ ಸಚಿವರ ಜಾಗೆಯಿಂದ ಕಡಿದ ಮರಗಳನ್ನು ಮಾಪೀ ಪಾಸ್ ಮೂಲಕ ಕೇರಳಕ್ಕೆ ಗೇಟ್ ಪಾಸ್ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇದೀಗ ಅಮ್ಚಿನಡ್ಕ ರೋಡ್ ಸೈಡ್ ಕೀರಾಲು ಬೋಗಿ ಮರಗಳು ಕೂಡಾ ಕೇರಳಕ್ಕೆ ಗೇಟ್ ಪಾಸ್ ಆಗುವ ಅಪಾಯಗಳಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆ ಸ್ಟ್ರಿಕ್ಟ್ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯ.
ಇನ್ನು ಅಲ್ಲಿ ಸುಳ್ಯ ಜ್ಯೂನಿಯರ್ ಕಾಲೇಜು ಬಳಿ ಎಷ್ಟು ಅಕೇಶಿಯ ಮರ ಇತ್ತು ಮಾರಾಯ್ರೆ. ದೊಡ್ಡ ದೊಡ್ಡ ಆನೆ ಮರಗಳು. ಈಗ ಒಂದೂ ಇಲ್ಲ. ಎಲ್ಲಿಗೆ ಹೋಗಿದೆ ಅಂತಲೇ ಗೊಂತ್ತಿಲ್ಲ. ಒಂದು ಕುತ್ತಿ ಕೂಡ ಇಡದೆ, ಬಿಡದೆ ಮರ ಕಡಿಯಲು ಮತ್ತು ಕದಿಯಲು ಇವರಿಗೆ ಯಾರು ಬಿಟ್ಟಿದ್ದು ಎಂದೇ ಅರ್ಥ ಆಗುತ್ತಿಲ್ಲ. ಹಾಗೆಂದು ಸುಳ್ಯ, ಸುಬ್ರಹ್ಮಣ್ಯ,ಪಂಜ ರೇಂಜಿನಲ್ಲಿ ಸಾಮಾಜಿಕ ಅರಣ್ಯ ಮತ್ತು ಅಪಾಯಕಾರಿ ಮರಗಳ ಮರಗಳ್ಳನೊಬ್ಬನ ಬಗ್ಗೆ ದೊಡ್ಡ ಕತೆಯಿದೆ. ವೀರಪ್ಪನ್ ಅನಧಿಕೃತ ಮರಗಳ್ಳನಾಗಿದ್ದರೆ ಇವನು ಅಧಿಕೃತ ಮರಗಳ್ಳ. ಸುಳ್ಯ, ಸುಬ್ರಹ್ಮಣ್ಯ, ಪಂಜ ರೇಂಜ್ ನಲ್ಲಿ ಎಲ್ಲಿ ಸಾಮಾಜಿಕ ಅರಣ್ಯ, ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ, ಅಕೇಶಿಯ ಪ್ಲಾಂಟೇಶನ್ ಕಡಿಯಲು ಮತ್ತು ಕದಿಯಲು ಇವನ ಟೆಂಡರ್ ಪರ್ಮನೆಂಟ್. ಇಲಾಖೆಗೆ ಈ ಎಲ್ಲ ಪ್ಲಾಂಟೇಶನ್ ಗಳ ಯಾವುದೇ ಮರ ಕಡಿಯಲು ಯಾವುದೇ ಖರ್ಚಿಲ್ಲ. ಈ ಮರಗಳ್ಳನಿಗೆ ಐದು ಬಚ್ಚಿರೆ, ಐದು ಬಜ್ಜೆಯಿ, ಕುನಿಯ ಪುಗೆರೆ ಇಟ್ಟರೂ ಸಾಕು ಮರ ಸಲೀಸಾಗಿ ಕರ್ನಾಟಕ ದಾಟಿ ಹೋಗುತ್ತದೆ. ಲೋಡ್ ಹೋಗುವಾಗ ಮಾತ್ರ ಅರಣ್ಯ ಇಲಾಖೆ ಒಂದ್ನಿಮಿಷ ಕಣ್ಣು ಮುಚ್ಚಿ ಮೌನ ಪ್ರಾರ್ಥನೆ ಮಾಡಿದರೆ ಮುಗೀತು ಕಥೆ. ಇವನನ್ನು ಕೀರಾಲು ಬೋಗಿ ಕಿಂಗ್ ಯಾನೆ ಕೀರಾಲು ಕಿಂಗ್ ಎಂದು ಕರೆಯಲಾಗುತ್ತಿದ್ದು ಪೆರ್ಲಂಪಾಡಿ ರೋಡಲ್ಲಿ ಟಾಪ್ ಲೆಸ್ ಆಗಿ ನಿಂತಿರುವ ಕೀರಾಲು ಬೋಗಿ ಮರಗಳ ಹಿಂದೆ ಇದೇ ಬೊಗ್ಗು ಕೈವಾಡ ಸ್ಪಷ್ಟವಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಅರಣ್ಯ ಇಲಾಖೆ ಈ ಕೂಡಲೇ ಪೆರ್ಲಂಪಾಡಿ ರೋಡಲ್ಲಿ ಟಾಪ್ ಲೆಸ್ ಮರಗಳ ಲೆಕ್ಕ ತೆಗೆದು ಆ ಮರಗಳ್ಳ ಬೊಗ್ಗು ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯ.
Copy to DFO Mangalore.

ನಿನ್ನೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ನಡೆದ ಗಣಹವನದ ಪೂರ್ಣಾಹುತಿ ಸಮಯ ಹೋಮಕುಂಡಲಿಯಲ್ಲಿ ಗಣಪತಿ ದೇವರು ಪ್ರತ್ಯಕ್ಷರಾಗಿ ಅನುಗ್ರಹಿಸುವುದು ಗಮನಿಸಿ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್,ಸುಬ್ರಹ್ಮಣ್ಯ ಆರಕ್ಷಕ ಠಾಣಾಧಿಕಾರಿಗಳಾದ ಆಂಜನೇಯ ರೆಡ್ಡಿ ಹಾಗೂ ಪಂಜ ಪಂಚಶ್ರೀ ಜೇಸಿ ಅಧ್ಯಕ್ಷರಾದ ದೇವಿಪ್ರಸಾದ್ ಚಿಕ್ಮುಳಿ,ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಊರ ಭಕ್ತಾದಿಗಳು ಉಪಸ್ಥಿತಿ ಇದ್ದರು