ಮಂಜೇಶ್ವರ -ಕಾಣಿಯೂರು -ಸುಬ್ರಹ್ಮಣ್ಯ ಸ್ಟೇಟ್ ಹೈವೇಯಲ್ಲಿ ಸಿಗುವ ಕೊಡಿನೀರು ಜಂಕ್ಷನ್ನಲ್ಲಿ ಒಂದು ಕಲಿತ್ತ ಗಡಂಗ್ ಓಪನ್ ಮಾಡುವ ಹುನ್ನಾರಗಳು ನಡೆಯುತ್ತಿರುವ ಬಗ್ಗೆ ಗುಸು ಗುಸು ವೈರಲ್ ಆಗಿದೆ. ಹತ್ತಿರದಲ್ಲೇ ಮಹಾಲಿಂಗೇಶ್ವರನ ಕಟ್ಟೆ ಇದೆ ಮತ್ತು ಅಲ್ಪಸಂಖ್ಯಾತರ ಮನೆಗಳಿವೆ. ಅಲ್ಲಿ ಕಲಿ ಯಾರಿಗೆ?
ಅದು ಇಂಟರ್ ಸ್ಟೇಟ್ ಹೈವೇ. ಈ ಹೈವೇಯಲ್ಲೇ ಸವಾರಿ ಹೋದರೆ ನರಿಮೊಗರು ಗ್ರಾಮದ ರಾಜಧಾನಿ ಪುರುಷರ ಕಟ್ಟೆ ದಾಟಿ, ಅರುಣ್ ಪುತ್ತಿಲರ ಮನೆ ಪಾಸಾಗಿ, ಕೆರೆಕಟ್ಟೆ ನಳಿನಕ್ಕೆಯ ಕಟ್ಟೆ ದಾಟಿ ಚಿಕ್ಕ ಜಡವು ಇಳಿದರೆ ಸಿಗೋದೇ ಕೊಡಿನೀರು ಎಂಬ ಜಂಕ್ಷನ್. ಇಲ್ಲಿ ನರಮಾನಿ ಕಾಣ್ಲಿಕ್ಕೆ ಸಿಗೋದೇ ಪತ್ತನಾಜೆಯಿಂದ ಪತ್ತನಾಜೆಗೆ. ನಾಲಕ್ಕು ಮುಸ್ಲಿಂ ಮನೆಗಳು ಮತ್ತು ಒಂದು ಮಹತೋಭಾರನ ಕಟ್ಟೆ ಬಿಟ್ಟರೆ ಈ ಜಂಕ್ಷನ್ನಲ್ಲಿ ಒಂದೇ ಒಂದು ಅಂಗಡಿ ಕೂಡ ಇಲ್ಲ. ಇದೀಗ ಇಲ್ಲೇ, ಇದೇ ಜಂಕ್ಷನ್ನಲ್ಲಿ, ಮಹತೋಭಾರನ ಕಟ್ಟೆ ಪಕ್ಕದಲ್ಲೇ, ಮುಸ್ಲಿಂ ಮನೆಗಳ ಬದಿಯಲ್ಲೇ ಒಂದು ಕಲಿತ್ತ ಗಡಂಗ್ ಓಪನ್ ಮಾಡುವ ಬಗ್ಗೆ ಒಂದು ಸುತ್ತು, ಎರಡು ಸುತ್ತು ಕುಂತು ಮಾತಾಡಲಾಗಿದೆ ಎಂದು ತಿಳಿದುಬಂದಿದೆ. ಪುರುಷರ ಕಟ್ಟೆಯ ಆಸುಪಾಸಿನ ಕಲಿ ಮಿಕ್ಸಿಂಗ್ ಸ್ಪೆಷಲಿಸ್ಟ್ ಗಳು ಕೊಡಿನೀರಿನಲ್ಲಿ ಕಲಿತ್ತ ಗಡಂಗ್ ಓಪನ್ ಮಾಡಲು ಕೆಲವೊಂದು ಕಚೇರಿಗಳಿಗೆ ತೀರ್ಥಯಾತ್ರೆ ಕೈಗೊಂಡಿರುವ ಚಲನವಲನದ ಸದ್ದು ಕೇಳಿ ಬಂದಿದೆ.
ಹಾಗೆಂದು ಪುರುಷರ ಕಟ್ಟೆ ಆಸುಪಾಸಿನಲ್ಲಿ ಕಲಿ ಮಿಕ್ಸಿಂಗ್ ಸ್ಪೆಷಲಿಸ್ಟ್ ಗಳು ಬಹಳ ಹಿಂದಿನಿಂದಲೂ ಮಾರ್ಕೆಟ್ ನಲ್ಲಿ ಇದ್ದಾರೆ. ನೂರು ಲೀ ಕಲಿ ತಾರಿಯಿಂದ ಇಳಿಸಿದರೆ ಅದಕ್ಕೆ ಪೊಡಿ, ಮಾತ್ರೆ ಮಿಕ್ಸ್ ಮಾಡಿ ಐನೂರು ಲೀಟರ್ ಮಾಡಿ ಕುಡುಕರ ಕಿಡ್ನಿ, ಲಿವರ್, ದೊಡ್ಡ ಕರ್ಲು, ಹದಾ ಕರ್ಲು, ಚಿಕ್ಕ ಕರ್ಲು, ಜಠರ, ಮೇದೊಜಿರಕ ಗುಜಿರಿ ಮಾಡುವ ಪುಣ್ಯ ಕಾರ್ಯ ಇಲ್ಲಿ ಆಸುಪಾಸಿನಲ್ಲಿ ನಡೆಯುತ್ತಲೇ ಇದೆ. ಈಗ ಅವರದ್ದೇ ಒಂದು ಬ್ರಾಂಚ್ ಕೊಡಿನೀರಿನಲ್ಲಿ. ಹಾಗೆಂದು ಕೊಡಿನೀರಿನಲ್ಲಿ ಕಲಿತ್ತ ಗಡಂಗ್ ಓಪನ್ ಮಾಡುವ ಬಗ್ಗೆ ಯಾವುದೇ, ಯಾರದೇ ವಿರೋಧ ಇಲ್ಲ. ಕೊಡಿ ನೀರು ಮಾತ್ರ ಅಲ್ಲ ಬೇರೆ ಎಲ್ಲಿ ಬೇಕಾದರೂ ಗಡಂಗ್ ಓಪನ್ ಮಾಡಿ ಕುಡುಕರ ದೊಂಡೆ ಪಸೆ ನೀಗಿಸಲಿ. ಆದರೆ ಕೊಡಿ ನೀರಿನ ಗಡಂಗ್ ಓಪನ್ ಮಾಡುವ ಸ್ಥಳದ ಬಗ್ಗೆ ವಿರೋಧ ಇದೆ. ಇಲ್ಲಿ ಗಡಂಗ್ ಓಪನ್ ಮಾಡುವ ಹತ್ತಿರದಲ್ಲೇ ಮಹತೋಭಾರನ ಕಟ್ಟೆ ಇದೆ. ಕಟ್ಟೆ ಹತ್ರ ಗಡಂಗ್ ಮಾಡುವುದು, ಅದರ ಆಸುಪಾಸಿನಲ್ಲಿ ಗಡಂಗ್ ತಪ್ಪು. ಇನ್ನು ಕೊಡಿನೀರು ಜಂಕ್ಷನ್ನಲ್ಲಿ ನಾಲಕ್ಕು ಮುಸ್ಲಿಂ ಮನೆಗಳಿವೆ. ಇಲ್ಲಿ ಗಡಂಗ್ ಓಪನ್ ಮಾಡಿ, ಕುಡುಕರು ಏನಾದರೂ ನೀರಾಟ, ಹಾರಾಟ ಮಾಡಿದರೆ ಕೋಮುಗಲಭೆಗಳಿಗೆ ಆಸ್ಪದ ಕೊಟ್ಟಂತೆ ಆಗುತ್ತದೆ. ಇಷ್ಟಕ್ಕೂ ಕೊಡಿನೀರಿನಲ್ಲಿ ಕಲಿ ಯಾರಿಗೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ಇನ್ನು ಈ ಕೊಡಿನೀರು ಜಂಕ್ಷನ್ ಬಹುಶಃ ನರಿಮೊಗರು ಮತ್ತು ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಎರಡೂ ಗ್ರಾಮ ಪಂಚಾಯಿತಿಗಳೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲೇ ಬೇಕು. ಯಾಕೆಂದರೆ ಕೊಡಿನೀರಿಗೆ ನಾಳೆ ಏನಾದರೂ ಲೂಸ್ ಮೋಷನ್, ವಾಂತಿ ಭೇದಿ, ಮಾನಸಿಕ ಶುರುವಾದರೆ ಅದಕ್ಕೆ ಲೋಕಲ್ ಆಡಳಿತವೇ ಕಾರಣ ಆಗುತ್ತದೆ. ಈ ಬಗ್ಗೆ ಪೋಲಿಸರು, ಅಬ್ಕಾರಿಗಳು, ಕಂದಾಯ ಇಲಾಖೆ ಇಲ್ಲಿ ಕಲಿತ್ತ ಗಡಂಗ್ ಓಪನ್ ಮಾಡಲು NO ಅಂದರೆ ಅಷ್ಟೇ ಸಾಕು ಎಂಬ ಇರಾದೆ ಸಾರ್ವಜನಿಕರದ್ದು.
