ಕ್ಯಾಂಪ್ಕೋ ಅಂದಾಗಲೇ ನೆನಪಾಗುವುದು ಅಡಿಕೆ. ಕರಾವಳಿ , ಮಲೆನಾಡು ಮತ್ತು ಉತ್ತರ ಕೇರಳದ ಕೃಷಿಕರ ಪಾಲಿನ ಜೀವನಾಧಾರವಾದ ಅಡಿಕೆಗೆ ವ್ಯವಸ್ಥಿತ ಮತ್ತು ಭದ್ರವಾದ ಮಾರುಕಟ್ಟೆ ನೀಡಿದ್ದು ಹೆಮ್ಮೆಯ ಕ್ಯಾಂಪ್ಕೋ ಸಹಕಾರ ಸಂಸ್ಥೆ. ಅಂತಹ ಕ್ಯಾಂಪ್ಕೋ ಸಂಸ್ಥೆಯನ್ನು ಅದೆಷ್ಟೋ ವಿರೋಧಗಳ ಮಧ್ಯೆಯು ಕಳೆದೊಂದು ದಶಕದಿಂದ ಸಂಸ್ಥೆಗೆ ನೂತನ ಮತ್ತು ಹೊಸತನದ ಮೆರುಗು ನೀಡುತ್ತ, ಅಡಿಕೆ ಕೃಷಿಕರಿಗೆ ಸಂಸ್ಥೆಯಿಂದ ಅನೇಕ ಸವಲತ್ತುಗಳನ್ನು ನೀಡುತ್ತ, ರಾಷ್ಟ್ರದ ಮಾದರಿ ಸಂಸ್ಥೆಯನ್ನಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸುಳ್ಯದ ಒಕ್ಕಲಿಗರ ನಾಯಕ ಕೃಷ್ಣಪ್ರಸಾದ್ ಮಡ್ತಿಲರು ಈ ಬಾರಿ ಅವಕಾಶ ವಂಚಿತರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಇದಕ್ಕೆಲ್ಲ ಮೂಲ ಕಾರಣ ಸಂಸ್ಥೆಯಲ್ಲಿರುವ ವ್ಯವಸ್ಥಿತ ಜಾತಿ ಲಾಬಿ ಮತ್ತು fan belt ಶಿಖಾಮಣಿಗಳು. ಕ್ಯಾಂಪ್ಕೋ ಅಂದರೆ ಉಡುಪಿ ಬ್ರಾಹ್ಮಣರ ಊಟದ ಹೋಟೆಲ್ ಎಂದು ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡಿರುವ ಕೆಲವು fan belt ಮೂರ್ತಿಗಳು ಆದಷ್ಟು ಮಾಣಿಗಳನ್ನೇ ಸಂಸ್ಥೆಯ ಸೀಟುಗಳಲ್ಲಿ ವಿರಾಜಮಾನರಾಗಿಸಲು ಗುಪ್ತ ಗುಪ್ತ ಸಿಟ್ಟಿಂಗ್ ನಡೆಸುತ್ತಾರೆ. ಅದರಲ್ಲೂ ಸುಳ್ಯದ ಗೌಡ್ರುಗಳಿಗೆ ಸ್ವಲ್ಪ ಜಾಸ್ತಿಯೇ ಕರೆಂಟ್ ಶಾಕ್ ಕೊಟ್ಟು ಬಿಡುತ್ತಾರೆ. ಅದರ ರಿಸಲ್ಟೇ ಮಡ್ತಿಲ ಮನೆಗೆ.ಹಾಗೆಂದು ದಕ್ಷಿಣಕನ್ನಡ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ ಕೃಷಿಯಲ್ಲಿ ದೊಡ್ಡ ಪಾಲು ಹೊಂದಿರುವ ಒಕ್ಕಲಿಗ ಗೌಡ ಸಮುದಾಯಕ್ಕೆ ಸಹಕಾರ ಕ್ಷೇತ್ರದಲ್ಲಿ ತನ್ನ ಶಕ್ತಿಗನುಸಾರವಾಗಿ ಇಲ್ಲಿಯವರೆಗೂ ಕ್ಯಾಂಪ್ಕೊದಲ್ಲಿ ನಾಮ್ ಕ ವಾಸ್ತೆ ಅವಕಾಶ ನೀಡುತ್ತಾ ಬಂದಿದ್ದರೂ, ಕಳೆದೊಂದು ದಶಕದಿಂದ ಕ್ಯಾಂಪ್ಕೊ ಸಂಸ್ಥೆಯ ಒಳ ಮತ್ತು ಹೊರ ಭಾಗದಲ್ಲಿ ತಮ್ಮದೆ ಆದ ವರ್ಚಸ್ಸಿನೊಂದಿಗೆ ನಿರ್ದೇಶಕರಾಗಿ ಕ್ಯಾಂಪ್ಕೊವನ್ನು ಡಿಜಿಟಲೈಸೇಶನ್ ಮಾಡುವುದರಿಂದ ಹಿಡಿದು ಸಂಸ್ಥೆಯ ಸದಸ್ಯರ ಕಷ್ಟ ಕಾಲದಲ್ಲಿ ಆರೋಗ್ಯವಿಮೆ, ಯುವ ಸಮುದಾಯಕ್ಕೆ ಕೃಷಿ ಸಂಬಂಧಿತ ಉದ್ದಿಮೆಗಳಿಗೆ ಪ್ರೋತ್ಸಾಹ ಹೀಗೆ ಹತ್ತು ಹಲವು ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದ ಸುಳ್ಯದ ಯುವ ಮತ್ತು ಕ್ರಿಯಾಶೀಲ ನಿರ್ದೇಶಕರಾಗಿ, ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯ ಗೌಡ ಸಮುದಾಯದ ನಿರ್ದೇಶಕರೊಬ್ಬರು ಕ್ಯಾಂಪ್ಕೋ ಅಧ್ಯಕ್ಷ ಸ್ಥಾನದ ನೇರ ಅಭ್ಯರ್ಥಿ ಎಂದೇ ಜನಜನಿತರಾಗಿದ್ದ ಕೃಷ್ಣಪ್ರಸಾದ್ ಮಡ್ತಿಲರು ಕ್ಯಾಂಪ್ಕೊ ಸಂಸ್ಥೆಯೊಳಗಿನ ಈ ಹಿಂದಿನ ಹಳೆ ಪರಬ್ಬ ಅಧ್ಯಕ್ಷರುಗಳ ಪ್ರಬಲ ಜಾತಿ ಲಾಬಿಗೆ ಬಲಿಯಾಗಿರುವುದು ಖೇದಕರ.
ಹಾಗೆಂದು ಪುತ್ತೂರಿನ ಆಟವನ್ನೇ ಸುಳ್ಯದಲ್ಲೂ ದೇಶಭಕ್ತರ ಪ್ರಮುಖರು ಆಡಿದ್ದಾರೆ. ಕಳೆದ ವಿಧಾನಸಭಾ ಸಭಾ ಚುನಾವಣೆಯಲ್ಲಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಪುತ್ತೂರು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಆಡಿದ ಆಟವನ್ನೇ ಈ ಬಾರಿ ಸುಳ್ಯದಲ್ಲೂ ಆಡಿದ್ದಾರೆ. ಜಿಲ್ಲೆಯ ಗೌಡ ಸಮುದಾಯ ಶೈಕ್ಷಣಿಕವಾಗಿ ಅತ್ಯಂತ ಮುಂದುವರಿದಿದ್ದರೂ ಕೂಡ ಅಭ್ಯರ್ಥಿಗಳ ಆಯ್ಕೆಯ ಸಂಧರ್ಭದಲ್ಲಿ ಗೌಡ ಸಮುದಾಯದೊಳಗಿನ ಯುವ ಮತ್ತು ಸುಶಿಕ್ಷಿತರನ್ನು ಗಣನೆಗೆ ತೆಗೆಯದೆ ಹಳೆತಲೆಮಾರಿನ ಪರಬ್ಬ ನಾಯಕರನ್ನು ಮತ್ತೆ ಮುನ್ನೆಲೆಗೆ ತಂದು ಪುತ್ತೂರಿನ ಗೌಡ ಸಮುದಾಯ ಭವಿಷ್ಯದಲ್ಲಿ ಯಾವುದೇ ಸ್ಥಾನಮಾನವನ್ನು ಕನಸಿನಲ್ಲೂ ಕೇಳದಂತ ಕೆಟ್ಟ ಮತ್ತು ಅವಮಾನಕಾರಿ ಸೋಲನ್ನು ಜಿಲ್ಲೆಯ ಗೌಡರ ತಲೆಗೆ ಕಟ್ಟಿಬಿಡಲಾಗಿತ್ತು. ವಲ್ಡ್ ಕಪ್ ಫೈನಲ್ಸ್ ನಲ್ಲಿ ಕೋಹ್ಲಿಯನ್ನು ಆಡಿಸದೆ ಸುನಿಲ್ ಗವಾಸ್ಕರ್ ನನ್ನು ಆಡಿಸಿದಂತೆ. ಪುತ್ತೂರಿನಲ್ಲಿ ಬಿಜೆಪಿಯನ್ನು ಗುಜಿರಿ ಮಾಡಿದ ಅದೇ ಪ್ರಮುಖರು ಇಂದು ಸುಳ್ಯದ ಒಬ್ಬ ಸುಶಿಕ್ಷಿತ ಮತ್ತು ಕ್ರಿಯಾಶೀಲ ನಿರ್ದೇಶಕನನ್ನು ಸಂಸ್ಥೆಯಿಂದ ಹೊರಕಳುಹಿಸಿ ಮತ್ತೆ ಗೌಡ ಸಮುದಾಯದಿಂದ ಎಲ್ಲಾ ಸೂಕ್ತ ಸ್ಥಾನಮಾನಗಳನ್ನು ಗಳಿಸಿದ ಹಳೆಯ ತಲೆಮಾರಿನ ನಾಯಕರಿಗೆ ಮತ್ತೇ ಅವಕಾಶ ನೀಡಿದ್ದು ವಿಪರ್ಯಾಸವೇ ಸರಿ. ಆ ಮೂಲಕ ಮತ್ತೇ ಜಿಲ್ಲೆಯ ಗೌಡ ಸಮುದಾಯದಲ್ಲಿದ್ದ ಕ್ರಿಯಾಶೀಲ ಯುವಕರನ್ನು ಮುನ್ನೆಲೆಗೆ ಬರದಂತೆ ತಡೆಯುವಲ್ಲಿ ಮತ್ತೊಂದು ದಾಳ ಉರುಳಿಸಿರುವುದು ಮತ್ತು ಅದಕ್ಕೆ ಕ್ಯಾಂಪ್ಕೋವನ್ನು ವೇದಿಕೆಯನ್ನಾಗಿ ನಿರ್ಮಿಸಿರುವುದು ಮತ್ತು ಆ ದಾಳವನ್ನು ಈ ಬಾರಿ ಸುಳ್ಯದ ಗೌಡರ ಮೇಲೆ ಬಳಸಿದ್ದು ನಿಜಕ್ಕೂ ಜಿಲ್ಲೆಯಲ್ಲಿ ಸಂಘಟನೆಗೆ ಅತ್ಯಂತ ವಿಧೇಯರಾಗಿದ್ದ ಗೌಡ ಸಮುದಾಯದ ನಿಷ್ಠೆ ಗೆ ನೀಡಿದ ಅವಮಾನನೋ ಬಹುಮಾನನೋ ಅನ್ನುವುದು ಈ “ಹಿರಿ” ತಲೆಗಳೇ ಹೇಳಬೇಕು.
Note: ಹಾಗೆಂದು ದಕ್ಷಿಣ ಕನ್ನಡದಲ್ಲಿ ಅಣ್ಣೆರ್ ಗಳು ಎಂಪಿ ಇಲ್ಲ, ಎಮ್ಮೆಲ್ಲೆ ಇಲ್ಲ. ಎಮ್ಮೆಲ್ಸಿ ಕೂಡ ಇಲ್ಲ. ಕುರ್ಚಿ ಬಿಸಿ ಮಾಡಲು ಅವರಿಗೆ ನಿಗಮ ಮಂಡಲಿಗಳೂ ಇಲ್ಲ. ಅದನ್ನೆಲ್ಲ ಅವರು ಕೇಳಲೂ ಇಲ್ಲ, ಭಟ್ರೇ ಈ ಕುರ್ಚಿ ನಿಮಗೆ ಅಂತ ನಾವು ಕೊಡಲೂ ಇಲ್ಲ. ಆಫ್ಟರ್ ಆಲ್ ಒಂದು ಗಂಜಿ ಕೇಂದ್ರ ಕ್ಯಾಂಪ್ಕೋದಲ್ಲಿ ಅಣ್ಣೆರ್ ಗಳು ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂದಾದರೆ ಮಾಡಲಿ ಬಿಡಿ. ಪಾಪ ಅವರೂ ಏನು ಸನ್ಯಾಸಿಗಳು ಅಲ್ಲ ಅಲ್ವಾ? ಅವರಿಗೂ ಖರ್ಚಿ ಮಾಡಿ ಕುರ್ಚಿ ಅಲಂಕರಿಸುವ ಆಸೆ ಇರಬಹುದು.ಕಿಂಗ್ ಮೇಕಿಂಗ್ ಮಾಡಿ ಮಾಡಿ ಅವರಿಗೂ ಬೊಡಿದಿರ ಬಹುದು. ಹದಿನೆಂಟರಲ್ಲಿ ಹನ್ನೆರಡು ಅವರೇ ಎಂದು ಸುದ್ದಿ. ಇರ್ಲಿ ಪಾಪ. ಆದರೆ ಗೌಡ್ರುಗಳಿಗೆ ಸ್ಥಾನ ಮಾನ ಕೊಡಬೇಕಿತ್ತು ಎಂಬುದು ಮಾತ್ರ ಒಂದು ಅವರ ಮಿಸ್ಟೇಕ್. ಅಷ್ಟೇ.

