ಅಡಿಕೆ ತೋಟದ ಗಾಂಧಿಗೆ ಒತ್ತಡ?

Pattler News

Bureau Report

ಕ್ಯಾಂಪ್ಕೋ ಚುನಾವಣೆಯಲ್ಲಿ ಈಗಾಗಲೇ ಅಸಮಾಧಾನ ಭುಗಿಲೆದ್ದಿದ್ದು ಬ್ರಾಹ್ಮಣ ಸಮುದಾಯ ಕ್ಯಾಂಪ್ಕೋ ವಿಷಯಗಳಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬ ಕೂಗು ಅಷ್ಟ ದಿಕ್ಕುಗಳಿಂದಲೂ ಕೇಳಿಬರುತ್ತಿದೆ. ಆದರೆ ಬ್ರಾಹ್ಮಣನರು ಹಾಗೆ ಮಾಡಲು ಕಾರಣಗಳೂ ಇದ್ದು ದಕ್ಷಿಣ ಕನ್ನಡದಲ್ಲಿ ಒಂದೇ ಒಂದು ಸೀಟು ಎಮ್ಮೆಲ್ಲೆ, ಎಮ್ಮೆಲ್ಸಿ, ನಿಗಮ ಮಂಡಳಿ ಬ್ರಾಹ್ಮಣರಿಗೆ ಇಲ್ಲದಿದ್ದು ಕಡೇ ಪಕ್ಷ ದೇಶಭಕ್ತರ ಕ್ಯಾಂಪ್ಕೋದಲ್ಲದರೂ ಸಿಂಗಲ್ ಟೀ ಮತ್ತು ಮಾರಿ ಬಿಸ್ಕತ್ತು ತಿನ್ನುವ ಅವಕಾಶ ಸಿಗಲಿ ಎಂಬುದು ಅವರ ಕಡೆ ಕೊಡಿ ಆಶೆ. ಆದರೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ ಎಂಬುದು ಅಡಿಕೆ ಬೆಳೆಗಾರರ ಆಶಯ. ಇದೀಗ ಕ್ಯಾಂಪ್ಕೋ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲು ಬಯಸಿದ್ದ ಅಡಿಕೆ ಬೆಳೆಗಾರರ ಹೋರಾಟಗಾರ, ಜನ ಸೇವಕ, ಕೃಷಿ ತಜ್ಞ, ಪ್ರಗತಿ ಪರ ಕೃಷಿಕ,ಸುಳ್ಯದ ಅಡಿಕೆ ತೋಟಗಳ ಗಾಂಧಿ ಮಹೇಶ್ ಪುಚ್ಚಪ್ಪಾಡಿ ಮೇಲೆ ಒತ್ತಡ ಹಾಕಿ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಸಲಾಗಿದೆ. ಇನ್ನು ಉಳಿದ ಫೋಟೋಗಳ ಪರಿಚಯ ಅಡಿಕೆ ಬೆಳೆಗಾರರಿಗೂ ಇಲ್ಲ, ಸಾರ್ವಜನಿಕರಿಗೂ ಇಲ್ಲ. ಅವರೆಲ್ಲ ವೆಂಕು ಪಣಂಬೂರಿಗೆ ಹೋದ ಹಾಗೆ ಅಷ್ಟೇ.
ಹಾಗೆಂದು ಮಹೇಶ್ ಪುಚ್ಚಪ್ಪಾಡಿ ಎಂಬ ಕೃಷಿ ನಾಯಕ ಒರಿಜಿನಲೀ ಪತ್ರೀಕೋದ್ಯಮ ಫೀಲ್ಡಿನಿಂದ ಬಂದವರು. ನಂತರ ಜನ ಸೇವೆ, ಕೃಷಿ ಹೋರಾಟಗಳು ಎಂದೆಲ್ಲಾ ಶುರುವಿಟ್ಟುಕೊಂಡದ್ದು. ಅವರ ಯಾವುದೇ ಸೇವೆಗಳು, ಹೋರಾಟಗಳು ಪಾರದರ್ಶಕ ಆಗಿದ್ದುದ್ದರಿಂದ ಇದೀಗ ಮಹೇಶ್ ಪುಚ್ಚಪ್ಪಾಡಿಯವರು ಪುತ್ತೂರು, ಸುಳ್ಯ ಗ್ರಾಮೀಣ ಭಾಗದ ಪವರ್ ಫುಲ್ ಕೃಷಿ ಹೋರಾಟಗಳ ಅಗ್ರಗಣ್ಯ ನಾಯಕ ಎಂದೆಣಿಸಿ ಕೊಂಡಿದ್ದಾರೆ. ಅಡಿಕೆ ಲೋಕದ ಅವರ ಸೇವೆಗಳ ಬಗ್ಗೆ ಕೃಷಿಕರು ಇನ್ನಿಲ್ಲದ ರೀತಿಯಲ್ಲಿ ಆಕರ್ಷಿತರಾಗಿದ್ದು ಮಹೇಶ್ ಅಡಿಕೆ ತೋಟಗಳ ಗಾಂಧಿ ಎನ್ನುವಲ್ಲಿ ತನಕ ಕೃಷಿಕರ ಭರವಸೆ ಇದೆ. ಅವರ ಈ ನಾಯಕತ್ವ ಮತ್ತು ಜನ ಬೆಂಬಲ ಅವರನ್ನು ಪೂರ್ಣ ವಿಶ್ವಾಸ ದಿಂದ, ಆತ್ಮವಿಶ್ವಾಸದಿಂದ ಕ್ಯಾಂಪ್ಕೋ ಚುನಾವಣೆಯಲ್ಲಿ ಸ್ಪರ್ಧಿಸುವ ತನಕ ತಂದು ನಿಲ್ಲಿಸಿತ್ತು. ಆದರೆ ಇಲ್ಲಿ ಬಂದು ನೋಡಿದರೆ ಅದೇ ಗಬ್ಬುನಾತದ ರಾಜಕೀಯ ವಾಸನೆ. ಮಹೇಶ್ ಮೂಗು ಮುಚ್ಚಿಕೊಂಡು ಹೊರ ಬಂದಿದ್ದಾರೆ.

Shanvitha S.
Happy Children’s day


ಹಾಗೆಂದು ಮಹೇಶ್ ಪುಚ್ಚಪ್ಪಾಡಿಯವರು ಕ್ಯಾಂಪ್ಕೋಗೆ ಯಾಕೆ ಹೋಗಬೇಕು ಮತ್ತು ಯಾಕೆ ಅಲ್ಲಿ ಇರಬೇಕು ಎಂಬ ಪ್ರಶ್ನೆಗೆ ಅವರೊಬ್ಬ ಜನಸೇವೆ, ಪತ್ರಿಕೋದ್ಯಮ ಮತ್ತು ಕೃಷಿ ಈ ಮೂರು ಕ್ಷೇತ್ರಗಳಲ್ಲಿ ತಾವು ತೊಡಗಿಸಿಕೊಂಡು ನಿಜವಾದ ಸಾಮಾಜಿಕ ಕಳಕಳಿ, ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆಗಾಗಿ ಹೆಸರು ಗಳಿಸಿರುವವರು.ಅವರು ಒಬ್ಬ ಬರಹಗಾರರೂ ಹೌದು, ಕ್ರಿಯಾವಂತರೂ ಹೌದು. ಹಿಡಿದ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಅಭ್ಯಾಸ, ಸಾಧನೆಗೆ ಬದ್ಧತೆ, ಜನಪರ ದೃಷ್ಟಿಕೋಣ ಇವರ ಕೆಲಸದ ಗುರುತುಗಳು.ಅಡಿಕೆ ಬೆಳೆಗಾರರ ನಿಜವಾದ ಹಿತಕ್ಕಾಗಿ ಅವರು ಅನೇಕ ಹಂತಗಳಲ್ಲಿ ಹೋರಾಡಿದ್ದಾರೆ.
ಅಡಿಕೆ ಎಲೆಚುಕ್ಕಿ ರೋಗ, ಹಳದಿ ರೋಗಗಳಂತಹ ಮಹತ್ವದ ಸವಾಲುಗಳು ಬಂದಾಗ ಮೊದಲಿಗರಾಗಿ ಶೋಧನೆ ನಡೆಸಿ, ಪ್ರಾಮಾಣಿಕ ವರದಿಗಳ ಮೂಲಕ ಸರ್ಕಾರ ಮತ್ತು ತಜ್ಞರ ಗಮನ ಸೆಳೆದವರು ಇವರೇ. ಅಷ್ಟೇ ಅಲ್ಲದೆ, ಇತ್ತೀಚಿನ WHO ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಗಳ ಕುರಿತು ಸತ್ಯಾಸತ್ಯತೆ ತಿಳಿಯಲು ಅವರು ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಅಡಿಕೆಯ ಕುರಿತು ಕ್ಲಿನಿಕಲ್ ಟ್ರಯಲ್ ಅಗತ್ಯವಿದೆ ಎಂಬ ವಾದವನ್ನು ದೃಢವಾದ ಮಾಹಿತಿಗಳ ಆಧಾರದ ಮೇಲೆ ಮಂಡಿಸಿ, ಬೆಳೆಗಾರರ ಹಿತವನ್ನು ಕಾಪಾಡುವ ಧೈರ್ಯ ತೋರಿದ್ದಾರೆ. ಅವರ ನಿಲುವು ಸ್ಪಷ್ಟ “ಭಯದ ರಾಜಕಾರಣ ಬೇಡ,ಸತ್ಯದ ಆಧಾರ ಬೇಕು!” ಎಂಬುದು. ಮಹೇಶ್ ಪುಚ್ಚೆಪ್ಪಾಡಿ ಅವರು ಕೇವಲ ಸಮಸ್ಯೆ ಹೇಳುವವರಲ್ಲ; ಪರಿಹಾರ ಹುಡುಕುವವರು. ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಅವರ ವಾಸ್ತವಿಕ ದೃಷ್ಟಿಕೋನ, ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ಅವರ ಚಿಂತನೆಗಳು, ಸಹಕಾರ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವಂಥವು.
ಸಂಸ್ಥೆಗೆ ಅಗತ್ಯವಾದ ನವಚೇತನ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ Campco ದಂತಹ ಸಂಸ್ಥೆಗಳಿಗೆ ಹೊಸ ಚೇತನ ಅಗತ್ಯ. ದೀರ್ಘಕಾಲದ ಸ್ಥಿತಿಲಾಭದಿಂದ (stagnant position) ಹೊರಬಂದು ಸಂಸ್ಥೆಯನ್ನು ಧನಾತ್ಮಕ ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಸ ಬೇಕು. ಬೆಳೆಗಾರರ ನಂಬಿಕೆ ಮತ್ತು ಭಾಗವಹಿಸುವಿಕೆ ಹೆಚ್ಚಿಸಲು, ಚಾಕಲೇಟ್, ತೆಂಗಿನೆಣ್ಣೆ ಮುಂತಾದ ಮಾರುಕಟ್ಟೆ ವಿಭಾಗಗಳನ್ನು ಹೊಸ ತಂತ್ರಜ್ಞಾನ ಮತ್ತು ಮಾರ್ಕೆಟಿಂಗ್ ಧೋರಣೆಗೆ ಹೊಂದಿಸಬೇಕು. ಸಂಸ್ಥೆ ರಾಜಕೀಯರಹಿತವಾಗಿ, ಸಂಪೂರ್ಣವಾಗಿ ಬೆಳೆಗಾರರ ಹಿತಕ್ಕಾಗಿ ಕೆಲಸ ಮಾಡುವ ನಿಜವಾದ ಸಹಕಾರಿ ಚಳವಳಿಯಾಗಿ ಬೆಳೆಯಬೇಕು.ಇದೇ ಅವರ ಉದ್ದೇಶ. ಇನ್ನು ಏಕೆ ಮಹೇಶ್ ಪುಚ್ಚೆಪ್ಪಾಡಿ ಅಗತ್ಯ? ಎಂಬ ಪ್ರಶ್ನೆಗೆ ನಿರ್ವಹಣಾ ದೃಢತೆ,ಕಾರ್ಯತಂತ್ರ ರೂಪಿಸಿ ಅನುಷ್ಠಾನಗೊಳಿಸುವ ಸಾಮರ್ಥ್ಯ,
ದೂರದರ್ಶಿ ಯೋಚನೆ,ಮಾರುಕಟ್ಟೆ, ತಂತ್ರಜ್ಞಾನ ಮತ್ತು ಬೆಳೆಗಾರರ ಸಂಪರ್ಕಕ್ಕೆ ಹೊಸ ದಿಕ್ಕು, ಜನಪರ ಮನೋಭಾವ, ಸಹಕಾರದ ನಿಜವಾದ ಅರ್ಥದಲ್ಲಿ ಜನಪರ ಕಾರ್ಯದ ಶಕ್ತಿ. ಇನ್ನು ಕೃಷಿಕ-ಕಾಳಜಿಯಲ್ಲಿ ಮಹೆಶ್ ಗೆ ಬೆಳೆಗಾರರ ವನಮಟ್ಟವನ್ನು ಹೆಚ್ಚಿಸುವ ಹೃದಯಪೂರ್ವಕ ಬದ್ಧತೆ ಇದೆ. ಅವರ ಹೊಸ ಚಿಂತನೆ ಏನೆಂದರೆ ಕ್ರಿಯಾಶೀಲ ತಂಡ ನಿರ್ಮಾಣ, ಪಂಚವಾರ್ಷಿಕ ಯೋಜನೆಗಳ ರೂಪಕ ಮತ್ತು ಅನುಷ್ಠಾನ.ಇಂಥವರು ಸಂಸ್ಥೆಯೊಳಗೆ ಸೇರುವುದು ಕೇವಲ ವ್ಯಕ್ತಿಯ ಗೆಲುವಲ್ಲ, ಅದು ಬೆಳೆಗಾರರ ಜಯ, ಸಹಕಾರದ ಪುನರುಜ್ಜೀವನ. ಆದರೆ ಆದದ್ದೇನು? ಇಂಥ ಕ್ರಿಯಾಶೀಲ ವ್ಯಕ್ತಿತ್ವದ ವ್ಯಕ್ತಿಗೂ ಒತ್ತಡ. ಹಿಂದೆ ಸರಿಯುವಂತೆ ಸಿಂಪಲ್ ಧಮ್ಕಿ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top