ಪುತ್ತೂರಿನ ಯುವ ಚೈತನ್ಯ ಸಮಾವೇಶಕ್ಕೆ ಕೊಂತೂರು ಬ್ಯಾಡ್ ಬಾಯ್?

Pattler News

Bureau Report

ಪುತ್ತೂರಿನಲ್ಲಿ ನಾಳೆ ಅಂದರೆ ನವೆಂಬರ್ 23 ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಡೆಯಲಿರುವ ಯುವ ಚೈತನ್ಯ ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಕೊಂತೂರಿನ ಬ್ಯಾಡ್ ಬಾಯ್ ಒಬ್ಬ ಬರುತ್ತಿದ್ದು ಈ ಬಗ್ಗೆ ಈಗಾಗಲೇ ಪುತ್ತೂರು ತುಂಬಾ ಸುನಾಮಿಯಂತೆ ಅಪಸ್ವರ ಎದ್ದಿದೆ. ಸನ್ಮಾನ್ಯರಲ್ಲಿ ವೀಡಿಯೋ ದೋಷ ಹಾಗೂ ಇತರೇ ದೋಷಗಳು ಇರುವಾಗ ಇವರು ಯುವಕರಲ್ಲಿ ಯಾವ ಸೈಜಿನ ಚೈತನ್ಯ ತುಂಬ ಬಲ್ಲರು ಎಂಬ ಪ್ರಶ್ನೆ ಎದ್ದಿದೆ.
ಹಾಗೆಂದು RSS ಅಂದರೆ ಶಿಸ್ತಿನ ಸಂಘಟನೆ. ಆ ಸಂಘಟನೆಯಲ್ಲಿ ಇರುವವರೆಲ್ಲ ಶಿಸ್ತಿನ ಸಿಪಾಯಿಗಳೇ ಮತ್ತು ಹಠಮಾರಿ ಹಿಂದೂ ಧರ್ಮ ಸೈನಿಕರೇ. ಅದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಪುತ್ತೂರಿನಂತಹ ದೇಶಭಕ್ತರ ಗರ್ಭಗುಡಿಯಲ್ಲಿ ಸಂಘಟನೆ ಪೊಗಸ್ತಾಗಿದೆ. ಇಂತಹ ಖಡಕ್ ಸಂಘಟನೆ ಇರುವ ಪುತ್ತೂರಿನ ಹಿಂದೂ ಧರ್ಮ ಸೈನಿಕರ ಮನೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊರಂಪು ಬೇನೆಯ ಕ್ಯಾಂಡಿಡೇಟ್ ಹಾಕಲು ಒತ್ತಾಯ,ಒತ್ತಡ ಮಾಡಿ ಬಿಜೆಪಿ ಮನೆಗೆ ಹೋಗುವಂತೆ ಮಾಡಿದ ಒಬ್ಬ ಶಿಸ್ತಿನ ಸಿಪಾಯಿ ಕೊಂತೂರು ಕಡೆ ಇದ್ದ. ಈ ಶಿಸ್ತಿನ ಸಿಪಾಯಿಯ ಪತ್ತ್ ಕೇಸ್ ಮತ್ತು ಪತ್ತೊಂಜಿ ಕೇಸಿನ ಕ್ಲೋತ್ ಲೆಸ್ ವೀಡಿಯೋ ಕೂಡ ಕಳೆದ ವಿಧಾನಸಭಾ ಚುನಾವಣೆಯ ಸುಮುಹೂರ್ತದಲ್ಲಿ ರಿಲೀಸ್ ಆಗಿ ವೈರಲ್ ಆಗಿತ್ತು. ಆದರೂ ಈ ಎಲ್ಲಾ ಬೆಳವಣಿಗೆಗಳು ಶಿಸ್ತಿನ ಸಿಪಾಯಿ ಮೇಲೆ ಯಾವುದೇ ರಿಯಾಕ್ಷನ್ ಆಗಿರಲಿಲ್ಲ ಮತ್ತು ಜನ ಕೂಡ ಮರೆತು ಬಿಟ್ಟಿದ್ದರು. ಇದೀಗ ಪುತ್ತೂರಿನಲ್ಲಿ ಯುವ ಚೈತನ್ಯ ಸಮಾವೇಶ. ಹದಿನೆಂಟರಿಂದ ಇಪ್ಪತ್ತೆಂಟರ ಒಳಗಿನ ಯುವ ಧರ್ಮ ಸೈನಿಕರ ಸಮಾವೇಶ.
ಹಾಗೆ ಭಾನುವಾರ ಪುತ್ತೂರಿನಲ್ಲಿ ನಡೆಯಲಿರುವ ಯುವ ಚೈತನ್ಯ ಸಮಾವೇಶದ ಮುಖ್ಯ ಭಾಷಣಕಾರರಾಗಿ ಕೊಂತೂರಿನ ಈ ವೀಡಿಯೊ ಬಾಯ್ ಬರಲಿದ್ದಾನೆ. ಹದಿನೆಂಟರಿಂದ ಇಪ್ಪತ್ತೆಂಟರ ಒಳಗಿನ ಯುವ ಧರ್ಮ ಸೈನಿಕರ ಸಮಾವೇಶದಲ್ಲಿ ಈತನನ್ನು ಸೈನಿಕರಿಗೆ ಹೊಸ ಚೈತನ್ಯ ತುಂಬಿಸಲು ಕರೆಸಲಾಗಿದೆ. ಎಂಥಾ ಒಂದು ಅವಸ್ಥೆ ಮಾರಾಯ್ರೆ. ತನ್ನದೇ ಕಾಮ ಕೇಳಿಗಳ ಕೆಟ್ಟ ವೀಡಿಯೋ ಮಾಡಿಟ್ಟುಕೊಂಡು, ಅದು ವೈರಲ್ ಆಗಿ, ಮಾನ ಮರ್ಯಾದೆ, ಲಜ್ಜೆ ಪೊಲೆಜ್ಜಿ ಎಲ್ಲಾವನ್ನೂ ಕಳಕ್ಕೊಂಡಿದ್ದ ವ್ಯಕ್ತಿಯನ್ನು ಹಿಂದೂ ಧರ್ಮ ಸೈನಿಕರಿಗೆ ಯುವ ಚೈತನ್ಯ ಲೋಡ್ ಮಾಡಲು ಕರೆಸಲಾಗಿದೆ ಎಂದರೆ ಕರೆದವರಾರು ಎಂದು ಕೂಡ ಕರೆದವರನ್ನು ಹುಡುಕ ಬೇಕಾಗಿದೆ. ಹಿಂದೂ ಧರ್ಮ ಸೈನಿಕರಿಗೆ ಚೈತನ್ಯ ತುಂಬಲು ಬೇರೆ ಯಾರೂ ಸಿಕ್ಕಿಲ್ವಾ? ಕಾಮ ಕೇಳಿಗಳ ವೀಡಿಯೋ ಮಾಡಿದ ಕಾಮುಕ ಏನು ತಾನೇ ಚೈತನ್ಯ ತುಂಬಿಯಾನು? ಹೌದು ಆ ಕಾಮುಕನ ಭಾಷಣಕ್ಕೆ ಕಿವಿಯಾದರೂ ಕೊಡಬೇಕಲ್ಲ. ಭಾಷಣದ ನಂತರ ಕಿವಿಗೇ ಹೋಮ ಹವನ ಮಾಡಬೇಕಷ್ಟೆ ಮಾರಾಯ್ರೆ. ಆದ್ದರಿಂದ ಸಂಘಟನೆ, ಸಮಾವೇಶದ ಸಂಘಟಕರು ಒಂದು ರೌಂಡು ಕುಂತು ಯೋಚಿಸಿದರೆ ಒಳ್ಳೆಯದು

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top