ಮುರಿದು ಬಿದ್ದ ಲವ್ವಿನ ಪರಿಣಾಮವಾಗಿ ಹುಡುಗಿಯೊಬ್ಬಳು ಇಲಿ ಪಾಷಾಣ ತಿಂದು ಆತ್ಮಹತ್ಯೆ ಮಾಡಿಕ್ಕೊಂಡ ಘಟನೆ ಗುತ್ತಿಗಾರು ಸೈಡಿನ ಚಿಕ್ಮುಳಿ ಎಂಬಲ್ಲಿ ನಡೆದಿದೆ. ಹುಡುಗಿ ಹುಡುಗನನ್ನು ಹೆದರಿಸಲು ವಿಷ ಕುಡಿದದ್ದು ಎಂದು ಸುದ್ದಿ. ಹುಡುಗ ಗುತ್ತಿಗಾರಿನ ಹೋಟೆಲ್ ಮಾಲೀಕರೊಬ್ಬನ ಪುತ್ತರ್.
ಅಲ್ಲಿ ಸುಬ್ರಹ್ಮಣ್ಯ – ಸುಳ್ಯ ರಾಜ್ಯ ಹೆದ್ದಾರಿಯಲ್ಲಿ ಸಿಗುವ ದೊಡ್ಡ ಜಂಕ್ಷನ್ ಗುತ್ತಿಗಾರು. ಸುಳ್ಯ ತಾಲೂಕನ್ನು ಏನಾದರೂ ಒಡೆದು ಎರಡು ತಾಲೂಕು ಮಾಡುವುದಿದ್ದರೆ ಅಲ್ಲಿ ಫಸ್ಟ್ ಪ್ರಿಫರೆನ್ಸ್ ಗುತ್ತಿಗಾರಿಗೇ ಕೊಡಬೇಕಾಗುತ್ತದೆ ಮತ್ತು ಎರಡನೇ ತಾಲೂಕು ಕೇಂದ್ರ ಆಗಲು ಗುತ್ತಿಗಾರು ಎಲಿಜಿಬಲ್ ಕೂಡ. ಇಂಥ ಗುತ್ತಿಗಾರಿನ ಸಮೀಪದ ಚಿಕ್ಮುಳಿಯಲ್ಲಿ ಓ ಮೊನ್ನೆ ಕಾಲೇಜು ಹುಡುಗಿಯೊಬ್ಬಳು ಇಲಿ ಪಾಷಾಣ ತಿಂದು ಸೂಸೈಡ್ ಮಾಡಿಕೊಂಡಳು. ಯಾರನ್ನೋ ಹೆದರಿಸಲು ಹೋಗಿ ಮುಗ್ಧೆಯೊಬ್ಬಳು ತನ್ನ ಜೀವವನ್ನೇ ಬಲಿ ಕೊಟ್ಟಂತಾಗಿದೆ.
ಅವಳು ಪೂಜಾ. ಗುತ್ತಿಗಾರು ಬದಿಯ ಚಿಕ್ಮುಳಿ ಹುಡುಗಿ. ಬದುಕಿನುದ್ದಕ್ಕೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಹುಡುಗಿ. ಆದರೆ ಆದ ಒಂದು ಕಪ್ಪು ಚುಕ್ಕೆ ಬದುಕಿಗೇ ಕೊಳ್ಳಿ ಇಟ್ಟಿದೆ. ಇನ್ನು ಅವನು ಮುನ್ನಿ. ಬ್ಯಾಡ್ ಬಾಯ್. ಮುತ್ತು ಹೋಟೆಲ್ ಮಾಲೀಕನ ಮಗ. ಅಮಾಯಕ ಹುಡುಗಿಯರಿಗೆ ಉರ್ಲು ಇಡುವುದೇ ಮುನ್ನಿ ಕೆಲಸ. ಹಾಗೆ ಇವನಿಟ್ಟ ಉರ್ಲಿಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಬಿದ್ದಿದ್ದು ಇದೇ ಪೂಜಾ. ತುಂಬಾ ದಿನ ಪೂಜೆ ಮಾಡಿದ. ಅವನು ಇವಳಿಗೆ, ಇವಳು ಅವನಿಗೆ ಗಿಫ್ಟ್ ಮೇಲೆ ಗಿಫ್ಟ್ ಕೊಟ್ಟು ಕೊಂಡರು. ಲವ್ವು ಭಾರೀ ಡೀಪಿಗೆ ಹೋಗಿತ್ತು. ಇವರ ಲವ್ವು ಒಬ್ಬರನ್ನೊಬ್ಬರು ಬಿಟ್ಟು ಬದುಕಲೇ ಬಾರದು ಎಂಬ ಲೆವೆಲ್ ರೀಚ್ ಆಯ್ತು. ಇಂಥ ಸಮಯದಲ್ಲೇ ಮುನ್ನಿ ಸುಳ್ಯದಲ್ಲಿ ಬಂಗಾರ್ದ ಅಂಗಡಿಯೊಂದಕ್ಕೆ ಪವನ್ ತೂಕಲು ಕೆಲ್ಸಕ್ಕೆ ಸೇರಿಕ್ಕೊಂಡ.
ಹಾಗೆ ಸುಳ್ಯದಲ್ಲಿ ಕೆಲಸಕ್ಕೆ ಸೇರಿಕ್ಕೊಂಡ ಮುನ್ನಿ ಬಂಗಾರ್ದ ಅಂಗಡಿಯಲ್ಲೇ ಉರ್ಲಿಟ್ಟ ಕಾರಣ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಂದು ಇವನ ಉರ್ಲಿಗೆ ಬಿದ್ದಿತ್ತು ಎಂದು ಗುಸುಗುಸು ಇತ್ತು. ಹಾಗೆ ಆ ಹುಡುಗಿಗೆ ಪೂಜೆ ಶುರು ಮಾಡಿದ ಮುನ್ನಿ ಚಿಕ್ಮುಳಿ ಹುಡುಗಿಯನ್ನು ನೆಗ್ಲೆಕ್ಟ್ ಮಾಡತೊಡಗಿದ. ಮುನ್ನಿ ಕೈ ಕೊಡುತ್ತಾನೆ ಎಂದು ಗೊತ್ತಾದ ಕೂಡಲೇ ಪೂಜಾ ಸೈಪೆ ಎಂದು ವಾರ್ನಿಂಗ್ ಕೊಟ್ಟಿದ್ದಳು. ಇಬ್ಬರೊಳಗೂ ದಿನಾ ಕಿರಿಕ್ ನಡೆದಿದೆ. ಒಂದು ದಿನ ಮುನ್ನಿ ಪೂಜಾ ಕೊಟ್ಟಿದ್ದ ಗಿಫ್ಟ್ ಗಳನ್ನೆಲ್ಲ ರಾಶಿ ಹಾಕಿ ಹೋಮ ಮಾಡಿ ಬಿಟ್ಟ ಮತ್ತು ಅದನ್ನು ಶೂಟಿಂಗ್ ಮಾಡಿ Instagramಗೆ ಹಾಕಿ ಬಿಟ್ಟ. ಇದನ್ನು ನೋಡಿದ ಪೂಜಾಳಿಗೆ ಒಮ್ಮೆಲೇ ಜ್ಞಾನೋದಯ ಆಗಿದೆ. ಕಲಿಸ್ತೇನೆ ಮಗನೇ ನಿನಗೆ ಎಂದು ಮುನ್ನಿಯನ್ನು ಹೆದರಿಸಲು ಡೆತ್ ನೋಟ್ ಬರೆದು ಸೀದಾ ಹೋಗಿ ಪೂಜಾ ಮೈಸೂರು ಪಾಕ್ ತಿಂದ ಹಾಗೆ ಇಲಿ ಪಾಷಾಣ ತಿಂದು, ಅದನ್ನು ಶೂಟ್ ಮಾಡಿ ಮುನ್ನಿಗೆ ಕಳಿಸಿದ್ದಾಳೆ. ಮೈಸೂರು ಪಾಕ್ ತಿಂದಿದ್ದು ಜಾಸ್ತಿಯಾಗಿದೆ. ಹುಡುಗಿ ಆಸ್ಪತ್ರೆಯಿಂದ ಟೇಕ್ ಆಫ್ ಆಗಿದೆ.
ಹಾಗೆಂದು ಪೂಜಾ ಬರೆದ ಡೆತ್ ನೋಟಲ್ಲಿ ಎಲ್ಲೂ ಮುನ್ನಿ ಬಗ್ಗೆ ಹೇಳಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದೇ ಮೈಸೂರು ಪಾಕ್ ತಿಂದಿದ್ದಾಳೆ. ಆದರೂ ಸಾರ್ವಜನಿಕ ವಲಯದಲ್ಲಿ ಪೂಜಾ ಸಾವಿಗೆ ಮುನ್ನಿಯೇ ಕಾರಣ ಎಂಬ ಗುಸು ಗುಸು ಇದ್ದ ಕಾರಣ ಪೋಲಿಸರೂ ಮುನ್ನಿಯನ್ನು ಕರೆದು “ಏನಪ್ಪಾ” ಎಂದು ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಏನೂ ಕಂಪ್ಲೈಂಟ್ ಇಲ್ಲದೆ ಪೋಲಿಸರೂ ವಿಚಾರಿಸಿ ಅವನನ್ನು ವಾಪಾಸು ಕಳಿಸಿದ್ದರು. ಅವನೀಗ ಸೇಫ್ ಆಗಿದ್ದಾನೆ. ಆದರೆ ಪೂಜಾ ಸಾವಿನ ಸುದ್ದಿ ಕೇಳಿ ಕೆಲವು ದಿನಗಳ ಕಾಲ ಮುನ್ನಿ ಕೇರಳ ಕಡೆ ಎಲ್ಲೋ ಅಟ್ಟದಲ್ಲಿ ಕುಂತಿದ್ದ ಎಂದು ತಿಳಿದುಬಂದಿದೆ.
LATEST
ಮುತ್ಲಾಜೆ ಶೂಲಿನಿ ದುರ್ಗಿ ಮತ್ತು ಶಾಸ್ತಾವು ಕ್ಷೇತ್ರ.ಜಿಲ್ಲೆಯ 3 ತಾಲೂಕುಗಳು ಬರ ಪೀಡಿತ! ಘೋಷಣೆ.ವಿಟ್ಲ: ದೇವಸ್ಥಾನದ ಜಾಗ ನುಂಗಣ್ಣಗಳಿಂದ ಪೊಕ್ಕಡೆ ಕಂಪ್ಲೈಂಟ್!ಪಂಜ ದೇವಸ್ಥಾನದ ಬಗ್ಗೆ ಒಂದಿಷ್ಟು!ಪಂಜ: ಶತ ರುದ್ರಾಭಿಷೇಕದ ಲೆಕ್ಕ ಯಾವಾಗ?ಪೋಲಿಸ್ ಠಾಣೆಯ ಮುಂದೆಯೇ ಮರ್ಡರ್! ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಜೀವಾವಧಿ!ಸುಳ್ಯ ಅಜ್ಜಾವರದಲ್ಲಿ ಕ್ಯಾಂಡಲ್ ಜುಗಾರಿ!ವಿಟ್ಲ: ಅರೇಖಾನ ಗುತ್ಯಮ್ಮ ದೇವರ ಜಾಗೆಯಲ್ಲಿ ಅನ್ಯಮತೀಯರ ಕಾಂಪ್ಲೆಕ್ಸ್!ಪುತ್ತೂರು: ಸೆಲೂನಲ್ಲಿ ಸೆಟ್ಟಿಂಗ್!ಬುಳೇರಿಕಟ್ಟೆ ಗಣೇಶ ವಿಸರ್ಜನೆ ಬಗ್ಗೆ ಅವಹೇಳನ! ಡಿಶುಂ… ಡಿಶುಂ!
ಗುತ್ತಿಗಾರು: ದುರಂತ ನಾಯಕಿಯ ಆತ್ಮಹತ್ಯೆಯ ಹಿಂದೆ ಮುತ್ತು ಹೋಟೆಲ್ ಮುನ್ನಿ!
Pattler News
Bureau Report
