ಕಡಬ ಸಮೀಪದ ಮರ್ಧಾಳ ಪರಿಸರದ ಕುಂಡಡ್ಕ ಫಾಲ್ಸ್ ಗೆ ಉರಿಕಡಲೆ ತಿನ್ನಲು ಹೋಗಿದ್ದ ಇಬ್ಬರು ಲತ್ತ್ ಪ್ರಾಯದ ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದ ಬಗ್ಗೆ ವರದಿಯಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಹಾಕಬಹುದಿತ್ತು.
ಅವರಿಬ್ಬರು ಪ್ರೇಮಿಗಳಂತೆ. ಕಡಬದ ಹೈಸ್ಕೂಲ್ ಸ್ಟೂಡೆಂಟ್ಸ್. ಹುಡುಗ ಅಮುಣಿ ಪಾಲ್ ಕಡೆಯವನು ಮತ್ತು ಹುಡುಗಿ ಬಹುಶಃ ಕೋಡಿಂಬಾಳ ಕಡೆದ್ದು. ಅವರು ಓ ಮೊನ್ನೆ ಮರ್ಧಾಳ ಪರಿಸರದ ಕುಂಡಡ್ಕ ಫಾಲ್ಸ್ ನೋಡಲು ಬಂದಿದ್ದಾರೆ. ಶಾಲೆಯಲ್ಲಿ ಅಜ್ಜಿಗೆ ಹುಷಾರಿಲ್ಲ ಅಂತ ರೈಲು ಬಿಟ್ಟು ಯೂನಿಫಾರ್ಮ್ ಕಳಚಿ ಸಾದಾ ಡ್ರೆಸ್ ನಲ್ಲಿ ಬಂದು ಕುಂಡಡ್ಕ ಫಾಲ್ಸ್ ನಲ್ಲಿ ಲ್ಯಾಂಡ್ ಆಗಿದ್ದಾರೆ. ಆದರೆ ಇವರನ್ನು ಮರ್ಧಾಳ ಜಂಕ್ಷನ್ ಬಳಿಯಿಂದಲೇ ಫಾಲೋ ಮಾಡಿದ ಮರ್ಧಾಳ ಸುಳ್ಯದ ಇಬ್ಬರು ಮತ್ತು ಆಜನ, ಕೋಕಳ ಕಡೆಯ ಇಬ್ಬರು ರಿಕ್ಷಾ ಚಾಲಕರು ಫಾಲ್ಸ್ ಬಳಿಯಲ್ಲಿ ಇವರನ್ನು ತರಾಟೆಗೆತ್ತಿಕೊಂಡಿದ್ದಾರೆ.” ಇಡೆ ದಾಯೆ ಬತ್ತಿನ” ದಿಂದ ಶುರುವಾದ ರಿಕ್ಷಾ ಡ್ರೈವರ್ ಗಳ ಬಾಧೆ ಬಲಾತ್ಕಾರವಾಗಿ ಪ್ರೇಮಿಗಳ ಐಡೆಂಟಿಟಿ ಕಾರ್ಡ್ ತಗೊಂಡು ಅವರ ಅಡ್ರೆಸ್ ಹುಡುಕುವಲ್ಲಿ ತನಕ ಮುಂದುವರೆದಿದೆ. ನಂತರ ಮತ್ತೂ ಮುಂದುವರೆದ ರಿಕ್ಷಾ ಡ್ರೈವರ್ ಗಳು ಇಬ್ಬರೂ ಪ್ರೇಮಿಗಳ ಹೆತ್ತವರನ್ನು ಸ್ಪಾಟಿಗೆ ಕರೆಸಿ ಅಲ್ಲೇ ಕೆದಿಲ ಕ್ರಾಸ್ ಬಳಿ ಪಂಚಾಯ್ತಿ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಹುಡುಗಿ ಕಡೆಯವರು ಹುಡುಗನಿಗೆ ಪದಾನ ಹೊಡೆದಿದ್ದು, ಹುಡುಗನ ಕಡೆಯವರೂ “ಪೆತ್ತ ಸರಿ ಕಟ್ಟ್ ಪಾಡ್ಲೆಯೆ” ಎಂದು ಹುಡುಗಿ ಕಡೆಯವರಿಗೆ ಜಬರ್ ದಸ್ತ್ ಮಾಡಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಮರ್ಧಾಳ ರಿಕ್ಷಾ ಪಾರ್ಕಿನ ರಿಕ್ಷಾ ಡ್ರೈವರ್ ಗಳಿಗೆ ಕಡಬ ಪೊಲೀಸರ ಚಾರ್ಜ್ ಯಾವಾಗ ಸಿಕ್ಕಿದ್ದು ಎಂಬುದು. ಸುಮ್ಮನೆ ರಿಕ್ಷಾ ಬಾಡಿಗೆ ಮಾಡುವುದು ಬಿಟ್ಟು ಯಾವುದೋ ಗಂಡು ಹೆಣ್ಣು ಅಂಚಿಂಚಿ ಹೋದರೂ ಅವರನ್ನೇ ಮೂಸಿಕೊಂಡು ಹೋಗುವ ಜರೂರತ್ತು ಈ ನಾಲ್ವರು ರಿಕ್ಷಾ ಡ್ರೈವರ್ ಗಳಿಗೆ ಏನಿತ್ತು. ಒಂದು ಮೂಲದ ಪ್ರಕಾರ ಈ ರಿಕ್ಷಾ ಡ್ರೈವರ್ ಗಳು ಜೋಡಿಗೆ ಹಲ್ಲೆ ನಡೆಸಿ, ಹೆದರಿಸಿ ಐಡೆಂಟಿಟಿ ಕಾರ್ಡ್ ಮತ್ತು ಅವರ ಹೆತ್ತವರ ಪೋನ್ ನಂಬರ್ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಹಾಗೆನಾದರೂ ಆಗಿದ್ದರೆ ಈ ನಾಲಕ್ಕು ಆಟೋ ಚಾಲಕರೂ ಒಳಗೆ ಹೋಗುವ ಅಪಾಯಗಳಿವೆ. ಈ ಒಂದು ನೈತಿಕ ಪೊಲೀಸ್ ಗಿರಿ ಬಗ್ಗೆ ಕೂಡಲೇ ಕಡಬದಲ್ಲಿ ಬಂದು ಕುಂತಿರುವ ಶೂಟೌಟ್ ಸ್ಪೆಷಲಿಸ್ಟ್ ಜಂಬೂ ರಾಜ್ ಮಹಾಜನ್ ಒಂದು ರೌಂಡು ಮರ್ಧಾಳಕ್ಕೆ ರೌಂಡ್ಸ್ ಬರೋದು ಒಳ್ಳೆದು. ಇನ್ನು ಚೈಲ್ಡ್ ಹೆಲ್ಪ್ ಲೈನ್ ಕೂಡ ಈ ಬಗ್ಗೆ ವಿಚಾರಣೆ ನಡೆಸ ಬೇಕಾಗಿದೆ. ಇಲ್ಲದಿದ್ದರೆ ಈ ಆಟೋ ಚಾಲಕರು ರಿಕ್ಷಾ ಬಿಡೋದು ಬಿಟ್ಟು ನೈತಿಕ ಪೊಲೀಸ್ ಗಿರಿಯಲ್ಲೇ ಪರ್ಮನೆಂಟ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
LATEST
ಮುತ್ಲಾಜೆ ಶೂಲಿನಿ ದುರ್ಗಿ ಮತ್ತು ಶಾಸ್ತಾವು ಕ್ಷೇತ್ರ.ಜಿಲ್ಲೆಯ 3 ತಾಲೂಕುಗಳು ಬರ ಪೀಡಿತ! ಘೋಷಣೆ.ವಿಟ್ಲ: ದೇವಸ್ಥಾನದ ಜಾಗ ನುಂಗಣ್ಣಗಳಿಂದ ಪೊಕ್ಕಡೆ ಕಂಪ್ಲೈಂಟ್!ಪಂಜ ದೇವಸ್ಥಾನದ ಬಗ್ಗೆ ಒಂದಿಷ್ಟು!ಪಂಜ: ಶತ ರುದ್ರಾಭಿಷೇಕದ ಲೆಕ್ಕ ಯಾವಾಗ?ಪೋಲಿಸ್ ಠಾಣೆಯ ಮುಂದೆಯೇ ಮರ್ಡರ್! ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಜೀವಾವಧಿ!ಸುಳ್ಯ ಅಜ್ಜಾವರದಲ್ಲಿ ಕ್ಯಾಂಡಲ್ ಜುಗಾರಿ!ವಿಟ್ಲ: ಅರೇಖಾನ ಗುತ್ಯಮ್ಮ ದೇವರ ಜಾಗೆಯಲ್ಲಿ ಅನ್ಯಮತೀಯರ ಕಾಂಪ್ಲೆಕ್ಸ್!ಪುತ್ತೂರು: ಸೆಲೂನಲ್ಲಿ ಸೆಟ್ಟಿಂಗ್!ಬುಳೇರಿಕಟ್ಟೆ ಗಣೇಶ ವಿಸರ್ಜನೆ ಬಗ್ಗೆ ಅವಹೇಳನ! ಡಿಶುಂ… ಡಿಶುಂ!
ಕಡಬ: ಮರ್ಧಾಳ ಫಾಲ್ಸ್ ನಲ್ಲಿ ನೈತಿಕ ಪೊಲೀಸ್ ಗಿರಿ!
Pattler News
Bureau Report
