ಪೆರುವಾಜೆಯಲ್ಲಿ ದೇವರು ಕೊಟ್ಟರೂ ಪೂಜಾರಿ ಬಿಡ !

Pattler News

Bureau Report

ಪೆರುವಾಜೆ ಜಲದುರ್ಗೆಯ ಜಾತ್ರಾ ಪ್ರಯುಕ್ತ ವ್ಯವಸ್ಥೆಗಳು ರೆಡಿಯಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸತತವಾಗಿ ದೇವಿಯ ಯಾವುದೇ ಕೆಲಸಗಳಿಗೆ ಉಚಿತವಾಗಿ ಶಾಮಿಯಾನ ಹಾಕುತ್ತಿದ್ದ ಸಂಸ್ಥೆಯನ್ನು ಬಿಟ್ಟು ದೇವಸ್ಥಾನದ ಆಡಳಿತಾಧಿಕಾರಿ ಶಾಮಿಯಾನ ಹಾಕಲು ಕೊಟೇಷನ್ ಕರೆದಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ. ಜಾತ್ರೆಯ ಶಾಮಿಯಾನ ಖರ್ಚು ಒಂದು ಲಕ್ಷ ಮಾರಾಯ್ರೆ. ಅದನ್ನು ದೇವಸ್ಥಾನಕ್ಕೆ ಉಳಿಸೋದು ಬಿಟ್ಟು, ಹೊಸ ಕೊಟೇಷನ್ ಯಾಕೆ ಅಂತ? ದೇವಿ ಕೊಟ್ಟರೂ ಆಡಳಿತಾಧಿಕಾರಿ ಬಿಡಲ್ವಾ?
ಹಾಗೆಂದು ಬೆಳ್ಳಾರೆ -ಪೆರ್ವಾಜೆಗಳಲ್ಲಿ ಯಾವ ಸಂಘ ಸಂಸ್ಥೆಗಳೇ ಇರಲಿ, ದೇವಸ್ಥಾನ, ದೈವಸ್ಥಾನಗಳೇ ಇರಲಿ, ರಾಜಕೀಯವೇ ಇರಲಿ ಅಲ್ಲಿ ಕೌರವರು ಮತ್ತು ಪಾಂಡವರ ಹಗ್ಗ ಜಗ್ಗಾಟ ಇದ್ದೇ ಇರುತ್ತದೆ. ಇದೀಗ ಕಾಂಗ್ರೆಸ್ ಸರ್ಕಾರ ಬಂದು ಪುನಃ ಹೋಗಲು ರೆಡಿಯಾಗಿದ್ದರೂ ಇನ್ನೂ ಪೆರುವಾಜೆ ಜಲದುರ್ಗೆಯ ದೇವಸ್ಥಾನಕ್ಕೆ ಒಂದು ಆಡಳಿತ ಮಂಡಳಿ ನೇಮಿಸಲು ಆಗಿಲ್ಲ. ಕಾರಣ ಕೇಳಿದರೆ ಕಾರಣಗಳೇ ಇಲ್ಲ. ಅದೇ ಆಡಳಿತಾಧಿಕಾರಿ, ಅದೇ ವಸಂತರು ಎಷ್ಟೂಂತ ಕೆಲಸ ಮಾಡಲಿ? ಇದೀಗ ದೇವಿ ಜಾತ್ರೆಯೂ ಬರುತ್ತಿದ್ದು ಅದರ ತಯಾರಿಯೂ ಆಗಬೇಕಿದೆ. ಇದೀಗ ಶಾಮಿಯಾನ ವ್ಯವಸ್ಥೆಯಲ್ಲಿ ಆಡಳಿತಾಧಿಕಾರಿ ಎಡವಟ್ಟು ಮಾಡಿದ್ದು “ಫೋನ್ ದೆತ್ತಿಜೆರ್, ಕೊಟೇಷನ್ ಲೆತ್ತೆ” ಎಂದು ಸಾರಿಸುತ್ತಿದ್ದಾರೆ.


ಹಾಗೆಂದು ಕಳೆದ ಮೂರು ವರ್ಷಗಳಿಂದ ಜಲದುರ್ಗೆಯ ಯಾವುದೇ ಕೆಲಸಗಳಿಗೆ ಜಲಧಿ ಇವೆಂಟ್ಸ್ ಸಂಸ್ಥೆಯವರು ಫ್ರೀಯಾಗಿ ಶಾಮಿಯಾನ ಹಾಕುತ್ತಿದ್ದರು. ಅದು ಜಾತ್ರೆ ಇರಲಿ, ದೇವಿಗೆ ನವರಾತ್ರಿ ಇರಲಿ, ಎಲ್ಲದಕ್ಕೂ ಜಲಧಿಯವರದ್ದು ಉಚಿತ ಸೇವೆ. ದೇವಿಯ ಜಾತ್ರೆಗೆ ಅಂದಾಜು ಒಂದು ಲಕ್ಷದ ತನಕ ಶಾಮಿಯಾನ ಬಿಲ್ಲು ಮತ್ತು ನವರಾತ್ರಿಗೆ ಐವತ್ತು ಸಾವಿರ ತನಕ ಬಿಲ್ಲು ಫ್ರೀ. ಈ ದುಡ್ಡು ಕಳೆದ ಮೂರು ವರ್ಷಗಳಿಂದ ಸರ್ಕಾರಕ್ಕೆ ಉಳಿತಾಯ ಆಗುತ್ತಿತ್ತು. ಆದರೆ ಈ ವರ್ಷ ದೇವ‌ಸ್ಥಾನದ ಆಡಳಿತಾಧಿಕಾರಿಯೂ ಆಗಿರುವ PDO ಜಾತ್ರೆಗೆ ಶಾಮಿಯಾನ ಹಾಕಲು ಕೊಟೇಷನ್ ಕರೆದಿದ್ದಾರೆ. ಫ್ರೀ ಶಾಮಿಯಾನ ಹಾಕುವವರು ಇರುವಾಗ ಕೊಟೇಷನ್ ಯಾಕೆ ಮಾರಾಯ್ರೆ ಎಂದು ಕೇಳಿದರೆ “ಕೊಟೇಷನ್ ಕರೆಯುವ ಮೊದಲು ಅವರಿಗೆ ಫೋನ್ ಮಾಡಲಾಗಿದೆ, ಅವರು ರಿಸೀವ್ ಮಾಡಿಲ್ಲ, ಸೋ ಕೊಟೇಷನ್ ಕರೆಯಲಾಗಿದೆ”ಎಂದು ಆಡಳಿತಾಧಿಕಾರಿ ಹೇಳುತ್ತಿದ್ದಾರೆ. ಈಗ ದೇವಸ್ಥಾನದ ಕಡೆಯಿಂದ ಶಾಮಿಯಾನ ದವರಿಗೆ ಫೋನ್ ಮಾಡುವಾಗ ಪಾಪ ಅವರು ಎಲ್ಲಿಯಾದರೂ ಶಾಮಿಯಾನ ಹಾಕುತ್ತಿದ್ದಿರ ಬಹುದು, ಅಥವಾ ಇನ್ಯಾವುದೇ ಕೆಲಸಗಳಲ್ಲಿ ಬ್ಯುಸಿ ಇದ್ದಿರಬಹುದು. ಇವತ್ತು ಕಾಲ್ ತೆಗೆಯದಿದ್ದರೆ ನಾಳೆ ಮಾಡ ಬಹುದಿತ್ತು ಅಥವಾ ನಾಡಿದ್ದು ಕೂಡ ಮಾಡಬಹುದಿತ್ತು.ನೈಟ್ ಮಾಡಬಹುದಿತ್ತು, ಮಧ್ಯಾಹ್ನ ಊಟದ ನಂತರವಾದರೂ ಮಾಡಬಹುದಿತ್ತು. ಇನ್ನು ಶಾಮಿಯಾನದವರೇನು ಅಂಡಮಾನ್ ಕಡೆ, ನಿಕೋಬಾರ್ ಕಡೆ ಕೂಡ ಅಂಗಡಿ ಮಾಡಿದ್ದಲ್ಲ. ಅಲ್ಲೇ ಪೆರುವಾಜೆಯಲ್ಲೇ ಇರುವಾಗ ಅವರಿಗೆ ಒಂದು ಕೂಕುಲು ಹಾಕಿಯಾದರೂ ದೇವಸ್ಥಾನಕ್ಕೆ ಕರೆಸ ಬಹುದಿತ್ತು. ಯಾಕೆಂದರೆ ಲಕ್ಷ ರೂಪಾಯಿ ದೇವಸ್ಥಾನಕ್ಕೆ ಉಳಿಯುವಾಗ ರಿಕ್ಷಾ ಮಾಡಿ ಹೋಗಿಯಾದರೂ ಹೇಳ ಬಹುದಿತ್ತು. ಆಡಳಿತಾಧಿಕಾರಿ ಇದನ್ನೆಲ್ಲ ಮಾಡಲೇ ಇಲ್ಲ. ಅವರು ಫೋನ್ ತೆಗೆಯಲಿಲ್ಲ, ಇವನು ಕೊಟೇಷನ್ ಕರೆದ. ದುರ್ಗಿಯ ದುಡ್ಡಲ್ವಾ, ಆಡಳಿತಾಧಿಕಾರಿ ಏನು ಅಡಿಕೆ ಮಾರಿ ಕೊಡೋದಾ?
ಇದೀಗ ತಮ್ಮ ಸೇವೆಯನ್ನು ತಿರಸ್ಕರಿಸಿ ಕೊಟೇಷನ್ ಕರೆದ ಬಗ್ಗೆ ಜಲಧಿ ಇವೆಂಟ್ಸ್ ನವರು ಸೀದಾ ಹೋಗಿ ಅಸಿಸ್ಟೆಂಟ್ ಕಮಿಷನರ್ ಸ್ಟೆಲ್ಲಾ ಮೇಡಂಗೆ ದೂರು ಕೊಟ್ಟಿದ್ದಾರೆ. ಆದರೆ ಜಲದುರ್ಗೆ ದೇವಸ್ಥಾನ ಮುಜರಾಯಿ ಇಲಾಖೆ AC ಅಂಡರಲ್ಲಿ ಬರುತ್ತಿದ್ದು ಅವರಿಗೂ ಒಂದು ತಿಳಿಸಿದರೆ ಅವರು ಆಡಳಿತಾಧಿಕಾರಿಯ ಬೆವರಿಳಿಸುವ ಅಪಾಯಗಳಿವೆ. ಆದರೂ ದೂರನ್ನು ಸ್ವೀಕರಿಸಿದ ಸ್ಟೆಲ್ಲಾ ಮೇಡಂ ಜಲಧಿಯವರೂ ಕೊಟೇಷನ್ ಸಲ್ಲಿಸುವಂತೆ ಹೇಳಿದ್ದು, ಅದರಲ್ಲಿ ಫ್ರೀ ಸರ್ವೀಸ್ ಎಂದು ನಮೂದಿಸಲು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜಲಧಿ ಜೊತೆ ಮಾತನಾಡಿದಾಗ ” ನಮ್ಮ ಕಾಲ್ ಲಿಸ್ಟ್ ಮತ್ತು ಅವರ ಕಾಲ್ ಲಿಸ್ಟ್ ತೆಗೆದು ನೋಡಿ, ನಮಗೆ ಅವರು ಕಾಲೇ ಮಾಡಿಲ್ಲ, ಅದೂ ಅಲ್ಲದೆ ತಮ್ಮ ಉಚಿತ ಸೇವೆ ಬಗ್ಗೆ ತಿಳಿಸಲು ನಾವು ದೇವಸ್ಥಾನಕ್ಕೆ ಹೋಗಿದ್ದು ಅದರ CCTV ದೃಶ್ಯಗಳನ್ನು ತೆಗೆದು ನೋಡ ಬಹುದು. ಅದೂ ಅಲ್ಲದೆ ನಾವು ಜಲದುರ್ಗೆಯ ನಡೆಯಲ್ಲಿ ಬಂದು ಹೇಳಲು ಸಿದ್ಧ” ಎಂದು ಹೇಳಿದ್ದಾರೆ. ಹಾಗಾದರೆ ದೇವಸ್ಥಾನದವರಿಗೆ ಏನಾಗಿದೆ ಮಾರಾಯ್ರೆ? ಕೊಟೆಷನ್ ಹಿಂದೆ ಕಮಿಷನ್ ವಾಸನೆ ಏನಾದರೂ ಇದೆಯಾ? ಗೊತ್ತಿಲ್ಲ, ಕಮಿಷನರೇ ವಿಚಾರಿಸ ಬೇಕು.

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ಶ್ರೀ ದೇವರಲ್ಲಿ ಪ್ರಾರ್ಥಿಸಿ ನಡೆಸಲಾಯಿತು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕಳ,ಪರಮೇಶ್ವರ ಗೌಡ ಬಿಳಿಮಲೆ, ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್,ವ್ಯವಸ್ಥಾಪನ ಸಮಿತಿ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ,ಮಾಯಿಲಪ್ಪ ಗೌಡ ಪಟ್ಟೆ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ,ಧರ್ಮಪಾಲ ಗೌಡ ಮರಕ್ಕಡ, ಪವಿತ್ರ ಮಲ್ಲೆಟ್ಟಿ,ಮಾಲಿನಿ ಕುದ್ವ, ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ kudva, ಕೇರ್ಪಡ ಮಹಿಷ ಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಾಚಣ್ಣ ಹುಧೇರಿ, ಜಗದೀಶ್ ನೆರಳ ಉದಯ ಮಸಾಲೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top