ಎಡಮಂಗಲ – ಅಲೆಕ್ಕಾಡಿ ತೋಡಿನ ಕತೆ

Pattler News

Bureau Report

ಅಲ್ಲಿ ಸುಬ್ರಹ್ಮಣ್ಯ – ಮಂಜೇಶ್ವರ ಸ್ಟೇಟ್ ಹೈವೇಯಿಂದ ಅಲೆಕ್ಕಾಡಿಯಲ್ಲಿ ಲೆಫ್ಟ್ ಗೆ ತಗೊಂಡ್ರೆ ಎಡಮಂಗಲ – ಕಡಬಕ್ಕೆ ಹೋಗಲು ಒಂದು ತೋಡು ಇದೆ. ಈ ತೋಡನ್ನು ಎಡಮಂಗಲದಿಂದ ಕಡಬ ತನಕ ರೋಡ್ ಮಾಡಿದ್ದು, ಉಳಿದ ಎಡಮಂಗಲ ಟೂ ಅಲೆಕ್ಕಾಡಿ ತನಕದ ತೋಡು ತೋಡಾಗಿಯೇ ಉಳಿದಿದೆ. ಈ ತೋಡಿನಲ್ಲೇ ದಿನಾ ಸಾವಿರಾರು ಜನ ಎಡಮಂಗಲದಿಂದ ತಾಲೂಕಿನ ವಿವಿಧ ಭಾಗಗಳಿಗೆ ಕೆಲಸಕ್ಕೆ, ವಿದ್ಯಾಭ್ಯಾಸಕ್ಕೆ, ಕೋರ್ಟ್ ಕಚೇರಿಗಳಿಗೆ, ಮದ್ದಿಗೆ, ಮದುವೆಗೆ, ಕೋಳಿ ಕಟ್ಟಕ್ಕೆ, ಬಲಿಮ್ಮೆಗೆ, ಹುಡುಗಿ ನೋಡಲು ಹೋಗುತ್ತಿದ್ದಾರೆ. ಈ ತೋಡಿನಲ್ಲಿ ಹೋದವರ ಸೊಂಟ ಮಾತ್ರ ಸೋಬಾನೆ ಗ್ಯಾರೆಂಟಿ.


ಹಾಗೆಂದು ಈ ಕುಷ್ಠರೋಗಿ ರಸ್ತೆಯ ಕುಟುಂಬಿಕರು ಯಾರು, ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಅವರೆಲ್ಲ ಜೀವಂತ ಇದ್ದಿದ್ದರೆ ಒಮ್ಮೆಯಾದರೂ ಈ ರೋಡ್ ಕಡೆ ತಿರುಗಿ ನೋಡುತ್ತಿದ್ದರು, ರೋಡಿನ ಆರೋಗ್ಯ ವಿಚಾರಿಸುತ್ತಿದ್ದರು. ಇಲ್ಲ ಅವರು ಬರೋದೇ ಇಲ್ಲ. ಹಾಗಾಗಿ ಈ ರೋಡು ತೋಡಾಗಿದೆ. ಅದರಲ್ಲೂ ಎಡಮಂಗಲದಂತಹ ಗ್ರಾಮೀಣ ಪ್ರದೇಶದಲ್ಲಿ ಏನಾದರೂ ಅವಗಢಗಳಾದರೆ, ಅರ್ಜೆಂಟಿಗೆ ಈ ರೋಡಲ್ಲಿ ಬಂದರೆ ಲೀಟರ್ ಗಟ್ಟಲೆ ಅಮೃತ್ ನೋನಿ ಕುಡಿಯುವ ಪರಿಸ್ಥಿತಿ ಇದೆ. ಎರಡು ಚಕ್ರದ್ದು, ನಾಲ್ಕು ಚಕ್ರದ್ದು ಈ ರಸ್ತೆಯಲ್ಲಿ ಬೆಲ್ಲಿ ಡಾನ್ಸ್ ಮಾಡುತ್ತಾ ಹೋದರೆ ಆರು ಚಕ್ರದ್ದು ಪೆರ್ಮರಿ ಹೋದ ಹಾಗೆ ಹೋಗುತ್ತದೆ. ಒಮ್ಮೆ ಈ ರೋಡಲ್ಲಿ ಹೋದವನಿಗೆ ನರಕ ಅಂದರೆ ಏನು ಅಂತ ಅಲೆಕ್ಕಾಡಿಯಲ್ಲೇ ಅರಿವಾಗುತ್ತದೆ. ಅದರಲ್ಲೂ ಮಹಾಕಾಳಿ ಬಸ್ ನಿಲ್ದಾಣ, ಸುಲತಂಡ್ಕ ಪೇರ್ ಸೊಸೈಟಿ, ಕರಿಂಬಿಲ ಕ್ರಾಸ್, ನರ್ಲಡ್ಕ ಕ್ರಾಸ್, ಕೇರ್ಪಡ ದೇವಸ್ಥಾನ ಮುಂತಾದ ಕಡೆಗಳಲ್ಲಿ ರಸ್ತೆಯ ಆರೋಗ್ಯ ಭಾರೀ ಕೆಟ್ಟಿದೆ. ಆದ್ದರಿಂದ ಈ ರಸ್ತೆಯನ್ನು ಸಂಬಂಧ ಪಟ್ಟವರು ಈ ಕೂಡಲೇ ಐಸಿಯೂಗೆ ಹಾಕಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ ಇನ್ನು ಒಂದು ಬರ್ಸ ಬಂದರೆ ರೋಡು ಬಿಡಿ ತೋಡು ಕೂಡ ಸಿಗಲ್ಲ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top