ಹಾಗೆಂದು ಸುಬ್ರಹ್ಮಣ್ಯ ರಾಜ್ಯದ ನಂಬರ್ ವನ್ ಸಿರಿವಂತ ದೇವರು. ಅವನ ಆಲಯ ಇರುವ ಊರಿನ ರಕ್ಷಣೆ ಗೆ ಪೋಲಿಸ್ ಇಲಾಖೆ ಬಹಳ ಹಿಂದಿನಿಂದಲೂ ಚಲ್ಪಟ್ ಸಿಂಗ್ ಗಳನ್ನು, ಎಲ್ಲೂ ಸಲ್ಲದವರನ್ನು, ಪರಬ್ಬ ತೊಂಡಗಳನ್ನು ಠಾಣಾಧಿಕಾರಿ ಮಾಡಿದ್ದು ಬಿಟ್ಟರೆ ಒಬ್ಬ ಪವರ್ ಫುಲ್ ಪೋಲಿಸನ್ನು ಕಳಿಸಿದ್ದು ಭಾರೀ ಅಪರೂಪ. ಒಬ್ಬ ಜಂಬೂ ರಾಜ್ ಸ್ವಲ್ಪ ದಿನ ಇದ್ದರೆ ಜಂಬೂ ನಂತರ ಕ್ರೀಸಿಗೆ ಬಂದಿದ್ದು ಕಾರ್ತಿಕ್. ಬಹುಶಃ ನನ್ನ ಅನುಭವಕ್ಕೆ ಬಂದಂತೆ ಸುಬ್ರಹ್ಮಣ್ಯ ಠಾಣೆಗೆ ಕಾರ್ತಿಯಂತ ಯಂಗ್ & ಪವರ್ ಫುಲ್ ಎಸ್ಸೈ ಇಲ್ಲಿ ತನಕ ಬಂದ ಉದಾಹರಣೆ ಇಲ್ಲ. ಪೋಲಿಸ್ ಅಂದರೆ ಕಾರ್ತಿಯಂತಿರ ಬೇಕು.
ಹಾಗೆಂದು ಕಾರ್ತಿಕ್ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಏನೋ ಭಾರೀ ದೊಡ್ಡ ಕೆಲಸ ಮಾಡಿದ್ದಾರೆ ಎಂದು ನಾನು ಹೇಳುತ್ತಿಲ್ಲ, ಬರೆಯುತ್ತಿಲ್ಲ. ಆದರೆ ಮತಿಗೆಟ್ಟ ಸಮಾಜವನ್ನು ಒಬ್ಬ ಜನ ಸ್ನೇಹಿ ಪೋಲಿಸ್ ಆಗಿ ಎರಡೂವರೆ ವರ್ಷಗಳ ಕಾಲ ತನ್ನ ಕಂಟ್ರೋಲ್ ನಲ್ಲಿಟ್ಟುಕೊಂಡದ್ದೇ ಕಾರ್ತಿಕ್ ಮಾಡಿದ ದೊಡ್ಡ ಕೆಲಸ. ಕಾರ್ತಿ ಸರಳ, ಸಜ್ಜನ, ವಿನಯ ಮತ್ತು ಸಮಾಜದ ಕಟ್ಟ ಕಡೇಯ ವ್ಯಕ್ತಿಯ ಸ್ವರವನ್ನೂ ಆಲಿಸಿದ್ದು ಎಲ್ಲರೂ ಮೆಚ್ಚುವಂತದ್ದೇ. ತನ್ನ ಠಾಣೆಯನ್ನು ಕೇವಲ ಪ್ರಭಾವಿಗಳ ಅಡ್ಡೆಯನ್ನಾಗಿ ಮಾಡದೆ, ಸಮಾಜದ ಕಟ್ಟ ಕಡೇಯ ವ್ಯಕ್ತಿಗೂ ತೆರೆದಿಟ್ಟಿದ್ದು ಕಾರ್ತಿಯ ಒಳ್ಳೆ ಗುಣ.
ಹಾಗೆಂದು ಕಾರ್ತಿಕ್ ಖಾಕಿ ಹಾಕ್ಕೊಂಡು ಇಡೀ ಪೋಲಿಸ್ ಠಾಣೆಯನ್ನು ಹೊತ್ತು ಕೊಂಡಂತೆ ವರ್ತಿಸಲಿಲ್ಲ, ಅಮಾಯಕರ ಮೇಲೆ, ಬಡಬಗ್ಗರ ಮೇಲೆ ಬ್ರಿಟೀಷ್ ಮರ್ಜಿ ತೋರಿಸಲಿಲ್ಲ, ಸಾರ್ವಜನಿಕರಿಗೆ ಅರಚಾಟ, ಕಿರುಚಾಟ ಮಾಡಲಿಲ್ಲ, ಠಾಣೆಗೆ ಬಂದವರ ಮೇಲೆ ಖಾಕಿ ಖದರು ತೋರಿಸಲಿಲ್ಲ, ಠಾಣೆಯನ್ನು ಬ್ರೋಕರ್ ಆಫೀಸ್ ಮಾಡಲಿಲ್ಲ, ಪಿಚ್ಚರ್ ಸ್ಟೈಲ್ ಮಾಡಲಿಲ್ಲ, ಸಿಂಗಂ, ಹುಲಿ, ಚಿರತೆ ಯಾವೂದೂ ಆಗಲಿಲ್ಲ. ಕಾರ್ತಿ ಖಾಕಿ ಹಾಕ್ಕೊಂಡು ಸಜ್ಜನ ಪೋಲಿಸ್ ಆಗಿ ಬಿಟ್ಟರು. ಜನಸ್ನೇಹಿ ಪೋಲಿಸ್ ಆಗಿ ಬಿಟ್ಟರು. ವಿವಾದಗಳಿಂದ, ಪ್ರಚಾರದಿಂದ ದೂರ ಹೋಗಿಬಿಟ್ಟರು. ಬದಲಾಗಿ ಸುಬ್ರಹ್ಮಣ್ಯ ಠಾಣಾ ಸರಹದ್ದಿನ ತುಂಬಾ ರೌಂಡ್ಸ್ ಹೋಗಿಬಿಟ್ಟರು. ಠಾಣಾ ವ್ಯಾಪ್ತಿಯ ಹಳ್ಳಿಗಾಡುಗಳಲ್ಲಿ ತಿರುಗಾಡಿ ಕಾನೂನು ಸುವ್ಯವಸ್ಥೆ ಕಾಪಾಡಿ ಬಿಟ್ಟರು. ಪ್ರಭಾವಿ ಸಮಾಜ ಕಂಟಕರಿಗೆ ಸ್ಲೋ ಪಾಯಿಸನ್ ಆಗಿದ್ದ ಕಾರ್ತಿ ಸಮಾಜ ಘಾತುಕ ಶಕ್ತಿಗಳ ಬೆಂಡ್ ತೆಗೆದು ಬಿಟ್ಟರು. ಪೋಲಿಸ್ ಅಂದರೆ ಹೇಗಿರಬೇಕು, ಹೀಗಿರಬೇಕು ಎಂದು ಸಮಾಜಕ್ಕೆ ತೋರಿಸಿದ ಹೆಗ್ಗಳಿಕೆ ಕಾರ್ತಿಗಿದೆ. ಕಾರ್ತಿಕೇಯನ ಊರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಸಜ್ಜನ ಜನ ಸದಾ ನೆನಪಿನಲ್ಲಿಟ್ಟುಕೊಳ್ಳುವ ಠಾಣಾಧಿಕಾರಿಯಾಗಿ, ಜನ ಸ್ನೇಹಿ ಪೋಲಿಸ್ ಆಗಿ, ಸಮಾಜದ ಕಟ್ಟಕಡೇಯ ವ್ಯಕ್ತಿಯ ಹೃದಯದಲ್ಲೂ ಜಾಗ ಮಾಡಿ ಇದೀಗ ಮಂಗಳೂರಿನ ಕರಾವಳಿ ಕಾವಲು ಪಡೆಗೆ ವರ್ಗಾವಣೆಗೊಂಡಿರುವ, ಇಲ್ಲಿ ತನಕ ಕಾಣದ, ಕಂಡಿರದ ಪೋಲಿಸ್ ಫ್ರೆಂಡ್ ಗೆ ನನ್ನದ್ದೊಂದು ದೊಡ್ಡ ನಮಸ್ಕಾರ. ಕೊನೆಯದಾಗಿ, “ಪೋಲಿಸ್ ಅಂದರೆ ಕಾರ್ತಿಯಂತಿರ ಬೇಕು”.
LATEST
ಮುತ್ಲಾಜೆ ಶೂಲಿನಿ ದುರ್ಗಿ ಮತ್ತು ಶಾಸ್ತಾವು ಕ್ಷೇತ್ರ.ಜಿಲ್ಲೆಯ 3 ತಾಲೂಕುಗಳು ಬರ ಪೀಡಿತ! ಘೋಷಣೆ.ವಿಟ್ಲ: ದೇವಸ್ಥಾನದ ಜಾಗ ನುಂಗಣ್ಣಗಳಿಂದ ಪೊಕ್ಕಡೆ ಕಂಪ್ಲೈಂಟ್!ಪಂಜ ದೇವಸ್ಥಾನದ ಬಗ್ಗೆ ಒಂದಿಷ್ಟು!ಪಂಜ: ಶತ ರುದ್ರಾಭಿಷೇಕದ ಲೆಕ್ಕ ಯಾವಾಗ?ಪೋಲಿಸ್ ಠಾಣೆಯ ಮುಂದೆಯೇ ಮರ್ಡರ್! ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಜೀವಾವಧಿ!ಸುಳ್ಯ ಅಜ್ಜಾವರದಲ್ಲಿ ಕ್ಯಾಂಡಲ್ ಜುಗಾರಿ!ವಿಟ್ಲ: ಅರೇಖಾನ ಗುತ್ಯಮ್ಮ ದೇವರ ಜಾಗೆಯಲ್ಲಿ ಅನ್ಯಮತೀಯರ ಕಾಂಪ್ಲೆಕ್ಸ್!ಪುತ್ತೂರು: ಸೆಲೂನಲ್ಲಿ ಸೆಟ್ಟಿಂಗ್!ಬುಳೇರಿಕಟ್ಟೆ ಗಣೇಶ ವಿಸರ್ಜನೆ ಬಗ್ಗೆ ಅವಹೇಳನ! ಡಿಶುಂ… ಡಿಶುಂ!
ಪೋಲಿಸ್ ಅಂದರೆ ಕಾರ್ತಿಯಂತಿರ ಬೇಕು.
Pattler News
Bureau Report
