ಸುಳ್ಯದಲ್ಲಿ ಒಬ್ಬ ಪೊಕ್ಕಡೆ ಸ್ವಾಮಿ ಗಡ

Pattler News

Bureau Report

ಸುಳ್ಯ: ಸುಳ್ಯ ಎಂಬ ಊರಿನಲ್ಲಿ ಪೊಕ್ಕಡೆ ಸ್ವಾಮಿಯೊಬ್ಬ ದೇವರ ಹೆಸರಿನಲ್ಲಿ, ಭೂತದ ಹೆಸರಿನಲ್ಲಿ, ಮಾಟ ಮಂತ್ರದ ಹೆಸರಿನಲ್ಲಿ, ಕುಡಿತದ ಚಟ ಬಿಡಿಸುವ ಹೆಸರಿನಲ್ಲಿ ಅಮಾಯಕ ಜನರನ್ನು ವಂಚಿಸುತ್ತಿದ್ದು ತನ್ನ ಪೂರ್ವಾಶ್ರಮದಲ್ಲಿ ಆಟೋ ಡ್ರೈವರ್ ಆಗಿದ್ದವ ಇದೀಗ ಚಿಲ್ಲರೆಗಳನ್ನು ಮಂಗ ಮಾಡಿ ಚಿಲ್ಲರೆ ಚಿಲ್ಲರೆ ಮಾಡುತ್ತಿದ್ದಾನೆ.


ಇದು ಕಮಿಲಡ್ಕ. ಸುಳ್ಯ ಸಿಟಿ ವ್ಯಾಪ್ತಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಒಬ್ಬ ರಿಕ್ಷಾ ಡ್ರೈವರ್ ರಿಕ್ಷಾ ಓಡಿಸುತ್ತಾ, ರಿಕ್ಷಾ ಆಡಿಸುತ್ತಾ ಇದ್ದ. ರಿಕ್ಷಾ ಓಡಿಸುತ್ತಾ ಓಡಿಸುತ್ತಾ ಒಂದು ದಿನ ಇವನಿಗೆ ಬೋರ್ ಹೊಡೆಯಿತು. ಸೀದಾ ಹೋದವನೇ ಗಡಂಗ್ ಒಂದರಲ್ಲಿ ಕುಂತು ನೈಂಟಿ, ನೈಂಟಿ ಹೊಡೆದು ಟೈಟಾದ. ಹಾಗೆ ಅಲ್ಲಿ ಟೈಟಾದವನಿಗೆ ಒಮ್ಮೆಲೇ ಅದೇ ಗಡಂಗಿನಲ್ಲಿ ಜ್ಞಾನೋದಯ ಆಯಿತು ಮತ್ತು ಒಂದು ಹೊಸ ಐಡಿಯಾ ಮಂಡೆಯಲ್ಲಿ ಟಿನ್ ಅಂದಿತು.
ಹಾಗೆಂದು ಈ ರಿಕ್ಷಾ ಸ್ವಾಮಿಗೆ ಮೊದಲಿನಿಂದಲೂ ಒಂಥರಾ ದರಿಪ್ಪುನ ಸೀಕ್ ಇತ್ತು. ಅಲ್ಲಿ ಇಲ್ಲಿ ಬ್ಯಾಂಡ್, ವಾದ್ಯದ ಶಬ್ದ ಕೇಳಿದ ಕೂಡಲೇ ಇವನ ಇಂಜಿನ್ ಸ್ಟಾರ್ಟ್ ಆಗುತ್ತಿತ್ತು.ಹಾಗೆ ಗಡಂಗಿನಲ್ಲಿ ಜ್ಞಾನೋದಯಗೊಂಡ ಈ ರಿಕ್ಷಾ ಡ್ರೈವರ್ ಮರುದಿನವೇ ದೇವಿ ದರ್ಶನದ ಹೆಸರಿನಲ್ಲಿ ಕಮಿಲಡ್ಕ ಮಠದ ಪೀಠಾರೋಹಣ ಮಾಡಿ ಶ್ರೀ ಶ್ರೀ ಶ್ರೀ ಶ್ರೀಮದ್ ಕಮಿಲಡ್ಕ ಪೀಠಾಧೀಶ ರಿಕ್ಷಾ ಸ್ವಾಮಿ ಯ ಅವತಾರದಲ್ಲಿ ನೆಲೆಯಾದ. ಅಲ್ಲಿಂದ ಶುರುವಾಯಿತು ರಿಕ್ಷಾ ಸ್ವಾಮಿಯ ಅನಂತನ ಅವಾಂತರಗಳು.
ಹಾಗೆ ರಿಕ್ಷಾ ಸ್ವಾಮಿಯ ಕ್ಷೇತ್ರದಲ್ಲಿ ಮನುಷ್ಯನ ವಿವಿಧ ಆಯಾಮಗಳ ವಿವಿಧ ಸೀಕ್ ಗಳಿಗೆ ಬಗೆ ಬಗೆ ಪರಿಹಾರ ಇದೆ. ಇಲ್ಲಿ ದೇವಿ ದರ್ಶನ ಇದೆ. ಗುಳಿಗ್ಗ ದರ್ಶನ ಇದೆ. ಕೈ ವಿಷವನ್ನು ಬಸಕ್ಕೆಂದು ಕಕ್ಕಿಸಲಾಗುವುದು. ನಿಮಗೆ ಯಾರ ಮೇಲಾದರೂ ನಂಜಿ ಇದ್ದರೆ ರಿಕ್ಷಾ ಸ್ವಾಮಿ ಅವರಿಗೆ ಮಾಟ ಮಾಡುತ್ತಾರೆ ಮತ್ತು ನಿಮ್ಗೆ ಯಾರಾದರೂ ಮಾಟ ಮಾಡಿದ್ದರೆ ಅದನ್ನು ರಿಕ್ಷಾ ಸ್ವಾಮಿ ತೆಗೆದು ಮೂಜಿ ಮಾರ್ಗ ಸೇರುವ ಪೈಚಾರಿನಲ್ಲಿ ವಿಸರ್ಜನೆ ಮಾಡುತ್ತಾರೆ. ರಿಕ್ಷಾ ಸ್ವಾಮಿ ಕುಲೆ, ಪೀಡೆ, ಪಿಶಾಚಿ, ಹಿಟಾಚಿ ನಿಮಗೆ ಹಿಡಿದಿದ್ದರೆ ಬಿಡಿಸಿ ಸುಳ್ಯದಿಂದಲೇ ಇಂಚಿ ಆನೆಗುಂಡಿ, ಅಂಚಿ ಸಂಪಾಜೆ ಗೇಟ್ ತನಕ ಓಡಿಸಿ ಗೇಟ್ ಹಾಕಿಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. ಇನ್ನು ರಿಕ್ಷಾ ಸ್ವಾಮಿ ಸಮಾಜ ಮುಖಿ ಕೆಲಸಗಳನ್ನೂ ಮಾಡುತ್ತಿದ್ದು ಟೈಟ್ ಮಾಸ್ಟರ್ ಗಳ ಕುಡಿತದ ಚಟ ಬಿಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ತನ್ನ ಮಠದ ಗುಳಿಗ್ಗನ ಕಟ್ಟೆ ಮುಂದೆ ಗುಳಿಗ್ಗ ದರ್ಶನದಲ್ಲಿ ಟೈಟ್ ಗಳನ್ನು ಎದುರು ನಿಲ್ಲಿಸಿ ಒಂದು ಕ್ವಾಟ್ರು ಡ್ರೈ ಎಳೆಯಲು ಸೂಚಿಸುತ್ತಾರೆ ಮತ್ತು ಇದೇ ಕಡೆ ಇನ್ನು ಕ್ವಾಟ್ರನ್ನು ಚಿತ್ರದಲ್ಲೂ ನೋಡಲ್ಲ ಎಂದು ಗುಳಿಗ್ಗ ಪ್ರಮಾಣ ಮಾಡಿಸುತ್ತಾರೆ. ಆದರೆ ಅವನು ಇಂಚಿ ಬಂದು ಪುನಃ ಅದೇ ಗೇರು ಅದೇ ಕ್ಲಚ್ಚು.
ಹಾಗೆಂದು ಈ ರಿಕ್ಷಾ ಸ್ವಾಮಿ ಸಮುದಾಯ ಒಂದರ ಕಟ್ಟುಕಟ್ಟಳೆಗಳನ್ನೂ ಗಾಳಿಗೆ ತೂರಿ ವಿಷ್ಣುಮೂರ್ತಿ ದೈವದ ಮಾರಿಕಳ ಮಾಡಿಸುತ್ತಾನೆ. ನಿಯಮ ಪ್ರಕಾರ ಭೂತ ಇಲ್ಲದೆ ಮಾರಿಕಳ ಮಾಡುವ ಹಾಗಿಲ್ಲ. ಆದರೂ ಈತ ಧೂಮ ಮಣಿಯಾಣಿ ಎಂಬುವನ ಮೂಲಕ ಭೂತ ಇಲ್ಲದೆಯೇ ಮಾರಿಕಳ ಮಾಡುತ್ತಿದ್ದು ಈ ಕೆಲಸ ಸಮುದಾಯ ಒಂದರ ಕೆಲಸವಾಗಿದ್ದು ಈಗಾಗಲೇ ಈ ಸಮುದಾಯದ ಸಂಘಕ್ಕೆ ದೂರು ಅರ್ಜಿ ಕೊಡಲಾಗಿದೆ.
ಸುಳ್ಯ ಕಮಿಲಡ್ಕ ಮಠಾಧೀಶ ಶ್ರೀ ಶ್ರೀ ಶ್ರೀ ರಿಕ್ಷಾ ಸ್ವಾಮಿಗಳು ಅಮಾಯಕ ಜನರ ಕಿಸೆಗೆ ಕೈ ಹಾಕಿದ್ದಾರೆ. ಸಮಸ್ಯೆಯಲ್ಲಿ ಬಳಲುತ್ತಿರುವವರನ್ನು ಸುಲಿದು ಸುಲಿದು, ಕುಕ್ಕಿ ಕುಕ್ಕಿ ತಿನ್ನುತ್ತಿದ್ದಾರೆ. ದೇವಿ ದರ್ಶನ, ಗುಳಿಗ್ಗ ಪ್ರದರ್ಶನ ಮಾಡಿ ಅಮಾಯಕರನ್ನು ಮಂಗ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಸ್ವಾಮಿಗಳಿಗೆ ಒಂದು ತಡೆ ಕಟ್ಟಲೇ ಬೇಕಾದ ಅನಿವಾರ್ಯತೆ ಇದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top