ಸುಳ್ಯ ಪುತ್ತೂರು ಪೋಲಿಸ್ ಸರಹದ್ದನ್ನು ಒಳಗೊಂಡಂತೆ ಇರುವ ಪುತ್ತೂರು ಪೋಲಿಸ್ ಉಪ ವಿಭಾಗಕ್ಕೆ ಹೊಸ ಪೋಲಿಸ್ ಉಪ ವರಿಷ್ಠಾಧಿಕಾರಿಯ ನೇಮಕ ಆಗಿದೆ. ಹೆಸರು ಪ್ರಮೋದ್ ಕುಮಾರ್. ನಮ್ಮವರೇ, ಕಡಬದವರು ಮತ್ತು ಸವಣೂರಿಗೂ ಸಂಬಂಧ ಪಟ್ಟವರು.
ಹಾಗೆಂದು ಮೊದಲು ಪುತ್ತೂರು ಉಪ ವಿಭಾಗ ಅಂದರೆ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳು ಬರುತ್ತಿತ್ತು. ಆಮೇಲೆ ರಾಜಕಾರಣಿಗಳು ತಮ್ಮ ತಮ್ಮ ಅನುಕೂಲತೆಗಾಗಿ ಅದನ್ನೆಲ್ಲ ಕಟ್ ಕಟ್ ಮಾಡಿ ಇದೀಗ ಪುತ್ತೂರು ಉಪ ವಿಭಾಗದಲ್ಲಿ ಸುಳ್ಯ ಮಾತ್ರ ನೇಲಿಕೊಂಡಿದೆ. ಹಾಗೆಂದು ಪುತ್ತೂರು ಉಪ ವಿಭಾಗ ದೊಡ್ಡ ದೊಡ್ಡ ಐಪಿಎಸ್ ಗಳನ್ನು ನೋಡಿದೆ. ರಾಜ್ಯದ ಪೋಲಿಸ್ ಭೂಪಟದಲ್ಲಿ ದೊಡ್ಡ ದೊಡ್ಡ ಟೋಪಿಯ ಹೆಚ್ಚಿನ ಐಪಿಎಸ್ ಗಳೆಲ್ಲ ಪುತ್ತೂರು ಮೂಲಕವೇ ಹಾದು ಹೋದವರು. ಇದೀಗ ಅರುಣ್ ನಾಗೇಗೌಡರ ನಂತರ ಪುತ್ತೂರು ಉಪ ವಿಭಾಗಕ್ಕೆ ಪ್ರಮೋದ್ ಬಂದಿದ್ದಾರೆ.
ಹಾಗೆಂದು ಪ್ರಮೋದ್ ಕುಮಾರ್ ಕಡಬ ಸಮೀಪದ ಬೆದ್ರಾಜೆಯವರು. ಬೆದ್ರಾಜೆ ಪ್ರಮೋದರ ತಾಯಿ ಮನೆ ಆಗಿದ್ದರೆ ಇತ್ತ ಸವಣೂರು ಸಮೀಪದ ಬಂಬಿಲ ಗುತ್ತು ಪ್ರಮೋದ್ ಕುಮಾರ್ ತಂದೆಯವರ ಮನೆ. ನಂಜನ ಗೂಡು, ಸಕಲೇಶಪುರ ಮುಂತಾದ ಕಡೆಗಳಲ್ಲಿ ಕೆಲಸ ಮಾಡಿರುವ ಪ್ರಮೋದ್ ಮುಖ್ಯಮಂತ್ರಿಗಳ ಚಿನ್ನದ ಪದಕ ವಿನ್ನರ್. ಮೇಲ್ನೋಟಕ್ಕೆ ಪ್ರಮೋದ್ ಡೀಸೆಂಟ್ ಪೋಲಿಸ್ ಆಗಿದ್ದು ಕಾನೂನು ಸುವ್ಯವಸ್ಥೆಯಲ್ಲಿ ಕಟ್ಟುನಿಟ್ಟು ಎಂದು ತಿಳಿದುಬಂದಿದೆ. ಪುತ್ತೂರು ಉಪ ವಿಭಾಗದ ತುಂಬಾ ವಿವಿಧ ಸೈಜಿನ ಕಳ್ಳಕಾಕರ ಜಾತ್ರೆಯೇ ಇದ್ದು ಪ್ರಮೋದ್ ಇವರನ್ನೆಲ್ಲ ಹೇಗೆ ಮಡಚಿ ಬೆಂಡ್ ತೆಗೆಯುತ್ತಾರೆ ಎಂದು ಕಾದು ನೋಡ ಬೇಕಾಗಿದೆ.
LATEST
ಮುತ್ಲಾಜೆ ಶೂಲಿನಿ ದುರ್ಗಿ ಮತ್ತು ಶಾಸ್ತಾವು ಕ್ಷೇತ್ರ.ಜಿಲ್ಲೆಯ 3 ತಾಲೂಕುಗಳು ಬರ ಪೀಡಿತ! ಘೋಷಣೆ.ವಿಟ್ಲ: ದೇವಸ್ಥಾನದ ಜಾಗ ನುಂಗಣ್ಣಗಳಿಂದ ಪೊಕ್ಕಡೆ ಕಂಪ್ಲೈಂಟ್!ಪಂಜ ದೇವಸ್ಥಾನದ ಬಗ್ಗೆ ಒಂದಿಷ್ಟು!ಪಂಜ: ಶತ ರುದ್ರಾಭಿಷೇಕದ ಲೆಕ್ಕ ಯಾವಾಗ?ಪೋಲಿಸ್ ಠಾಣೆಯ ಮುಂದೆಯೇ ಮರ್ಡರ್! ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಜೀವಾವಧಿ!ಸುಳ್ಯ ಅಜ್ಜಾವರದಲ್ಲಿ ಕ್ಯಾಂಡಲ್ ಜುಗಾರಿ!ವಿಟ್ಲ: ಅರೇಖಾನ ಗುತ್ಯಮ್ಮ ದೇವರ ಜಾಗೆಯಲ್ಲಿ ಅನ್ಯಮತೀಯರ ಕಾಂಪ್ಲೆಕ್ಸ್!ಪುತ್ತೂರು: ಸೆಲೂನಲ್ಲಿ ಸೆಟ್ಟಿಂಗ್!ಬುಳೇರಿಕಟ್ಟೆ ಗಣೇಶ ವಿಸರ್ಜನೆ ಬಗ್ಗೆ ಅವಹೇಳನ! ಡಿಶುಂ… ಡಿಶುಂ!
ಪುತ್ತೂರಿಗೆ ಪೊಸ DYSP
Pattler News
Bureau Report
