ಸುಳ್ಯ ಸಮೀಪದ ಜಾಲ್ಸೂರು ಸೈಡಿನ ಅಡ್ಕಾರು ಹೈಸ್ಕೂಲಿನಲ್ಲಿ ರೌಡಿ ಮಾಸ್ತರ ಒಬ್ಬ ಮಕ್ಕಳಿಗೆ ತಾರಮಾರ ಬಡಿದು ಹೆತ್ತವರಿಂದ ಮಂಗಳಾರತಿ ಮಾಡಿಸಿಕೊಂಡ ಘಟನೆ ನಡೆದಿದೆ.ಮಾಸ್ತನಿಗೆ ಅಹಂಕಾರ ತಲೆಗೆ ಹತ್ತಿ ಟೆಂಟ್ ಹಾಕಿದೆ. ಕೇಳುವವರೇ ಇಲ್ಲ.
ಇದು ಸುಳ್ಯ ತಾಲೂಕಿನ ಅಡ್ಕಾರು ಸಮೀಪದ ಒಂದು ಹೈಸ್ಕೂಲ್. ದೇಶಭಕ್ತರ ಆಡಳಿತ ಮಂಡಳಿಯ ಅಂಡರ್ ನಲ್ಲಿ ಇರುವ ಈ ಹೈಸ್ಕೂಲಿನಲ್ಲಿ ಒಬ್ಬ ರೌಡಿ ಮಾಸ್ತರ್ ಇದ್ದಾನೆ. ಇವನಿಗೆ ಮದುವೆ ಕೂಡ ಆಗಿಲ್ಲ ಹಾಗಾಗಿ ಮಂಡೆಯಲ್ಲಿ ಸಾವಿರದ ಒಂದು ಪ್ಲಸ್ ಮಂಡೆ ಬೆಚ್ಚ. ಈ ಮಂಡೆ ಬೆಚ್ಚದಲ್ಲಿಯೇ ನೂರರಲ್ಲಿ ಶಾಲೆಗೆ ಬಂದು ಮಕ್ಕಳಿಗೆ ದನಕ್ಕೆ ಬಡಿದಂತೆ ಬಡಿಯುವುದು. ಮಕ್ಕಳು ಉಡಾಫೆಯಿಂದ ವರ್ತಿಸುತ್ತಾರೆ ಎಂಬ ಕಾರಣಕ್ಕೆ ಕೂಡ ತಾರಮಾರ ಪೆಟ್ಟೇ. ಇನ್ನು ಕ್ಲಾಸಲ್ಲಿ ಅಂತೂ ಇವನು ಸರ್ಕಲ್ ಇನ್ಸ್ ಪೆಕ್ಟರ್. ಶಾಲೆಯ ಹೊರಗೆ ಈತ ಕಂಬಳದ ಕೋಣಗಳ ಓಟಗಾರ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರೊಂದಿಗೂ ದೆಪ್ಪೆದೀಪೆ ವರ್ತನೆ. ಇವನ ಸೈಕೊ ವರ್ತನೆ ಬಗ್ಗೆ ಈಗಾಗಲೇ ಊರವರು ಒಂದಾಗಿದ್ದು ಒಂದಲ್ಲ ಒಂದು ದಿನ ರೌಡಿ ಮಾಸ್ತರನ ಬೆನ್ನು ಸಮತಟ್ಟು ಮಾಡಿಯೇ ಮಾಡುತ್ತಾರೆ.

ಹಾಗೆಂದು ಈ ರೌಡಿ ಮಾಸ್ತರ್ ಬಗ್ಗೆ ಊರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಇವನಿಗೆ ಯಾವಾಗ ಭೂತ ಹಿಡಿಯುತ್ತದೆ, ಯಾವಾಗ ಪಿರಿಯುತ್ತದೆ ಎಂದು ಹೇಳಕ್ಕೆ ಬರಲ್ಲ. ಶಾಲಾ ಸಮಯದಲ್ಲಿ ಹೆಚ್ಚಾಗಿ ಗುಳಿಗ್ಗ ಹಿಡಿದೇ ಇರುವ ಇವನು ಸಿಕ್ಕ ಸಿಕ್ಕ ಮಕ್ಕಳ ಮೇಲೆ ಕಾಂತಾರ ಸ್ಟೈಲಲ್ಲಿ ಅಬ್ಬರಿಸಿ ಬೊಬ್ಬಿರಿದು ಬಡಿದು ಬಿಡುತ್ತಾನೆ. ಮಾತೆತ್ತಿದರೆ ನಿಮ್ಮ ಮಗುವನ್ನು ಕರಕ್ಕೊಂಡು ಹೋಗಿ, ಟಿ.ಸಿ ಕೊಡ್ತೇನೆ, ಬಿಡಲ್ಲ, ಭವಿಷ್ಯ ಲಗಾಡಿ ತೆಗೆಯುತ್ತೇನೆ ಎಂದೆಲ್ಲಾ ಹೆತ್ತವರನ್ನು ಹೆದರಿಸುತ್ತಾನೆ. ಇವನ ಗುಳಿಗ್ಗ ವರ್ತನೆಗೆ ಹೆದರಿ ಇಲ್ಲಿ ತನಕ ಊರವರು,ಹೆತ್ತವರು ಸುಮ್ಮನಿದ್ದು ಇನ್ನು ಕೂಡ ಈ ಗುಳಿಗ್ಗನನ್ನು ಹೀಗೆ ಬಿಟ್ಟರೆ ಶಾಲೆಯ ಮಕ್ಕಳ ಜೀವಕ್ಕೂ ಅಪಾಯ ಎಂದು ಇವನನ್ನು ಕುಪ್ಪಿಯಲ್ಲಿ ತುಂಬಿಸಿ ಪೈಚಾರ್ ಜಂಕ್ಷನ್ ಬಳಿ ಸಂಕದಡಿಗೆ ಸೆಂಡ್ ಮಾಡುವಷ್ಟು ಕೋಪದಲ್ಲಿದ್ದಾರೆ. ಆಡಳಿತ ಮಂಡಳಿ ಈ ಗುಳಿಗ್ಗನ ಬಗ್ಗೆ ಈ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲೇ ಬೇಕಾಗಿದೆ. ಯಾಕೆಂದರೆ ಇವನ ತಗಡ್ ಬೆಚ್ಚದಲ್ಲಿ ಊರವರಿಗೆ ಮಂಡೆ ಬೆಚ್ಚ ಆಗಬಾರದು ಅಲ್ವಾ?