ಇವತ್ತು ಸಂಪಾಜೆ ಗಡಿಯಲ್ಲಿ ಜುಗಾರಿ ಕೋಲ

Pattler News

Bureau Report

ಆತ್ಮೀಯ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರೇ, ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರೇ, ಪುತ್ತೂರು ಉಪ ವಿಭಾಗದ ಉಪ ಪೋಲಿಸ್ ವರಿಷ್ಠಾಧಿಕಾರಿಯವರೇ, ಮಡಿಕೇರಿ ಉಪ ವಿಭಾಗದ ಉಪ ಪೋಲಿಸ್ ವರಿಷ್ಠಾಧಿಕಾರಿಯವರೇ, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ರವರೇ, ಮಡಿಕೇರಿ ರೂರಲ್ ಸರ್ಕಲ್ ಇನ್ಸ್ ಪೆಕ್ಟರ್ ರವರೇ, ಸುಳ್ಯ ಠಾಣಾ ಸಬ್ ಇನ್ಸ್ ಪೆಕ್ಟರ್ ರವರೇ, ಮಡಿಕೇರಿ ರೂರಲ್ ಸಬ್ ಇನ್ಸ್ ಪೆಕ್ಟರ್ ರವರೇ, ಸುಳ್ಯ ಮತ್ತು ಮಡಿಕೇರಿ ಠಾಣೆಯಲ್ಲಿರುವ ಎಎಸ್ಸೈಗಳೇ, ಹೆಡ್ ಕಾನ್ಸ್ ಟೇಬಲ್ ಗಳೇ, ಸಂಪಾಜೆ ಮತ್ತು ಕಲ್ಲುಗುಂಡಿ ಚೆಕ್ ಪೋಸ್ಟ್ ಪೋಲಿಸರೇ, ಸಂಪಾಜೆ ಗಡಿಯ ಬೀಟ್ ಪೋಲಿಸರೇ ಹಾಗೂ ಕೊಡಗು ಸಂಪಾಜೆ, ಸುಳ್ಯ ಸಂಪಾಜೆಯ ನಾಗರೀಕ ಬಂಧುಗಳೇ, ಗ್ರಾಮಸ್ಥರೇ ಹಾಗೂ ಪತ್ರಿಕಾ ಮಿತ್ರರೇ. ಮನೋರಂಜನೆ ಮತ್ತು ಜೂಜು ಈ ಎರಡೂ ಗುಣಗಳು ಒಬ್ಬನಲ್ಲೇ ಕಂಡು ಬಂದರೆ ಮನುಷ್ಯನ ಅಧಃಪತನ ಶುರುವಾಗಿ ಬಿಡುತ್ತದೆ.ಇದಕ್ಕೆ ಅನೇಕ ಆಟಗಳು ಉದಾಹರಣೆಯಾಗಿದೆ.

ಜುಗಾರಿಯೂ ಇದರಿಂದ ಹೊರತಾಗಿಲ್ಲ. ಇಲ್ಲಿ ಮನೋರಂಜನೆಯೂ ಇದೆ, ಬೇಸರವೂ ಇದೆ.ಇವತ್ತು ನೈಟ್ ಸಂಪಾಜೆ ಗಡಿ ಬಳಿಯ ಬೈಲು ಎಂಬಲ್ಲಿ ಒಂಟಿ ನೇಮದ ಪ್ರಯುಕ್ತ ಜುಗಾರಿ ಜಾತ್ರೆ ನಡೆಯಲಿದ್ದು ಸುಳ್ಯ ತಾಲೂಕು ಮಟ್ಟದ, ಕೊಡಗು ಜಿಲ್ಲಾ ಮಟ್ಟದ ಜುಗಾರಿಕೋರರು ಭಾಗವಹಿಸುವ ಸಾಧ್ಯತೆಗಳಿವೆ. ಸಂಪಾಜೆಯಲ್ಲಿ ನಡೆಯುವ ಒಂಟಿ ನೇಮದ ನೆಪದಲ್ಲಿ ಬೈಲಿನಲ್ಲಿ ದೊಡ್ಡ ಜುಗಾರಿ ಜಾತ್ರೆಯಲಿದೆ. ಸದ್ರಿ ಜುಗಾರಿ ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿಗಳ ಮೇಸೆಯೇ ಕಲೆಕ್ಷನ್ ಆಗಲಿದೆ. ಜುಗಾರಿ ಸಂಘಟಕರು ಈಗಾಗಲೇ ಜುಗಾರಿ ಟೀಂ ಗಳಿಗೆ ಆಹ್ವಾನ ಕೊಟ್ಟಿದ್ದು ಸೂರ್ಯ ಮುಳುಗಿದ ಕೂಡಲೇ ಕಲ ಹಾಕಲಾಗುವುದು ಎಂದು ತಿಳಿದುಬಂದಿದೆ. ಇದೊಂದು ಫೆಡ್ ಲೈಟ್ ಜುಗಾರಿ ಜಾತ್ರೆಯಾಗಿದ್ದು ಎಲ್ಲಾ ಭೂತಗಳಿಗೆ ಹೊಟ್ಟೆ ತುಂಬಾ ಬಡಿಸಿಯೇ ಕಲ ಹಾಕಲಾಗುವುದು. ಜುಗಾರಿ ಆರೋಗ್ಯಕ್ಕೆ, ಬ್ಯಾಂಕ್ ಬ್ಯಾಲೆನ್ಸ್ ಗೆ, ಹೆಂಡ್ತಿ ತಾಳಿಗೆ ಹಾನಿಕಾರಕ ಎಂದು ಗೊತ್ತಿದ್ದರೂ ಮತ್ತೇ ಮತ್ತೇ ಕಲ ಹಾಕಲಾಗುತ್ತಿದೆ. ಜುಗಾರಿಯಿಂದ ಮಾನಸಿಕ ನೆಮ್ಮದಿ, ಮನೆಯ ಶಾಂತಿ, ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಆದ್ದರಿಂದ ಮೇಲೆ ಹೇಳಿದ ಎಲ್ಲಾ ಪೋಲಿಸರು ಒಂದು ಕ್ಷಣ ಈ ಬಗ್ಗೆ ವಿಚಾರಿಸಿ ಜುಗಾರಿ ಕೋರರ ಮತ್ತು ಜುಗಾರಿ ಸಂಘಟಕರ ಜೊತೆ ಮೀಟಿಂಗ್ ಮಾಡಿ ಜುಗಾರಿ ನಿಲ್ಲಿಸ ಬೇಕೆಂಬುದು ಗ್ರಾಮಸ್ಥರ ಆಗ್ರಹ ವಾಗಿದೆ. ಈಗಾಗಲೇ ಜುಗಾರಿ ಸಂಘಟಕರು ಸುಳ್ಯ ಸಂಪಾಜೆ, ಕೊಡಗು ಸಂಪಾಜೆಯ ಕುಲೆಗಳಿಗೆ ಬಡಿಸಿ ಪರ್ಮಿಷನ್ ಓ.ಕೆ ಮಾಡಿಸಿದ್ದಾರೆ ಎಂದು ಕೂಡ ತಿಳಿದುಬಂದಿದೆ. ಈ ಭಾಗದಲ್ಲಿ ಜುಗಾರಿ ಸಕ್ರೀಯವಾಗಿದ್ದು ನಿರಂತರ ಕಲ ಹಾಕಲಾಗುತ್ತಿದೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಗಡಿಯಲ್ಲಿಯೇ ಬಂದು ಜುಗಾರಿ ಕಲ ಹಾಕುವ ಸಂಘಟಕರು ಎಲ್ಲಿಯಾದರೂ ಕೊಡಗು ಪೋಲಿಸರು ಬಂದರೆ ಈಚೆ ಓಡಿ ಬಂದು ಕಲ್ಲುಗುಂಡಿಯಲ್ಲಿ ಅಟ್ಟ ಹತ್ತಿ ಬಿಡುತ್ತಾರೆ. ಇನ್ನು ಎಲ್ಲಿಯಾದರೂ ಸುಳ್ಯ ಪೋಲಿಸರು ರೈಡ್ ಬಿದ್ದರೆ ಆಚೆ ಸಂಪಾಜೆ ಘಾಟಿ ಹತ್ತಿ ಬಲ್ಲೆಯಲ್ಲಿ ಅಡಗಿ ಬಿಟ್ಟರೆ ಮುಗಿಯುತ್ತದೆ. ಆದ್ದರಿಂದ ಎರಡೂ ಜಿಲ್ಲೆಗಳ ಪೋಲಿಸರು ಕೂಡಲೇ ಈ ಮನೆಹಾಳ ಆಟವನ್ನು ನಿಲ್ಲಿಸಿ ಬುಡೆದಿಗಳ ತಾಳಿಯನ್ನು ಉಳಿಸಿಕೊಡಬೇಕು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top