ಬಂಟ್ವಾಳ ತಾಲೂಕು ಪಂಚಾಯ್ತಿ ಲವ್ ಸ್ಟೋರಿ! ಅನಂತಾಡಿಯ ಶಿಲ್ಪಿ ಸಾಕಿದ ಗಿಣಿ!

Pattler News

Bureau Report

ಬಂಟವಾಳದ ತಾಲೂಕು ಪಂಚಾಯ್ತಿಯಲ್ಲಿ ಒಂದು ಲವ್ ಕೇಸ್ ನಡೆದಿದ್ದು ತಾಲೂಕು ಪಂಚಾಯ್ತಿಯ ಸ್ಟಾಫ್ ಒಬ್ಬಳು CEO ಸಾಹೇಬ್ರ ಡ್ರೈವರ್ ಜೊತೆ ಪನಾಂದೆ ಪದ್ರಾಡ್ ಮಾಡಿ ಇದೀಗ ದೇವಸ್ಥಾನ ಒಂದರಲ್ಲಿ ಮಾಲೆ ಬದಲಾಯಿಸಿಕೊಂಡಿರುವ RDX ಸ್ಫೋಟಗೊಂಡಿದೆ. ಹುಡುಗಿ ಅನಂತಾಡಿಯ ಶಿಲ್ಪಿಯೊಬ್ಬ ಸಾಕಿದ ಗಿಣಿಯಾಗಿದ್ದು ಟೋಟಲ್ ಎಷ್ಟು ಲಾಸ್ ಎಂದು ಆಡಿಟಿಂಗ್ ನಡೆಯುತ್ತಿದೆ.
ಅವಳು ವರ್ಷಿತಾ. ಕಲ್ಲಡ್ಕ ಸಮೀಪದ ನರಹರಿ ಪರ್ವತದ ಬುಡದವಳು. ಸುಮಾರು ಹತ್ತು ವರ್ಷಗಳ ಹಿಂದೆ ಇವಳ ಡ್ಯಾಡಿ ತೀರಿಕೊಳ್ಳುತ್ತಾರೆ. ಡ್ಯಾಡಿ ತೀರಿಕೊಂಡಾಗ ಹುಡುಗಿ ಕೇವಲ ಎಂಟನೇ ಕ್ಲಾಸಲ್ಲಿತ್ತು. ಇನ್ನೊಬ್ಬಳು ಅಕ್ಕ ಮತ್ತು ತಾಯಿ ಮಾತ್ರ ಇದ್ದ ಈ ಫ್ಯಾಮಿಲಿಗೆ ದೂರದ ಸಂಬಂಧಿ ಅನಂತಾಡಿಯ ಶಿಲ್ಪಿಯೊಬ್ಬ ಆಧಾರ ಸ್ತಂಭವಾಗಿ ಬಿಡುತ್ತಾನೆ. ಆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಂಡ ಶಿಲ್ಪಿ ಕಳೆದ ಹತ್ತು ವರ್ಷಗಳಿಂದ ಆ ಮನೆಯ ಒಬ್ಬ ಸದಸ್ಯನಂತೆಯೇ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ. ಇದಕ್ಕೆ ಪ್ರತಿಫಲವಾಗಿ ಆ ಮನೆಯ ದೊಡ್ಡ ಮಗಳನ್ನು ಶಿಲ್ಪಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಇರಾದೆ ತಾಯಿಗೆ ಇದ್ದರೂ ಶಿಲ್ಪಿಯನ್ನು ನಾನು ಮದುವೆ ಆಗುತ್ತೇನೆ ಎಂದು ವರ್ಷಿತಾ ಕೈ ಎತ್ತಿದ ಕಾರಣ ದೊಡ್ಡ ಮಗಳನ್ನು ಒಳ್ಳೆ ಸಂಬಂಧ ನೋಡಿ ಬೇರೆ ಕಡೆಗೆ ಮದುವೆ ಮಾಡಿಕೊಡಲಾಗಿತ್ತು. ಇನ್ನು ಶಿಲ್ಪಿ ಮತ್ತು ವರ್ಷಿತಾ ನಡುವೆ ಅಂದಾಜು ಎಂಟು ವರ್ಷಗಳ ಹಿಂದೆಯೇ ಲವ್ವಿನ ಬೀಜಾಂಕುರವಾಗಿದ್ದು ಅದು ಬೆಳೆದು ಬೆಳೆದು ಮದುವೆ ತನಕ ಬಂದು ನಿಂತಿತ್ತು. ನಾಡಿದ್ದು ಫೆಬ್ರವರಿ 20ಕ್ಕೆ ಮದುವೆ. ಕರಿಂಕ ದುರ್ಗೆಯ ಸನ್ನಿಧಿಯಲ್ಲಿ ಎಂದೂ ನಿಘಂಟಾಗಿತ್ತು ಮತ್ತು ಈ ಬಗ್ಗೆ ಊರಿಗೆ, ಸಂಬಂಧಿಕರಿಗೆ, ಬಂಧುಬಳಗಕ್ಕೆ ಪಟ್ಟಲು ಕಾಕಜಿ ಕೂಡ ಪ್ರಿಂಟಾಗಿತ್ತು. ಆದರೆ ಫೆಬ್ರುವರಿ ಮೂರಕ್ಕೆ ವರ್ಷಿತಾ ಕಾಣೆ. ಪೊಣ್ಣಿಜ್ಜಿ…ಪೊಣ್ಣಿಜ್ಜಿ… ಎಂದು ಕೆರೆ ಬಾವಿ, ಬೆಂಗ-ಮಂಗ ರೈಲ್ವೇ ರೋಡ್, ನೇತ್ರಾವತಿ ಸಂಕದಡಿಗೆ ಇಣುಕಿ ಎಲ್ಲಾ ನೋಡಿದ ಮೇಲೆ ಹೋಗಿ ತಾಯಿ ಹುಡುಗಿ ಹುಡುಕಿ ಕೊಡಿ ಎಂದು ಬಂಟ್ವಾಳ ಪೋಲಿಸರಿಗೆ ಕಂಪ್ಲೈಂಟ್ ಕೊಟ್ಟಿದ್ದಾರೆ.

ಹಾಗೆ ತಂದೆ ತೀರಿಕೊಂಡಾಗ ಎಂಟನೇ ಕ್ಲಾಸಿನಲ್ಲಿದ್ದ ವರ್ಷಿತಾ ನಂತರ ಐದಡಿ ಆರಡಿ ಆಗಿ ಬಂಟ್ವಾಳ ತಾಲೂಕು ಪಂಚಾಯ್ತಿಯಲ್ಲಿ ಹಂಗಾಮಿ ನೆಲೆಯಲ್ಲಿ ಕೆಲ್ಸಕ್ಕೆ ಸೇರಿಕೊಳ್ಳುತ್ತಾಳೆ. ಹಾಗೆ ಪಂಚಾಯ್ತಿಯಲ್ಲಿ ಕೆಲಸಕ್ಕೆ ಸೇರುವಲ್ಲಿ ತನಕ ತನ್ನ ಗಾಡ್ ಫಾದರ್ ಶಿಲ್ಪಿಗೆ ನಿಷ್ಠೆ ತೋರಿಸಿದ ವರ್ಷಿತಾ ಅಂದಾಜು ಲಕ್ಷ ತನಕ ಗೂಗಲ್ ಮಾಡಿಸಿಕೊಂಡಿದ್ದಾಳೆ. ಶಿಲ್ಪಿ ಕೈಯಲ್ಲಿ ಬಜಾಜ್ ಫೈನಾನ್ಸ್ ಗೆ ಇಎಂಐ ಕಟ್ಟಿಸಿ ದೊಡ್ಡ ಮೊಬೈಲ್ ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಿದ್ದಾಳೆ. ಇನ್ನು ಕುಂಟುದಂಗಡಿ ಬಿಲ್, ಮೊಟ್ಟುದಂಗಡಿ ಬಿಲ್ ಬೇತೆ ಬೇತೆ ಟೈಪಲ್ಲಿದೆ. ಮತ್ತೆ ಮದುವೆಗೆ ಡೇಟ್ ಫಿಕ್ಸ್ ಆದ ಮೇಲೆ ತನ್ನ ತಾಯಿ ಹೆಸರಲ್ಲಿ ಇಪ್ಪತ್ತು ಸೆಂಟ್ ಜಾಗ ಪರ್ಚೇಸ್ ಮಾಡಿದ್ದು, ಲಕ್ಷಾಂತರದಲ್ಲಿರುವ ಜಾಗದ ರೇಟ್, ಸ್ಟೇಂಪ್ ಡ್ಯೂಟಿ, ದಸ್ತಾವೇಜು ಬರಹಗಾರರ ಫೀಸು, ರಿಜಿಸ್ಟ್ರಿ ಆಫೀಸಿನ ಕುಲೆಗಳಿಗೆ ಬಡಿಸಲು ದುಡ್ಡು ಹೋದದ್ದು ಇದೇ ಶಿಲ್ಪಿ ಅಕೌಂಟಿಂದ. ಇಷ್ಟೆಲ್ಲ ಆಗಿ ನಾಡಿದ್ದು ಫೆಬ್ರುವರಿ 20ಕ್ಕೆ ಇದೇ ಶಿಲ್ಪಿ ಮತ್ತು ವರ್ಷಿತಾಗೆ ಮದುವೆ, ಕರಿಂಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ. ಅಡುಗೆಯವರಿಗೆ ಹೇಳಿಯಾಗಿದೆ, ಮೆನು ಕೂಡ ರೆಡಿಯಾಗಿದೆ. ವರ್ಷಿತಾ ಇಲ್ಲ.
ಹಾಗೆ ತಂದೆ ತೀರಿ ಹೋದ ಮೇಲೆ ಎಂಟನೇ ಕ್ಲಾಸು ಮುಗಿಸಿ,ಹತ್ತಕ್ಕೆ ಏರಿ, ಕಾಲೇಜು ಮೆಟ್ಟಿಲು ಹತ್ತಿದ ವರ್ಷಿತಾ ಬಂಟ್ವಾಳ ತಾಲೂಕು ಪಂಚಾಯ್ತಿಯಲ್ಲಿ ಒಂದು ಕೆಲಸಕ್ಕೆ ಸೇರಿಕೊಳ್ಳುತ್ತಾಳೆ ಒಂದು ವರ್ಷದ ಹಿಂದೆ. ಅಲ್ಲಿ ತಾಲೂಕು ಪಂಚಾಯತ್ ಸಿಇಒ ಸಾಹೇಬ್ರ ಡ್ರೈವರ್ ರತೀಶ್ ನನ್ನು ನೋಡುತ್ತಿದ್ದಂತೆ ವರ್ಷಿತಾ ಶಿಲ್ಪಿಯನ್ನು ಮರೆತುಬಿಟ್ಟಳು. ರತೀಶನ ಸ್ಟೈಲು, ಗೆಟಪ್ಪು, ಲುಕ್ಕು ವರ್ಷಿತಾಳನ್ನು ಮಂಗ ಮಾಡಿ ಬಿಟ್ಟಿತು. ಇಬ್ಬರಿಗೂ ಆವು ಪೋವು ಆಯಿತು ಮತ್ತು ಇಬ್ಬರೂ ತುಂಬಾ ತುಂಬಾ ಡೀಪಿಗೆ ಹೋಗಿ ಬಿಟ್ಟರು.ಹಾಗೆ ವರ್ಷಿತಾ ಲೈಫಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರತೀಶ್ ಒಂದೇ ವರ್ಷದಲ್ಲಿ ಕಳೆದ ಹತ್ತು ವರ್ಷಗಳಿಂದ ಶಿಲ್ಪಿ ಕೆತ್ತಿಟ್ಟಿದ್ದ ವರ್ಷಿತಾ ಎಂಬ ಶಿಲಾಬಾಲಿಕೆಯನ್ನು ಹೊತ್ತುಕೊಂಡು ಹೋಗಿಯೇ ಬಿಟ್ಟಿದ್ದ. ಮೊನ್ನೆ ಫೆಬ್ರುವರಿ ಮೂರಕ್ಕೆ ಮಾಲೆ ಕೂಡ ಬದಲಾಯಿಸಿಕೊಂಡು ಇಬ್ಬರೂ ಹನಿಮೂನ್ ಮೂಡ್ ಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಿದ್ದಾರೆ ಎಂದು ಬಂಟ್ವಾಳ ಪೋಲಿಸ್ ಸಮೇತ ಯಾರಿಗೂ ಗೊತ್ತಿಲ್ಲ.

ಹಾಗೆಂದು ಈ ಬಂಟ್ವಾಳ ತಾಲೂಕು ಪಂಚಾಯ್ತಿ ಲವ್ ಸ್ಟೋರಿ ಇಡೀ ತಾಲೂಕು ಪಂಚಾಯ್ತಿಗೆ ಗೊತ್ತಿತ್ತು. ಈ ಬಗ್ಗೆ ಸಿಇಒ ಸಾಹೇಬ್ರಲ್ಲಿ ಹೇಳಿದ್ರೆ ನಾನೇನು ಮಾಡ್ಲಿ ಎಂದು ಪೋಲಿಸ್ ಠಾಣೆ ಕಡೆ ಬೆರಳು ತೋರಿಸಿದ್ದರಂತೆ. ಪಂಚಾಯ್ತಿ ವರ್ಕಿಂಗ್ ಅವರ್ ಗಳಲ್ಲಿಯೂ ಇವರ ಪುಂಡಿ ಭಾರೀ ಜೋರಾಗಿತ್ತು ಎಂದು ಮಾಹಿತಿ ಇದೆ. ತನ್ನ ಚಾಲಕ ಮತ್ತು ತನ್ನದೇ ಸ್ಟಾಫ್ ಹೀಗೆ ದಾರಿ ತಪ್ಪಿ ಸ್ವಚ್ಚಂದವಾಗಿ ವರ್ತಿಸುವಾಗ ನಾಳೆ ಇಡೀ ತಾಲೂಕು ಪಂಚಾಯ್ತಿಗೆ ಕೆಟ್ಟ ಹೆಸರು ಬರಬಹುದು ಎಂದು ಸಿಇಒ ಸಾಹೇಬ್ರು ಇಬ್ಬರನ್ನೂ ಕರೆದು ವಾರ್ನಿಂಗ್ ಕೊಡಬೇಕಿತ್ತು. ಲವ್ ಮಾಡಲು, ಪುಂಡಿ ಬೇಯಿಸಲು, ಕಂಬದಡ್ಡದಲ್ಲಿ ಪಟ್ಟಾಂಗ ಹೊಡೆಯಲು ತಾಲೂಕು ಪಂಚಾಯತ್ ಕಬ್ಬನ್ ಪಾರ್ಕೂ ಅಲ್ಲ, ಪಣಂಬೂರು ಬೀಚೂ ಅಲ್ಲ. ವಿಷಯ ಸಿಇಒ ಸಾಹೇಬ್ರಿಗೆ ಗೊತ್ತಿದ್ದರೂ “ಎಂಕ್ ದಾಯೆ”ಎಂದು ಸುಮ್ಮನೆ ಕುಂತದ್ದು ವಿಪರ್ಯಾಸವೇ ಸರಿ. ಇನ್ನು ಕಳೆದ ಹಲವು ವರ್ಷಗಳಿಂದ ದೇವರಂತೆ ಪ್ರೀತಿಸಿದ, ಪ್ರೀತಿಯ ಹೆಸರಲ್ಲಿ ತಾನು ಬೋಳಿಸಿದ ಶಿಲ್ಪಿಯನ್ನು ಆಚೆ ಕರೆದು ಒಂದು ಮಾತು ವರ್ಷಿತಾ ಹೇಳಬಹುದಿತ್ತು,” ನಾನು ಬೇರೆ ಪ್ರೀತಿಯಲ್ಲಿ ಬಿದ್ದಿದ್ದೇನೆ, ಸೋ ನಮ್ಮ ಮದುವೆ ಬೇಡ”ಎಂದು ಘೋಷಿಸ ಬಹುದಿತ್ತು ಅಥವಾ ಅಮ್ಮನಲ್ಲಿ, ಅಕ್ಕನಲ್ಲಿ ಹೇಳಬಹುದಿತ್ತು. ಹುಡುಗಿ ಅದ್ಯಾವುದನ್ನೂ ಮಾಡಲಿಲ್ಲ. ಮದುವೆ ಆಮಂತ್ರಣ ಪ್ರಿಂಟಾಗಿ ಮದುವೆಗೆ ಇನ್ನೇನು ಕೆಲವೇ ದಿನಗಳಿರುವಾಗ ಓಡಿ ಹೋದದ್ದು ನಂಬಿಕೆಗೆ ಮಾಡಿದ ದೊಡ್ಡ ದ್ರೋಹವಾಗಿದೆ. ಕಷ್ಟದ ಸಮಯದಲ್ಲಿ ದೊಡ್ಡ ಸಹಾಯ ಮಾಡಿದ ಶಿಲ್ಪಿಯ ಪ್ರೀತಿಯನ್ನೇ ಕಡೆಗಣಿಸಿ ಓಡಿಹೋದ ಹುಡುಗಿಯನ್ನು ವೈಲ್ಡ್ ಕಾರ್ಡ್ ಹೇಗೆ ನಂಬುತ್ತಾನೋ ಆ ಬಂಟ್ವಾಳ ತಾಲೂಕು ಪಂಚಾಯ್ತಿಗೇ ಗೊತ್ತು. ಶಿಲ್ಪಿ ಸಾಕಿದ ಪಂಚ ವರ್ಣದ ಗಿಣಿಯೇ ಹದ್ದಾಗಿ ಶಿಲ್ಪಿಯನ್ನೇ ಕುಕ್ಕಿದ್ದು ವಿಪರ್ಯಾಸವೇ ಸರಿ. ಇಂಥ ಹುಡುಗಿಯರನ್ನು ನಂಬುವುದಾದರೂ ಹೇಗೆ ಮಾರಾಯ್ರೆ? ಕುದಿಕ್ಕನೇ ಲೇಸು ಸರ್ವಜ್ಞ!

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top