
ಅಲ್ಲಿ ಪುತ್ತೂರಿನ ಪರತ್ತ್ ಮಯೂರ ಸಿನೆಮಾದಿಂದ ಬೈಪಾಸಿಗೆ ಲಿಂಕ್ ಕೊಡುವ ರಸ್ತೆಯ ರಿಪೇರಿಯ ನೆಪದಲ್ಲಿ ಚರಂಡಿಗೆ ಹಾಕಿದ್ದ ಸ್ಲೇಪ್ ಗಳನ್ನು ತೆಗೆದು ರಾಶಿ ಹಾಕಿ, ಚರಂಡಿ ಒಕ್ಕಿ ಹೋದವರು ಕಾಣೆಯಾಗಿದ್ದಾರೆಂದು ವರದಿಯಾಗಿದೆ. ಎಲ್ಲಿಯಾದರೂ ಸಕಲ ಪುಕುಲಿ ತೀರ್ಥದಲ್ಲಿ (SPT) ಬೊಳ್ಳಕ್ಕೆ ಹೋಗಿರಬಹುದಾ ಎಂಬ ಗುಮಾನಿ ಶುರುವಾಗಿದೆ. ಚರಂಡಿ ಒಕ್ಕಿದವರ ಮೂಂಕಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಆದರೆ ಒಕ್ಕಿಸಿದವರಿಗೂ ಮೂಂಕಿಲ್ಲ ಎಂಬುದು ಸಾಬೀತಾಗಿದೆ.
ಕಳೆದ ಸುಮಾರು ದಿನಗಳಿಂದ ಅಲ್ಲಿ ಮಯೂರ ಥಿಯೇಟರ್ ಮತ್ತು ಬೈಪಾಸಿನ ಲಿಂಕ್ ರಸ್ತೆ ಅಂಡರ್ ರೀಪೇರ್. ಅದಕ್ಕಾಗಿ ಚರಂಡಿಗೆ ಹಾಕಿದ್ದ ಸ್ಲೇಪ್ ತುಂಡುಗಳನ್ನು ” ಬುಕ್ಕ ಪಾಡ್ಗ” ಎಂದು ತೆಗೆದು ರಾಶಿ ಹಾಕಲಾಗಿದೆ. ಸಾಧಾರಣ ಆ ಭಾಗದ ಎಲ್ಲಾ ಕುರ್ತೆಲ್ ವಾಟರ್ ಇದೇ ಚರಂಡಿಯಲ್ಲಿ ಜುಳು ಜುಳು ಎಂದು ಹರಿದು ಮಯೂರ ಎದುರಿನ ದೊಡ್ಡ ತೋಡಿನಲ್ಲಿ ಸಂಗಮವಾಗಿ ನಂತರ ಎರಡೂ ಬ್ಯಾಂಡ್ ವಾಲಗದಲ್ಲಿ ಬಂದು SPT ಸೇರಿಕೊಳ್ಳುತ್ತದೆ. ಇದೀಗ ಈ ಚರಂಡಿಯ ಸ್ಲೇಪ್ ತೆಗೆಯಲಾಗಿದೆ ಮತ್ತು ಕಾಮಗಾರಿ ನಿಲ್ಲಿಸಲಾಗಿದೆ. ದೇವುಡು… ದೇವುಡು… ಅದೇನು ವಾಸನೆ, ಮೂಗಿನ ಕುತ್ತಿ ರೋಮ ಕೂಡ ಉದುರಿ ಹೋಗುವಷ್ಟು.

ಹಾಗೆಂದು ಈ ಲಿಂಕ್ ರೋಡಿನಲ್ಲಿ ಒಂದು ಆಸ್ಪತ್ರೆ ಇದೆ, ಬ್ಯಾಂಕಿದೆ, ರೆಸಿಡೆನ್ಸಿಯಲ್ ಇದೆ, ಗ್ಯಾರೇಜ್ ಇದೆ, ಶೋರೂಂ ಇದೆ. ಇವರೆಲ್ಲ ಕಳೆದ ಕೆಲವು ದಿನಗಳಿಂದ ಮೂಂಕಿಗೆ ಪರ್ತಿ ಇಟ್ಟೇ ಅಂಚಿಂಚಿ ಹೋಗಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರನಲ್ಲಿ ವಿಚಾರಿಸಿದರೆ “ಬಿಲ್ ಬೈಜಿ” ಎಂಬ ಉತ್ತರ. ಇನ್ನು ಈ ಬಗ್ಗೆ ಸಂಬಂಧಪಟ್ಟ ಪುತ್ತೂರಿನ ಅಧಿಕಾರಿಗಳಲ್ಲಿ ಕೇಳೋಣವೆಂದರೆ ಅವರಿಗೆ ಕಿವಿ ಕೇಳಲ್ಲ ಮಾರಾಯ್ರೆ. ಇನ್ನು ವಾಸನೆ ಬರುತ್ತದೆ ನೋಡಿ ಎಂದು ಕೈಭಾಷೆಯಲ್ಲಿ ಹೇಳಿದರೆ ಅವರಿಗೆ ಮೂಂಕೇ ಇಲ್ಲ. ಅವರಿಗೆ ಬಾಯಿಯೂ ಬರಲ್ಲ, ಸ್ಪರ್ಷ ಜ್ಞಾನ ಇಲ್ಲ. ಹಾಗಾಗಿ ಬೇರೆ ಏನೂ ಉಪಾಯ ಕಾಣದೆ ಸಾರ್ವಜನಿಕರೇ ಮೂಂಕಿಗೆ ಪರ್ತಿ ಇಟ್ಟುಕ್ಕೊಂಡು ಓಡಾಡುತ್ತಿದ್ದಾರೆ.
ಹಾಗೆಂದು ಈ ರಸ್ತೆ ಅಗೆದು ಹಾಕಿ ತುಂಬಾ ದಿನಗಳಾಗಿವೆ. ಗಲೀಜ್ ವಾಟರ್ ಹರಿಯುವುದು ಕಣ್ಣಿಗೆ ಕಾಣ್ತದೆ, ಪರಿಮಳಾ ಮೂಂಕಿಗೆ ಬಡಿಯುತ್ತಿದೆ. ಸೊಳ್ಳೆಗಳು DJ ಹಾಕಿ ಜಾತ್ರೆ ಮಾಡುತ್ತಿದೆ. ಈ ರಸ್ತೆಯಲ್ಲಿ ಒಂದು ರೌಂಡು ನಡೆದು ಹೋದರೂ ಸಾಕು ಅನಾಪಿಲಿಸ್,ಈಡೀಸ್, ವೆಸ್ಟ್ ಇಂಡೀಸ್ ಸೊಳ್ಳೆಗಳು ನಿಮಗೆ ಮಹಾವೀರ,ಆದರ್ಶ, ಪ್ರಗತಿ ಆಸ್ಪತ್ರೆಗಳ ದಾರಿ ಕಾಣಿಸಿ ಬಿಡುವ ಅಪಾಯಗಳಿವೆ. ಒಂದು ಸಾರ್ವಜನಿಕ ಜೀವನದಲ್ಲಿ ಮೂಗಿಗೆ ಹತ್ತಿ ಇಟ್ಟು ಬದುಕಕ್ಕಾಗಲ್ಲ. ಹಾಗಾಗಿ ಈ ರಸ್ತೆಗೆ ಸಂಬಂಧ ಪಟ್ಟವರು ಯಾವ ದೊಣ್ಣೆ ನಾಯಕನೇ ಇರಲಿ, ಒಮ್ಮೆ ಆ ಸ್ಲೇಪ್ ಹಾಕಲು ವ್ಯವಸ್ಥೆ ಮಾಡಿ.
_———————————————————————–
ಸ್ಪಷ್ಟೀಕರಣ
ನಿನ್ನೆ ನಮ್ಮ ವೆಬ್ ಸೈಟ್ ನ್ಯೂಸ್ ನಲ್ಲಿ ಪ್ರಕಟವಾದ ಬೆಳ್ಳಾರೆಯ ಪರ್ಮಿಟ್ ಇಲ್ಲದೆ ಮರ ಸಾಗಾಟ ಲಾರಿ ವಶ ಎಂಬ ವರದಿಯ ಬಗ್ಗೆ.
ಸದ್ರಿ ಕೇಸಿನಲ್ಲಿ ನಮ್ಮ ಮಾಹಿತಿ ಮೂಲಗಳಿಂದ ನಮಗೆ ಬಂದ ಮಾಹಿತಿ ಪ್ರಕಾರ ಲಾರಿ ಡ್ರೈವರ್, ಓನರ್ ಮತ್ತು ಜಾಗದ ಮಾಲೀಕ ಬಾಂಜೀಕೋಡಿ ಶಶಿ ಮೇಲೆ ಕೇಸ್ ಹಾಕಲಾಗಿದೆ ಎಂದು ಪ್ರಕಟಿಸಿದ್ದೆವು. ಆದರೆ ಶಶಿ ಕಡೆಯಿಂದ ಇದು ತಪ್ಪು ಮಾಹಿತಿ ಮತ್ತು ನಮ್ಮ ಜಾಗದಿಂದ ಯಾವುದೇ ಮರ ಹೋಗಿಲ್ಲ ಎಂದು ಸ್ಪಷ್ಟ ಮಾಹಿತಿ ಬಂದ ಕಾರಣ ನಮ್ಮ ಮಾಹಿತಿ ಮೂಲಗಳಿಂದ ಏನಾದರೂ ಎಡವಟ್ಟು ಆಗಿರಬಹುದು ಎಂದು ನಮಗೆ ಅನಿಸಿದೆ. ಈ ಕಾರಣದಿಂದ ನಮ್ಮ ಈ ವರದಿಯಿಂದ ಶಶಿಗೆ ಮತ್ತು ಶಶಿ ಮನೆಯವರಿಗೆ ಅಸಮಾಧಾನವಾಗಿದ್ದರೆ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ.

