WANTED ಮೊಟ್ಟೆ?

Pattler News

Bureau Report

ಗುತ್ತಿಗಾರು ಎಲಿಮಲೆ ಸೈಡಿನ ಯುವಕನೊಬ್ಬನನ್ನು AP ಪೋಲಿಸರು ಬಂದು ಲಿಫ್ಟ್ ಮಾಡಿದ ಬಗ್ಗೆ ಮಾಹಿತಿಗಳು ಬಂದಿದ್ದು ಯಾಕೆ, ಏನು ಕತೆ ಎಂಬ ಬಗ್ಗೆ ಕೆಲವು ಗುಸುಗುಸು ಇದೆ.
ಮೊನ್ನೆ ಆಂಧ್ರ ಪೋಲಿಸರು ಬಿನ್ನೆರ್ ಕಟ್ಟಿಕ್ಕೊಂಡು ಸುಳ್ಯ ತಾಲೂಕಿನ ಎಲಿಮಲೆ ಕಡೆ ಬಂದಿದ್ದು ಇಲ್ಲಿನ ಮೊಟ್ಟೆ ಯುವಕನೊಬ್ಬನನ್ನು ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಲಿಫ್ಟ್ ಮಾಡಿದ್ದರು. ವಿಷಯ ಏನೆಂದು ವಿಚಾರಿಸಲಾಗಿ ಆನ್ ಲೈನ್ ಗೇಮಿಂಗ್ ಬುಕ್ಕಿಯೊಬ್ಬನ ಕೇಸಿನಲ್ಲಿ ಈ ಯುವಕ ಆಂಧ್ರ ಪೋಲಿಸರಿಗೆ ಬೇಕಾಗಿದ್ದ.

ಹಾಗೆಂದು AP ಪೋಲಿಸ್ ಗುತ್ತಿಗಾರಿಗೆ ಬರಲು ಕಾರಣಗಳಿತ್ತು. ಆಂಧ್ರದಲ್ಲಿ ಅದ್ಯಾವನೋ ಆನ್ ಲೈನ್ ಗೇಮಿಂಗ್ ಪಥಾಯಿಸ್ ಒಬ್ಬನ ಹತ್ತು ಹಲವು ಕೇಸುಗಳು ಪೋಲಿಸರ ಟೇಬಲ್ ಮೇಲಿತ್ತು. ಇನ್ನು ಅವನ ಮೊಬೈಲ್ ನಲ್ಲಿ ಗುತ್ತಿಗಾರಿನ ಮೊಟ್ಟೆ ಮ್ಯಾನ್ ಒಬ್ಬನ ಹೆಸರೂ ಇದ್ದ ಕಾರಣ ಹಾಗೂ ಆ ವಂಚಕನ ಸತ್ಕಾರ್ಯಗಳಲ್ಲಿ ಇವನೂ ಪಾಲುದಾರನಾಗಿದ್ದ ಕಾರಣ AP ಪೋಲಿಸರು ಆದ್ಮಿಯನ್ನು ಹುಡುಕುತ್ತಾ ಹುಡುಕುತ್ತಾ ಗುತ್ತಿಗಾರು ತನಕ ಬಂದಿದ್ದರು. ಅಲ್ಲಿ ಗುತ್ತಿಗಾರಿನಲ್ಲಿ ಟವರ್ ಲೊಕೇಶನ್ ಮೇಲೆ ಮೊಟ್ಟೆ ಯುವಕನನ್ನು ಹಿಡಿದು ಎತ್ತ್ಹಾಕಿಕೊಂಡು ಆಂಧ್ರ ಕಡೆ ಹೊರಟಿದ್ದಾರೆ.

ಇತ್ತ ಗುತ್ತಿಗಾರು ತುಂಬಾ ಮೊಟ್ಟೆ ಮ್ಯಾನ್ ಕಿಡ್ನಾಪ್ ಮಾಡಲಾಗಿದೆ ಎಂಬ ಸುದ್ದಿ ಕ್ಷಣಮಾತ್ರದಲ್ಲಿ ಹರಡಿ ಹಬ್ಬಿದೆ. ಮೊಟ್ಟೆ ಮ್ಯಾನ್ ಗುತ್ತಿಗಾರಿನ ಫೇಮಸ್ ರಾಜಕಾರಣಿಯೊಬ್ಬರ ಅರ್ವತ್ತನೂ ಆಗಿದ್ದ ಕಾರಣ ಗುತ್ತಿಗಾರಿನ ಯುವಕರೂ ತಂಡ ಕಟ್ಟಿಕ್ಕೊಂಡು ಆಂಧ್ರ ಪೋಲಿಸರ ಕಾರನ್ನು ಬೆನ್ನಟ್ಟಿದ್ದಾರೆ ಮತ್ತು ತಮ್ಮ ಗುಂಡ್ಯ ಗ್ಯಾಂಗಿಗೆ ಕಾಲ್ ಮಾಡಿ ಪೋಲಿಸ್ ಕಾರನ್ನು ಬ್ಲಾಕ್ ಮಾಡಲು ಹೇಳಿದ್ದಾರೆ. ಇತ್ತ ಗುತ್ತಿಗಾರಿನಿಂದ ಯುವಕನನ್ನು ಲಿಫ್ಟ್ ಮಾಡಿದ AP ಪೋಲಿಸರ ಕಾರು ನಡುಗಲ್ಲು- ಸುಬ್ರಹ್ಮಣ್ಯ – ಕುಲ್ಕುಂದ -ಕೈಕಂಬ ಅಂತ ಗುಂಡ್ಯ ಕಡೆಗೆ ಶರವೇಗ ಪಡೆದು ಕೊಂಡಿದೆ. ಅಲ್ಲಿ ಗುಂಡ್ಯದ ವನ್ ವೇ ಒಂದರಲ್ಲಿ ಆಂಧ್ರ ಪೋಲಿಸರ ಕಾರು ಎದುರಿನಿಂದ ಅಚಾನಕ್ಕಾಗಿ ಬಂದ ವಾಹನವೊಂದರ ಅಧಿಕಪ್ರಸಂಗಿ ಎಂಟ್ರಿಯಿಂದ ಬ್ಲಾಕ್ ಆಗಿ ಇತ್ತ ಗುತ್ತಿಗಾರಿನಿಂದ ಹೋದ ಲೋಕಲ್ ಯುವಕರ ತಂಡಕ್ಕೆ ಸಿಕ್ಕಿ ಬೀಳುತ್ತಾರೆ. ಅಷ್ಟೇ.

ಆಂಧ್ರ ಕಾರಿನಿಂದ ಎಲ್ಲರನ್ನೂ ದಡಬಡ ಎಂದು ಎಳೆದು ಹಾಕಲಾಗಿ ಕಾರಿನ ಡ್ರೈವರ್ ಕೆಬಿತ್ತಕಂಡೆಗೆ ಫೋರ್ ಪ್ಲಸ್ ವನ್ ರೇಂಜಲ್ಲಿ ಬಿದ್ದಿದೆ. ಕೂಡಲೇ ಆಂಧ್ರ ಪೋಲಿಸರು ತಮ್ಮ ಐಡಿ ಕಾರ್ಡ್ ತೋರಿಸಿ ಬಚಾವ್ ಆಗಿದ್ದಾರೆ. ಅಷ್ಟರಲ್ಲಿ ಸುಬ್ರಹ್ಮಣ್ಯ ಪೋಲಿಸರೂ ಎಂಟ್ರಿ ಪಡೆದು ಎಲ್ಲರನ್ನೂ ಬ್ಯಾಂಡ್ ವಾಲಗದಲ್ಲಿ ಠಾಣೆಗೆ ಕರೆ ತರಲಾಗಿತ್ತು. ಇತ್ತ ಸುಬ್ರಹ್ಮಣ್ಯ ಠಾಣೆಯಲ್ಲೂ ರೆಡ್ಡಿಗಾರು ಇರುವ ಕಾರಣ ಚೆಪ್ಪು ಚೆಪ್ಪಂಡಿ ನಡೆದು ಆಂಧ್ರ ಪೋಲಿಸರ ವಿಚಾರಣೆಗೆ ಯುವಕನನ್ನು ಹಾಜರು ಪಡಿಸುವ ಜವಾಬ್ದಾರಿಯನ್ನು ಯುವಕನ ಸಮ್ಮಲೆ ಹೆಗಲಿಗೆ ಹಾಕಲಾಯಿತು ಎಂದು ತಿಳಿದುಬಂದಿದೆ.

ಕಾಣಿಯೂರು ATC ಕಾಂಪ್ಲೆಕ್ಸ್ ನಲ್ಲಿ ಅಡ್ವೋಕೇಟ್ ನಿಶಾಂತ್ ಅವರ ನೂತನ ಕಚೇರಿ ಉದ್ಘಾಟನೆ ನೆರವೇರಿತು. ಸಮಾರಂಭದಲ್ಲಿ ಗಣ್ಯರು, ಹಿರಿಯ ವಕೀಲರು, ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top