ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರಿಂದ ಗಿಜಿಗಿಜಿ ಗುಡುವ ಕೆಇಬಿ ರೋಡಿನಲ್ಲಿರುವ ಕ್ಯಾಂಟಿನ್ ಒಂದರ ಮೇಲೆ ಬೆಳ್ತಂಗಡಿ ಪೇಟೆ ಪೋಲಿಸರು ದಾಳಿ ನಡೆಸಿದ್ದು ಮೂರು ಗಂಡು ಜಾತಿಯ ತಲೆಹಿಡುಕರನ್ನು ಮತ್ತು ಒಂದು ಹೆಣ್ಣು ಜಾತಿಯ ದಗಣೆಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇವರೆಲ್ಲರೂ ಸೇರಿ ಕ್ಯಾಂಟಿನ್ ಒಂದರಲ್ಲಿ ವೀಕೆಂಡ್ ವಿದ್ ದಗಣೆ ನಡೆಸುತ್ತಿದ್ದರು.

ಅಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಇಬಿ ರಸ್ತೆಯಲ್ಲಿ ಪಡಂಗಡಿ ಪೊಯ್ಯೆಗುಡ್ಡೆ ಸುಂದರಣ್ಣೆ ಕಳೆದ ಇಪ್ಪತ್ತು ವರ್ಷಗಳಿಂದ ಒಂದು ಗಂಜಿ ಚಟ್ನಿ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿದ್ದರು. ಆ ಕ್ಯಾಂಟೀನ್ ಕಟ್ಟಡವೇ ಅಕ್ರಮ. ಅತ್ತ ಪಟ್ಟಣ ಪಂಚಾಯತಿಗೂ ಸೂಟಾಗದ, ಇತ್ತ ನಗರ ಪಂಚಾಯಿತಿಗೂ ಲಾಯಿಕ್ ಆಗದ ಮತ್ತು ಸದಾ ನಿದ್ದೆಯಲ್ಲೇ ಇರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿಯೇ ಈ ಪೊಯ್ಯೆಗುಡ್ಡೆ ಸುಂದರಣ್ಣೆ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಪಂಚಾಯ್ತಿ ಕುಲೆಗಳಿಗೆ ಬಡಿಸಿ ಒಂದು ಅಕ್ರಮ ಕಟ್ಟಡ ನಿರ್ಮಿಸಿ ಅದರಲ್ಲಿ ಒಂದು ಗಂಜಿ ಚಟ್ನಿ ಕೇಂದ್ರ ನಡೆಸಿಕೊಂಡು ಬರುತ್ತಿದ್ದರು. ಈ ಗಂಜಿ ಕೇಂದ್ರಕ್ಕೆ ಡೋರ್ ನಂಬರ್ ಯಾರು ಕೊಟ್ಟರು ಎಂಬುದು ಇಲ್ಲಿ ತನಕ ಬೆಳ್ತಂಗಡಿಯ ಯಾವ ಅಷ್ಟಮಂಗಲದಲ್ಲೂ ಕಂಡು ಬಂದಿಲ್ಲ. ಆಯ್ತು ಡೋರ್ ನಂಬರ್ ಸಾಯಲಿ, ಕೆಇಬಿ ಕರೆಂಟ್ ಕನೆಕ್ಷನ್ ಹೇಗೆ ಕೊಟ್ಟಿದೆ? ಕರೆಂಟ್ ಕೂಡ ಸುಂದರಣ್ಣನ ಕ್ಯಾಂಟೀನ್ಗೆ ಕೊಡಲಾಗಿದೆ. ಬೆಳ್ತಂಗಡಿಯಲ್ಲಿ ಡೋರ್ ನಂಬರ್ ಇಲ್ಲದೆ ಮೆಸ್ಕಾಂ ಕರೆಂಟ್ ಕನೆಕ್ಷನ್ ಕೂಡ ಕೊಡುತ್ತಾ? ಹಾಗಾದರೆ ಯಾರೂ ಕೂಡ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯ್ತಿ ಜಾಗದಲ್ಲಿ ಅಕ್ರಮವಾಗಿ ಕಟ್ಟೋಣ ಕಟ್ಟಿದರೆ ಡೋರ್ ನಂಬರ್ ಸಿಗುತ್ತಾ? ಅಕ್ರಮ ಕಟ್ಟಡಗಳಿಗೆ ಡೂಪ್ಲಿಕೇಟ್ ಡೋರ್ ನಂಬರ್ ಮೇಲೆ ಮೆಸ್ಕಾಂ ಕರೆಂಟ್ ಕನೆಕ್ಷನ್ ಕೊಡುತ್ತಾ? ಹೀಗೆಲ್ಲ ಜಾದೂ ಬೆಳ್ತಂಗಡಿಯಲ್ಲಿ ನಡೆಯುತ್ತಾ?

ಹಾಗೆ ಪಂಚಾಯ್ತಿ ಕುಲೆಗಳಿಗೆ ಬಡಿಸಿ ಡೋರ್ ನಂಬರ್ ತೆಗೆದ ಸುಂದರಣ್ಣ ಮುಂದೆ ಮೆಸ್ಕಾಂ ಭೂತಗಳಿಗೆ ಅಗೆಲು ಕೊಟ್ಟು ಕರೆಂಟ್ ಕನೆಕ್ಷನ್ ಕೂಡ ಮಾಡಿಸಿಕೊಂಡಿದ್ದಾರೆ. ನಂತರ ಎಲ್ಲವೂ ಸುಸೂತ್ರವಾಗಿ ನಡೆಯುತ್ತಾ ಬಂತು. ಸುಂದರಣ್ಣನ ಗಂಜಿ ಚಟ್ನಿಗೆ ಡಿಮ್ಯಾಂಡು ಬಂದು ಸುಂದರಣ್ಣ ಚಿಲ್ಲರೆ ಮಾಡಿಕೊಂಡು ವ್ಯವಹಾರ ವಿಸ್ತರಿಸುವ ಸಲುವಾಗಿ ಅಕ್ರಮ ಕಟ್ಟಡಕ್ಕೆ ಹೊಸ ರೂಂಗಳನ್ನು ಸೇರಿಸಿ ಬಿಟ್ಟು ಒಂದು ಬೆಡ್ರೂಂ, ಟಾಯ್ಲೆಟ್ ಮುಂತಾದವುಗಳನ್ನು ಕೂಡಿಸಿ ಬಿಟ್ಟರು. ಇಡೀ ವಾರ ಸುಂದರಣ್ಣನ ಕ್ಯಾಂಟಿನ್ ಬ್ಯುಸಿಯೋ ಬ್ಯುಸಿ. ಆದರೆ ಸಂಡೇ ಮಾತ್ರ ಸುಂದರಣ್ಣನ ಗಂಜಿಗೆ ರಜೆ. ಆದರೆ ಕ್ಯಾಂಟಿನ್ ಕಡೆ ಸುಂದರಣ್ಣನ ಹಾಜರಾತಿ ಇರುತ್ತಿತ್ತು. ಯಾಕೆಂತ ಪಕ್ಕ ಜನಗಳಿಗೆ ಅರ್ಥ ಆಗಿರಲಿಲ್ಲ. ನಿಧಾನವಾಗಿ ಗೊತ್ತಾಗಿದೆ.

ಹಾಗೆ ವೀಕೆಂಡ್ ನಲ್ಲಿ ಸುಂದರಣ್ಣನ ಕ್ಯಾಂಟೀನ್ ಯಾಕೆ ಓಪನಿರುತ್ತದೆ ಮತ್ತು ಅಲ್ಲಿನ ಸಂಡೇ ಸ್ಪೆಷಲ್ ಏನು ಎಂದು ಗೂಗಲ್ ಜೆಮಿನಿಯಲ್ಲಿ ಕೇಳಲಾಗಿ ಅಲ್ಲಿಗೆ ಕೆಲವು ಬಿನ್ನೆರ್ ಬರುವ ವಿಷಯ ಗೊತ್ತಾಗಿದೆ. ಸುಂದರಣ್ಣ ತನ್ನ ಅಕ್ರಮ ಕ್ಯಾಂಟೀನಿನಲ್ಲಿ ನಿರ್ಮಿಸಿರುವ ಬೆಡ್ರೂಂನಿಂದ ಲಾಭ ಎತ್ತುವ ಸಲುವಾಗಿ ಕೆಲವು ತಲೆಹಿಡುಕರ ಮೂಲಕ ಅಲ್ಲಿಗೆ ಕೆಲವು ಲೋಕಲ್ ಆಂಟಿಗಳನ್ನು ತರಿಸಿ ಬೆಳ್ತಂಗಡಿ ಮಲ್ಲಿಗೆ ಮಾಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೇಟೆ ಪೋಲಿಸರಿಗೆ ವಾಸನೆ ಬಂದು ಅವರು ಸಂಡೇ ಸಂಡೇ ವಾಚ್ ಮಾಡಿ ಕನ್ಫರ್ಮ್ ಮಾಡಿಕೊಂಡು ಸುಂದ್ರಣ್ಣನ ಕ್ಯಾಂಟೀನ್ ಮೇಲೆ ಧಾಳಿ ನಡೆಸಿದ್ದರು. ಒಳಗೆ ಬೆಳ್ತಂಗಡಿ ಮಲ್ಲಿಗೆ ನಡೆಯುತ್ತಿತ್ತು.

ಹಾಗೆ ಬೆಳ್ತಂಗಡಿ ಪೋಲಿಸರು ಧಾಳಿ ನಡೆಸಿ ತಲೆಹಿಡುಕರಾದ ಪಡಂಗಡಿ ಪೊಯ್ಯೆಗುಡ್ಡೆ ಸುಂದರ ಶೆಟ್ಟಿ, ನಾವೂರು ಉಸ್ಮಾನ್ ಮತ್ತು ಕಲ್ಲೇರಿ ಹೈದರ್ ಎಂಬವರನ್ನು ಅರೆಸ್ಟ್ ಮಾಡಿ ಚಡ್ಡಿ ಹಾಕಿಸಿ ಠಾಣೆಗೆ ಕರೆ ತಂದಿದ್ದಾರೆ. ಸ್ಪಾಟಲ್ಲಿದ್ದ ಪೀಸನ್ನು ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಅಡ್ಡೆಯಿಂದ ಪೋಲಿಸರು ತಲೆಹಿಡುಕರ ಮೊಬೈಲ್ ಫೋನ್, ಚಿಲ್ಲರೆ ಕ್ಯಾಷ್ ಮತ್ತು ಪುಗ್ಗೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೋಲಿಸರು FIR ಮಾಡಿದ್ದು ಸುಂದರಣ್ಣನ ಬಿಸಿನೆಸ್ ಕಂಕಣೆ ಮಲಂಕಣೆ ಆಗುವ ಅಪಾಯಗಳಿವೆ.


