ಗುತ್ತಿಗಾರು ನಿಜಾಮರ ಅಡಿಕೆ ಮಂಡಿಯಿಂದ ಒರು ಲಾಕ್ ಕಳ್ಳತನ

Pattler News

Bureau Report

ಗುತ್ತಿಗಾರು ಪೇಟೆಯಲ್ಲಿರುವ ಅಡಿಕೆ ಮಂಡಿಯೊಂದರಿಂದ ಬೆಳಿಗ್ಗೆ ಒಂಬತ್ತೂವರೆಗೆ ಗಂಟೆಗೆ ಒಂದು ಲಕ್ಷ ರೂಪಾಯಿ ಕಳ್ಳತನ ನಡೆದ ಬಗ್ಗೆ ಕಂಪ್ಲೈಂಟ್ ಆಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲಿಸ್ ರೆಡ್ಡಿಗಾರು, ಸರ್ಕಲ್ಲು, ಬೆರಳಚ್ಚು ತಜ್ಞರು ಮತ್ತು ಡಾಗ್ ಸ್ಕ್ವಾಡ್ ಬಂದಿದೆ ಎಂದು ತಿಳಿದುಬಂದಿದೆ. ಕಳ್ಳರು ಇನ್ನೂ ಸಿಕ್ಕಿಲ್ಲ.

ಅಲ್ಲಿ ಸುಳ್ಯ – ಸುಬ್ರಹ್ಮಣ್ಯ ರಸ್ತೆಯ ಪ್ರಮುಖ ಜಂಕ್ಷನ್ ಗುತ್ತಿಗಾರಿನಲ್ಲಿರುವ ನಿಜಾಮ್ ಒಡೆತನದ ಅಡಿಕೆ ಮಂಡಿಯಿಂದ ನಿನ್ನೆ ಅಲ್ಲ ಮೊನ್ನೆ ಬೆಳಿಗ್ಗೆ ಒಂದು ಲಕ್ಷ ರೂಪಾಯಿ ಕಳವಾದ ಬಗ್ಗೆ ಇಡೀ ಗುತ್ತಿಗಾರು ಬೆಚ್ಚಿ ಬಿದ್ದಿದ್ದೆ. ನಿಜಾಮು ಸುಳ್ಯದ ಅಡಿಕೆ ಮಂಡಿಗೆ ಅಡಿಕೆ ಹಾಕಿ ಒಂದೂವರೆ ಲಕ್ಷ ಕ್ಯಾಶ್ ಹಿಡ್ಕೊಂಡು ಗುತ್ತಿಗಾರಿಗೆ ಬಂದು ಅಂಗಡಿ ಓಪನ್ ಮಾಡಿದ್ದಾರೆ. ಸುಳ್ಯದಿಂದ ತಂದ ಒಂದೂವರೆಯಲ್ಲಿ ಒಂದು ಲಕ್ಷವನ್ನು ಮೇಜಿನ ಡ್ರವರ್ ಒಳಗೆ ಹಾಕಿ ಐವತ್ತು ಹಿಡಕ್ಕೊಂಡು “ಮೀತೆ ಪೀಡೆಕ್ಕ್ ಪೊಯಿಟ್ಟ್ ಬರ್ನೆ” ಎಂದು ಆಚೆ ಬೇಕರಿ ಹುಡುಗನಲ್ಲಿ ಹೇಳಿ ಹೋಗಿದ್ದಾರೆ. ಅಷ್ಟೇ! 9.20ಕ್ಕೆ ನಿಜಾಮ್ ಮೇಲಿನ ಅಂಗಡಿಗೆ ಹೋಗಿದ್ದಾರೆ, 9.36ಕ್ಕೆ ವಾಪಾಸ್ ಬಂದಿದ್ದಾರೆ. ಬಂದು ನೋಡಿದ್ರೆ ದುಡ್ಡಿಲ್ಲ. ದುಡ್ಡಿಲ್ಲ… ದುಡ್ಡಿಲ್ಲ! ಇಡೀ ಅಂಗಡಿ ಅಡಿಮೇಲು ಮಾಡಿ ಹುಡುಕಿದರೂ ದುಡ್ಡಿಲ್ಲ. ಪೋಲಿಸ್ ಕಂಪ್ಲೈಂಟ್ ಸೂಕ್ತ ಅಂತ ಸುಬ್ರಹ್ಮಣ್ಯ ಹೋಗಿ ರೆಡ್ಡಿಗಾರುಗೆ ಕಂಪ್ಲೈಂಟ್ ಕೊಟ್ಟಿದ್ದಾರೆ.

ಹಾಗೆ ಗುತ್ತಿಗಾರು ಅಡಿಕೆ ಮಂಡಿಯಲ್ಲಿ ಒಂದು ಲಕ್ಷ ಕಳ್ಳತನವಾಗಿದೆ ಎಂಬ ಕಂಪ್ಲೈಂಟ್ ಸ್ವೀಕರಿಸಿದ ರೆಡ್ಡಿಗಾರು ಕೂಡಲೇ ಚುರುಕಾಗಿ ತನಿಖೆ ಆರಂಭಿಸಿದ್ದಾರೆ. ಸುಬ್ರಹ್ಮಣ್ಯ ಪೋಲಿಸರಲ್ಲದೆ ಕುಡ್ಲದಿಂದ ಬೆರಳಚ್ಚು ತಜ್ಞರು ಮತ್ತು ಕಳ್ಳರ ಮೂರಿ ತೆಗೆಯಲು ಡಾಗ್ ಸ್ಕ್ವಾಡ್ ಕೂಡ ಗುತ್ತಿಗಾರಿಗೆ ಬಂದಿದೆ. ಎಲ್ಲಾ ತನಿಖೆ ಪ್ರಗತಿಯಲ್ಲಿದೆ. ಆದರೆ ಕಳ್ಳರ ಜಾಡು ಪತ್ತೆಯಾಗಿಲ್ಲ. ಇದೀಗ ಕಳ್ಳರು ಪತ್ತೆಯಾಗುವುದಾದರೂ ಹೇಗೆ ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ ಗುತ್ತಿಗಾರು ಪೇಟೆಯಲ್ಲಿ ಕಳ್ಳರ ಫೋಟೋ ತೆಗೆಯಲು ಒಂದೇ ಒಂದು ಸಿಸಿ ಜೀವದಲ್ಲಿ ಇಲ್ಲ. ಎರಡು ವರ್ಷಗಳ ಹಿಂದೆ ಗುತ್ತಿಗಾರು ವರ್ತಕ ಸಂಘದವರು ಇಡೀ ಪೇಟೆಗೆ ಸಿಸಿ ಸಿಕ್ಕಿಸುವ ಸಲುವಾಗಿ ಲಕ್ಷಾಂತರ ಕಲೆಕ್ಷನ್ ಮಾಡಿ ಇಡೀ ಪೇಂಟೆಗೆ ಸಿಸಿ ಸಿಕ್ಕಿಸಿದ್ದರು. ಆದರೆ ಅವರು ಸಿಕ್ಕಿಸಿದ್ದ ಪೊಟ್ಟು ಸಿಸಿಗಳು ಕೆಲವೇ ದಿನಗಳಲ್ಲಿ ಜೀವ ಬಿಟ್ಟಿದ್ದು ನಿಜಾಮರ ಅಡಿಕೆ ಮಂಡಿಯ ಕಳ್ಳರ ಫೋಟೋ ಏನಾದರೂ ಸಿಸಿಯಲ್ಲಿ ಇದೇಯಾ ಎಂದು ನೋಡಿದರೆ ಸಿಸಿಗಳಲ್ಲಿ ಮೊಜೆಂಟಿ ಗೂಡು ಕಟ್ಟಿದ ಢುಂಯ್ ಡುಂಯ್ ಶಬ್ದ ಬಿಟ್ಟರೆ ಬೇರೇನೂ ಇಲ್ಲ.

ಹಾಗೆಂದು ಸದ್ರಿ ನಿಜಾಮರು ಗುತ್ತಿಗಾರು ಗ್ರಾಮ ಪಂಚಾಯಿತಿ ಬಿಲ್ಡಿಂಗ್ ನ ಎರಡು ರೂಂಗಳನ್ನು ಅಡಿಕೆ ವೈವಾಟ್ ಮಾಡುವ ಸಲುವಾಗಿ ತಿಂಗಳಿಗೆ ಎರಡು ಅಂಗಡಿಗೆ ತಲಾ ಹದಿನಾರು ಸಾವಿರ ಬಾಡಿಗೆಗೆ ಪಡೆದು ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆರು ತಿಂಗಳು ಅಂಗಡಿ ಓಪನ್ ಮಾಡದೆಯೇ ಬಾಡಿಗೆ ಕಟ್ಟಿ ಕಟ್ಟಿ ಕಟ್ಟಿ ಬಚ್ಚಿದ್ದ ನಿಜಾಮರು ನಂತರ ಒಂದು ಬೇಕ್ರಿ ಮತ್ತು ಅಡಿಕೆ ಮಂಡಿ ಓಪನ್ ಮಾಡಿದ್ದರು. ಇದೀಗ ಸ್ವಲ್ಪ ಬಚ್ಚೆಲ್ ಇರಿನಗ ಲಕ್ಷ ಕಳ್ಳತನ. ನಿಜಾಮರು ಗ್ಲುಕೋಸ್ ಹಾಕಿಕೊಳ್ಳಲು ಬೇರೆ ಏನೂ ಬೇಡ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top