ಬೆಳಂದೂರಿನಲ್ಲಿ ತಲ್ಲಿ! ಪೆರ್ನಲ್ ಸ್ಪೆಷಲ್?

Pattler News

Bureau Report

ಕಡಬ ತಾಲೂಕಿನ ಮಾಜೀ ಜಿಲ್ಲಾ ಪಂಚಾಯತ್ ಕ್ಷೇತ್ರ ಬೆಳಂದೂರಿನ ಜಂಕ್ಷನ್ ಕಟ್ಟೆತ್ತಾರು ಎಂಬಲ್ಲಿ ಮೊನ್ನೆ ಪೆರ್ನಾಲ್ ದಿನ ಗೋಧೂಳಿ ಮುಹೂರ್ತದಲ್ಲಿ ಎರಡು ತಂಡಗಳ ನಡುವೆ ತಲ್ಲಿ ನಡೆದಿದ್ದು “ನಿನ್ನೆ ಬೆಕ್ಕಲ್ಲ…. ನಿನ್ನೆ ಅಲಕ್ಕಲ್ಲ” ಎಂಬ ಡೈಲಾಗ್ ಗಳು ಡೆಲಿವರಿ ಆಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬೆಳ್ಳಾರೆ ಎಸ್ಸೈ ಧಾವಿಸಿ ಬಂದಿದ್ದು ಒಂದಕ್ಕೆ ಎರಡಾಗುವ ಮುನ್ನ ಗುಂಪು ಚದುರಿಸಿ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದ್ದರು ಎಂದು ತಿಳಿದುಬಂದಿದೆ.

ಅದು ಬೆಳಂದೂರು ಗ್ರಾಮ. ಈ ಗ್ರಾಮಕ್ಕೆ ಹಿಂದೆ ಹೆಸರಿರಲಿಲ್ಲ. ಕಡೆಗೆ ಕಂದಾಯ ಇಲಾಖೆ ಗ್ರಾಮದ ಒಂದು ಮನೆಯ ಹೆಸರನ್ನೇ ಇಡೀ ಗ್ರಾಮಕ್ಕೆ ಇಟ್ಟು ತೊಟ್ಟಿಲು ತೂಗಲಾಗಿತ್ತು. ಈಗಲೂ ಬೆಳಂದೂರು ಗ್ರಾಮದ ಸರ್ಕಾರಿ ಶಾಲೆ, ಕಚೇರಿಗಳು, ಪಂಚಾಯ್ತಿ, ಸೊಸೈಟಿ, ಕಾಲೇಜು ಎಲ್ಲಾ ಇರೋದು ಕಟ್ಟೆತ್ತಾರು ಎಂಬ ರೈಲ್ವೇ ಟ್ರ್ಯಾಕ್ ಜಂಕ್ಷನ್ನಲ್ಲಿ. ಈ ಕಟ್ಟೆತ್ತಾರು ಎಂಬಲ್ಲೂ ಗ್ರಾಮ ದೈವಗಳ ಕಟ್ಟೆ ಇದ್ದ ಕಾರಣ ಕಟ್ಟೆತ್ತಾರು ಎಂಬ ಹೆಸರು ಬಂದಿದೆ. ಓ ಮೊನ್ನೆ ಬಕ್ರೀದ್ ದಿನದಂದು ಈ ಕಟ್ಟೆತ್ತಾರು ಎಂಬಲ್ಲಿ ದೊಡ್ಡ ಮಾರಾಮಾರಿ ನಡೆದಿದೆ. ಎರಡು ತಂಡಗಳು ಪೂರ್ವದ್ವೇಷದಿಂದ ಇಲ್ಲಿ ಬಡಿದಾಡಿಕೊಂಡಿವೆ. ಸಕಾಲದಲ್ಲಿ ಬೆಳ್ಳಾರೆ ಪೋಲಿಸರು ಬರದೆ ಇರುತ್ತಿದ್ದರೆ ತಂಡಗಳು ತುಂಡಾಗುವ ಪರಿಸ್ಥಿತಿ ಇತ್ತು.

ಹಾಗೆಂದು ಈ ಬೆಳಂದೂರು ಕಟ್ಟೆತ್ತಾರು ತಂಡಕ್ಕೂ ಹತ್ತಿರದ ಕಾಣಿಯೂರು ಕೂಡ್ರಸ್ತೆ ತಂಡಕ್ಕೂ ಅನಾವಶ್ಯಕ ಮೇಲಾಟ. ಕಾರಣಗಳೇ ಇಲ್ಲದೆ ಪರಸ್ಪರ ಶೋ ಮಾಡಿಕೊಳ್ಳುವುದು, ಗುರಾಯಿಸಿಕೊಳ್ಳುವುದು, ತಾಂಟಿಕೊಳ್ಳುವುದು, ಫೋನ್ ಬೆದರಿಕೆಗಳು, ನಿನ್ನೆ ಬೆಕ್ಕಲ್ಲ, ನಿನ್ನೆ ಅಲಕ್ಕಲ್ಲ ಡೈಲಾಗ್ ಡೆಲಿವರಿಗಳು ನಡೆದೇ ಇತ್ತು. ಈ ಚಿಲ್ಲರೆ ಕಾರಣಗಳೇ ಎರಡೂ ತಂಡಗಳ ನಡುವೆ ಪೂರ್ವದ್ವೇಷವಾಗಿ ಪರಿವರ್ತನೆ ಆಗಿತ್ತು. ಇದು ಯಾವ ಮಟ್ಟಕ್ಕೆ ಬಂದು ನಿಂತಿತ್ತು ಅಂದರೆ ಎರಡೂ ಕಡೆಯವರೂ ಬ್ಯಾಂಡೇಜ್ ಕಟ್ಟಿಕ್ಕೊಂಡು ಆಸ್ಪತ್ರೆಯಲ್ಲಿ ಮಲಗಿದರೂ ಚಿಂತಿಲ್ಲ ಅವನೆ ಮಾತ್ರ ಅಲಕ್ಕಲ್ಲ, ಇವನೆ ಬೆಕ್ಕಲ್ಲ ಅನ್ನುವಲ್ಲಿ ತನಕ ಮುಟ್ಟಿತ್ತು. ಹಾಗೆಂದು ಇವರೆಲ್ಲ ಓ ಮೊನ್ನೆ ತಾನೇ ಕುತ್ತಿ ಮೀಸೆ ಚಿಗುರಿದವರು, ಆಡು ಗಡ್ಡ ಬಿಟ್ಟವರು.ಲೋಕ ಜ್ಞಾನ ಇಲ್ಲದವರು ಮತ್ತು ಬೆಳ್ಳಾರೆ ಪೋಲಿಸ್ ಮಾತ್ರವಲ್ಲದೆ ಬೇರೆ ಪೋಲಿಸ್ ಕೂಡ ಉಂಟು ಎಂದು ಗೊತ್ತಿಲ್ಲದ ಚಿಕ್ಕ ಬಾಲಕ್ಕಾರ್ ಗಳು. ಓ ಮೊನ್ನೆ ಸ್ಥಳೀಯ ಉರೂಸ್ ಟೈಮಲ್ಲೂ ಗಲಾಟೆ ಫೈನಲ್ ಆಗುವ ಹಂತದಲ್ಲಿ ಇತ್ತು. ಆದರೆ ಅಲ್ಲಿಗೇ ವೇಗ ಸ್ವಲ್ಪ ತಗ್ಗಿ ಹೋಗಿತ್ತು. ನಂತರ ಪುನಃ ವೇಗ ಪಡೆದುಕೊಂಡಿದೆ. ಅಲ್ಲಿ ಮಂಗಳೂರು ಕಡೆ ಎಲ್ಲೋ ಬೆಳಂದೂರು ಕಟ್ಟೆತ್ತಾರು ತಂಡದವರು ಕಾಣಿಯೂರು ಕೂಡ್ರಸ್ತೆ ತಂಡಕ್ಕೆ ಧಮ್ಕಿ ಹಾಕಿದರೆಂದೂ, ನಂತರ ಕೂಡ್ರಸ್ತೆ ತಂಡದವರು ಪೋನಲ್ಲಿ ಇವರಿಗೆ ಬೆದರಿಕೆ ಹಾಕಿದ್ದರು ಎಂಬುದು ಸುದ್ದಿ.

ಮೊನ್ನೆ ಪೆರ್ನಾಲ್. ಹಗಲಿಡೀ ಆಡಿಂಡೆ ಕರಿ, ನೈಚೋರ್, ಚಿಕನ್ ಬಿರಿಯಾನಿ ಸೇವೆ ಮುಗಿದಿದೆ. ಬೆಳಂದೂರಿನ ಅಷ್ಟೂ ಬಾಲಕ್ಕರ್ ಪೆರ್ನಾಲ್ ಲೆಕ್ಕದಲ್ಲಿ ಲಕಲಕ ಹೋಳೆಯುತ್ತಿದ್ದಾರೆ. ಎಲ್ಲರೂ ಪುದಿಯೆ..ಪುದಿಯೆ ಡ್ರೆಸ್, ಕಾಲಿಗೆ ಬೂಟುಸು ಸಿಕ್ಕಿಸಿಕ್ಕೊಂಡು ಘಮ್ಮೆಂದಿದ್ದಾರೆ. ಪೆರ್ನಾ ಎಲ್ಲಾ ಮುಗಿದು ಗೋಧೂಳಿ ಸಮಯ ಸಮೀಪಿಸುತ್ತಿದ್ದಂತೆ ಬೆಳಂದೂರು ಬಾಲಕ್ಕಾರ್ ಗಳಿಗೆ ಕೈ ತುರಿಸಲು ಪ್ರಾರಂಭ ಆಗಿದೆ. ಅವರೆಲ್ಲ ಅಲ್ಲೇ ಕಟ್ಟೆತ್ತಾರು ಜಂಕ್ಷನ್ ಬಳಿ ಸೇರಿ ಫೋನೆತ್ತಿಕೊಂಡಿದ್ದಾರೆ. ” ನಿಂಗಳೆಕ್ ತಾಕತ್ ಉಂಡಂಗ್ ಇಪ್ಪ ಬರಿ ಮೋನೆ, ನಿಂಡೆ ತಾಕತ್ ಇಪ್ಪ, ಊಡೆ ಕಾಣಿಕ್ ಬಾ, ನಿಂಡೆ ಸಂತಾನ ಬೆಕ್ಕಲ್ಲ, ಬಾ ಮೋನೆ ಬಾ” ಎಂದು ಕಾಣಿಯೂರು ಕೂಡ್ರಸ್ತೆ ಬಾಲಕ್ಕಾರ್ ಗಳಿಗೆ ಸವಾಲು ಹಾಕಿದ್ದಾರೆ ಮತ್ತು ಕಟ್ಟೆತ್ತಾರು ಜಂಕ್ಷನ್ ಗೆ ಅವರನ್ನು ವೆಲ್ ಕಂ ಮಾಡಿದ್ದಾರೆ. ಅವರು ಬರ್ಲಿಕ್ಕಿಲ್ಲ ಅಂತ ಇವರು ಗ್ರಹಿಸಿದ್ದರು. ಅವರು ಬಂದೇ ಬಂದರು. ಇಪ್ಪತ್ತೈದಕ್ಕೂ ಹೆಚ್ಚು ಹುಡುಗರು ಬಂದರು. ಬಂದಿದ್ದು ಯಾರು? ವಾರ್ನರ್, ಹೆಡ್ಡು,ಮಾಕ್ರಂ, ಮಿಲ್ಲರು, ಪೂರನ್, ಸಾಲ್ಟು, ಬಟ್ಲರು ಇತ್ಯಾದಿ ಇತ್ಯಾದಿ. ಇತ್ತ ಬೆಳಂದೂರು ಹುಡುಗರು ಫೀಲ್ಡಿಂಗ್ ಸೆಟ್ ಮಾಡಿರಲಿಲ್ಲ. ಅವರು ಬಂದರು, ದಡಬಡ ದಡಬಡ ಸಿಕ್ಸ್ ಫೋರ್ ಎತ್ತಿದರು, ಗ್ರೌಂಡಿನ ಮೂಲೆ ಮೂಲೆಗೂ ಹೊಡೆದರು ಮತ್ತು ಹೊರಟೇ ಹೋದರು. ನಂತರ ಇವರು ಮತ್ತೇ ಫೀಲ್ಡಿಂಗ್ ಸೆಟ್ ಮಾಡಿ ಅವರನ್ನು ವಾಪಾಸ್ ಕರೆದಿದ್ದಾರೆ “ಬಾ ಮೋನೆ ಬಾ..ನಿಂಡೆ ಬಾಡಿ ಪಾರ್ಸೆಲ್ ಹಾಕ್ನೆ ಬಾ” ಎಂದು ಕರೆದಿದ್ದಾರೆ. ಆದರೆ ಬಂದಿದ್ದು ಎಸ್ಸೈ ಈರಯ್ಯ. ತೊಟ್ಟ ಬಟ್ಟೆಯಲ್ಲೇ ಓಡೋಡಿ ಬಂದ ಬೆಳ್ಳಾರೆ ಎಸ್ಸೈ ಈರಯ್ಯನವರ ಒಂದೇ ಒಂದು ಆವಾಜ್ ಗೆ ಅಷ್ಟೂ ಹುಡುಗರು ಓಡಿ ಓಡಿ ಹೋಗಿದ್ದಾರೆ. ಸದ್ಯಕ್ಕೆ ಕಟ್ಟೆತ್ತಾರು ಶಾಂತವಾಗಿದ್ದು ಅವರ ಸಮುದಾಯದ ಕೆಲವರು ಸೇರಿ ಪಂಚಾಯ್ತಿ ನಡೆಸಿ “ನಿಂಗ ಅವರ ಸುದ್ದಿ ಪೊವಂಡ, ಓರು ನಿಂಗಳೆ ಸುದ್ದಿಕ್ಕ್ ಬರ್ನಿಲ್ಲ”ಎಂದು ರಾಜಿ ಮಾಡಿಸಿದ್ದಾರೆಂದು ಸುದ್ದಿ.

ಹಾಗೆಂದು ತೊಂಬತ್ತರ ದಶಕದಲ್ಲಿ ಬೆಳಂದೂರಿನಲ್ಲಿ ಗಲಾಟೆ ಜೋರಿತ್ತು. ಪೆಟ್ಟಿಸ್ಟ್ ಗಳ ದೊಡ್ಡ ಗ್ಯಾಂಗೇ ಇತ್ತು. ಯಾವಾಗ ನೋಡಿದರೂ ಗೋಧೂಳಿ ಮುಹೂರ್ತದಲ್ಲಿ ಗಲಾಟೆಯೋ ಗಲಾಟೆ. ಪೆಟ್ಟೇ ಪೆಟ್ಟು. ಪೆಟ್ಟಿಸ್ಟ್ ಗಳಿಗೆ ಪಾಪದವರು ನಮಸ್ಕಾರ ಕೊಡದಿದ್ದರೂ ಕೆಬಿತ್ತಕಂಡೇಗೆ ಬೀಳುತ್ತಿತ್ತು. ಆಗ ಬೆಳಂದೂರು ಕಡಬ ಸ್ಟೇಷನ್ ವ್ಯಾಪ್ತಿಯಲ್ಲಿ ಬರುತ್ತಿತ್ತು. ಡಿಸ್ಟೆನ್ಸ್ ತುಂಬಾ ಇದ್ದ ಕಾರಣ ಕಡಬ ಪೋಲಿಸರಿಗೆ ಇಲ್ಲಿಗೆ ಬರಲು ಉದಾಸೀನ ಆಗುತ್ತಿತ್ತು. ಹಾಗಾಗಿ ಅವರು ಕಾಣಿಯೂರಿಗೆ ಬಂದು ಬೆಳಂದೂರಿಗೆ ಕೂಕುಲು ಹಾಕುತ್ತಿದ್ದರು. ಆಗ ಇಲ್ಲಿಂದ ಪೆಟ್ಟಿಸ್ಟ್ ಗಳು ಕಾಣಿಯೂರಿಗೆ ಹೋಗಿ ಪೋಲಿಸರಿಗೆ ಕಪ್ಪ ಕಾಣಿಕೆ ಕೊಟ್ಟು, ಅವರನ್ನು ಸಂತೈಸಿ, ಡಿಂಗ ಮಾಡಿಸಿ ಕಳಿಸುತ್ತಿದ್ದರು. ಹಾಗಾಗಿ ಗಲಾಟೆ ನಿತ್ಯನೂತನವಾಗಿತ್ತು. ಕಡೆಗೆ ಬೆಳಂದೂರು ಗ್ಯಾಂಗಿನ ಉಪಟಳ ತಡೆಯಲಾಗದೆ ಒಬ್ಬ ಫೇಮಸ್ ಪೆಟ್ಟಿಸ್ಟನ್ನು ಕಡಬ ಪೊಲೀಸರು ಎತ್ತ್ಹಾಕಿಕೊಂಡು ಹೋಗಿ ಬಿಟ್ಟಿದ್ದರು. ಅಲ್ಲಿ ಠಾಣೆಯಲ್ಲಿ ಎ‌ಸ್ಸೈ ಮುಂದೆ ಇವನನ್ನು ಬೆಂಡ್ ತೆಗೆಯಲು ಪ್ಯಾಂಟ್ ತೆಗೆಸಿ ಚಡ್ಡಿಯಲ್ಲಿ ನಿಲ್ಲಿಸಲು ಪ್ಯಾಂಟ್ ತೆಗೆಯಪ್ಪ ಅಂದರೆ ಇವನು ಬಿಲ್ ಕುಲ್ ಪ್ಯಾಂಟ್ ತೆಗೆಯಲು ಒಪ್ಪಿರಲಿಲ್ಲ. ಪೋಲಿಸರು ಜೋರು ಮಾಡಿದರು, ಎಸ್ಸೈ ಗದರಿದರು, ಬಲವಂತವಾಗಿ ಪ್ಯಾಂಟ್ ತೆಗೆಯಲು ಪೋಲಿಸರು ಪ್ರಯತ್ನಿಸಿದರೂ ಇವನು ಅದಕ್ಕೊಂದು ಬಗೆ ಬಿಡಲೇ ಇಲ್ಲ. ಕಡೆಗೆ ಪೋಲಿಸರು ಎರಡ್ಡು ಕೆಬಿತ್ತಕಂಡೆಗೇ ಕೊಟ್ಟು ” ಕುಂಡೆಯಲ್ಲಿ ಎರಡು ಕಿಲೋ ಮಾಂಸ ಇಲ್ಲ, ತೆಗಿ ಲೋಫರ್ ಪ್ಯಾಂಟು” ಎಂದು ಬಲಾತ್ಕಾರ ಮಾಡಿದಾಗ ಸತ್ಯ ಹೊರಗೆ ಬಂದಿತ್ತು. ಅಸಲಿಗೆ ಆ ಪೆಟ್ಟಿಸ್ಟ್ ಚಡ್ಡಿಯೇ ಹಾಕಿರಲಿಲ್ಲ. ಪ್ಯಾಂಟ್ ಮಾತ್ರ ಸಿಕ್ಕಿಸಿಕೊಂಡು ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದ. ನಂತರ ಪೋಲಿಸರೇ ಠಾಣೆಯಲ್ಲಿದ್ದ ಬಲೆಕ್ಕಜವು ಹಿಡಿದು ನೈಪಿಜಿನ್ ಇದ್ದ ಚಡ್ಡಿ ಹಾಕಿಸಿ ಫೋಟೋ ಸೆಷನ್ ನಡೆಸಿದ್ದರು.

ಸದ್ಯಕ್ಕೆ ಬೆಳಂದೂರು ಶಾಂತವಾಗಿದೆ. ಆದರೆ ಯಾವಾಗ ಬೇಕಾದರೂ ಬೂದಿ ಮುಚ್ಚಿದ ಕೆಂಡ ಹೊತ್ತಿ ಉರಿಯ ಬಹುದು. ಇಲ್ಲಿನ ಹುಡುಗರ ವರ್ತನೆ ಜ್ವರ ಬರಿಸುವಂತಿದ್ದು ಬೆಳ್ಳಾರೆ ಎಸ್ಸೈ ಈರಯ್ಯನವರು ಒಂದು ಕಣ್ಣು ಬೆಳಂದೂರು ಕಡೆಗೆ ಇಟ್ಟಿರುವುದು ಒಳ್ಳೆಯದು. ಯಾಕೆಂದರೆ ಈ ಹುಡುಗರಿಗೆ ಪೋಲಿಸ್ ಅಂದರೆ ಬೆಳ್ಳಾರೆ ಪೋಲಿಸ್ ಮಾತ್ರ ಎಂಬ ಸಲಿಗೆ ಇದೆ ಮತ್ತು ಪೋಲಿಸರ ವಿಶ್ವರೂಪದ ಬಗ್ಗೆ ಏನೇನೂ ಗೊತ್ತಿಲ್ಲ. ಮೊನ್ನೆಯೇ ಬೆಳ್ಳಾರೆ ಪೋಲಿಸ್ ಇತ್ತಂಡಗಳನ್ನು ಠಾಣೆಗೆ ಕರೆಸಿ ವಾರ್ನ್ ಮಾಡಿರುತ್ತಿದ್ದರೆ ಸರಿ ಹೋಗುತ್ತಿತ್ತು. ಇನ್ನು ಸ್ಪಾಟಿಗೆ ಬಂದು ಮಾಡಿದ ವಾರ್ನ್ ಗೆ ಅವರೆಲ್ಲ ಬಗ್ಗಲ್ಲ, ಜಗ್ಗಲ್ಲ. ಅದು ಹೆಡ್ ಮಾಸ್ಟರ್ ಗದರಿದಂತೆ ಅಷ್ಟೇ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top