
ಅಲ್ಲಿ ಗುತ್ತಿಗಾರು ಸಮೀಪದ ದೇವಚಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನ ಕಟ್ಟೆ, ಅಚ್ರಪ್ಪಾಡಿ ಸ್ಕೂಲ್ ಮಕ್ಕಳಿಲ್ಲದೆ ಬಂದ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಲೆಯ ಎದುರೇ ಕೋಳಿ ಶೆಡ್ ಇರುವ ಕಾರಣ ನಾತ ತಡೆಯಲಾಗದೆ ಹೆತ್ತವರು ಮಕ್ಕಳನ್ನು ಬೇರೆ ಸ್ಕೂಲ್ ಗಳಿಗೆ ಸೇರಿಸಿದ ಕಾರಣ ಶಾಲೆ ಖಾಲಿಯಾಗಿ ಬಂದ್ ಪರಿಸ್ಥಿತಿ ಬಂದಿದೆ. ಅಲ್ಲೇ ಅಂಗನವಾಡಿ ಕೂಡ ಇದೆ ಮಾರಾಯ್ರೆ.

ಇದು ಮಾವಿನ ಕಟ್ಟೆ ಅಚ್ರಪ್ಪಾಡಿ ಎಂಬ ಊರಿನ ಸ್ಕೂಲಿನ ಕತೆ. ಈ ಮಾವಿನ ಕಟ್ಟೆ ಸೋಣಂಗೇರಿ- ಗುತ್ತಿಗಾರು – ಸುಬ್ರಹ್ಮಣ್ಯ ರಸ್ತೆಯಲ್ಲಿ ಬರುವ ಊರಾಗಿದ್ದು ದೇವಚಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಒಂದು ಪ್ರೈಮರಿ ಸ್ಕೂಲ್ ಚಂದಮಾಮನ ಕಾಲದಿಂದಲೂ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅನೇಕ ಅತಿರಥ ಮಹಾರಥರನ್ನು ಸಮಾಜಕ್ಕೆ ಕೊಟ್ಟಿದ್ದ ಈ ಸ್ಕೂಲ್ ಈಗ ಬಂದ್ ಆಗುವ ಪರಿಸ್ಥಿತಿಯಲ್ಲಿ ಇದೆ. ಕಾರಣ ಒಂದು ಕೋರಿ ಶೆಡ್. ಇಲ್ಲಿ ಶಾಲೆಯ ಎದುರೇ ಒಂದು ಅಂದಾಜು ಎರಡು ಸಾವಿರ ಕೋಳಿಗಳ ಒಂದು ಶೆಡ್ ಕಾರ್ಯ ನಿರ್ವಹಿಸುತ್ತಿದ್ದು ಕೋಳಿ ಶೆಡ್ ಪರಿಮಳಾ ತಡೆಯಲಾಗದೆ ಒಬ್ಬೊಬ್ಬರೇ ವಿದ್ಯಾರ್ಥಿಗಳು ಸ್ಕೂಲ್ ಬಿಟ್ಟ ಕಾರಣ ಸದ್ಯದಲ್ಲೇ ಸ್ಕೂಲ್ ಮುಚ್ಚಿದ ಬಾಗಿಲು ಆಗಲಿದೆ.

ಕೋಳಿ ಶೆಡ್ ಕಡೆಯಿಂದ ಬರುತ್ತಿದ್ದ ಪವಿತ್ರ ಪರಿಮಳಾ ಮತ್ತು ಢುಂಯ್ ಗುಂಯ್ ಉಮಿಲ್, ಕೆಲೆಂಜಿ ಕಾಟ ಮತ್ತು ಕೋಳಿ ಡೆಡ್ ಬಾಡಿಗಾಗಿ ನಾಯಿ ಜಗಳದಿಂದ ಆಗುವ ಶಬ್ದ ಮಾಲಿನ್ಯ, ಕೋಳಿ ವೇಸ್ಟ್, ಕೋರಿ BOTI ಮುಂತಾದ ಕೋರಿ ರಿಲೇಟೆಡ್ ಸಮಸ್ಯೆಗಳು ಆ ಶಾಲೆಯ ವಿದ್ಯಾರ್ಥಿಗಳ ಹೆತ್ತವರನ್ನು ಕಂಗೆಡಿಸಿತ್ತು. ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆಗೆ ಖುದ್ದು, EO ಸಾಹೇಬ್ರಿಗೆ ಖುದ್ದು, ಪೊಟ್ಟ, ಕುರ್ಡ ಗ್ರಾಮ ಪಂಚಾಯಿತಿಗೆ ಖುದ್ದು ಹೋಗಿ ದೂರು ಕೊಟ್ಟರೂ ಏನೂ ಪ್ರಯೋಜನವಾಗಲಿಲ್ಲ. ಸೋ, ಹೆತ್ತವರು ತಮ್ಮ ಮಕ್ಕಳನ್ನು ಆ ಸ್ಲಂ ಸ್ಕೂಲಿನಿಂದ ತೆಗೆದು ಬೇತೆ ಶಾಲೆಗೆ ಸೇರಿಸಿದ ಕಾರಣ ಇದೀಗ ಶಾಲೆ ಖಾಲಿಯಾಗಿದೆ.

ಇನ್ನು ಅತ್ತ ದೊಡ್ಡ ಶಾಲೆ ಬಂದ್ ಆಗುತ್ತಿದ್ದಂತೆ ಶೆಡ್ ಹತ್ತಿರವೇ ಇರುವ ಕಿನ್ನಿ ಶಾಲೆ ಅಂಗನವಾಡಿ ಕತೆ ಕೂಡ ಕಂಗಾಲಾಗಿದೆ. ಸ್ಥಳೀಯ ಅಂಗನವಾಡಿ ಕೇಂದ್ರವೂ ಕೋರಿ ಪರಿಮಳಾದ ರೇಂಜ್ ನಲ್ಲೇ ಇದ್ದು ಪುಟಾಣಿಗಳ ಕತೆ ಕೇಳುವವರೇ ಇಲ್ಲ. ಅಕ್ಷರ ದಾಸೋಹದ ಅಡಿಗೆ ಕೋಣೆ ಕೂಡ ಅಲ್ಲೇ ಇದ್ದು ಕೋಳಿ ಪರಿಮಳದಲ್ಲಿ ಮಕ್ಕಳಿಗೆ ಮಾಡುವ ಅಡಿಗೆಯಲ್ಲಿ ಉಪ್ಪು,ಚೀಪೆ,ಖಾರ ಹೆಚ್ಚು ಕಡಿಮೆ ಆಗುತ್ತಿದೆ ಎಂದು ತಿಳಿದುಬಂದಿದೆ.

ಈ ಕೋಳಿ ಸಮಸ್ಯೆಯಿಂದ ಮಕ್ಕಳ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗುವ ಅಪಾಯಗಳಿದ್ದು ಈ ಶೆಡ್ ಗೆ ಪರ್ಮಿಷನ್ ಕೊಟ್ಟ ಮಹಾನ್ ಭಾವ ಹೆಸರನ್ನು ಮುಂದಿನ ರಾಜ್ಯೋತ್ಸವ ಪ್ರಶಸ್ತಿಗೆ ರೆಕಮೆಂಡ್ ಮಾಡಿದ್ರೆ ಒಳ್ಳೆಯದಿತ್ತು. ಮನುಷ್ಯ ದುಡ್ಡು ಕೊಟ್ಟರೆ ಪಿ ತಿನ್ನುವ ಲೆವೆಲ್ ಗೂ ಮುಟ್ಟುವ ಪರಿಸ್ಥಿತಿ ಬಂದಿದ್ದು ವಿಪರ್ಯಾಸವೇ ಸರಿ.


