
ಅಲ್ಲಿ ಕಡಬ ತಾಲೂಕ ನೆಟ್ಟಣ ಬಳಿಯ ಸೊಸೈಟಿಯೊಂದರಲ್ಲಿ ಪರಸ್ಪರ ಪಟ್ಟಿಕೊಳ್ಳಲು ಇಪ್ಪತ್ತು ಲಕ್ಷ ಅಂಡಿಗುಂಡಿ ಲೋನ್ ಕೊಡಲಾಗಿದೆ ಎಂದು ತಿಳಿದುಬಂದಿದೆ. ಲೋನ್ ನಂತರ ಸೆಕ್ರೆಟ್ರಿ ಕಟ್ಟಬೇಕು ಎಂಬ ಪಾತೆರ ಆಗಿದೆಯಂತೆ.

ಉಪ್ಪಿನಂಗಡಿ – ಸುಬ್ರಹ್ಮಣ್ಯ ಸ್ಟೇಟ್ ಹೈವೆಯ ನೆಟ್ಟಣ ಬಳಿಯ ಸೊಸೈಟಿಯೊಂದು ಅಪಗಪಗ ಪತ್ರಿಕೆಗಳಿಗೆ ಫುಡ್ ಆಗುತ್ತಾ ಇರುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿದೆ. ಕರಪ್ಟ್ ಆಡಳ್ತೆ ಮಂಡಳಿ ಮತ್ತು ತಿಂಬಟ್ಟ ಸೆಕ್ರೆಟ್ರಿಗಳು ಸೊಸೈಟಿಯನ್ನು ಎಟಿಎಂ ಮಾಡಿಕೊಂಡಿದ್ದು ಸೊಸೈಟಿಗೆ ಯಾವಾಗ ಅಂತಿಮ ಮೊಳೆ ಬೀಳುತ್ತದೆ ಎಂದು ಹೇಳಕ್ಕಾಗಲ್ಲ. ಇದೀಗ ಸೊಸೈಟಿ ಇಪ್ಪತ್ತು ಲಕ್ಷ ಲೋನ್ ಯಾರಿಗೋ ಗ್ರ್ಯಾಂಟ್ ಮಾಡಿದ್ದು ಈ ಅಂಡಿಗುಂಡಿ ಲೋನ್ ಬಗ್ಗೆ ಈಗ ತಕರಾರು ಎದ್ದಿದೆ.

ಹಾಗೆಂದು ಸದ್ರಿ ಸೊಸೈಟಿ ಇತ್ತೀಚಿನ ದಿನಗಳಲ್ಲಿ ಒಂದು ಸೆಕ್ರೆಟ್ರಿ ಸಮಸ್ಯೆಯಿಂದ ಬಳಲುತ್ತಿತ್ತು. ಅದೆಲ್ಲ ದೊಡ್ಡ ಅಮಿತಾಬ್ ಬಚ್ಚನ್ ಸಿನೆಮಾ ಆಗಿ, ಸಣ್ಣ ಕೋರ್ಟು,ದೊಡ್ಡ ಕೋರ್ಟ್ ಎಂದೆಲ್ಲಾ ನಟ್ಟ ತಿರ್ಗಿ, ಗಲಾಟೆ ಆಗಿ, ಏನೆಲ್ಲಾ ಆಗಿ ನಂತರ ಪರ ಸೆಕ್ರೆಟ್ರಿಯನ್ನು ವಿಸರ್ಜಿಸಲಾಗಿತ್ತು.

ನಂತರ ಈಗೀನ ಪೊಸ ಸೆಕ್ರೆಟ್ರಿ ಬಂದ್ರಲ್ಲ, ಈ ಪೊಸ ಸೆಕ್ರೆಟ್ರಿ ಕುರ್ಚಿಗೆ ಬರಲು ತನುಮನ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಮೂರು ಒಳಗಿನ ಭೂತಗಳಿಗೆ ಮತ್ತು ಒಂದು ಹೊರಗಿನ ರಿಕ್ಷಾ ಭೂತಕ್ಕೆ ಕೃತಜ್ಞತಾ ಪೂರ್ವಕವಾಗಿ ಬಡಿಸಲೇ ಬೇಕಾದ ಅನಿವಾರ್ಯತೆ ಬಂದಾಗ ಈ ಇಪ್ಪತ್ತು ಲಕ್ಷಗಳ ಅಂಡಿಗುಂಡಿ ಲೋನ್ ಐಡಿಯಾ ಬಂದಿದೆ. ಹಾಗೆ ಒಂದು ಅರ್ಧ ಉದಲ್ ತಿಂದ ಫೈಲ್ ರೆಡಿ ಮಾಡಿ ಆ ಫೈಲ್ ಗೆ ಒಂದು ಇಪ್ಪತ್ತು ಲಕ್ಷ ಅಂಡಿಗುಂಡಿ ಲೋನ್ ಮಾಡಿ ಅದನ್ನು ಕೃತಜ್ಞತಾ ಪೂರ್ವಕವಾಗಿ ನಾಲ್ವರ್ ಭೂತಗಳಿಗೆ ಬಡಿಸಲಾಗಿದೆ ಎಂದು ಗುಸುಗುಸು ಇದೆ. ಸದ್ರಿ ಇಪ್ಪತ್ತನ್ನು ನಂತರದ ದಿನಗಳಲ್ಲಿ ಸೆಕ್ರೆಟ್ರಿಯೇ ದಿಂಜವೊಡು ಎಂಬ ಪಾತೆರ ಆಗಿದೆ ಎಂದು ಸುದ್ದಿ. ಸರಿ ಗೊತ್ತಿಲ್ಲ.


