
ಬೆಳ್ಳಾರೆ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಫೇಮಸ್ ಚಿಕನ್ ಸೆಂಟರ್ ಒಂದರ ಮಾಲೀಕ ದಲಿತ ಹುಡುಗಿ ಒಬ್ಬಳಿಗೆ ಕೈಕಾಲು ಹಾಕಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಕೋಳಿ ಕಾಮ ಬಹುಶಃ ಇವನಿಗೆ.
ಅಲ್ಲಿ ಬೆಳ್ಳಾರೆ ಪೇಟೆಯಲ್ಲಿ ಒಂದು ಫೇಮಸ್ ಚಿಕನ್ ಸೆಂಟರ್ ಇದ್ದು ಇದರ ಮಾಲೀಕ ಮೊನ್ನೆ ಒಂದು ಯಡವಟ್ಟು ಮಾಡಿಕೊಂಡಿದ್ದು ದಲಿತ ಸಂಘಟನೆಗಳು ಎಲ್ಲಿ ಚಾಚಿ ಮಾಡಿದೆ ಎಂದು ಊರಿಡೀ ಅಸಮಾಧಾನ ಎದ್ದಿದೆ. ನಿನ್ನೆಲ್ಲ ಮೊನ್ನೆ ಚಿಕನ್ ಸೆಂಟರ್ ಮಾಲೀಕನ ಭಂಡಾರ ಎಲ್ಲಿಗೋ ಹೊರಟಿದ್ದು ದಾರಿಯಲ್ಲಿ ದಲಿತ ಹುಡುಗಿಯೊಂದು ಸಿಕ್ಕಿದೆ. ಪರಿಚಯದ ಆಧಾರದಲ್ಲಿ ಕಾರು ನಿಲ್ಲಿಸಿದ ಚಿಕನ್ “ದೂರ” ಎಂದು ಹುಡುಗಿಗೆ ಕೇಳಿದ್ದಾನೆ. ಹುಡುಗಿ ಇಂತಲ್ಲಿಗೆ ಎಂದು ಹೇಳಿದೆ ಮತ್ತು ಚಿಕನ್ ಹುಡುಗಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಸ್ವಲ್ಪ ದೂರ ಅದೂ ಇದೂ ಎಂದು ಪಟ್ಟಾಂಗ ಹೊಡೆಯುತ್ತಾ ಸಾಗುತ್ತಲೇ ಒಮ್ಮೆಗೇ ಚಿಕನ್ ಗೇರ್ ಬಾಕ್ಸ್ ಎಂಗೇಜ್ ಆಗಿದೆ. ಪರಿಣಾಮವಾಗಿ ಹುಡುಗಿ ಮೇಲೆ ಕಾರಿನಲ್ಲೇ ಕೈ ಹಾಕಿದ್ದಾನೆ ಮತ್ತು ಹುಡುಗಿ ಬೊಬ್ಬೆ ಹಾಕಿ ಕಾರು ನಿಲ್ಲಿಸುವಂತೆ ಹೇಳಿ ಕಾರಿಳಿದು ಹೋಗಿದ್ದಾಳೆ. ನಂತರ ಮನೆಯವರಿಗೆ ವಿಷಯ ತಿಳಿದು ರಣರಂಪಾಟವಾಗಿ ಅದ್ಯಾರೋ ಬೆಳ್ಳಾರೆಯ ಗ್ರಾಸ್ಥರು ಮಧ್ಯಸ್ಥಿಕೆ ವಹಿಸಿ ಪಂಚಾಯ್ತಿ ನಡೆಸಿ ವಿಷಯ ಮುಗಿಸಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ಚಿಕನ್ ಗೆ ದಾದ ವಿಷಯ ಎಂದು ಕೇಳಿದರೆ ” ಅವಳು ನನ್ನ ನೆರೆಹೊರೆಯ ಹುಡುಗಿ. ನಾನು ಮನೆ ಕಡೆ ಹೋಗುತ್ತಿದ್ದಾಗ ಸಿಕ್ಕಿದ ಹುಡುಗಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದೇನೆ. ಮೊಬೈಲ್ ನಲ್ಲಿ ಯಾರೋಂದಿಗೋ ಮಾತಾಡುತ್ತಿದ್ದಳು. ಯಾರಲ್ಲಿ ಮಾತಾಡುವುದು ಎಂದು ನಾನು ಕೇಳಿದಾಗ “ನನ್ನ ಲವರ್ ” ಅಂದಿದ್ದಳು. ನಂತರ ಇಳಿಯುವಾಗ ಅವಳ ನಂಬರ್ ಕೇಳಿದ್ದಕ್ಕೆ ಅದನ್ನೇ ದೊಡ್ಡ ರಾದ್ಧಾಂತ ಮಾಡಿದ್ದಾಳೆ ಎಂದು ಚಿಕನ್ ಸೆಂಟರ್ ಮಾಲೀಕ ರೈಲು ಬಿಟ್ಟಿದ್ದಾನೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಕೇವಲ ಪೋನ್ ನಂಬರ್ ಕೇಳಿದ್ದಕ್ಕೆ ಅಷ್ಟೆಲ್ಲ ದೊಡ್ಡ ರಾದ್ಧಾಂತ ನಡೆಯುತ್ತಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿದೆ. ಅದೂ ಅಲ್ಲದೆ ಹುಡುಗಿ ಮನೆಯ ಲೈನೇ ಬೇರೆ, ಚಿಕನ್ ಮಾಲೀಕನ ಮನೆಯ ಲೈನೇ ಬೇರೆ ಇದ್ದು”ಅವಳು ನನ್ನ ನೆರೆಹೊರೆಯ ಹುಡುಗಿ ” ಎಂಬ ಚಿಕನ್ ಮಾಲೀಕನ ರೈಲು ಪಟ್ಟೆ ಇಲ್ಲದ್ದು ಎಂಬುದು ಸ್ಪಷ್ಟವಾಗುತ್ತದೆ.
ಬೆಳ್ಳಾರೆಯಲ್ಲಿ ಒಬ್ಬ ದಲಿತ ಹುಡುಗಿ ಮೇಲೆ ಒಬ್ಬ ವಿಕೃತ ಕಾಮಿಯಿಂದ ಇಷ್ಟೆಲ್ಲಾ ಲೈಂಗಿಕ ದೌರ್ಜನ್ಯ ನಡೆದರೂ ಇನ್ನೂ ಈ ದಲಿತ ಸಂಘಟನೆಗಳು ಯಾಕೆ ಸುಮ್ಮನೆ ಕುಳಿತಿದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಸಾರ್ವಜನಿಕ ಸ್ಥಳದಲ್ಲಿ ಹೀಗೆ ತಮ್ಮ ಸಮುದಾಯದ ಅಮಾಯಕ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ, ಅದನ್ನು ಬೆಳ್ಳಾರೆಯ ಬೇರೆ ಸಮುದಾಯದ ಅಂಡಿಗುಂಡಿ ಗ್ರಾಸ್ಥರು ಪಂಚಾಯ್ತಿ ನಡೆಸಿ ಮುಗಿಸಿದ್ದರೂ ಹುಡುಗಿಗೆ ಆದ ಅನ್ಯಾಯಯದ ಬಗ್ಗೆ ಯಾರೂ ಧ್ವನಿ ಎತ್ತದೆ ಇರುವುದು ವಿಪರ್ಯಾಸವೇ ಸರಿ. ಹಾಗಾದರೆ ಬಡವರಿಗೆ ಯಾರು ಬೇಕಾದರೂ, ಏನು ಬೇಕಾದರೂ ಮಾಡಿ ನಂತರ ಪಂಚಾಯ್ತಿ ನಡೆಸಿ ಮುಗಿಸಿ ಕೊಳ್ಳುವ ದಿನಗಳು ಇನ್ನೂ ಉಳಿದಿದೆಯಾ? ಈ ವಿಷಯದಲ್ಲಿ ದಲಿತ ಸಂಘಟನೆಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಸಮಾಜಕ್ಕೆ “ದಾಲ ಆಪುಜಿ” ಸಂದೇಶ ರವಾನೆಯಾಗಿ ಬಿಡುತ್ತದೆ.